ಆವೃತ್ತಿಗಳು
Kannada

ಎಚ್ಚರ..! ಇನ್ನು 10 ವರ್ಷಗಳಲ್ಲಿ ಬಾಳೆಹಣ್ಣು ಸಿಗೋದೇ ಇಲ್ವಂತೆ..!

ಟೀಮ್​ ವೈ.ಎಸ್​. ಕನ್ನಡ

14th Jun 2017
Add to
Shares
6
Comments
Share This
Add to
Shares
6
Comments
Share

ಬಾಳೆ ಹಣ್ಣು.. ವಿಶ್ವದ ಎಲ್ಲಾ ಕಡೆ ಮತ್ತು ಎಲ್ಲಾ ಸೀಸನ್​ಗಳಲ್ಲಿ ಸಿಗುವ ಅತೀ ಮುಖ್ಯ ಹಣ್ಣು. ಕೆಲವರಿಗಂತೂ ಬಾಳೆಹಣ್ಣು ತಿನ್ನದೆ ದಿನವೇ ಕಳೆಯೋದಿಲ್ಲ. ಭಾರತೀಯರ ಮಟ್ಟಿಗೆ ಎಲ್ಲಾ ವರ್ಗದವರಿಗೂ ಕೈಗೆಟಕುವ ಹಣ್ಣು. ದೇವರ ಪೂಜೆಯಿಂದ ಹಿಡಿದು ಚಿಕ್ಕ ಮಕ್ಕಳವರೆಗೆ ಎಲ್ಲರಿಗೂ ಬಾಳೆಹಣ್ಣು ಬೇಕೇ ಬೇಕು. ಆದ್ರೆ ಈ ಬಾಳೆಹಣ್ಣು ಇನ್ನು ಹೆಚ್ಚು ದಿನ ಉಳಿಯೋದಿಲ್ಲವಂತೆ. ಬಾಳೆಹಣ್ಣು ನಶಿಸುವ ಸಾಧ್ಯತೆ ಹೆಚ್ಚಾಗಿದೆ.

image


ವಿಶ್ವ ಪ್ರಸಿದ್ಧ ಬಾಳೆಹಣ್ಣು ಅಬ್ಬಾಬ್ಬ ಅಂದ್ರೆ ಇನ್ನು ಹತ್ತು ವರ್ಷ ಸಿಗಬಹುದು. ಯಾಕಂದ್ರೆ ಬಾಳೆಗೆ ಈಗ ರೋಗಭೀತಿ ಕಾಡುತ್ತಿದೆ. ವಿಶ್ವದೆಲ್ಲೆಡೆ ಬಾಳೆ ಉತ್ಪಾದನೆ ವೈರಸ್​ನಿಂದ ಕಂಗೆಟ್ಟಿದೆ. ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯ ಸಂಶೋಧಕ ಡೇವಿಸ್ ಪ್ರಕಾರ ಫಂಗಸ್ ಖಾಯಿಲೆ ಬಾಳೆಗೆ ಮಾರಕವಾಗಿ ಕಾಡುತ್ತಿದೆ. ಬೆಳೆಗಾರರು ರೋಗಬಾಧೆಯನ್ನು ತಡೆಯಬಲ್ಲ ತಳಿಯನ್ನು ಬೆಳೆಸಿದರೆ ಬಾಳೆ ಉತ್ಪಾದನೆ ನಡೆಯಬಹುದು. ಇಲ್ಲದೇ ಹೋದ್ರೆ ಇನ್ನು ಹತ್ತೇ ವರ್ಷಗಳಲ್ಲಿ ಬಾಳೆಹಣ್ಣು ಅನ್ನೋದು ಇತಿಹಾಸದ ಪುಟ ಸೇರಿದ್ರೂ ಅಚ್ಚರಿ ಇಲ್ಲ.

“ ಬಾಳೆ ಉತ್ಪಾದನೆಗೆ ಎರಡರಿಂದ ಮೂರು ಮಾರಕ ಕಾಯಿಲೆಗಳು ಸವಾಲೊಡ್ಡಿವೆ. ವಿಶ್ವದ ಎಲ್ಲಾ ಕಡೆ ಬಾಳೆ ಬೆಳೆಯುವುದು ಕಷ್ಟಕರವಾಗಿದೆ. ರೋಗ ಬಾಧೆಯನ್ನು ತಡೆಯಬಲ್ಲ ತಳಿಯನ್ನು ಅಭಿವೃದ್ಧಿ ಪಡಿಸುವತ್ತ ಹೆಚ್ಚು ಗಮನ ಹರಿಸಬೇಕಿದೆ.”

ಬಾಳೆ ಹಣ್ಣು ವಿಶ್ವದ ಬಹುತೇಕ ಎಲ್ಲಾ ದೇಶಗಳಿಗೂ ಪ್ರಧಾನ ಹಣ್ಣಾಗಿದೆ. 100 ಮಿಲಿಯನ್ ಟನ್ ಬಾಳೆಹಣ್ಣು ಪ್ರತೀ ವರ್ಷ ಉತ್ಪತ್ತಿ ಆಗುತ್ತದೆ. 120 ದೇಶಗಳಲ್ಲಿ ಬಾಳೆ ಬೆಳೆ ನಡೆಯುತ್ತಿದೆ. ಆದ್ರೆ ಫಂಗಸ್ ಮತ್ತು ವೈರಸ್​ಗಳು ಹರಡುವ ರೋಗಗಳಿಂದ ಈ ಉತ್ಪನ್ನಗಳು ಕೆಲವೇ ಕೆಲವು ವರ್ಷಗಳಲ್ಲಿ ಬಾಳೆಯ ಬೆಳೆಗೆ ಕಂಟಕ ಒಡ್ಡಬಲ್ಲದು. ಪರಿಸ್ಥಿತಿ ಈಗಾಗಲೇ ಕೈ ಮೀರಿದೆ. ಇದು ಹೀಗೇ ಮುಂದುವರೆದ್ರೆ ಮುಂದಿನ 10 ವರ್ಷಗಳಲ್ಲಿ ಬಾಳೆ ಸಂಪೂರ್ಣವಾಗಿ ನಶಿಸಿ ಹೋಗಬಹುದು.

ಈಗಾಗಲೇ ಬಾಳೆ ಉತ್ಪಾದನೆಗೆ “ಸಿಗಟೊಕಾ” ಅನ್ನೋ ಫಂಗಸ್ ಕಾಯಿಲೆ ಶೆಕಡಾ 40 ರಷ್ಟು ಉತ್ಪಾದನೆಯನ್ನು ಕಡಿಮೆ ಮಾಡಿದೆ. “ಸಿಗೊಟಕ”ದಲ್ಲಿ ಹಳದಿ ಕಾಯಿಲೆ ತುಂಬಾ ಡೇಂಜರಸ್. ಇದಲ್ಲದೆ ಬಾಳೆ ಬೆಳವಣಿಗೆಯಲ್ಲಿರುವಾಗಲೇ ಅದರ ಎಲೆಗೆ ಅಂಟಿಕೊಳ್ಳುವ ಕಪ್ಪು ಚುಕ್ಕೆ ಶತಮಾನಗಳಿಂದ ಬಾಳೆ ಬೆಳೆಗೆ ಮಾರಕ ಅನ್ನೋದು ಹಲವು ಸಂದರ್ಭಗಳಲ್ಲಿ ಅನುಭವಕ್ಕೆ ಬಂದಿದೆ. ಈ ಕಪ್ಪು “ಸಿಗೊಟಕ” ಕಾಯಿಲೆ ಕ್ಯಾವಂಡೀಸ್ ಬಾಳೆ ಬೆಳೆಗೆ ಮಾರಕವಾಗಿ ಪರಿಣಮಿಸಿದೆ. ಹೀಗಾಗಿ ಈ ತಳಿಯ ಬಾಳೆ ಹಣ್ಣುಗಳು ಇನ್ನು ಕೆಲವೇ ದಿನಗಳಲ್ಲಿ ಮಾಯವಾಗುವುದು ಖಚಿತ.

ಈಗಾಗಲೇ ಭಾರತದಲ್ಲಿ ಬಾಳೆ ಬೆಳೆಗೆ ಹಲವು ಕಾಯಿಲೆಗಳು ಅಂಟಿಕೊಂಡಿವೆ. ಬೆಳೆಗಾರರು ಇದಕ್ಕೆ ಪರಿಹಾರ ಕಂಡುಕೊಳ್ಳದೇ ಇದ್ರೆ ಕೆಲವೇ ದಿನಗಳಲ್ಲಿ ಸಂಕಷ್ಟ ಎದುರಿಸುವುದು ಖಚಿತ.

ಇದನ್ನು ಓದಿ:

1. ಸಿರಿಧಾನ್ಯಗಳ ಬೇಕರಿ ಈ"ಹನಿ ಕೆಫೆ"..! 

2. ಸೌಂದರ್ಯ ಪ್ರಪಂಚದ ಕ್ವೀನ್ "ನಂದಿತಾ"

3 ವೃತ್ತಿಯಲ್ಲಿ ಆಟೋ ಚಾಲಕ- ಆದ್ರೆ 5000 ಸಸಿಗಳನ್ನು ನೆಟ್ಟ ಅಪ್ಪಟ ಪರಿಸರ ಪ್ರೇಮಿ

Add to
Shares
6
Comments
Share This
Add to
Shares
6
Comments
Share
Report an issue
Authors

Related Tags