ಆವೃತ್ತಿಗಳು
Kannada

ಹೈಪರ್​​ ಲೋಕಲ್ ಸಂಸ್ಥೆ ಲೋಕಲ್​​ ಲೆಗ್ಸ್​​ ಕಾರ್ಯಾಚರಣೆಯಲ್ಲಿ ಕ್ಷಿಪ್ರ ಬದಲಾವಣೆ:

ಟೀಮ್​​ ವೈ.ಎಸ್​​.

24th Sep 2015
Add to
Shares
5
Comments
Share This
Add to
Shares
5
Comments
Share

ದಿನಸಿ ಹಾಗೂ ಇನ್ನಿತರೆ ಗೃಹೋಪಯೋಗಿ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ಸೇವೆ ಭಾರತದಲ್ಲೂ ನಿಧಾನವಾಗಿ ಜನಪ್ರಿಯಗೊಳ್ಳುತ್ತಿದೆ.. 2015ರಲ್ಲಿ ಘೋಷಿಸಲ್ಪಟ್ಟಂತೆ ಸುಮಾರು 27 ರೀತಿಯ ಹೈಪರ್​​ ಲೋಕಲ್​​​ ಸೇವೆಗಳಿವೆ.. 2015ರ ಸಾಲಿನಲ್ಲಿ ಮೊದಲಾರ್ಧದಲ್ಲಿ ಈ ರೀತಿಯ ಹೈಪರ್​ಲೋಕಲ್ ಸೇವೆಗಳಿಗೆ ಹೂಡಿಕೆ ಮಾಡಿದ ಒಟ್ಟು ಮೊತ್ತ 135 ಮಿಲಿಯನ್ ಅಮೇರಿಕನ್ ಡಾಲರ್.. ಈ ಮಾದರಿಯ ಸೇವೆಗಳಿಗೆ ಕ್ರಮೇಣ ಬೇಡಿಕೆ ಸೃಷ್ಟಿಯಾಗುತ್ತಿರುವ ಹಿನ್ನೆಲೆಯಲ್ಲಿ, ದೊಡ್ಡ ದೊಡ್ಡ ಉದ್ಯಮಿಗಳೂ ಈ ರೀತಿಯ ಹೊ ಸುದ್ಯಮ ಆರಂಭಿಸುವತ್ತ ಆಸಕ್ತಿ ವಹಿಸುತ್ತಿದ್ದಾರೆ..

image


ಶೇಖರಣೆ ಹಾಗೂ ಡೆಲಿವರಿ ಸಂಬಂಧಿತ ಸ್ವಿಗ್ಗಿ, ಗ್ರೊಫರ್ಸ್, ಬಿಸಿನೆಸ್ ಟು ಕಸ್ಟಮರ್ ಸೇವೆ ಒದಗಿಸುತ್ತಿದ್ದರೆ, ರೋಡ್​ರನ್ನರ್​​ನಂತಹ ಕಂಪೆನಿಗಳು ಬಿಸಿನಿಸ್ ಟು ಬಿಸಿನೆಸ್ ಸೇವೆ ಒದಗಿಸುತ್ತಿವೆ..

ಇದೇರೀತಿ ಚೆನ್ನೈ ಮೂಲದ ಲೋಕಲ್​ಲೆಗ್ಸ್​​ ಅನ್ನುವ ನೂತನ ಸಂಸ್ಥೆಯೂ ಇದೇ ರೀತಿಯ ಪ್ರಯತ್ನಕ್ಕೆ ಮುಂದಾಗಿದೆ.. 2015ರ ಏಪ್ರಿಲ್​ನಲ್ಲಿ ಆರಂಭವಾದ ಈ ಸಂಸ್ಥೆ ಮನೆ ಬಾಗಿಲಿಗೆ ತಲುಪಿಸುವ ಬಿಸಿನೆಸ್ ಟು ಬಿಸಿನೆಸ್ ಸೇವೆ ಆರಂಭಿಸಿದೆ.. ಜೊತೆಗೆ ಇದು ಫ್ಲಿಪ್ಕಾರ್ಟ್, ಸ್ನ್ಯಾಪ್​​ ಡೀಲ್​​ಗಳಂತೆ ಇ-ಕಾಮರ್ಸ್ ಸೇವೆ ಆರಂಬಿಸುವ ಚಿಂತನೆ ಸಹ ನಡೆಸಿದೆ..

ಐಐಟಿಯಲ್ಲಿ ಕಲಿತ ಪ್ರತೀಕ್​​ ಅಗರ್ವಾಲ್ ಹಾಗೂ ವಿವೇಕ್ ಪೊಡ್ಡಾರ್ ಆರಂಭಿಸಿದ ಸಂಸ್ಥೆಯಿದು.. ಛತ್ತಿಸ್​​ಘಡದ ಬಿಲಾಸ್​​ಪುರದವರಾದ ಪ್ರತೀಕ್​​, ಅಲ್ಲಿ ಬೇರೆ ಬೇರೆ ಕಂಪೆನಿಗಳ ಸಿಮೆಂಟ್​ಗಳ ಮಾರಾಟ ಹಾಗೂ ಸಾಗಾಣಿಕೆಯ ಏಜೆನ್ಸಿ ನಡೆಸುತ್ತಿದ್ದರು.. ಇಲ್ಲಿ ಲಾಜಿಸ್ಟಕ್ಸ್​​ಗೆ ಸಂಬಂಧಪಟ್ಟ ಸುಳಿವುಗಳನ್ನು ಮನದಟ್ಟು ಮಾಡಿಕೊಂಡಿದ್ದ ಪ್ರತೀಕ್​​ ಸ್ವಂತ ಲಾಜಿಸ್ಟಿಕ್ ಕಂಪೆನಿ ಆರಂಭಿಸಲು ಚೆನ್ನೈಗೆ ಬಂದರು..

ಪ್ರತೀಕ್​ಗೆ ಇಲ್ಲಿ ಜೊತೆಯಾದವರು ವಿವೇಕ್.. ಉನ್ನತ ವಿದ್ಯಾಭ್ಯಾಸವನ್ನು ಕೆನಡಾದಲ್ಲಿ ಮುಗಿಸಿದ್ದ ವಿವೇಕ್ ನಗರದ ವಿವಿಧ ಭಾಗಗಳಿಗೆ ಆಹಾರೋತ್ಪನ್ನಗಳನ್ನು ಕಳಿಹಿಸುವ ಅರೆಕಾಲಿಕ ವೃತ್ತಿ ಮಾಡುತ್ತಿದ್ದರು.. ಈ ಸಂದರ್ಭದಲ್ಲಿಯೇ ಕೆನಡಾಗೆ ಹೋಲಿಸಿದಲ್ಲಿ ಭಾತದಲ್ಲಿ ಡೆಲಿವರಿ ತಂತ್ರಜ್ಞಾನ ಬಹಳ ಹಿಂದಿರುವುದು ಅವರ ಗಮನಕ್ಕೆ ಬಂದಿತ್ತು.. ಹೀಗಾಗಿ ಹೈಪರ್​​ಲೋಕಲ್​​ ವಿಚಾರದಲ್ಲಿ ಹೊಸದೇನಾದರೂ ಮಾಡಲೇಬೇಕೆಂಬ ಆಲೋಚನೆ ಅವರ ಮನಸ್ಸಿಗೆ ಬಂದಿತ್ತು..

ಪ್ರತೀಕ್​ ಅಗರ್ವಾಲ್​​, ಸಹಸಂಸ್ಥಾಪಕ

ಪ್ರತೀಕ್​ ಅಗರ್ವಾಲ್​​, ಸಹಸಂಸ್ಥಾಪಕ


ವಿವೇಕ್ ಹೇಳುವಂತೆ ಹೈಪರ್​ಲೋಕಲ್​ ಕ್ಷೇತ್ರದಲ್ಲಿ ಅದಾಗಲೆ ಸುಮಾರು 7 ಸಂಸ್ಥೆಗಳು ಪೈಪೋಟಿಗೆ ಬಿದ್ದಂತೆ ಸೇವೆ ಒದಗಿಸುತ್ತಿದ್ದವು.. ಹಾಗಾಗಿ ಬಿಸಿನೆಸ್ ಟು ಕಸ್ಟಮರ್ ಹೈಪರ್​ಲೋಕಲ್​ ಮಾರುಕಟ್ಟೆಯನ್ನು ಕೇಂದ್ರವಾಗಿರಿಸಿಕೊಂಡು ಆರಂಭಿಸಿದ ಅವರ ಸಂಸ್ಥೆಯಲ್ಲಿ ಡೆಲಿವರಿ ಸಂಬಂಧಿಸಿದಂತೆ ಇರುವ ತಂತ್ರಜ್ಞಾನವನ್ನು ಉತ್ತಮಪಡಿಸಿಕೊಂಡು, ಜೊತೆಗೆ ಡಿಸ್ಕೌಂಟ್ ಹಾಗೂ ಕೂಪನ್ ಗಳನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆಯುವ ತಂತ್ರಕ್ಕೆ ಮುಂದಾದರು..

ಸದ್ಯ ಲೋಕಲ್​​ ಲೆಗ್ಸ್​​ ಸಂಸ್ಥೆಗೆ ಬೇಕಾದ ಸಾಂಸ್ಥಿಕ ಬಂಡವಾಳವನ್ನು ಮೂವರು ವ್ಯಕ್ತಿಗಳು ಹೂಡಿದ್ದು, ಸಂಸ್ಥೆಯ ಬೆಳವಣಿಗೆಗೆ ಅಗತ್ಯವಿರುವ ಸಲಹೆ-ಸೂಚನೆ, ಮಾರ್ಗದರ್ಶನ ಮುಂತಾದ ಅಮೂಲ್ಯ ಸೇವೆಯೂ ಅವರಿಂದ ಸಿಗುತ್ತಿದೆ.. ಪ್ರಸ್ತುತ 7 ಜನರನ್ನು ಹೊಂದಿರುವ ಲೋಕಲ್​ಲೆಗ್ಸ್ ​ ಸಂಸ್ಥೆ ಸುಮಾರು 35 ಡೆಲಿವರಿ ಹುಡುಗರನ್ನು ಬಳಸಿಕೊಂಡು ಚೆನ್ನೈನಲ್ಲಿ ತನ್ನ ಕಾರ್ಯಾಚರಣೆ ನಡೆಸುತ್ತಿದೆ..

ವಿವೇಕ್​  ಪೊಡ್ಡಾರ್​​, ಸಹ ಸಂಸ್ಥಾಪಕ

ವಿವೇಕ್​ ಪೊಡ್ಡಾರ್​​, ಸಹ ಸಂಸ್ಥಾಪಕ


ಭವಿಷ್ಯದ ಯೋಜನೆಗಳು:

ಸಂಸ್ಥೆಯ ಶಾಖೆಯನ್ನು ಮುಂಬೈಗೂ ವಿಸ್ತರಿಸುವ ಯೋಜನೆ ಲೋಕಲ್​ಲೆಗ್ಸ್ ಸಂಸ್ಥೆಗಿದೆ.. ಜೊತೆಗೆ ಟಯರ್ 1 ಹಾಗೂ ಟಯರ್ 2 ಹಂತಗಳ ನಡುವೆ ಗುರುತಿಸಿಕೊಂಡಿರುವ ಅಹಮದಾಬಾದ್, ಜೈಪುರದಂತಹ ಪಟ್ಟಣಗಳಲ್ಲೂ ಸೇವೆ ಆರಂಭಿಸುವ ಉದ್ದೇಶ ಹೊಂದಿದೆ..

ಈ ಮಧ್ಯೆ ಸಂಸ್ಥೆ ತನ್ನ ಬಿಸಿನೆಸ್ ನೀತಿಗಳನ್ನು ಬದಲಾಯಿಸಿಕೊಂಡು ಮಾರುಕಟ್ಟೆಯ ಅಗತ್ಯತೆಗಳಿಗೆ ಅನುಸಾರ ಬದಲಾಗಲು ಸಿದ್ಧವಿದೆ.. ಅವರು ಮೆಡಿಸಿನ್​ಗಳಿಗೆ ಸಂಬಂಧಪಟ್ಟ ಫಾರ್ಮಾಸ್ಯೂಟಿಕಲ್ ಉತ್ಪನ್ನಗಳು, ದಿನಸಿ ವಸ್ತುಗಳೂ ಹಾಗೂ ಇ-ಕಾಮರ್ಸ್ ಉತ್ಪನ್ನಗಳನ್ನೂ ಡೋರ್ ಡೆಲಿವರಿ ಒದಗಿಸುವ ಯತ್ನಕ್ಕೆ ಮುಂದಾಗುತ್ತಿದ್ದಾರೆ..

ರಿಯಲ್ ಟೈಮ್ ಟ್ರಾಕಿಂಗ್ ಸಿಸ್ಟಂನಂತ ವಿನೂತನ ತಾಂತ್ರಿಕತೆಯನ್ನೂ ಅಳವಡಿಸಿಕೊಂಡಿರುವ ಲೋಕಲ್​ಲೆಗ್ಸ್, ಈ ಮೂಲಕ ಡೆಲಿವರಿ ಹುಡುಗರ ವಿಶಾಸಾರ್ಹತೆ ವೃದ್ಧಿಸಲು ಗಮನಹರಿಸಿದ್ದಾರೆ.. ಮಾರುಕಟ್ಟೆಯಲ್ಲಿ ಸಿಂಹ ಪಾಲು ಹೊಂದಿರುವ ಹೂಡಿಕೆದಾರರಾದ ಜಂಗಲ್ ವೆಂಚರ್ಸ್ ಹಾಗೂ ಸ್ಮೈಲ್ ಗ್ರೂಪ್​ಗಳು ಲೋಕಲ್​ಲೆಗ್ಸ್ ಹೂಡಿಕೆ ಮಾಡುವ ಮಾತುಕಥೆಯಲ್ಲಿ ತೊಡಗಿವೆ..

ಬೆಳವಣಿಗೆ ಹಾಗೂ ಸವಾಲುಗಳು:

ಪ್ರತಿಯೊಂದು ಡೆಲಿವರಿಗೂ ಸರಾಸರಿ ಟಿಕೆಟ್ ವೆಚ್ಚ 500 ರೂಪಾಯಿಯಿದೆ.. ದಿನವೊಂದಕ್ಕೆ 200 ಡೆಲಿವರಿ ನೀಡಿದರೂ ಸರಾಸರಿ ಆದಾಯ 1 ಲಕ್ಷ ಮುಟ್ಟುತ್ತದೆ.. ಇದು ಲೋಕಲ್​ಲೆಗ್ಸ್ ಸದ್ಯದ ಆದಾಯದ ಸ್ಥಿತಿ.. ಇನ್ನು ಸಂಸ್ಥೆ ಹೇಳಿಕೊಂಡಂತೆ ಪ್ರತೀವಾರವೂ ಶೇ 76ರಷ್ಟು ಏರಿಕೆ ಕಾಣುತ್ತಿದೆ..

ವಿವೇಕ್ ಹೇಳುವಂತೆ ಮೇನಲ್ಲಿ 60 ರಷ್ಟಿದ್ದ ಡೆಲಿವರಿ ಬೇಡಿಕೆ, ಜೂನ್​ನಲ್ಲಿ 130ಕ್ಕೆ ಏರಿಕೆಯಾಗಿತ್ತು.. ಈಗ ಹತ್ತಿರ ಹತ್ತಿರ ದಿನವೊಂದಕ್ಕೆ 300ರಷ್ಟು ಡೆಲಿವರಿ ಬೇಡಿಕೆಯಿದೆ.. ಈ ವರ್ಷಾಂತ್ಯದಲ್ಲಿ ದಿನವೊಂದರಲ್ಲಿ 10ಸಾವಿರ ಡೆಲಿವರಿ ನೀಡಬಲ್ಲ ಗುರಿಯನ್ನು ಲೋಕಲ್​ಲೆಗ್ಸ್ ಹೊಂದಿದೆ..

ಇಷ್ಟೆಲ್ಲ ಯಶಸ್ಸು ಲಭಿಸಿದ್ದರೂ ಲೋಕಲ್​ಲೆಗ್ಸ್ ಯಶೋಗಾಥೆ ಸರಳ, ಸುಲಭ ಹಾಗೂ ನೇರವಾಗಿಲ್ಲ.. ಇಲ್ಲಿ ಸಾಕಷ್ಟು ಸಂಘರ್ಷಗಳಿವೆ.. ದೊಡ್ಡ ಆದಾಯದ ಮೂಲ ದೊಡ್ಡ ಸವಾಲುಗಳನ್ನೂ ತಂದೊಡ್ಡುತ್ತದೆ ಅನ್ನುವುದು ವಿವೇಕ್ರ ಅಭಿಮತ..

60-70 ಪ್ರತಿಶತ ಡೆಲಿವರಿ ಸ್ಟಾಪ್​​ಗಳು ಅನಿಯಮಿತ ಸೇವೆ ಒದಗಿಸುತ್ತಿದ್ದಾರೆ.. ಒಂದು ದಿನ ಬಂದ ಹುಡುಗರು ಮತ್ತೊಂದು ದಿನ ಬರುವುದಿಲ್ಲ.. ಇದು ಸಂಸ್ಥೆಯ ಪಾಲಿನ ಅತಿ ದೊಡ್ಡ ಸಮಸ್ಯೆಯಾಗಿದೆ.. ಲೋಕಲ್​ಲೆಗ್ಸ್ ಸಂಸ್ಥೆಗೆ ಸಂದರ್ಶಿಸಲ್ಪಟ್ಟಿದ್ದು 150 ಜನರನ್ನು ಆದರೆ ನೇಮಕವಾಗಿದ್ದು ಮಾತ್ರ ಕೇವಲ 40.. ಜೊತೆಗೆ ಹೊಸದಾಗಿ ನೇಮಿಸಲ್ಪಡುವ ಸ್ಟಾಫ್​​ಗಳಿಗೆ ತರಬೇತಿ ನೀಡಬೇಕು.. ಈಗಾಗಲೆ ಮಾರುಕಟ್ಟೆಯಲ್ಲಿ ಪೈಪೋಟಿಯಲ್ಲಿರುವ ಸಂಸ್ಥೆಗಳು ಡೆಲಿವರಿ ಹುಡುಗರನ್ನು ಹೆಚ್ಚಿನ ಸಂಬಳದ ಆಮೀಷವೊಡ್ಡಿ ಸೆಳೆದುಕೊಳ್ಳುತ್ತಿದ್ದಾರೆ.. ಈ ನಿಟ್ಟಿನಲ್ಲಿ ಲೋಕಲ್​ಲೆಗ್ಸ್ ಕೆಲವು ಎನ್​ಜಿಓಗಳ ಬಳಿಯೂ ಮ್ಯಾನ್ ಪವರ್ ಪೂರೈಕೆಯ ಕುರಿತು ಮಾತಾಡಿದೆ..ಈ ಎಲ್ಲಾ ಸವಾಲುಗಳನ್ನು ಎದುರಿಸಿಯೂ ಲೋಕಲ್​ಲೆಗ್ಸ್ ಸಂಸ್ಥೆ ಉತ್ತಮ ಫಲಿತಾಂಶ ನೀಡುತ್ತಿದೆ..

Add to
Shares
5
Comments
Share This
Add to
Shares
5
Comments
Share
Report an issue
Authors

Related Tags