ಆವೃತ್ತಿಗಳು
Kannada

ಕಮಲ್​ ಹಾಸನ್​, ರಾಜಮೌಳಿಗೆ ಆಗದೇ ಇದ್ದಿದ್ದನ್ನು ಇವರು ಮಾಡಿದ್ರು: ಸಿನಿಮಾದ ಮುಂದಿನ ಭವಿಷ್ಯ ಇಂದೇ ತಿಳಿಯಿರಿ..!

ಟೀಮ್​ ವೈ.ಎಸ್​. ಕನ್ನಡ

2nd Jul 2016
Add to
Shares
2
Comments
Share This
Add to
Shares
2
Comments
Share

ಕನ್ನಡ ಸಿನಿಮಾರಂಗದಲ್ಲಿ ಫ್ರೀ ಬುಕ್ಕಿಂಗ್ ಸ್ಟಾರ್ಟ್ ಸ್ಟಾರ್ಟ್ ಆಗಿದೆ. ಅರೆ, ಅದ್ರಲ್ಲಿ ಏನು ಸ್ಪೆಷಲ್ ಅಂತ ಅನ್ಸಿದ್ರೂ ಇಲ್ಲಿ ಸ್ಪೆಷಲ್ ಇದೆ. ಇದು ಸಿನಿಮಾ ಚಿತ್ರೀಕರಣದ ಹಂತದಲ್ಲಿಯೇ ಸಿನಿಮಾ ನೋಡಲು ಬಕ್ಕಿಂಗ್ ಮಾಡೋ ಹೊಸ ರೀತಿಯ ಟೆಕ್ನಿಕ್. ಭಾರತೀಯ ಚಿತ್ರರಂಗದಲ್ಲೇ ಮೊದಲ ಬಾರಿಗೆ ಅದು ಸ್ಯಾಂಡಲ್​ವುಡ್​ನಲ್ಲಿ ವರ್ಕ್ ಆಗ್ತಿರೋದು ಇಲ್ಲಿ ವಿಶೇಷ. ಲೀಸರ್ ಪೋಲಿಯೋ ಅನ್ನೋ ಸಂಸ್ಥೆ ಈ ಪ್ರೀ ಬುಕ್ಕಿಂಗ್ ಅನ್ನೋ ಪ್ಲಾನ್ ಮಾಡಿದ್ದು ಸಿನಿಮಾ ಚಿತ್ರೀಕರಣದ ಹಂತದಲ್ಲೇ ನೀವು ಸಿನಿಮಾಗೆ ಪ್ರಿ-ಬುಕ್ಕಿಂಗ್ ಮಾಡಿ ಕೊಳ್ಳಬಹದು. ಇವರು ಎಂಆರ್​ಪಿ ಬೆಲೆ ಅಂತ ಪ್ರತಿ ಸಿನಿಮಾಗೂ ಒಂದು ಬೆಲೆ ನಿಗದಿ ಮಾಡ್ತಾರೆ. ಉದಾ ಹರಣೆಗೆ 20 ರುಪಾಯಿ ಫಿಕ್ಸ್ ಮಾಡಿದ್ರೆ ನೀವು 20 ರೂಪಾಯಿನ 5 ಟಿಕೆಟ್ ಬುಕ್ ಮಾಡಿದ್ರೆ ಜನ ಹೆಚ್ಚು ಹೆಚ್ಚು ಟಿಕೆಟ್ ತೆಗೆದು ಕೊಳ್ತಿದ್ದ ಹಾಗೆ ನಿಮ್ಮ 20 ರೂಪಾಯಿ ಮೇಲೆ ಹಣ ಸೇರುತ್ತಾ ಹೋಗುತ್ತೆ. ಸಿನಿಮಾ ರಿಲೀಸ್ ಟೈಂ ಗೆ ಹೆಚ್ಚು ಹಣ ಆಗಿರುತ್ತೆ. ಆಗ ಸಿನಿಮಾವನ್ನ ರಿಲೀಸ್ ಆದ ದಿನ ಆರಾಮವಾಗಿ ನೋಡಿ ಬರಬಹುದು.

image


ಪ್ರೀ ಬುಕ್ಕಿಂಗ್ ಉಪಯೋಗ

ಸಿನಿಮಾ ಚಿತ್ರೀಕರಣ ಹಂತದಲ್ಲೇ ಪ್ರೀಬುಕ್ಕಿಂಗ್ ಮಾಡೋ ಪ್ಲಾನ್​ನಿಂದ ಪ್ರೇಕ್ಷರಿಗೆ ನಮ್ಮ ಸಿನಿಮಾದ ಬಗ್ಗೆ ಎಷ್ಟು ಇಂಟ್ರೆಸ್ಟ್ ಇದೇ ಅನ್ನೋದು ಮೊದಲೇ ತಿಳಿಯುತ್ತದೆ. ಅಷ್ಟೇ ಅಲ್ಲದೆ ಸಿನಿಮಾಗೆ ಇನ್ವೆಸ್ಟ್ ಮಾಡಿರೋ ಹಣ ವಾಪಸ್ ಬರುತ್ತೋ ಇಲ್ಲವೋ ಅನ್ನೋದು ಕೂಡ ಮೊದಲೇ ತಿಳಿಯುತ್ತದೆ. ಇತ್ತೀಚೆಗೆ ಸಿನಿಮಾ ಥಿಯೇಟರ್ ಸಿಕ್ತಿಲ್ಲ ಅಂತ ಬಡಿದಾಡುತ್ತಿರೋ ನಿರ್ಮಾಪಕರಿಗೆ ತಮ್ಮ ಸಿನಿಮಾಗಳಿಗೆ ಚಿತ್ರಮಂದಿರ ಗಿಟ್ಟಿಸಿಕೊಳ್ಳುವುದು ಸುಲಭವಾಗುತ್ತದೆ. ಸಿನಿಮಾಗೆ ಹೆಚ್ಚು ಕ್ರೇಜ್ ಇದ್ರೆ ಚಿತ್ರಮಂದಿರ ಮಾಲೀಕರು ಆರಾಮಾಗಿ ಥಿಯೇಟರ್ ನೀಡ್ತಾರೆ. ಇನ್ನು ಇದ್ರಿಂದ ಪ್ರೇಕ್ಷಕರಿಗೂ ಲಾಭವಿದೆ. ಕೇವಲ 20 ರೂಪಾಯಿ ಕೊಟ್ಟು ಟಿಕೆಟ್ ನಿಗದಿ ಮಾಡಿದ್ರೆ, ಸಿನಿಮಾ ಬಿಡುಗಡೆ ಟೈಂಗೆ ಟಿಕೆಟ್ ಬೆಲೆಯಷ್ಟು ಹಣ ಸೇರಿರುತ್ತೆ. ಇನ್ನೂ ಹೆಚ್ಚಾಗಿದ್ರೆ ಸಿನಿಮಾವನ್ನ ಸ್ನಾಕ್ಸ್ ತಿನ್ನುತ್ತಾ ಎಂಜಾಯ್ ಮಾಡಬಹುದು.

image


ಕನ್ನಡದಲ್ಲಿ ಶುರುವಾಗಿದ್ದು ಹೇಗೆ..?

ಈ ಹಿಂದೆ ಈ ಪ್ಲಾನ್ ಅನ್ನ ಕಮಲ್ ಹಾಸನ್ ತಮ್ಮ ವಿಶ್ವರೂಪಂ ಸಿನಿಮಾಗೆ ಮಾಡಿದ್ದರು. ಅಷ್ಟೇ ಅಲ್ಲ ರಾಜಮೌಳಿ ತಮ್ಮ ಬಾಹುಬಲಿ ಚಿತ್ರಕ್ಕೂ ಮಾಡಿದ್ದರು. ಆದ್ರೆ ಅದನ್ನ ಅನುಷ್ಠಾನಕ್ಕೆ ತರಲು ಸಾಧ್ಯವಾಗಲಿಲ್ಲ. ಈ ವಿಶಿಷ್ಠವಾದ ಐಡಿಯಾವನ್ನ ಕನ್ನಡದ ಸಿನಿಮಾಗಳಿಗೆ ಯಾಕೆ ಉಪಯೋಗ ಮಾಡಿಕೊಳ್ಳಬಾರದು ಅಂತ ನಿರ್ಧಾರ ಮಾಡಿದ ಪುಷ್ಪಕ ವಿಮಾನ ಚಿತ್ರತಂಡ ಈಗಾಗಲೇ ಈ ಪ್ಲಾನ್​ನ ಉಪಯೋಗ ಪಡೆದುಕೊಂಡಿದೆ.

ಏನಿದು ಪುಷ್ಪಕ ವಿಮಾನ..?

ಕನ್ನಡದ ಹೆಸರಾಂತ ನಟ ರಮೇಶ್ ಅರವಿಂದ್ ಅಭಿನಯದ ಚಿತ್ರ ಪುಷ್ಪಕವಿಮಾನ. ಅಪ್ಪ ಮಗಳ ಬಾಂಧವ್ಯವನ್ನು ಹೊತ್ತು ತರುತ್ತಿರೋ ಈ ಚಿತ್ರವನ್ನ ವಿಖ್ಯಾತ್ ನಿರ್ಮಾಣ ಮಾಡ್ತಿದ್ದಾರೆ . ಸದ್ಯ ಚಿತ್ರೀಕರಣ ಮುಗಿಸಿರುವ ಪುಷ್ಪಕ ವಿಮಾನ ಟೀಂ ಸಿನಿಮಾವನ್ನ ತೆರೆಗೆ ತರೋದಕ್ಕೆ ರೆಡಿಯಾಗಿದ್ದಾರೆ. ಈಗಾಗಲೇ ಈ ಪ್ರೀ ಬುಕ್ಕಿಂಗ್​ನಲ್ಲಿ ಪುಷ್ಪಕ ವಿಮಾನ ಚಿತ್ರ ನೋಡಲು ಜನ ಮುಗಿಬಿದ್ದಿದ್ದು ಮುಂದಿನ ದಿನಗಳಲ್ಲಿ ಈ ಪ್ರೀ ಬುಕ್ಕಿಂಗ್ ಪ್ಲಾನ್ ಚಿತ್ರರಂಗದಲ್ಲಿ ಸಖತ್ತಾಗಿ ವರ್ಕ್ ಔಟ್ ಆಗೋದಂತು ನಿಜ. ನಿಮಗೂ ಈ ಪ್ಲಾನ್ ಇಂಪ್ರೆಸ್ ಆಗಿದ್ರೆ ನೀವು ಜಸ್ಟ್ ಕ್ಲಿಕ್ ಗೂಗಲ್ ನಂತ್ರ ಲೀಜರ್ ಪೋಲಿಯೋಗೆ ಎಂಟ್ರಿ ಆಗಿ ನಿಮ್ಮ ಟಿಕೆಟ್​ಗಳನ್ನ ಬುಕ್ ಮಾಡಿಕೊಳ್ಳಿ.

ಇದನ್ನು ಓದಿ:

1. ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳಿ: ಉತ್ತಮ ಭಾಷಣ ಮಾಡುವ ಕಲೆ ಕಲಿತುಕೊಳ್ಳಿ

2. 2 ಲಕ್ಷ ಯೂಸರ್ಸ್​ ಮತ್ತು 45 ಲಕ್ಷ ಮಂತ್ಲಿ ಟ್ರಾಫಿಕ್..!

3. ಯುವ ನಟರಿಗೆ ಹಾಟ್ ಫೇವರಿಟ್ ಆದ ಫಿಟ್ನೆಸ್ ಗುರು ಸೀನು ಮಾಸ್ಟರ್

Add to
Shares
2
Comments
Share This
Add to
Shares
2
Comments
Share
Report an issue
Authors

Related Tags