ಆವೃತ್ತಿಗಳು
Kannada

Xperienceunlimited ಅನುಭವೇ ರೋಚಕ

ಶ್ರುತಿ

10th Nov 2015
Add to
Shares
2
Comments
Share This
Add to
Shares
2
Comments
Share

ಬದುಕು ಹಾಗೇ ಅದಕ್ಕೆ ಕಾರಣ ಬೇಕಿಲ್ಲ. ಹತ್ತಿರವಿದ್ದವರು ದೂರ ಆಗುತ್ತಾರೆ. ಹಾಗೇ ದೂರ ಇದ್ದವರು ಹತ್ತಿರವಾಗುತ್ತಾರೆ. ಗುರುತುಪರಿಚಯ ಇಲ್ಲದವರು ಬಾಳ ಸಂಗಾತಿಗಳಾಗುತ್ತಾರೆ. ವಿಧಿಯ ಮಧ್ಯಸ್ಥಿಕೆಯಿಂದ ಬದುಕಿಗೆ ತಿರುವು ಸಿಗುತ್ತದೆ. ಹೀಗೆ, ವಿಧಿಯ ದಾಳದ ಎದುರಾಗಿ, ಬದುಕನ್ನು ಬದಲಿಸಿಕೊಂಡವರ ಪರಿಚಯವನ್ನು ನಾವು ಮಾಡುತ್ತಿದ್ದೇವೆ.

image


ಇದು ಉತ್ತರ ಹಾಗೂ ದಕ್ಷಿಣ ಭೇಟಿಯಾದ ಸುಂದರವಾದ ಕಥೆ. ಉತ್ತರ ಭಾರತದ ಗುಡ್ಡಗಾಡು ಪ್ರದೇಶದಿಂದ ಬಂದ ಫುರ್ಬು ಹಾಗೂ ದಕ್ಷಿಣದ ಮಲೆಯಾಳಿ ಯುವಕ ಶೌನ್ ಆಕಸ್ಮಿಕವಾಗಿ ಒಂದಾಗಿ, ಮುಂದೆ ಬಾಳ ಸಂಗಾತಿಗಳಾಗಿ ಪರ್ವತ ಶ್ರೇಣಿ ಹಿಮಾಲಯಕ್ಕೆ ತೆರಳಿ Xperienceunlimited ಆರಂಭಿಸಿದ್ದ ಯಶೋಗಾಥೆ.

ಹಾಗೆ ನೋಡಿದರೆ, ಕಾಲದ ಮುಂದೆ ಇವರಿಬ್ಬರೂ ಕ್ಷಣಿಕರಾಗಿದ್ದರು. ಹೊಟ್ಟೆಪಾಡಿಗಾಗಿ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದರು. ಇವರಿಬ್ಬರ ನಡುವೆ ಮೊದಲು ಸ್ನೇಹ ಬೆಳೆಯಿತು. ಪರಸ್ಪರ ಅಭಿರುಚಿ, ಆಸಕ್ತಿ ಒಂದೇ ಇದ್ದಿದ್ದರಿಂದ ಮುಂದೆ ಜೊತೆಗಾರರೂ ಆದರು. ಈಗ ಇಬ್ಬರಿಬ್ಬರೂ ಜೊತೆಗೂಡಿ ಆರಂಭಿಸಿದ್ದ ಉದ್ಯಮವೇ Xperienceunlimited.

Xperienceunlimited ಆಸೆ ಹುಟ್ಟಿದ್ದು ಹೇಗೆ?

ಉತ್ತರ ಹಾಗೂ ದಕ್ಷಿಣಾಭಿಮುಖವಾಗಿ ಬದುಕು ಸಾಗಿಸುತ್ತಿದ್ದ ನನ್ನ ಹಾಗೂ ಫುರ್ಬು ಸಮಾಗಮಕ್ಕೆ ಕಾರಣವಾಗಿದ್ದು ಉದ್ಯಾನನಗರಿ ಬೆಂಗಳೂರು. ಅದೇನೋ ಗೊತ್ತಿಲ್ಲ. ಬೆಂಗಳೂರು ಅಂತಹ ಮಹಾನಗರದಲ್ಲಿ ವಾಸವಾಗಿದ್ದರೂ, ಮನಸ್ಸು ಮಾತ್ರ ಹಳ್ಳಿಯಲ್ಲಿ ಜೀವನ ಸಾಗಿಸುವಂತೆ ಮಿಡಿಯುತ್ತಿತ್ತು. ಪ್ರಕೃತಿಗೆ ಹತ್ತಿರವಾಗಿ ಬದುಕ ಸಾಗಿಸಲು ಬಯಸುತ್ತಿತ್ತು. ಲಾಭದಾಯಕ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹಣ ಬರುತ್ತಿದ್ದರೂ, ಬದುಕು ಸುಖಕರವಾಗಿ ಸಾಗುತ್ತಿದ್ದರೂ, ನೆಮ್ಮದಿ ಮಾತ್ರ ಇರಲಿಲ್ಲ. ಹೀಗಾಗಿ, ಸುಖಕರ ಕೆಲಸವನ್ನು ನಾನು ಫುರ್ಬು ಬಿಟ್ಟೆವು. 2010ರಲ್ಲಿ ಕೇರಳದ ಸ್ವಗ್ರಾಮದಲ್ಲಿ ಜೀವಿಸಲು ಪ್ರಾರಂಭಿಸಿದ್ದೆವು. ಹಳ್ಳಿಯಲ್ಲಿನ ಸಾಮಾನ್ಯ ಜೀವನ, ಪ್ರಶಾಂತ ವಾತವರಣ, ಜನರೊಂದಿಗಿನ ಬಾಂಧವ್ಯ, ದೇಶದ ನಾನಾ ಭಾಗಗಳಿಂದ ಬರುವ ಪ್ರವಾಸಗರೊಂದಿಗಿನ ಸಮಾಲೋಚನೆ, ಮಾತುಕತೆ, ಚರ್ಚೆ, ಒಡನಾಟ, ಶ್ರೀಮಂತ ಸಂಸ್ಕೃತಿಯ ಮಾತುಕತೆ ಹೊಸದೊಂದು ಅನ್ವೇಷಣೆಗೆ ಕಾರಣವಾಯಿತು. ಹೀಗೆ, ಆರಂಭಗೊಂಡ ಉದ್ಯಮವೇXperienceunlimited ಅನ್ನುತ್ತಾರೆ ಶೌನ್.

image


ಮೊದಲಿಗೆ ಕೇರಳದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುವ ಕಾರ್ಯದಲ್ಲಿ ನಾನು ತೊಡಗಿದೆ. ವೈಲ್ಡ್ ಲೈಫ್ ಪ್ರವಾಸ ಕಂಪನಿಯಲ್ಲಿ ಕೆಲಸವನ್ನು ಆರಂಭಿಸಿದೆ. ಇಲ್ಲಿ ಹೊಸದಾಗಿ ಪ್ರವಾಸೋದ್ಯಮ ಬಗ್ಗೆ ತಿಳಿಯಲು, ಹೊಸ ಹೊಸ ಅನ್ವೇಷಣೆಗಳನ್ನು ನಡೆಸಲು ನನಗೆ ಸಹಕಾರಿಯಾಯಿತು. ಈ ಸಂಸ್ಥೆಯಲ್ಲಿ ಹೊಸತನದ ಜೊತೆಗೆ ಪ್ರವಾಸೋದ್ಯಮದ ಬಗ್ಗೆ ಬಹಳಷ್ಟು ವಿಚಾರಗಳನ್ನು ನಾನು ತಿಳಿದುಕೊಂಡೆ. . ನಾವು ಬೇರೆಯವರಿಗಾಗಿ ಕೆಲಸ ಮಾಡುವುದಾದರೂ ಅಥವಾ ನಮಗಾಗಿ ಕೆಲಸ ಮಾಡುವುದಾದರೂ ಒಂದೇ ರೀತಿಯ ಪರಿಶ್ರಮವನ್ನು ವಿನಿಯೋಗಿಸಬೇಕಾಗುತ್ತದೆ ಎಂಬ ಯೋಚನೆ ನನಗೆ ಬಂದಿತ್ತು. ಈ ಸಂದರ್ಭದಲ್ಲಿ ನಾವು ನಮ್ಮದೇ ಹೊಸ ಉದ್ಯಮವನ್ನೇಕೆ ಆರಂಭಿಸಬಾರದೆಂದು ಅನಿಸಿತ್ತು. ನಮ್ಮ ಗ್ರಾಮೀಣ ಬದುಕಿನ ಕನಸನ್ನು ನನಸು ಮಾಡಿಕೊಳ್ಳಲು, ನಾವು ಅಂದುಕೊಂಡಿದ್ದನ್ನು ಸಾಧಿಸಲು, ನಮ್ಮದೇ ಆದ ಉದ್ಯಮವೊಂದನ್ನು ಆರಂಭಿಸಲು ನಿರ್ಧರಿಸಿದ್ದೇವು. ಆಗ ಹುಟ್ಟಿಕೊಂಡ ಉದ್ಯಮವೇ Xperienceunlimited ಅನ್ನುತ್ತಾರೆ ಶೌನ್.

ಮೊದಲಿಗೆ ಬೆಳಕಿಗೆ ಬಾರದ Xperienceunlimited

ಮೊದ ಮೊದಲು Xperienceunlimited ಅಷ್ಟೊಂದು ಜನಪ್ರಿಯತೆ ಆಗಿರಲಿಲ್ಲ. ಹಾಗೂ ಅದು ಬೆಳಕಿಗೆ ಕೂಡ ಬಂದರಿಲ್ಲ. ಆಫ್ ಲೈನ್‌ನಲ್ಲಿ ಯೋಗ, ಚಿಕಿತ್ಸೆ ಕಲ್ಯಾಣ ಕಾರ್ಯಕ್ರಮ, ಕ್ಯಾಂಪ್ ಮಾಡುವುದು ರೋಡ್ ಟ್ರಿಪ್ಸ್ ಮುಂತಾದ ಸೇವೆಗಳನ್ನು ಒದಗಿಸಲಾಗುತ್ತಿತ್ತು. ಕೆಲ ಟ್ರಾವೆಲ್ ಸಂಸ್ಥೆಗಳೊಂದಿಗೆ ಪಾಲುದಾರರಾಗಿ ಕಾರ್ಯಾಚರಣೆಯನ್ನು ಆರಂಭಿಸಿದ್ದೆವು. ಈ ಟ್ರಾವೆಲ್ಸ್ ಸಂಸ್ಥೆಗಳು ಉದ್ಯಮ ವ್ಯವಹಾರ ಸಂಸ್ಥೆಗಳಿಗೆ ತಮ್ಮ ಸೇವೆಗಳನ್ನು ಒದಗಿಸಲು ಆರಂಭಿಸಿತ್ತು. ಆರಂಭದಲ್ಲಿ ತಮ್ಮದೇ ಆದ ಅಂತರ್ಜಾಲ ವ್ಯವಸ್ಥೆ ಇಲ್ಲವೆಂಬ ಕಾರಣಕ್ಕಾಗಿ ಹಾಗೂ ಅಂತರ್ಜಾಲ ವ್ಯವಸ್ಥೆಯಿಂದಲೇ ಸಂಪರ್ಕ ಸಾಧನೆ ಸಾಧ್ಯ ಎಂಬ ಕಾರಣಕ್ಕಾಗಿ ನಾವೇ ಅಂತರ್ಜಾಲ ಆರಂಭಿಸಲು ನಿಶ್ಚಯಿಸಿದ್ದೆವು.

image


ಈ ಕಾಲದಲ್ಲಿ ಅಂತರ್ಜಾಲವನ್ನು ಯಾರು ಬೇಕಾದರೂ, ಎಲ್ಲಿ ಬೇಕಾದರೂ, ಏನನ್ನೂ ಬೇಕಾದರೂ ಕಲಿಯಬಹುದು, ಏನನ್ನೂ ಬೇಕಾದರೂ ಮಾಡಬಹುದು ಅನ್ನೋ ಕಾರಣಕ್ಕಾಗಿ ನಮ್ಮದೇ ಆದ ವೆಬ್ ಸೈಟ್ ಒಂದನ್ನು ತೆರೆಯಲು ನಿಶ್ಚಯಿಸಿದ್ದೆವು. ಅದರಂತೆಯೇ, ಯೂ ಟ್ಯೂಬ್ ಟುಟೋರಿಯಲ್ಸ್ ಗಳಲ್ಲಿ ಎರಡು ವಾರ ಕಾಲ ಕಳೆದೆವು. ಅಂತರ್ಜಾಲದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದ ಬಳಿಕ, ಗ್ರಾಹಕರಿಗೆ ಪರಿಹಾರವನ್ನು ಒದಗಿಸುವ ಸಲುವಾಗಿ ವೇದಿಕೆಯನ್ನು ಸಿದ್ಧಪಡಿಸಿಕೊಂಡೆವು. ಗ್ರಾಹಕರಿಗೆ ಅವಿಸ್ಮರಣೀಯ ಸೇವೆಗಳನ್ನು ಒದಗಿಸುವ ಸಲುವಾಗಿ ಹಾಗೂ ಪರಿಹಾರವನ್ನು ನೀಡುವ ದೃಷ್ಠಿಯಿಂದ ಆರಂಭಿಸಿದ್ದ ಅಂತರ್ಜಾಲವೇ Xperienceunlimited.

ಈ ಅಂತರ್ಜಾಲದ ಮೂಲಕ ಗ್ರಾಹಕರ ಮನದಾಳದ ಬಯಕೆ, ಆಸೆ-ಆಕಾಂಕ್ಷೆ, ಅವರಿಗೆ ಬೇಕು ಬೇಡಗಳನ್ನು ತಿಳಿದುಕೊಳ್ಳಲು ಅನುಕೂಲವಾಯಿತು. ಕಾಲ ಕಳೆದಂತೆ, ವಿಶ್ವಾದ್ಯಾಂತ ಗ್ರಾಹಕರು ಹೆಚ್ಚಾಗುತ್ತಿದ್ದಂತೆ, ತಮ್ಮ ಉದ್ಯಮ ಹಾಗೂ ಆನ್ ಲೈನ್ ‌ನಲ್ಲಿ ನಿರ್ವಹಣೆಗೆ ಅನುಕೂಲಕ್ಕಾಗಿ ವಿವಿಧ ತಂತ್ರಗಳನ್ನು ಅನುಕರಣೆ ಮಾಡಲಾಯಿತು. ಇದು ಅಂತರ್ಜಾಲ ಜನಪ್ರಿಯತೆಗೆ ಕಾರಣವಾಯಿತು ಅನ್ನುತ್ತಾರೆ ಶೌನ್.

image


ಮುಂದಿನ ಹಾದಿ...

ಗ್ರಾಮೀಣರಿಗೆ ಉತ್ತಮ ಸವಲತ್ತು, ಸೌಲಭ್ಯವನ್ನು ಒದಗಿಸುವ ಉದ್ದೇಶದಿಂದ ಆರಂಭಗೊಂಡ Xperienceunlimited ಮುಂದೆ ಹಲವಾರು ಕಲ್ಯಾಣ ಯೋಜನೆಗಳನ್ನು ಸಕಾರಗೊಳಿಸುವ ಗುರಿಯನ್ನು ಹೊಂದಿದೆ. Xperienceunlimited ಪ್ರತಿಪಾದಕ ಶೌನ್ ಹಾಗೂ ಫುರ್ಬು ಮುಂದಿನ 5 ವರ್ಷ ಹಳ್ಳಿಯಲ್ಲಿ ಜೀವನ ನಡೆಸಲು ಉದ್ದೇಶಿಸಿದ್ದಾರೆ. ಗ್ರಾಮೀಣ ಪ್ರದೇಶಗಳ ಜನರಿಗೆ ವಿವಿಧ ಅವಕಾಶಗಳನ್ನು ಒದಗಿಸುವ ಹಾಗೂ ಉತ್ತಮ ಸೇವೆಯನ್ನು ನೀಡುವ ವೇದಿಕೆಯೊಂದನ್ನು ಸೃಷ್ಠಿಸಲು ಬಯಸಿದ್ದಾರೆ.

ಪ್ರವಾಸೋದ್ಯಮ ಕ್ಷೇತ್ರ ಈಗ ಉತ್ತಮವಾಗಿ ನಡೆಯುತ್ತಿದ್ದು ಆದಾಯವನ್ನು ತಂದು ಕೊಡುತ್ತಿದೆ. ಈಗ ಅವರು ಕೇರಳ ಹಾಗೂ ಹಿಮಾಚಲದಲ್ಲಿ ಅತಿಥಿಗಳಿಗಾಗಿ ಪರಿಸರ ಸ್ನೇಹಿ ತಂಗುದಾಣ ವಿಭಾಗ ನಿರ್ಮಿಸುವ ಬಗ್ಗೆ ಯೋಚಿಸುತ್ತಿದ್ದಾರೆ. ಅದು ಈ ವರ್ಷದ ಪ್ರವಾಸದ ಜೊತೆ ಆರಂಭವಾಗಲಿದೆ, ಈ ಬಾರಿಯ ಪ್ರವಾಸ ಅನಿಯಮಿತ ಅನುಭವವನ್ನು ಒಳಗೊಂಡಿದೆ. ಅದು ಬೈಕ್ ರೈಡ್, ಗ್ರಾಮೀಣ ಜೀವನ(ಟ್ರಕ್ಕಿಂಗ್), ಫ್ಯಾಮಿಲಿ ಹಾಲಿಡೇಸ್ ಮುಂತಾದವುಗಳನ್ನು ಒಳಗೊಂಡಿರುತ್ತದೆ.

Add to
Shares
2
Comments
Share This
Add to
Shares
2
Comments
Share
Report an issue
Authors

Related Tags