ಆವೃತ್ತಿಗಳು
Kannada

ಹೊಸ ವರ್ಷ ಬೊಜ್ಜಿನಿಂದ ಮುಕ್ತಿ ಹೊಂದಬೇಕಾ? ಋತು ರಾಣಿ ಕೊಡ್ತಾರೆ ಟಿಪ್ಸ್

ಟೀಮ್​ ವೈ.ಎಸ್​. ಕನ್ನಡ

3rd Jan 2016
Add to
Shares
2
Comments
Share This
Add to
Shares
2
Comments
Share

ಬೊಜ್ಜಿನ ಬಗ್ಗೆ ನೀವೇನು ಹೇಳ್ತಿರಾ? ಅಘೋಷಿತವಾಗಿ ಬೊಜ್ಜನ್ನು ರಾಷ್ಟ್ರೀಯ ಸಮಸ್ಯೆ ಎಂದು ಪರಿಗಣಿಸಲಾಗಿದೆ. ಬೊಜ್ಜು ಈಗ ಸಾಮಾನ್ಯವಾಗಿಬಿಟ್ಟಿದೆ. ವಾಕ್ ಮಾಡಬೇಕು, ಜಿಮ್ ಗೆ ಹೋಗಬೇಕು, ವ್ಯಾಯಾಮ ಮಾಡಬೇಕು ಅದು ಇದು ಅಂತಾ ಎಲ್ಲರೂ ಬೊಜ್ಜು ಕರಗಿಸಿಕೊಳ್ಳುವ ಬಗ್ಗೆ ಮಾತನಾಡ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ತರ ತರಹದ ಔಷಧಿ,ಮಾತ್ರೆ, ವಸ್ತುಗಳನ್ನು ಉಪಯೋಗಿಸಿ ನೋಡುವವರೂ ಸಾಕಷ್ಟು ಮಂದಿ ಇದ್ದಾರೆ. ಸ್ಥೂಲಕಾಯದ ಬಗ್ಗೆ ಅನೇಕ ಸಂಶೋಧನೆಗಳು ಆಗಿವೆ. ಆಗುತ್ತಲೂ ಇವೆ. ಏನೇ ಪ್ರಯತ್ನ ಪಟ್ಟರೂ ಸುಂದರ ಮೈಕಟ್ಟು ಹೊಂದಲಾಗದೇ ಪ್ರಯತ್ನ ಕೈಬಿಟ್ಟವರು ಅನೇಕರು. ನಿದ್ದೆಯಲ್ಲೂ ಕಾಡುವ ಬೊಜ್ಜನ್ನು ಹೋಗಲಾಡಿಸಿ, ಆಕರ್ಷಕ ದೇಹ ಹೊಂದುವವರಿಗಾಗಿ ಬಂದಿದೆ ObiNo.

ObiNo ಒಂದು ಮೊಬೈಲ್ ಅಪ್ಲಿಕೇಷನ್. ಇದನ್ನು ಆರಂಭಿಸಿದವರು ಋತು ರಾಣಿ ಶ್ರೀವಾಸ್ತವ್. ಋತು ರಾಣಿ ಒಂದು ಸುಂದರ ವೃತ್ತಿ ಜೀವನದ ಪಯಣ ಮಾಡಿದ್ದಾರೆ. 93.5 ಎಫ್ ಎಂನಲ್ಲಿ ನಿರೂಪಕಿಯಾಗಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ಋತು ರಾಣಿ, ಭಾರ್ತಿ ಏರ್​​ಟೆಲ್ ಮಾರ್ಕೆಟಿಂಗ್ ವಿಭಾಗದಲ್ಲೂ ಕೆಲಸ ನಿರ್ವಹಿಸಿದ್ದಾರೆ. ಋತು ರಾಣಿಯವರದ್ದು ಬಹಳ ಸೂಕ್ಷ್ಮ ಹಾಗೂ ಸಂವೇದನಾಶೀಲ ವ್ಯಕ್ತಿತ್ವ. ತಾಯಿಯಾದ ನಂತರ ಅವರಿಗೆ ಸಾಮಾನ್ಯವಾಗಿ ಎಲ್ಲ ಮಹಿಳೆಯರು ಎದುರಿಸುವಂತಹ ಸಮಸ್ಯೆ ಎದುರಾಯಿತು. ಅವರ ತೂಕ ಜಾಸ್ತಿಯಾಗಿತ್ತು. ಇದು ಋತು ರಾಣಿ ಚಿಂತೆಗೆ ಕಾರಣವಾಯ್ತು. ಮೊದಲಿನ ಮೈಕಟ್ಟು ವಾಪಸ್ ಪಡೆಯಲು ಋತು ರಾಣಿ ಸಾಕಷ್ಟು ಪ್ರಯತ್ನ ಮಾಡಿ,ಅದರಲ್ಲಿ ಯಶಸ್ವಿಯಾದರು.

image


ತೂಕ ಇಳಿಸಿಕೊಂಡು ಮೊದಲಿನಂತಾದ ಋತು ರಾಣಿ ಮೇಲೆ ಇದು ಧನಾತ್ಮಕ ಪರಿಣಾಮ ಬೀರಿತು. ಬೊಜ್ಜಿನ ಸಮಸ್ಯೆಯಿಂದ ಬಳಲುವ ಜನರಿಗೆ ಇದರಿಂದ ಸಹಾಯವಾಗಬಹುದೆಂದು ಋತು ಮನಗಂಡರು. ತಮ್ಮ ತೂಕವನ್ನು ಇಳಿಸಿಕೊಳ್ಳ ಬಯಸುವವರಿಗೆ ಋತು ಅತಿ ಪ್ರಭಾವ ಬೀರುವ ರೀತಿಯಲ್ಲಿ ಸಹಾಯ ಮಾಡಲು ಮುಂದಾದರು. ಆಗ ಆರಂಭವಾಗಿದ್ದು ObiNo ಎಂಬ ಹೆಸರಿನ ತೂಕ ಇಳಿಸಿಕೊಳ್ಳುವ ತರಬೇತಿ.

ಕಂಪನಿ ಜನವರಿ 2012ರಂದು ಮನ್ನಾ ಹೆಲ್ತ್ ಕೇರ್ ಪ್ರೈವೇಟ್ ಲಿಮಿಟೆಡ್ ಅಡಿಯಲ್ಲಿ ಪರಿಚಯಿಸಲ್ಪಟ್ಟಿತು. ObiNo ಮೊಬೈಲ್ ತೂಕ ಇಳಿಕೆ ತರಬೇತಿಯಾಗಿದೆ. ವಿಶೇಷವಾಗಿ ಭಾರತೀಯರಿಗೆ ಸುರಕ್ಷಿತ, ಆರೋಗ್ಯಕರ ಮತ್ತು ಅಗ್ಗದ ರೀತಿಯಲ್ಲಿ ತೂಕ ಇಳಿಸಿಕೊಳ್ಳಲು ಇದು ಸಹಾಯ ಮಾಡುತ್ತಿದೆ.

ಋತು ಹೇಳ್ತಾರೆ ` ObiNo ಅಪ್ಲಿಕೇಷನ್ ನಲ್ಲಿ ಅನನ್ಯ ಮಾರ್ಗಗಳಿವೆ. ಪರಿಣಿತರ ಹಾಗೆ ಅದು ಕೆಲಸ ನಿರ್ವಹಿಸುತ್ತವೆ. ಆಹಾರ ಯೋಜನೆಗಳನ್ನು ಇದರಲ್ಲಿ ಸಿದ್ಧಪಡಿಸಲಾಗುತ್ತದೆ. ನಿಮ್ಮ ಜೊತೆಯಲ್ಲಿ ಸಾಗುವ ತಾತ್ಕಾಲಿಕ ಹಾಗೂ ವಿಶ್ವಾಸಾರ್ಹ ತೂಕ ಇಳಿಸಿಕೊಳ್ಳುವ ತರಬೇತಿ ಇದಾಗಿದೆ.’

ಅಪ್ಲಿಕೇಶನ್ ಪ್ರಮುಖ ಲಕ್ಷಣಗಳು

ಆಹಾರ ಸಲಹೆಗಳು

ಈ ಅಪ್ಲಿಕೇಷನ್ ನಲ್ಲಿ ಸ್ಥಳ ಆಧಾರಿತ ಆಹಾರ ಸಲಹೆಗಳನ್ನು ನೀಡಲಾಗುತ್ತದೆ. ಬಳಕೆದಾರರು ಎಷ್ಟು ತೂಕ ಇಳಿಸಿಕೊಳ್ಳುವ ಗುರಿ ಹೊಂದಿದ್ದಾರೆ ಹಾಗೂ ಅವರು ಎಷ್ಟು ಕ್ಯಾಲೋರಿ ಆಹಾರ ಸೇವಿಸಬೇಕು ಎನ್ನುವ ಆಧಾರದ ಮೇಲೆ ಆಹಾರ ಸಲಹೆ ನೀಡಲಾಗುತ್ತದೆ. ಅಪ್ಲಿಕೇಷನ್ ಸೀಮಿತ ಆಯ್ಕೆಯಲ್ಲಿಯೇ ಸೂಚನೆಗಳನ್ನು ನೀಡುತ್ತದೆ. ಉದಾಹರಣೆಗೆ ನಿಮಗೆ ಕೇವಲ

image


ಮೆಕ್ ಡೋನಾಲ್ಡ್ ನಲ್ಲಿ ತಿನ್ನುವ ಆಯ್ಕೆ ಮಾತ್ರ ಇದ್ದಲ್ಲಿ ಅಲ್ಲಿ ಯಾವ ತಿಂಡಿ ನಿಮಗೆ ಉಪಯುಕ್ತ ಎಂಬುದನ್ನು ಆ್ಯಪ್ಸ್ ತಿಳಿಸುತ್ತದೆ.

ಡಯಟ್ ಯೋಜನೆಗಳು

ಈ ಅಪ್ಲಿಕೇಷನ್ ನಲ್ಲಿ ಬಳಕೆದಾರ ವಯಸ್ಸು,ಲಿಂಗ,ಆರೋಗ್ಯ ಸ್ಥಿತಿ, ಜೀವನಶೈಲಿ, ಆಹಾರಗಳ ಅನುಸಾರ 5-6 ಆಹಾರ ಯೋಜನೆಗಳ ಪಟ್ಟಿಯನ್ನು ಆಯ್ಕೆ ಮಾಡಬಹುದು. ಬಳಕೆದಾರ ಎಸ್ ಎಂ ಎಸ್ ಹಾಗೂ ಇಮೇಲ್ ಮೂಲಕ ಮಾತ್ರ ಆಹಾರ ಯೋಜನೆಯನ್ನು ಪಡೆಯಬಹುದಾಗಿದೆ.

ವಾಟರ್ ರಿಮೈಂಡರ್

ದೇಹಕ್ಕೆ ನೀರಿನ ಅವಶ್ಯಕತೆ ಬಹಳಷ್ಟಿದೆ. ಈ ಅಪ್ಲಿಕೇಷನ್ ದೇಹಕ್ಕೆ ಅಗತ್ಯವಿರು ನೀರಿನ ಪ್ರಮಾಣದ ಬಗ್ಗೆಮಾಹಿತಿ ನೀಡುತ್ತದೆ. ಸರಿಯಾದ ಪ್ರಮಾಣದಲ್ಲಿ ಸಾಕಷ್ಟು ನೀರು ಕುಡಿಯುವಂತೆ ಈ ಅಪ್ಲಿಕೇಷನ್ ಬಳಕೆದಾರರಿಗೆ ಆಗಾಗ ನೆನಪು ಮಾಡುತ್ತಿರುತ್ತದೆ.

ವಿಶ್ವಾಸದಿಂದ ಋತು ಹೇಳ್ತಾರೆ ` ObiNo ಪ್ರಸ್ತುತ TiE -IQ Bootcamp ಪಾಲುದಾರಿಕೆಯಲ್ಲಿದೆ. ಶೇಕಡಾ 50ಕ್ಕೂ ಹೆಚ್ಚು ಮಂದಿ ನಿಯಮಿತವಾಗಿ ತಿಂಗಳಿಗೊಮ್ಮೆ ಇದನ್ನು ಬಳಸ್ತಿದ್ದಾರೆ.ಶೇಕಡಾ 10ರಷ್ಟು ಮಂದಿ ವಾರದ 7 ದಿನ ಬಳಸ್ತಿದ್ದಾರೆ. ಬಳಕೆದಾರರಿಗೆ ಆ್ಯಪ್ಸ್ ಸಂಪೂರ್ಣ ಉಚಿತ. 350 ರೂಪಾಯಿ ಚಾರ್ಜ್ ಮಾಡುವ ಮಾದರಿ ಕೂಡ ನಮ್ಮ ಬಳಿ ಇದೆ. ಇದನ್ನೇ ಬಳಕೆದಾರರು ಹೆಚ್ಚಿನ ಮಟ್ಟದಲ್ಲಿ ಬಳಸಲಿ ಎಂದು ನಾವು ಬಯಸುತ್ತೇವೆ.’

ಇದು ಸ್ಮಾರ್ಟ್ ಫೋನ್ ಯುಗ. ಆಹಾರದಿಂದ ಹಿಡಿದು ವಿಹಾರದವರೆಗೆ ಏನು ಬೇಕಾದ್ರೂ ಜನ ಸ್ಮಾರ್ಟ್ ಫೋನ್ ಮೊರೆ ಹೋಗ್ತಾ ಇದ್ದಾರೆ. ಮೊಬೈಲ್ ಮೂಲಕ ತೂಕ ಇಳಿಸಿಕೊಳ್ಳಲು ತರಬೇತಿ ನೀಡುತ್ತಿರುವ ObiNo ಅಪ್ಲಿಕೇಷನ್ ಉತ್ತಮ ಆರಂಭ ಕಂಡಿದೆ. ObiNo ಈ ಮಾರುಕಟ್ಟೆಯನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳುವ ಪಥದಲ್ಲಿ ಸಾಗುತ್ತಿದೆ.

ಲೇಖಕ: ಪ್ರಕಾಶ್ ಭೂಷಣ್ ಸಿಂಗ್

ಅನುವಾದಕರು: ರೂಪಾ ಹೆಗಡೆ

Add to
Shares
2
Comments
Share This
Add to
Shares
2
Comments
Share
Report an issue
Authors

Related Tags