ಆವೃತ್ತಿಗಳು
Kannada

ಸ್ವಚ್ಛಭಾರತ ಯೋಜನೆಗೆ ಹೈ-ಫೈ ಟಚ್- ಜೋಧಪುರದಲ್ಲಿ ಕಾರು, ಬೈಕ್​ಗಳಲ್ಲಿ ಡಸ್ಟ್​ಬಿನ್

ಟೀಮ್​ ವೈ.ಎಸ್​. ಕನ್ನಡ

YourStory Kannada
8th Jun 2017
Add to
Shares
4
Comments
Share This
Add to
Shares
4
Comments
Share

ಕೇಂದ್ರ ಸರಕಾರದ "ಸ್ವಚ್ಛಭಾರತ್" ಅಭಿಯಾನ ಸಾಕಷ್ಟು ಜಾಗೃತಿಯನ್ನು ಮೂಡಿಸುತ್ತಿದೆ. 2014ರ ಅಕ್ಟೋಬರ್ 2ರಂದು ಈ ಅಭಿಯಾನಕ್ಕೆ ಚಾಲನೆ ಸಿಕ್ಕಿತ್ತು. ಐದು ವರ್ಷಗಳ ಈ ಯೋಜನೆಯ ಮೂಲಕ ಭಾರತವನ್ನು ಸ್ವಚ್ಛವಾಗಿಡುವ ಕೆಲಸ ನಡೆಯುತ್ತಿದೆ. ಕೇಂದ್ರ ಸರಕಾರ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಹೆಜ್ಜೆ ಇಡುತ್ತಿದೆ. ಭಾರತದ ಪ್ರಜೆಗಳು ಸರಕಾರದ ಯೋಜನೆಗಳಿಗೆ ಬೆಂಬಲ ನೀಡಿದ್ದನ್ನು ಉದ್ಯಮಿ ಮತ್ತು ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್​ಗೇಟ್ಸ್ ಕೂಡ ಕೊಂಡಾಡಿದ್ದಾರೆ. ಸರಕಾರ ಯಾವುದೇ ಯೋಜನೆಯನ್ನು ಮಾಡಿದರೂ, ಜನರ ಸಹಾಯವಿಲ್ಲದೆ ಯಶಸ್ವಿಯಾಗುವುದಿಲ್ಲ ಅನ್ನುವುದು ಪ್ರಧಾನಿ ನರೇಂದ್ರ ಮೋದಿ ಮತ್ತು ಇತರೆ ರಾಜಕಾರಣಿಗಳಿಗೆ ಅರ್ಥವಾಗಿದೆ. ಹೀಗಾಗಿ ಸರಕಾರದ ಯೋಜನೆಗಳಿಗೆ ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸುವ ಕೆಲಸ ನಡೆಯುತ್ತಿದೆ.

image


ಬಿಲ್​ಗೇಟ್ಸ್ ಅನೇಕ ಸಾಮಾಜಿಕ ಕೆಲಸಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ. ಸ್ವಚ್ಛತೆಯ ವಿಷಯಕ್ಕಂತೂ ಸಾಕಷ್ಟು ಪ್ರೋತ್ಸಾಹಗಳನ್ನು ನೀಡಿದ್ದಾರೆ. ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಮತ್ತು ಅದನ್ನು ಕಾರ್ಯಗತಗೊಳಿಸಿದ ಬಗ್ಗೆ ಗೇಟ್ಸ್, ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದ್ದರು. ಸ್ವಚ್ಛ ಭಾರತ ಅಭಿಯಾನ ದೇಶದಲ್ಲಿ ಸ್ವಚ್ಛತೆಯ ಜೊತೆಗೆ ಬಯಲು ಶೌಚಾಲಯಗಳನ್ನು ನಿಲ್ಲಿಸಬೇಕು ಅನ್ನುವ ಉದ್ದೇಶದಿಂದ ಕಾರ್ಯಾಚರಣೆ ನಡೆಸುತ್ತಿದೆ.

ಇದನ್ನು ಓದಿ: ವಯಸ್ಸು ಜಸ್ಟ್​ 59- ಆದ್ರೆ 400 ಕಂಪನಿಗಳ ಮಾಲೀಕ..!

ದೇಶದ ವಿವಿಧ ಭಾಗಗಳಲ್ಲಿ ಸ್ವಚ್ಛ ಭಾರತ ಅಭಿಯಾನ ಯಶಸ್ವಿಯಾಗಲು ಸಾಕಷ್ಟು ಸ್ವಯಂ ಸೇವಾ ಸಂಸ್ಥೆಗಳು ಶ್ರಮಿಸುತ್ತಿವೆ. ಜೋಧಪುರದಲ್ಲಿ ಸ್ವಚ್ಛಭಾರತ ಅಭಿಯಾನ ವಿಶೇಷವಾಗಿ ನಡೆಯುತ್ತಿದೆ. ಅಲ್ಲಿನ ಜನರು ತಮ್ಮ ಕಾರು ಮತ್ತು ಬೈಕ್ ಗಳಿಗೆ ಕಸದ ಬುಟ್ಟಿಯನ್ನು ಸಿಕ್ಕಿಸಿಕೊಂಡು, ರಸ್ತೆಗಳಲ್ಲಿರುವ ಕಸವನ್ನು ತುಂಬಿಸಿಕೊಂಡು ನಗರವನ್ನು ಸ್ವಚ್ಛವಾಗಿರುವ ಪ್ರಯತ್ನ ಮಾಡುತ್ತಿದ್ದಾರೆ. ಜೋಧಪುರದ ಕಮಲನಗರ ನಿವಾಸಿಗಳು ಇದನ್ನು ಆರಂಭಿಸಿದ್ದೇ ತಡ ಸುತ್ತಮುತ್ತಲಿನ ನಗರದ ಜನರು ಕೂಡ ಇದನ್ನೇ ಫಾಲೋ ಮಾಡುತ್ತಿದ್ದಾರೆ.

“ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಶುಚಿಗೊಳಿಸುವ ಉದ್ದೇಶ ಇಟ್ಟುಕೊಂಡು ಈ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ನಾವು ಅದಕ್ಕೆ ಬೆಂಬಲ ನೀಡಬೇಕು. ಶುಚಿತ್ವವಿಲ್ಲದ ಪರಿಸರವನ್ನು ನೋಡಲು ಬೇಸರವಾಗುತ್ತದೆ. ಕೇವಲ ನಮ್ಮ ನಗರವನ್ನು ಮಾತ್ರ ಶುಚಿಯಾಗಿಡುವ ಬಗ್ಗೆ ಯೋಚನೆ ಮಾಡಬಾರದು, ದೇಶವೇ ಶುಚಿಯಾಗಿರಬೇಕು ಎಂದು ಯೋಚನೆ ಮಾಡಬೇಕು.”
- ಮೊಹಮ್ಮದ್ ಯೂಸುಫ್, ಕಮಲಾನಗರ ನಿವಾಸಿ, ಜೋಧಪುರ

ಬೈಕ್ ಮತ್ತು ಕಾರುಗಳಲ್ಲಿ ರಸ್ತೆಯಿಂದ ಹೆಕ್ಕಿ ಸಂಗ್ರಹಿಸಿದ ಕಸವನ್ನು ಡಂಪಿಂಗ್ ಯಾರ್ಡ್ ನಲ್ಲಿ ತಂದು ಹಾಕುತ್ತಾರೆ. ಅಲ್ಲಿಂದ ಆ ಕಸವನ್ನು ಪೌರಾಡಳಿತ ಬೇರೆ ವ್ಯವಸ್ಥೆ ಮಾಡುತ್ತದೆ. ಕಳೆದೊಂದು ವಾರದಿಂದ ಈ ಕೆಲಸ ನಡೆಯುತ್ತಿದೆ. ಜನರು ಈ ಕೆಲಸಕ್ಕೆ ಸಾಕಷ್ಟು ಬೆಂಬಲ ನೀಡಿದ್ದಾರೆ. ಒಟ್ಟಿನಲ್ಲಿ ಶುಚಿತ್ವಕ್ಕೆ ಜನರು ಸಾಕಷ್ಟು ಶ್ರಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಭಾರತ ಸ್ವಚ್ಛವಾಗಿರುತ್ತದೆ ಅನ್ನುವ ನಂಬಿಕೆ ಹೆಚ್ಚಾಗುತ್ತಿದೆ. 

ಇದನ್ನು ಓದಿ:

1. ಅರುಣಾಚಲ ಪ್ರದೇಶದ ಬಿದಿರು- ಅಸ್ಸಾಂನಲ್ಲಿ ತಯಾರಾಗುತ್ತದೆ ಜೈವಿಕ ಇಂಧನ..!

2. ಆರೇ ತಿಂಗಳಲ್ಲಿ ಮುಗಿದು ಹೋಯಿತು ಸೇತುವೆ ನಿರ್ಮಾಣ..!

3. ಇಂಟರ್​ನೆಟ್ ಸ್ಪೀಡ್ ವಿಚಾರದಲ್ಲಿ ಭಾರತ ಹಿಂದೆ- ಡಿಜಿಟಲ್ ಕ್ರಾಂತಿಗೆ ಇಂಟರ್​ನೆಟ್ ವೇಗದಿಂದ ಹಿನ್ನಡೆ

Add to
Shares
4
Comments
Share This
Add to
Shares
4
Comments
Share
Report an issue
Authors

Related Tags