ಆವೃತ್ತಿಗಳು
Kannada

"ಧ್ರುವ"ತಾರೆ ಬಗ್ಗೆ ನಿಮಗೆಷ್ಟು ಗೊತ್ತು..?

ಟೀಮ್​ ವೈ.ಎಸ್​. ಕನ್ನಡ

7th Oct 2016
Add to
Shares
6
Comments
Share This
Add to
Shares
6
Comments
Share

ಭಾರತದಲ್ಲಿ ಅದೆಷ್ಟೋ ಬ್ಯಾಂಡ್​ಗಳಿವೆ. ಬಹುತೇಕ ಎಲ್ಲಾ ಬ್ಯಾಂಡ್​ಗಳು ಪಾಶ್ಚಿಮಾತ್ಯ ಸಂಸ್ಕೃತಿಯನ್ನೇ ಹಿಂಬಾಲಿಸುತ್ತವೆ. ಅಲ್ಲೊಂದು ಇಲ್ಲೊಂದು ದೇಶೀ ಬ್ಯಾಂಡ್​ಗಳಿದ್ದರೂ ಅವುಗಳ ಮೇಲೂ ವೆಸ್ಟರ್ನ್ ಕಲ್ಚರ್​ನ ಪ್ರಭಾವ ಇದ್ದೇ ಇರುತ್ತದೆ. ಆದ್ರೆ ಬೋಪಾಲ್​​ನಲ್ಲೊಂದು ಅಪ್ಪಟ ದೇಶೀ ಬ್ಯಾಂಡ್ ಇದೆ. ಅದ್ರ ಹೆಸರು “ಧ್ರುವ”. ಸಂಸ್ಕೃತ ಶ್ಲೋಕ ಮತ್ತು ಪವಿತ್ರ ಮಂತ್ರಗಳನ್ನು ಮ್ಯೂಸಿಕ್ ಮೂಲಕ ಪ್ರಚಾರ ಮಾಡೋದೇ ಈ ಬ್ಯಾಂಡ್​ನ ಮೂಲ ಉದ್ದೇಶ.

image


ಭಾರತದ ಏಕೈಕ ಸಂಸ್ಕೃತ ಬ್ಯಾಂಡ್ ಅನ್ನೋ ಹೆಗ್ಗಳಿಕೆ “ಧ್ರುವ”ದ ಪಾಲಾಗಿದೆ. ಸಂಜಯ್ ದ್ವಿವೇದಿ ಅನ್ನುವವರ ಯೋಚನೆಯ ಫಲವೇ ಇದು. ಸಂಸ್ಕೃತದ ವಿದ್ವಾಂಸಕನಾಗಿರುವ ಸಂಜಯ್ ದ್ವಿವೇದಿ ಸಂಸ್ಕೃತದಲ್ಲಿ ಹಲವು ನಾಟಕಗಳನ್ನು ಬರೆದಿದ್ದಾರೆ. ಈಗಾಗಲೇ ಭಾರತದಲ್ಲಿ 12 ಪ್ರದರ್ಶನಗಳನ್ನು ಮಾಡಿರುವ “ಧ್ರುವ” ಬ್ಯಾಂಡ್ ದೇಶದ ಮೂಲೆ ಮೂಲೆಗಳಲ್ಲೂ ಸಂಸ್ಕೃತ ಶ್ಲೋಕ ಮತ್ತು ಅದ್ರ ಮಹತ್ವವನ್ನು ತಿಳಿಸುವ ಪ್ರಯತ್ನ ಮಾಡುವ ಪ್ಲಾನ್ ಮಾಡಿಕೊಂಡಿದೆ.

“ ಸಂಗೀತ ಯಾವುದೇ ರೂಪದಲ್ಲಿದ್ದರೂ ಅದು ಒಳ್ಳೆಯ ಯೋಚನೆಯನ್ನೇ ತುಂಬುತ್ತದೆ. ಆದ್ರೆ ಕ್ಲಾಸಿಕಲ್ ಮ್ಯೂಸಿಕ್ ನೇರವಾಗಿ ಹೃದಯಗಳ ಜೊತೆಗೆ ಸಂಬಂಧವನ್ನು ಬೆಸೆಯುತ್ತದೆ. ಆದ್ರೆ ಸಂಸ್ಕೃತ ಶ್ಲೋಕಗಳು ಎಲ್ಲಕ್ಕಿಂತ ವಿಭಿನ್ನ, ಇದು ಹೃದಯಗಳ ಜೊತೆ ಸಂಬಂಧ ಬೆಳೆಸುವುದರ ಜೊತೆಗೆ ಆತ್ಮಗಳ ಜೊತೆಗೂ ನಂಟು ಬೆಳೆಸುತ್ತದೆ ”
- ಸಂಜಯ್ ದ್ವಿವೇದಿ, ಧ್ರುವ ಬ್ಯಾಂಡ್ ಸಂಸ್ಥಾಪಕ

“ಧ್ರುವ”ಬ್ಯಾಂಡ್ ಸ್ಟೇಜ್ ಹತ್ತಿದ ಕೂಡಲೇ ಅಭಿಮಾನಿಗಳು ಚಪ್ಪಾಳೆ ತಟ್ಟಿ ಪ್ರೋತ್ಸಾಹ ನೀಡುತ್ತಿದ್ದಾರೆ. ಸಂಸ್ಕೃತ ಶ್ಲೋಕಗಳಿಗೆ ಪಾಶ್ಚಿಮಾತ್ಯ ಮ್ಯೂಸಿಕ್ನ ಟಚ್ ನೀಡಿ ಭಾರತದ ಸಂಸ್ಕೃತ ಶ್ಲೋಕಗಳನ್ನು ಎಲ್ಲಾ ಕಡೆ ಫೇಮಸ್ ಆಗುವಂತೆ ಮಾಡುತ್ತಿದ್ದಾರೆ. ಋಗ್ವೇದದ ಶ್ಲೋಕಗಳು, ಆದಿಶಂಕರಾಚಾರ್ಯರು ರಚಿಸಿರುವ ಭಜಗೋವಿಂದಂ, ಶಿವ ತಾಂಡವದ ಶ್ಲೋಕಗಳು, ಜೈದೇವ್ರ ಗೀತ ಗೋವಿಂದಂ, ವಲ್ಲಭಚಾರ್ಯರ ಮಧುರಾಷ್ಟಕಂ, ಅಭಿಜ್ಞಾನ ಶಾಕುಂತಲೆಯ ಪ್ರಣಯ ಪ್ರಸಂಗಗಳು ಸೇರಿಂದತೆ ಅನೇಕ ಶ್ಲೋಕಗಳು ಮತ್ತು ಕಥೆಗಳನ್ನು ಜನರಿ ಮೆಚ್ಚುವ ರೀತಿಯಲ್ಲಿ ಈ ಸಂಸ್ಕೃತ ಬ್ಯಾಂಡ್ ನಿರೂಪಿಸುತ್ತಿದೆ. ಇದಕ್ಕೆ ಪೂರಕ ಎಂಬಂತೆ ತಾವೇ ರಚಿಸಿದ ಪದ್ಯಗಳಿಗೆ ಸಂಗೀತ ನೀಡಿ ಅಭಿಮಾನಿಗಳನ್ನು ಮೆಚ್ಚಿಸುತ್ತಿದೆ.

ಒಟ್ಟಿನಲ್ಲಿ “ಧ್ರುವ” ಭಾರತದಲ್ಲಿ ಹೊಸ ಅಲೆಯನ್ನು ಹುಟ್ಟು ಹಾಕಿದೆ. ಪಾಶ್ಚಿಮಾತ್ಯ ಸಂಗೀತಕ್ಕೆ ಮುಂದೊಂದು ದಿನ ಪ್ರತಿಸ್ಪರ್ಧಿಯಾಗುವ ಕನಸು ಕಾಣ್ತಿದೆ.

ಇದನ್ನು ಓದಿ:

1. ಜೈ ಹೋ ಜಯವೇಲು...

2. ಟೋಲ್​ಗಳಲ್ಲಿ ಇನ್ನುಮುಂದೆ ಪೇಟಿಎಂ ಹವಾ..!

3. ಬಿಹಾರದ ಯುವಕನಿಗೆ "ಶರದ್​"ಕಾಲ..!

Add to
Shares
6
Comments
Share This
Add to
Shares
6
Comments
Share
Report an issue
Authors

Related Tags