ಆವೃತ್ತಿಗಳು
Kannada

ಭವಿಷ್ಯದ ಉದ್ಯಮಗಳ ತವರು ಭಾರತ..!

ಟೀಮ್​ ವೈ.ಎಸ್​.ಕನ್ನಡ

YourStory Kannada
18th Jan 2016
Add to
Shares
1
Comments
Share This
Add to
Shares
1
Comments
Share

2015ರ ಡಿಸೆಂಬರ್​ನಲ್ಲಿ ರೇಡಿಯೋದಲ್ಲಿ ಪ್ರಸಾರವಾಗುವ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ 'ಸ್ಟಾರ್ಟ್ಅಪ್ ಇಂಡಿಯಾ, ಸ್ಟ್ಯಾಂಡ್ಅಪ್ ಇಂಡಿಯಾ'ದ ರೂಪುರೇಷೆಗಳನ್ನು ಜನವರಿ 16ರಂದು ಬಿಡುಗಡೆ ಮಾಡುವುದಾಗಿ ಅಭಯವಿತ್ತಿದ್ದರು. ಭಾರತದ ಉದ್ಯಮ ಸಮುದಾಯಕ್ಕಿದು ನಿಜಕ್ಕೂ ಖುಷಿಯ ವಿಚಾರ. ಉದ್ಯಮಗಳ ಆರಂಭಿಕ್ಕಿರುವ ಎಲ್ಲ ಸಮಸ್ಯೆಗಳಿಗೂ ಮುಕ್ತಿ ಸಿಗಲಿದೆ ಅನ್ನೋ ಭರವಸೆಯನ್ನು ಖುದ್ದು ಪ್ರಧಾನಿಯೇ ನೀಡಿದ್ದಾರೆ. ಜಿಡಿಪಿ ತಲಾ ಆದಾಯವನ್ನು ಹೋಲಿಕೆ ಮಾಡಿದ್ರೆ ಚೀನಾದ್ದು ಭಾರತಕ್ಕಿಂತ 5 ಪಟ್ಟು ಹೆಚ್ಚು ಅಂದ್ರೆ ಸುಮಾರು 7,594 ಡಾಲರ್​ನಷ್ಟಿದೆ. ಭಾರತದಲ್ಲಿ ತಲಾ ಆದಾಯ ಕೇವಲ 1,596 ಡಾಲರ್. ಆದ್ರೆ ಈ ಸ್ಥಿತಿ ಶೀಘ್ರದಲ್ಲೇ ಬದಲಾಗಲಿದೆ. ಇದಕ್ಕಾಗಿಯೇ ಕೇಂದ್ರ ಸರ್ಕಾರ ಹೊಸದಾದ ಉದ್ಯಮ ಸ್ನೇಹಿ ನಿಯಮಗಳನ್ನು ಜಾರಿಗೆ ತರುತ್ತಿದೆ. ಭಾರತದಲ್ಲಿ ಉದ್ಯಮಗಳ ಆರಂಭಕ್ಕೆ ಇದು ಸಕಾಲ, ಅದ್ಯಾಕೆ ಅನ್ನೋದಕ್ಕೆ ಕೆಲವೊಂದು ಪ್ರಮುಖ ಕಾರಣಗಳು ಇಲ್ಲಿವೆ.

image


1. ಈ ವರ್ಷ ಭಾರತದಲ್ಲಿ ಹೂಡಿಕೆಯಾದ ಬಂಡವಾಳ ಬರೋಬ್ಬರಿ 9 ಮಿಲಿಯನ್ ಡಾಲರ್. ಈ ಮೊತ್ತ ಅಂಡಮಾನ್ & ನಿಕೋಬಾರ್, ಸಿಕ್ಕಿಂ, ಅರುಣಾಚಲ ಪ್ರದೇಶ, ಮಿಜೋರಾಂ ಮತ್ತು ಮಣಿಪುರದ ಒಟ್ಟಾರೆ ಜಿಡಿಪಿಗಿಂತಲೂ ಅಧಿಕ.

2. ಫ್ಲಿಪ್​ಕಾರ್ಟ್​ ನಮ್ಮ ಇ-ಕಾಮರ್ಸ್ ಕ್ಷೇತ್ರದ ಪೋಸ್ಟರ್ ಬಾಯ್ ಎಂದಾದ್ರೆ ಆ ರಾಜ್ಯದ ಮೌಲ್ಯ 13 ರಾಜ್ಯಗಳ ಜಿಡಿಪಿಗಿಂತಲೂ ಹೆಚ್ಚು. ಅಂದ್ರೆ ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟಾರೆ ಜಿಡಿಪಿಯಲ್ಲಿ ಅರ್ಧದಷ್ಟು.

3. ಒಟ್ಟಾರೆ 2.7 ಟ್ರಿಲಿಯನ್ ಡಾಲರ್​ನೊಂದಿಗೆ ಭಾರತ ಜಿಡಿಪಿ ದರದಲ್ಲಿ ವಿಶ್ವಮಟ್ಟದಲ್ಲಿ 9ನೇ ಸ್ಥಾನದಲ್ಲಿದೆ. ಜಿಡಿಪಿಯ ಬಹುಪಾಲು ಟೈರ್1 ಮತ್ತು ಟೈರ್2 ಸಿಟಿಗಳಿಂದ ದೊರೆಯುತ್ತದೆ. ಆದ್ರೆ ಭಾರತದ ಶೇ.70ರಷ್ಟು ಜನರು ಹಳ್ಳಿಗಳಲ್ಲಿ ವಾಸವಾಗಿದ್ದಾರೆ. ಅಂದ್ರೆ ಗ್ರಾಮೀಣ ಭಾಗದ ಜನರಲ್ಲಿ ಇನ್ನೂ ಹೆಚ್ಚಿನ ಸಾಮರ್ಥ್ಯ ಅಡಗಿದೆ ಎಂದರ್ಥ.

4. ಸ್ನಾಪ್​ಡೀಲ್​ನ ಮೌಲ್ಯ, ದಶಕಗಳಿಂದ ಅಸ್ತಿತ್ವದಲ್ಲಿರುವ ವೇದಾಂತ ಅಥವಾ ಗ್ರಾಸಿಮ್ ಅಥವಾ ಜಿಎಸ್​ಕೆ ಗಿಂತಲೂ ಅಧಿಕವಾಗಿದೆ.

5. ಭಾರತೀಯ ರೈಲ್ವೆ ದೇಶದ ಅತಿ ದೊಡ್ಡ ಸಾರ್ವಜನಿಕ ಉದ್ಯಮ ವಲಯ. ಜಗತ್ತಿನಲ್ಲಿ ಅತಿ ಹೆಚ್ಚು ಜನರಿಗೆ ಉದ್ಯೋಗ ನೀಡಿದವರಲ್ಲಿ ಭಾರತೀಯ ರೈಲ್ವೆಗೆ 8ನೇ ಸ್ಥಾನ ದಕ್ಕಿದೆ. ಇಲ್ಲಿ 1.4 ಮಿಲಿಯನ್ ಜನರು ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಆದ್ರೂ ಅವಕಾಶಗಳನ್ನಾಗಿ ಪರಿವರ್ತಿಸಬಲ್ಲ ಅಸಮರ್ಪಕ ಮೀಸಲಾತಿ, ಪ್ರಕ್ರಿಯೆ ಸರಳೀಕರಣ, ಆಹಾರ ಪೂರೈಕೆಯಂತಹ ಸಮಸ್ಯೆಗಳು ಕಾಡುತ್ತಿವೆ.

6. ಜಗತ್ತಿನ ಒಟ್ಟಾರೆ ಯುನಿಕಾರ್ನ್​ಗಳಲ್ಲಿ ಭಾರತದ ಪಾಲು ಶೇ.5.7ರಷ್ಟಿದೆ. ಸ್ಟಾರ್ಟ್ಅಪ್​ಗಳ ಮೌಲ್ಯ ಸುಮಾರು 1 ಬಿಲಿಯನ್​ಗೂ ಅಧಿಕ. ಆದ್ರೆ ಸಾಗರೋತ್ತರ ಪ್ರದೇಶಗಳಲ್ಲಿ ಲಭ್ಯವಿರುವ ಹೂಡಿಕೆ ಪ್ರಮಾಣವನ್ನು ಹೋಲಿಕೆ ಮಾಡಿದ್ರೆ ಭಾರತಕ್ಕೆ ಅದರಲ್ಲಿ ಅಲ್ಪ ಪಾಲು ಮಾತ್ರ ಸಿಗುತ್ತಿದೆ. ಭಾರತದ ಯುನಿಕಾರ್ನ್​ಗಳೆಂದ್ರೆ ಫ್ಲಿಪ್​ಕಾರ್ಟ್​, ಸ್ನಾಪ್​ಡೀಲ್​, ಓಲಾ, ಪೇಟಿಮ್, ಕ್ವಿಕರ್, ಝೊಮ್ಯಾಟೋ, ಮುಸಿಗ್ಮಾ ಮತ್ತು ಇನ್​ಮೊಬಿ.

7. 17 ಹಣಕಾಸು ಸಂಸ್ಥೆಗಳು 2015ರಲ್ಲಿ 290 ಮಿಲಿಯನ್ ಡಾಲರ್​ಗೂ ಅಧಿಕ ಬಂಡವಾಳ ಗಿಟ್ಟಿಸಿಕೊಂಡಿವೆ. ಕಳೆದ ವರ್ಷ ಅತಿ ಹೆಚ್ಚು ಹೂಡಿಕೆಯಾದ ಕ್ಷೇತ್ರವಿದು. ಬ್ಯಾಂಕ್​ಗಳಿಗೆ ಹಣ ಪಾವತಿ ಸಂಬಂಧ ಆರ್​ಬಿಐ ಮಾರ್ಗದರ್ಶನಗಳಲ್ಲಾದ ಸಡಿಲಿಕೆಯಿಂದ ಉದ್ಯಮಗಳು ನಿಟ್ಟುಸಿರು ಬಿಡುವಂತಾಗಿದೆ.

8. ಕಳೆದ ವರ್ಷದ ಒಟ್ಟು ಹೂಡಿಕೆಯಲ್ಲಿ ಶೇ.33ರಷ್ಟು ಅಂದ್ರೆ 3.377 ಬಿಲಿಯನ್ ಡಾಲರ್ ಮೊತ್ತ ಬಿ2ಸಿ ವಾಣಿಜ್ಯ ಕ್ಷೇತ್ರದ 11 ಕಂಪನಿಗಳಿಗೆ ಲಭಿಸಿದೆ. ಅದರಲ್ಲಿ ಶೇ.50ಕ್ಕೂ ಹೆಚ್ಚು ಪಾಲು ಯುನಿಕಾರ್ನ್​ಗಳದ್ದು.

image


9. ಸ್ಟಾರ್ಟ್ಅಪ್​ಗಳ ಪಾಲಿಗೆ ಗ್ರಾಮೀಣ ಭಾರತವೇ ಅತಿ ದೊಡ್ಡ ಮಾರುಕಟ್ಟೆ. ಸ್ಥಳೀಯ ಸಮಸ್ಯೆಗಳು, ಅಗತ್ಯಗಳ ಬಗ್ಗೆ ಹೆಚ್ಚು ಗಮನಹರಿಸಿದ್ರೆ ಮಾರುಕಟ್ಟೆ ಮೇಲೆ ಹಿಡಿತ ಸಾಧಿಸಬಹುದು. ದೇಶೀಯ ಭಾಷೆಗಳ ಮೊರೆ ಹೋಗುವುದು ಈ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳುವ ಅತ್ಯಂತ ಉತ್ತಮ ಮಾರ್ಗಗಳಲ್ಲೊಂದು.

10. ವಿಶ್ವಬ್ಯಾಂಕ್​ನ 'ಡೂಯಿಂಗ್ ಬ್ಯುಸಿನೆಸ್ ರಿಪೋರ್ಟ್' ಪ್ರಕಾರ 2008ರಲ್ಲಿ 120ನೇ ಸ್ಥಾನದಲ್ಲಿದ್ದ ಭಾರತ 2014ರಲ್ಲಿ 132ನೇ ಸ್ಥಾನಕ್ಕೆ ತಲುಪಿದೆ. ಸದ್ಯ 130ನೇ ಸ್ಥಾನದಲ್ಲಿದ್ದು, ಉದ್ಯಮ ಸ್ನೇಹಿ ಸರ್ಕಾರದ ನೆರವಿನಿಂದ ಇನ್ನಷ್ಟು ಸುಧಾರಣೆಗಳಾಗುವ ನಿರೀಕ್ಷೆ ಇದೆ.

11. ಸ್ಟಾರ್ಟ್ಅಪ್​ಗಳ ಯಶಸ್ಸಿಗೆ ಹಲವು ರಾಜ್ಯ ಸರ್ಕಾರಗಳು ಕೂಡ ಕ್ರಮ ಕೈಗೊಂಡಿವೆ. ಇವುಗಳ ಪೈಕಿ ಕರ್ನಾಟಕಕ್ಕೆ ಮೊದಲನೆ ಸ್ಥಾನ. ಆಂಧ್ರಪ್ರದೇಶ ಮತ್ತು ರಾಜಸ್ತಾನ ಕೂಡ ಮುಂಚೂಣಿಯಲ್ಲಿವೆ. ಕೇರಳ ಸರ್ಕಾರ ಬಜೆಟ್​ನಲ್ಲಿ ಶೇ.1ರಷ್ಟನ್ನು ಉದ್ಯಮಗಳಿಗೆ ಮೀಸಲಾಗಿರಿಸಲು ತೀರ್ಮಾನಿಸಿದೆ. ಬೇರೆ ಬೇರೆ ಜಿಲ್ಲೆಗಳಲ್ಲಿ ಉದ್ಯಮಿಗಳಿಗೆ ಸಲಹೆ ನೀಡಲು ಅಧಿಕಾರಿಗಳಿಗೆ ತರಬೇತಿ ನೀಡುವ ಸಲುವಾಗಿ ಪಶ್ಚಿಮ ಬಂಗಾಳ ಸರ್ಕಾರ ಐಐಎಂ ಕೋಲ್ಕತ್ತಾ ಜೊತೆ ಟೈಅಪ್ ಮಾಡಿಕೊಂಡಿದೆ. ಅದರಂತೆ ಮಹಾರಾಷ್ಟ್ರ, ಗುಜರಾತ್, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಮತ್ತು ದೆಹಲಿ ಸರ್ಕಾರಗಳು ಕೂಡ ಉದ್ಯಮ ವಲಯವನ್ನು ಪ್ರೋತ್ಸಾಹಿಸಲು ಹಲವು ಯೋಜನೆಗಳನ್ನು ಹಮ್ಮಿಕೊಂಡಿವೆ.

12. 2015ರಲ್ಲಿ ಫ್ಲಿಪ್​ಕಾರ್ಟ್​ ಸಂಸ್ಥಾಪಕರಾದ ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ ಫೋರ್ಬ್ಸ್​ ಪಟ್ಟಿಯಲ್ಲಿ ಎಂಟ್ರಿ ಪಡೆದಿದ್ದಾರೆ. ಈ ವರ್ಷ ಇನ್ನಷ್ಟು ಬಿಲಿಯನೇರ್​ಗಳು ಹುಟ್ಟಿಕೊಳ್ಳುವುದರಲ್ಲಿ ಅನುಮಾನವಿಲ್ಲ.

13. 'ವರ್ಲ್ಡ್​ ಸ್ಟಾರ್ಟ್ಅಪ್ ಗ್ನೋಮ್ 2015' ಪ್ರಕಾರ ಜಗತ್ತಿನ ಅತಿ ಉತ್ತಮ ಔದ್ಯಮಿಕ ಸ್ಥಳಗಳಲ್ಲಿ ಬೆಂಗಳೂರಿಗೆ 5ನೇ ಸ್ಥಾನವಿದೆ.

14. ಸ್ಟಾರ್ಟ್ಅಪ್ ಪದದ ಅಸ್ಪಷ್ಠತೆ ಮತ್ತು ವಿವಿಧ ವ್ಯಾಖ್ಯಾನಗಳಿಂದಾಗಿ ನಮ್ಮ ಆರ್ಥಿಕತೆಯ ಜಿಡಿಪಿಯಲ್ಲಿ ಅವುಗಳ ಕೊಡುಗೆ ಎಷ್ಟು ಎಂಬುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ರಾಷ್ಟ್ರೀಯ ಉದ್ಯಮ ನೀತಿ ಜಾರಿಯಾದಲ್ಲಿ ಇದು ಸಾಧ್ಯವಾಗಬಹುದು.

15. ಔದ್ಯಮಿಕ ಕ್ಷೇತ್ರದಲ್ಲಿ ಕೇರಳ ಸರ್ಕಾರ ಪ್ರಗತಿ ಸಾಧಿಸುತ್ತಿದೆ. ಹಳ್ಳಿಗಳಲ್ಲಿ ಉದ್ಯಮ ಆರಂಭಕ್ಕೆ ಅವಕಾಶ ಕೊಡುವ ಮೂಲಕ ಈ ವಲಯದ ಸುಧಾರಣೆಗೆ ಕ್ರಮಗಳನ್ನು ಕೈಗೊಂಡಿದೆ.

16. 2014ರಲ್ಲಿ ಫೇಸ್​ಬುಕ್​ 'ಲಿಟ್ಲ್ ಐ ಲ್ಯಾಬ್ಸ್' ಅನ್ನು ಸ್ವಾಧೀನಪಡಿಸಿಕೊಂಡಿದೆ. 2015ರಲ್ಲಿ ಟ್ವಿಟ್ಟರ್ 'ಝಿಪ್​ಡಯಲ್​ ' ಅನ್ನು ಸ್ವಾಧೀನಪಡಿಸಿಕೊಂಡಿದೆ. ಭಾರತಲ್ಲಿ ಫೇಸ್​ಬುಕ್​ ಮೊದಲು ಸ್ವಾಧೀನಕ್ಕೆ ಪಡೆದ ಸಂಸ್ಥೆ ಅಂದ್ರೆ `ಲಿಟ್ಲ್ ಐ ಲ್ಯಾಬ್ಸ್'. ಸರ್ಕಾರದ ನೆರವಿನೊಂದಿಗೆ ಇಂತಹ ಮತ್ತಷ್ಟು ಸ್ವಾಧೀನ ಪ್ರಕ್ರಿಯೆಗಳು ನಡೆಯಲಿ ಎಂಬ ಆಶಾವಾದ ನಮ್ಮಲ್ಲಿದೆ, ಇದು ನಮ್ಮ ತಾಂತ್ರಿಕ ಕೌಶಲ್ಯವನ್ನು ಇನ್ನಷ್ಟು ಬಲಪಡಿಸಲಿದೆ. ಕಳೆದ ವರ್ಷ ಕೂಡ ರತನ್ ಟಾಟಾ, ಮೋಹನ್​ದಾಸ್​ ಪೈ ಅವರಂತಹ ಘಟಾನುಘಟಿ ಸಾಂಪ್ರದಾಯಿಕ ಉದ್ಯಮಿಗಳು ಸ್ಟಾರ್ಟ್ಅಪ್​ಗಳಲ್ಲಿ ಹೂಡಿಕೆ ಮಾಡಿರುವುದು ವಿಶೇಷ.


ಲೇಖಕರು : ಆದಿತ್ಯ ಭೂಷಣ್​ ದ್ವಿವೇದಿ

ಅನುವಾದಕರು : ಭಾರತಿ ಭಟ್​

Add to
Shares
1
Comments
Share This
Add to
Shares
1
Comments
Share
Report an issue
Authors

Related Tags