ಆವೃತ್ತಿಗಳು
Kannada

ಉದ್ಯಮ ಆರಂಭದ ಹಿಂದೆ ರೋಚಕ ರಹಸ್ಯ... `ಕ್ವಿಕರ್' ಒಡೆಯನ ಮನದ ಮಾತು

ಟೀಮ್​​ ವೈ.ಎಸ್​​.

5th Nov 2015
Add to
Shares
4
Comments
Share This
Add to
Shares
4
Comments
Share

ಕ್ವಿಕರ್..ಕ್ವಿಕರ್..ಕ್ವಿಕರ್...ಈಗ ಎಲ್ಲಾ ಕಡೆ ಸುದ್ದಿ ಮಾಡ್ತಿರೋ ಸಂಸ್ಥೆ ಇದು. ಆನ್‍ಲೈನ್ ಜಾಹೀರಾತು ಅಂದಾಕ್ಷಣ ನೆನಪಾಗೋದೇ ಕ್ವಿಕರ್. ಹಾಗಿದ್ರೆ ಈ ಕ್ವಿಕರ್ ಡಾಟ್ ಕಾಮ್ ಹುಟ್ಟಿಕೊಂಡಿದ್ದು ಹೇಗೆ? ಅದರ ಸಂಸ್ಥಾಪಕರು ಯಾರು ಅನ್ನೋ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತೆ. ಕ್ವಿಕರ್ ಹುಟ್ಟಿನ ಹಿಂದಿರುವ ಕಹಾನಿಯಂತೂ ಸಖತ್ ಇಂಟ್ರೆಸ್ಟಿಂಗ್. ಪ್ರಣಯ್ ಚುಲೆಟ್ ಅವರ ಕನಸಿನ ಕೂಸು ಈ ಕ್ವಿಕರ್. ಸಧ್ಯ ಒಂದು ಬಿಲಿಯನ್ ಡಾಲರ್ ಬೆಲೆಬಾಳುವ ಸಂಸ್ಥೆ ಇದು. ಪ್ರತಿಭಾವಂತರಿಗೂ ಒಂದೊಳ್ಳೆ ಅವಕಾಶ ಕೊಡುವ ನಿಟ್ಟಿನಲ್ಲಿ ಕ್ವಿಕರ್ ಮುಖ್ಯ ಕಚೇರಿಯನ್ನು ಮುಂಬೈನಿಂದ ಬೆಂಗಳೂರಿಗೆ ಸ್ಥಳಾಂತರಿಸಲಾಗಿದೆ. ಇನ್ನೆರಡು ವರ್ಷಗಳಲ್ಲಿ ಸಂಸ್ಥೆಯನ್ನು ಇನ್ನಷ್ಟು ಲಾಭ ಗಳಿಸುವತ್ತ ಮುನ್ನಡೆಸುವ ಯೋಜನೆಯನ್ನು ಪ್ರಣಯ್ ಹಾಕಿಕೊಂಡಿದ್ದಾರೆ.

image


ಸಾರ್ಥಕವಾಯ್ತು ಬದುಕಿನ ಧ್ಯೇಯ...

ಕ್ವಿಕರ್ ಕಂಪನಿಯ ಜನ್ಮ ರಹಸ್ಯವನ್ನು ಪ್ರಣಯ್ ಇದುವರೆಗೂ ಬಿಟ್ಟುಕೊಟ್ಟಿರಲಿಲ್ಲ. ಅಸಲಿಗೆ ಕ್ಯಾಲಿಫೋರ್ನಿಯಾದ ಕ್ಲಾಸಿಫೈಡ್ ಜಾಹೀರಾತು ವೆಬ್‍ಸೈಟ್ Craigslist ನಿಂದ ಇದು ಪ್ರಭಾವಿತವಾಗಿದೆ ಅನ್ನೋದು ಸುಳ್ಳಲ್ಲ. ಆದ್ರೆ ಏಕಾಏಕಿ ಅಂಥದ್ದೇ ಸಂಸ್ಥೆಯನ್ನು ಕಟ್ಟೋದಾಗಿ ಪ್ರಣಯ್ ಹೇಳಿರಲಿಲ್ಲ. ಹೃದಯದಲ್ಲಿ ತಾವೊಬ್ಬ ಉದ್ಯಮಿ, ಆದ್ರೆ ಅದಕ್ಕಿಂತಲೂ ಮಿಗಿಲಾಗಿ ಒಬ್ಬ ಸೃಷ್ಟಿಕರ್ತ ಎನ್ನುತ್ತಾರೆ ಅವರು.

ಇದೊಂದು ಮಹತ್ವಾಕಾಂಕ್ಷಿ ಯೋಜನೆ. ಅಮೆರಿಕದ ಮೀಡಿಯಾ ಕಂಪನಿಯೊಂದರಲ್ಲಿ ಪ್ರಣಯ್ ಮ್ಯಾನೇಜ್‍ಮೆಂಟ್ ಕನ್ಸಲ್ಟಂಟ್ ಆಗಿದ್ರು. 2005ರ ಸಮಯದಲ್ಲಿ ಅಂತರ್ಜಾಲ ಸಂಬಂಧಿ ಸಮಸ್ಯೆಗಳಿಂದ ಮೀಡಿಯಾ ಕಂಪನಿಗಳು ಬಳಲ್ತಾ ಇದ್ವು. ಗೇಮಿಂಗ್ ಸ್ಟೂಡಿಯೋ ಆರಂಭಿಸುವ ಬಗ್ಗೆ ಗ್ರಾಹಕರೊಬ್ರು ಮಾತನಾಡ್ತಿದ್ರು. ಆಗ ಥಟ್ಟಂತ ಪ್ರಣಯ್ ಅವರಿಗೆ ಐಡಿಯಾವೊಂದು ಹೊಳೆದಿತ್ತು. ಸಿನಿಮಾ ನಿರ್ಮಾಣದ ಕನಸು ಚಿಗುರಿತ್ತು. ಯಾಕಂದ್ರೆ ಸಿನಿಮಾ ನಿರ್ಮಾಣ ಕೂಡ ಒಂದು ರೀತಿಯ ಆಟವಿದ್ದಂತೆ ಎನ್ನುತ್ತಾರೆ ಪ್ರಣಯ್. ಗಟ್ಟಿ ಮನಸ್ಸು ಮಾಡಿದ ಪ್ರಣಯ್ ಅಮೆರಿಕದಲ್ಲೇ ಸಿನಿಮಾ ನಿರ್ಮಾಣದ ಬಗ್ಗೆ ತರಬೇತಿ ಪಡೆದ್ರು. ಅವರೇ ಒಂದು ಮಹತ್ವಾಕಾಂಕ್ಷಿ ಸ್ಕ್ರಿಪ್ಟ್ ರೆಡಿ ಮಾಡಿದ್ರು. ಸಿನಿಮಾ ನಿರ್ದೇಶನ ಮಾಡಲು ನಿಂತ್ರು. ಆದ್ರೆ 30 ಪಾತ್ರಗಳಿಗೆ ಕಲಾವಿದರನ್ನು ಆಯ್ಕೆ ಮಾಡುವುದು ಸವಾಲಾಗಿತ್ತು. ಆಗ ಪ್ರಣಯ್ Craigslistನಲ್ಲಿ ಜಾಹೀರಾತು ಪ್ರಕಟಿಸಿದ್ರು. ಒಂದೇ ವಾರದೊಳಗೆ 200 ಮಂದಿಯ ಆಡಿಷನ್ ಕೂಡ ಮಾಡಿದ್ರು. ಅಷ್ಟೇ ಅಲ್ಲ ಸಿನಿಮಾದ ವಿವಿಧ ವಿಭಾಗಗಳ ಸದಸ್ಯರ ಆಯ್ಕೆಗಾಗಿಯೂ ವೆಬ್‍ಸೈಟ್‍ನಲ್ಲಿ ಜಾಹೀರಾತು ಪ್ರಕಟಿಸಲಾಯ್ತು. ಇದನ್ನೆಲ್ಲ ನೋಡಿದ ಪ್ರಣಯ್ ಅವರಿಗೆ Craigslistನಂತಹ ವೆಬ್‍ಸೈಟ್‍ಗಳಲ್ಲಿರುವ ವೇದಿಕೆಗೆ ಇರೋ ಮೌಲ್ಯದ ಅರಿವಾಗಿತ್ತು.

image


ಪ್ರಣಯ್ ದೆಹಲಿಯಲ್ಲೂ ತಮ್ಮ ಸಿನಿಮಾದ ಚಿತ್ರೀಕರಣ ನಡೆಸಿದ್ರು. ಈ ಪ್ರಾಜೆಕ್ಟ್ ಪೂರ್ಣಗೊಳ್ಳಲು ಸುಮಾರು 6 ತಿಂಗಳು ಬೇಕಾಯ್ತು. ಆದ್ರೆ ಒಮ್ಮೆಯೂ ಈ ಸಿನಿಮಾ ಬಗ್ಗೆ ಪ್ರಣಯ್ ಮಾತನಾಡಿರಲಿಲ್ಲ.

ಬದುಕಲ್ಲಿ ಮೂಡಿದ ಹುಣ್ಣಿಮೆ ಚಂದಿರ...

ಇನ್ನೊಂದೆರಡು ವಾರಗಳಲ್ಲಿ ಪ್ರಣಯ್ ಮೀಡಿಯಾ ಎಂಟರ್‍ಟೈನ್‍ಮೆಂಟ್ ಕಂಪನಿಯನ್ನೇ ಸ್ವಾಧೀನಪಡಿಸಿಕೊಳ್ಳಲಿದ್ದಾರೆ. ಸಂಬಂಧವೇ ಇಲ್ಲದ ಕ್ಷೇತ್ರದಿಂದ ಕ್ವಿಕರ್ ಆರಂಭಿಸುವ ಉಪಾಯ ಅವರಿಗೆ ಹೊಳೆದಿತ್ತು. ಇದೀಗ ಮನರಂಜನೆ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಪ್ರಣಯ್ ಮುಂದಾಗಿದ್ದಾರೆ. ತಮ್ಮ ಜೀವನ ಇನ್ನು ಹುಣ್ಣಿಮೆ ಚಂದ್ರನಂತೆ ಸುಂದರವಾಗುತ್ತೆ ಅನ್ನೋ ವಿಶ್ವಾಸ ಅವರದ್ದು. ಪ್ರಣಯ್ ಅವರ ಪ್ರಕಾರ ಸಂಸ್ಥೆಯ ಅಭಿವೃದ್ಧಿಯಲ್ಲಿ 2 ವಿಧಾನಗಳಿವೆ. ನಿಮ್ಮನ್ನು ನೀವು ಅಭಿವೃದ್ಧಿಪಡಿಸಿಕೊಳ್ಳುವುದು ಸತ್ವಯುತವಾದ ಬಗೆ. ಕ್ವಿಕರ್‍ನಲ್ಲೇ 5 ವಿಭಾಗಗಳಿವೆ. ಕ್ವಿಕರ್ ಸಿ2ಸಿ ಪೇಮೆಂಟ್ಸ್ & ಲಾಜಿಸ್ಟಿಕ್ಸ್, ಕ್ವಿಕರ್ ಜಾಬ್ಸ್, ಕ್ವಿಕರ್ ಸರ್ವಿಸಸ್, ಕ್ವಿಕರ್ ಫಿಲ್ಮ್ ಮತ್ತು ಕ್ವಿಕರ್ ಕಾರ್ಸ್. ಹಾಗಾಗಿ ಬೇರೆ ಕ್ಷೇತ್ರಗಳತ್ತ ಕಾಲಿಡುವ ಅಗತ್ಯವಿಲ್ಲ ಎನ್ನುತ್ತಾರೆ ಪ್ರಣಯ್. ಹೆಸರೇ ಹೇಳುವಂತೆ ಅತ್ಯಂತ ವೇಗವಾಗಿ ಮುನ್ನಡೆಯಲು, ನುಡಿದಂತೆ ನಡೆಯಲು ಪ್ರಾಮಾಣಿಕ ಪ್ರಯತ್ನವನ್ನು ಪ್ರಣಯ್ ಮಾಡ್ತಿದ್ದಾರೆ. ಉತ್ತಮ ಸ್ವತ್ತುಗಳೇ ಆಗಿದ್ರೂ ಅದನ್ನು ತೀರಾ ಅಧಿಕ ಬೆಲೆಗೆ ಮಾರಾಟ ಮಾಡುವುದು ಸರಿಯಲ್ಲ ಅನ್ನೋದು ಪ್ರಣಯ್ ಅವರ ಅಭಿಪ್ರಾಯ. ಸಧ್ಯದಲ್ಲೇ ಕ್ವಿಕರ್ ಹೋಮ್ಸ್ ಬಗ್ಗೆ ಟಿವಿ ಮೂಲಕ ಪ್ರಚಾರಕ್ಕೂ ಸಿದ್ಧತೆ ಮಾಡಿಕೊಂಡಿದ್ದಾರೆ.

image


ತ್ವರಿತ ಮತ್ತು ಸ್ಥಿರವಾದ ಓಟದಿಂದ ಗೆಲುವು...

ಆದಾಯ ಗಳಿಕೆಯಲ್ಲಿ ಕ್ವಿಕರ್ ಹೋಮ್ಸ್ ಮತ್ತು ಕ್ವಿಕರ್ ಸರ್ವಿಸಸ್ ಮುಂದಿವೆ. ಕ್ವಿಕರ್ ಜಾಬ್ಸ್ ಕೂಡ ಇದೇ ಹಾದಿಯಲ್ಲಿ ಸಾಗುತ್ತಿದೆ. ಇ-ಕಾಮರ್ಸ್ ದುನಿಯಾದ ಸಂಶೋಧನೆಗಳಲ್ಲಿ ಈಗಷ್ಟೇ ಕ್ವಿಕರ್ ಹೆಜ್ಜೆ ಇಡ್ತಿದೆ ಅಂತಾರೆ ಪ್ರಣಯ್. ಕ್ವಿಕರ್, ಮಾರ್ಕೆಟ್‍ಗಿಂತ ವಿಭಿನ್ನವಾದದ್ದು. ಮೊಬೈಲ್ ಅನ್ನೇ ಕ್ವಿಕರ್ ಅವಲಂಬಿಸಿದೆ. ಆನ್‍ಲೈನ್ ಸೆಕ್ಯೂರಿಟಿ, ಹೋಮ್ ಆಟೋಮೇಶನ್ ವಿಭಾಗದಲ್ಲೂ ಹೊಸ ಆವಿಷ್ಕಾರ ಮಾಡುವ ಯೋಚನೆ ಪ್ರಣಯ್ ಅವರಿಗಿದೆ. ಪ್ರಣಯ್ ಅವರ ಈ ಯಶಸ್ಸಿನ ರಹಸ್ಯ ಅಂದ್ರೆ ಕ್ವಿಕ್...ಆದ್ರೆ ಫಾಸ್ಟ್ ಅಲ್ಲ.

Add to
Shares
4
Comments
Share This
Add to
Shares
4
Comments
Share
Report an issue
Authors

Related Tags