ಆವೃತ್ತಿಗಳು
Kannada

ಆನ್‌ಲೈನ್ ಬಿ2ಬಿ ಮಾರುಕಟ್ಟೆ ವಲಯದಲ್ಲಿ ಪ್ರಗತಿ ಸಾಧಿಸುತ್ತಿರುವ ಬಿ2ಬಿ ಸ್ಪೇರ್ ಸಂಸ್ಥೆ

ಟೀಮ್​ ವೈ.ಎಸ್​. ಕನ್ನಡ

15th Jan 2016
Add to
Shares
1
Comments
Share This
Add to
Shares
1
Comments
Share

ಬಿ2ಬಿ ಸ್ಪೇರ್ ಎಂಬ ಸಂಸ್ಥೆ ಆರಂಭವಾಗಿದ್ದು ಬಾಲ್ಯ ಸ್ನೇಹಿತರಾಗಿದ್ದ ಬಾಬು ಜಯರಾಮ್ ಮತ್ತು ಸುದಿಶೇಷಾಚಲ ಅವರಿಂದ. ಬಿ2ಬಿ ಸ್ಪೇರ್ ಸಂಸ್ಥೆಯ ಬೀಟಾ ವರ್ಷನ್ ಆರಂಭವಾಗಿದ್ದು 2015ರ ಸೆಪ್ಟೆಂಬರ್‌ನಲ್ಲಿ. ಸಂಸ್ಥಾಪಕರು ಹೇಳುವಂತೆ ಈ ಸಂಸ್ಥೆ ಬಿಸಿನೆಸ್‌ಗಳ ಸಂಪರ್ಕ, ಆರಂಭದ ಹಂತ ಮತ್ತು ನಿಕಟ ವ್ಯವಹಾರಗಳಿಗೆ ಸಹಾಯವಾಗುವಂತೆ ಸಮರ್ಪಕ ಟೂಲ್‌ಗಳು ಮತ್ತು ಏಕೀಕರಣದ ಅಂಶಗಳನ್ನು ಒದಗಿಸುತ್ತದೆ.

ಬಿ2ಬಿ ಸ್ಪೇರ್ ಸಂಸ್ಥೆಯಲ್ಲಿ ಕೊಳ್ಳುವವರು ಮತ್ತು ವಿತರಕರು ಸಂದೇಶಗಳ ಮೂಲಕ ಪರಸ್ಪರ ಸಂಪರ್ಕದಲ್ಲಿರಬಹುದು. ಹೀಗೆ ತಮ್ಮನ್ನು ಸಂಪರ್ಕಿಸುವವರಿಗೆ ಸಂಸ್ಥೆ ಇಂಟಿಗ್ರೇಟೆಡ್ ಕ್ಲೌಡ್ ಸ್ಟೋರೇಜ್ ಮುಖಾಂತರ ತಮ್ಮ ಫೈಲ್‌ಗಳನ್ನು ಹಂಚಿಕೊಳ್ಳುವ, ಚಾಟ್ ಮಾಡುವ ಮತ್ತು ಸುಭದ್ರವಾದ ವ್ಯವಸ್ಥೆಯಲ್ಲಿ ಮೆಸೇಜ್ ಮಾಡುವ ಮತ್ತು ಆಡಿಯೋ, ವೀಡಿಯೋ ಕಾನ್ಫರೆನ್ಸ್ ನಡೆಸುವ ಅವಕಾಶವನ್ನು ಕಲ್ಪಿಸಿಕೊಡುತ್ತದೆ. ಈ ವೇದಿಕೆಯ ಈಗಾಗಲೇ 10,000 ಮಾರಾಟಗಾರರನ್ನು ಹೊಂದಿದೆ.

ಬಿ2ಬಿ ಸ್ಪೇರ್ ಬೆಳೆದುಬಂದ ಹಾದಿ

ಜಯರಾಮ್ ಮತ್ತು ಸುದಿಯವರಿಗೆ ಸ್ಟಾರ್ಟ್ ಅಪ್‌ಗಳಲ್ಲಿ, ಉದ್ದಿಮೆಗಳಲ್ಲಿ, ಅಂತರಾಷ್ಟ್ರೀಯ ಟ್ರೇಡ್‌ಗಳಲ್ಲಿ 5 ದಶಕಗಳಿಗೂ ಹೆಚ್ಚಿನ ಕಾರ್ಯನಿರ್ವಹಣೆ ಮಾಡಿರುವ ಅನುಭವವಿದೆ. ಇವರ ಹಿಂದಿನ ವೆಂಚರ್ ಕ್ಸೆರ್ವಮಾನ್.ಕಾಮ್. ಇದೊಂದು ಹೈಬ್ರೀಡ್ ಕ್ಲೌಡ್ ಮ್ಯಾನೇಜ್‌ಮೆಂಟ್ ವೇದಿಕೆಯಾಗಿದ್ದು, ಉದ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಹೆಜ್ಜೆಗುರುತುಗಳನ್ನು ಮೂಡಿಸಿದೆ. ಆದರೆ ಇವರ ನಿರೀಕ್ಷೆಯ ಮಟ್ಟದಲ್ಲಿ ಕಂಪನಿ ಬೆಳೆದಿರಲಿಲ್ಲ.

image


ಉತ್ಪಾದನಾ ವಿಭಾಗದಲ್ಲಿ ಜಯರಾಮ್ ಅವರಿಗೆ ಅನುಭವವಿತ್ತು ಮತ್ತು ಅವರು ಅನೇಕ ಅಂತರಾಷ್ಟ್ರೀಯ ಬಿ2ಬಿ ಟ್ರೇಡ್ ಮಾರ್ಕೆಟ್‌ಪ್ಲೇಸ್ ವೇದಿಕೆಗಳಲ್ಲಿ ಕೆಲಸ ಮಾಡಿದ್ದಾರೆ ಮತ್ತು ಪ್ರಪಂಚದಾದ್ಯಂತ ಅನೇಕ ಗ್ರಾಹಕರು ಮತ್ತು ವಿತರಕರ ಜೊತೆ ಕಾರ್ಯನಿರ್ವಹಿಸಿದ ಅನುಭವ ಇವರಿಗಿದೆ. ಭಾರತದಲ್ಲಿ ಸಣ್ಣ ಮತ್ತು ಮಧ್ಯಮ ಮಟ್ಟದ ಉದ್ಯಮಗಳು ತಮ್ಮ ಉತ್ಪನ್ನಗಳಿಗೆ ಮಾರ್ಕೆಟಿಂಗ್ ಮಾಡುವಲ್ಲಿ ಎದುರಿಸಬೇಕಾದ ಸಮಸ್ಯೆಗಳು ಮತ್ತು ತಮ್ಮ ಉದ್ಯಮದ ಪಾಲುದಾರರೊಂದಿಗೆ ಸಂವಹನ ನಡೆಸುವಲ್ಲಿ ಎದುರಿಸಬಹುದಾದ ಸಮಸ್ಯೆಗಳ ಕುರಿತು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ ಜಯರಾಮ್.

ಕೊಳ್ಳುವವರು ಮತ್ತು ಮಾರಾಟಗಾರರ ಸಂಬಂಧವನ್ನು ಆನ್‌ಲೈನ್‌ ಮೂಲಕ ತರಬಲ್ಲ, ಖಾಸಗಿ ಚಾಟ್‌ರೂಂಗಳನ್ನು ಮಾಡಿಕೊಡಬಲ್ಲ ಮತ್ತು ಒಂದೇ ಜಾಗದಲ್ಲಿ ಎಲ್ಲಾ ವಿತರಕರೊಂದಿಗೆ ಸಂವಹನ ಏರ್ಪಡಿಸಿಕೊಳ್ಳಲು ಸಾಧ್ಯವಾಗಬಲ್ಲಂತಹ ಒಂದು ಅವಕಾಶ ನಿರ್ಮಿಸಿಕೊಡುತ್ತದೆ ಬಿ2ಬಿ ಸ್ಪೇರ್ ಸಂಸ್ಥೆ.

ಈ ಸ್ಟಾರ್ಟ್ ಅಪ್‌ನಲ್ಲಿ ಪ್ರಸ್ತುತ 12 ಜನರ ತಂಡ ಕಾರ್ಯನಿರ್ವಹಿಸುತ್ತಿದೆ. ಇದರಲ್ಲಿ 6 ಮಂದಿ ತಂತ್ರಜ್ಞಾನದತ್ತ ಗಮನಹರಿಸುತ್ತಾರೆ ಮತ್ತು ಉಳಿದವರು ಮಾರಾಟ, ಮಾರ್ಕೆಟಿಂಗ್ ಮತ್ತು ಇತರ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಾರೆ. ಸಂಸ್ಥೆಗೆ ಗೋವಿಂದ್ ಶೇಷಾದ್ರಿ(ಉಪಾಧ್ಯಕ್ಷರು, ಕ್ಯಾಪಿಲ್ಲರಿ) ಮತ್ತು ಆಶಿಶ್ ಕಾಶಿ(ಸಿಟಿಓ, ಕ್ಯಾಪಿಲ್ಲರಿ)ಯವರನ್ನು ಸಲಹೆಗಾರರನ್ನಾಗಿ ಹೊಂದಿದೆ. ಬೀಟಾ ಮತ್ತು ಉತ್ಪನ್ನ ಮಾರುಕಟ್ಟೆ ಮತ್ತು ಅವರ ತಂತ್ರಜ್ಞಾನಗಳನ್ನು ಹೊಂದಿದ ಕೆಲ ತಿಂಗಳ ಬಳಿಕ ಸ್ಟಾರ್ಟ್ ಅಪ್ ಈಗ ಮೊದಲಿಗಿಂತ ದುಪ್ಪಟ್ಟು ಗ್ರಾಹಕರನ್ನು ಹೊಂದಿದೆ. ಆದಾಯದಲ್ಲೂ ಏರಿಕೆ ಕಂಡಿದೆ.

ಸಂಸ್ಥೆ ಸಂಪೂರ್ಣವಾಗಿ ಸುಭದ್ರವಾದ ಪರಿಸ್ಥಿತಿಯಲ್ಲಿದೆ ಎಂದು ಹೇಳಲಾಗುತ್ತಿಲ್ಲ. ಈ ಕುರಿತಾಗಿ ಸಂಸ್ಥಾಪಕರು ತಮ್ಮ ಹಳೆಯ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಉದ್ಯಮದಲ್ಲಿ ಮಾಡಿರುವ ತಪ್ಪುಗಳಿಂದಾದ ಪರಿಣಾಮಗಳು ಮತ್ತೊಮ್ಮೆ ಅವರು ತಪ್ಪು ಮಾಡದಂತೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಕರಿಸಿದೆ. ಉತ್ಪನ್ನ ಅಭಿವೃದ್ಧಿ ಮತ್ತು ಮಾರ್ಕೆಟಿಂಗ್ ಡಿಪಾರ್ಟ್‌ಮೆಂಟ್‌ಗಳಿಗೆ ಉತ್ತಮ ಪ್ರತಿಭೆಗಳನ್ನು ಆಯ್ದುಕೊಳ್ಳುವುದು, ನೇಮಿಸಿಕೊಳ್ಳುವುದು ಸಂಸ್ಥೆಯ ಮುಂದಿರುವ ಅತ್ಯಂತ ದೊಡ್ಡ ಸವಾಲಾಗಿದೆ. ಉತ್ಪನ್ನಗಳು, ಅವುಗಳ ವಿಭಿನ್ನತೆ ಇವುಗಳ ಮುಖಾಂತರ ಸಂಸ್ಥೆ ನಿಧಾನವಾಗಿ ಪ್ರತಿಭೆಗಳನ್ನು ತನ್ನತ್ತ ಸೆಳೆಯುತ್ತಿದೆ. ಬೆಂಗಳೂರಿನಲ್ಲಿ ಈಗಾಗಲೇ ಈ ಕ್ಷೇತ್ರದಲ್ಲಿ ನೆಲೆಯೂರಿರುವ ಸಂಸ್ಥೆಗಳಿಗೆ ಪ್ರತಿಸ್ಪರ್ಧೆಯನ್ನೂ ನೀಡುತ್ತಿದೆ ಎಂದಿದ್ದಾರೆ ಸುದಿ.

ಇದು ಹೇಗೆ ಕಾರ್ಯನಿರ್ವಹಿಸುತ್ತದೆ?

ಬಿ2ಬಿ ಸ್ಪೇರ್.ಕಾಮ್ ಸಂಸ್ಥೆ ಸಾಸ್ ಸಬ್‌ಸ್ಕ್ರಿಪ್ಶನ್ ಯೋಜನೆಗಳನ್ನು ಕೊಳ್ಳುವವರಿಗೆ ಮತ್ತು ವಿತರಕರಿಗೆ ದೊರಕಿಸಿಕೊಡುತ್ತದೆ. ಮತ್ತು ಮಾರುಕಟ್ಟೆ ಮಾರಾಟಗಳಿಗೆ ಹಣಗಳಿಕೆ ಮಾದರಿಯ ಕುರಿತು ನಿರ್ದೇಶನ ನೀಡುತ್ತದೆ. ಮಾರಾಟಗಾರರ ಅಗತ್ಯ ಮತ್ತು ಕಾರ್ಯಾಚರಣೆಯ ಪ್ರಮಾಣವನ್ನಾಧರಿಸಿ 4 ರೀತಿಯ ಚಂದಾದಾರಿಕೆ ಯೋಜನೆಗಳು ಲಭ್ಯವಿದೆ. ಮಾರುಕಟ್ಟೆ ಒದಗಿಸುವವರ ಮೂಲಕ ಕೊಳ್ಳುವವರಿಗೆ ಸೇವೆ ಸಲ್ಲಿಸಲಾಗುತ್ತದೆ. ಅಲ್ಲದೇ ಅನೇಕ ಸೇವೆಗಳು ಪಾಲುದಾರಿಕೆಯ ನೆಟ್‌ವರ್ಕ್‌ಗಳಿಗೂ ಲಭ್ಯವಿದೆ. ಇದರಿಂದ ಪ್ರಪಂಚದಾದ್ಯಂತ ವಿತರಕರನ್ನು ನಿರ್ವಹಿಸುವ ಅವಕಾಶವೂ ಇದೆ. ಕೊಳ್ಳುವವರು ಮತ್ತು ಮಾರಾಟಗಾರರ ಮಧ್ಯೆ ನಂಬಿಕೆ ಪ್ರಬಲ ಅಂಶವಾಗಿ ಕಾರ್ಯನಿರ್ವಹಿಸುತ್ತದೆ. ಇದನ್ನು ಬಿ2ಬಿ ಸ್ಪೇರ್ ಸಂಸ್ಥೆ ಚೆನ್ನಾಗಿ ಮನಗಂಡಿದೆ. ಹೀಗಾಗಿ ತಮ್ಮ ವೇದಿಕೆಗೆ ಎಸ್ಕ್ರೋ ಪ್ರಾಯೋಜಕತ್ವದ ಆರ್ಮೋರ್ ಪಾವತಿಯನ್ನು ಅಳವಡಿಸಿಕೊಂಡಿದೆ.

ತಮ್ಮ ಗ್ರಾಹಕರನ್ನು ಉದ್ಯಮ ಸಮರ್ಥವಾಗಿ ತಲುಪುತ್ತಿದೆ ಎಂದಿದ್ದಾರೆ ಸುದಿ. ಜಾಗತಿಕವಾಗಿ ಗ್ರಾಹಕರನ್ನು ತಲುಪಲು ಸಾಸ್ ಚಂದಾದಾರಿಕೆಯನ್ನು ನೀಡಲಾಗುತ್ತಿದೆ. ಆನ್‌ಲೈನ್ ಮಾರ್ಕೆಟಿಂಗ್ ಎಂಬುದು ತಮ್ಮ ಗುರಿಯನ್ನು ತಲುಪಲು ಅತ್ಯಂತ ಪ್ರಬಲ ಅಂಶ. ಇದರೊಂದಿಗೆ ಉತ್ಪನ್ನದ ಕುರಿತು ಜಾಗೃತಿ ಮೂಡಿಸಲು ಪ್ರಾದೇಶಿಕ ಟ್ರೇಡ್‌ಶೋಗಳನ್ನು ಪ್ರತಿನಿಧಿಸುವುದೂ ಸಹ ಪರಿಣಾಮಕಾರಿ ಅಂಶ. ಇದಲ್ಲದೇ ಇತರ ಬಿ2ಬಿ ಉತ್ಪನ್ನ ಸಂಸ್ಥೆಗಳು, ಚಾನೆಲ್ ಪಾಲುದಾರರು, ಮರುಮಾರಾಟಗಾರರು ಸಹ ಪ್ರಮಾಣ ಮತ್ತು ಬೆಳವಣಿಗೆ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದಿದ್ದಾರೆ ಸುದಿ.

ಉದ್ಯಮ ವಲಯದ ಮೇಲ್ನೋಟ ಮತ್ತು ಭವಿಷ್ಯದ ಯೋಜನೆಗಳು

ಇ-ಕಾಮರ್ಸ್ ವಲಯ ಜಾಗತಿಕವಾಗಿ ಪ್ರಬಲವಾಗಿ ಬೆಳೆಯುತ್ತಿದೆ. ಬಹಳಷ್ಟು ಗ್ರಾಹಕರು ಆನ್‌ಲೈನ್ ಮುಖಾಂತರ ವಹಿವಾಟು ನಡೆಸುತ್ತಿದ್ದಾರೆ. ಹೀಗಾದರೂ ಸಹ ಭಾರತ ಮತ್ತು ಏಷ್ಯಾ ಭಾಗದ ದೇಶಗಳಲ್ಲಿ ಬಿ2ಬಿ ಉದ್ಯಮ ವಲಯದ ಬೆಳವಣಿಗೆಗೆ ಸಾಕಷ್ಟು ಅವಕಾಶಗಳಿವೆ. ಆಲಿಬಾಬಾ.ಕಾಮ್, ಇಂಡಿಯಾಮಾರ್ಟ್.ಕಾಮ್, ಟ್ರೇಡ್ ಇಂಡಿಯಾ.ಕಾಮ್ ಮತ್ತು ಇತರ ಬಿ2ಬಿ ಟ್ರೇಡ್ ಸಂಸ್ಥೆಗಳಿಗೆ ಪ್ರಬಲ ಪ್ರತಿಸ್ಪರ್ಧೆ ನೀಡುವ ಯೋಜನೆ ಹಮ್ಮಿಕೊಂಡಿದೆ ಬಿ2ಬಿ ಸ್ಪೇರ್. ಬಿ2ಬಿ ಸ್ಪೇರ್.ಕಾಮ್ ಇತರ ಸಾಂಪ್ರದಾಯಿಕ ಬಿ2ಬಿ ಮಾರುಕಟ್ಟೆ ಪ್ರದೇಶಗಳಿಗಿಂತ ಸಾಕಷ್ಟು ಮುಂದುವರೆದಿದೆ. ಒಂದೇ ಕಡೆಯಲ್ಲಿ ಪ್ರಪಂಚದಾದ್ಯಂತ ಇರುವ ಸಮರ್ಪಕ ಮಾರುಕಟ್ಟೆ ನೆಟ್‌ ವರ್ಕ್ ಹುಡುಕಾಟ, ಸಂಪರ್ಕ ಮತ್ತು ಟ್ರೇಡ್ ಅನ್ನು ತಿಳಿಸಿಕೊಡುವ ಉದ್ದೇಶ ಸಂಸ್ಥೆಯದ್ದಾಗಿದೆ ಎಂದಿದ್ದಾರೆ ಸುದಿ.

ಬಿ2ಬಿ ಸ್ಪೇರ್ ಸಂಸ್ಥೆ ಪ್ರಸ್ತುತ ಭಾರತ ಮತ್ತು ಉಪಖಂಡಗಳ ದೇಶಗಳತ್ತ ಹೆಚ್ಚಿನ ಗಮನ ಹರಿಸುತ್ತಿದೆ. ಸಂಸ್ಥೆಗೆ ಸಣ್ಣ ಮತ್ತು ಮಧ್ಯಮ ಮಟ್ಟದ ಉದ್ಯಮಗಳಿಗೆ ಜಾಗತಿಕ ಬೆಂಬಲ ಒದಗಿಸುವುದು ಮತ್ತು ಸರ್ಕಾರದ ಮೇಕ್ ಇನ್ ಇಂಡಿಯ ಕಾರ್ಯದಲ್ಲಿ ಕೈಜೋಡಿಸುವುದು ಸಂಸ್ಥೆಯ ಗುರಿಯಾಗಿದೆ. ಈವರೆಗೂ ಸ್ವಯಂ ಹೂಡಿಕೆಯಲ್ಲಿ ಸಂಸ್ಥೆ ಮುಂದುವರೆದಿದೆ. ಪ್ರಸ್ತುತ ಹೊರಗಿನಿಂದ ಬರುವ ಹೂಡಿಕೆಗಳಿಗೂ ಪ್ರಯತ್ನಿಸುತ್ತಿದೆ. ಸಂಸ್ಥೆ 10ರಷ್ಟು ಹೆಚ್ಚಿನ ಬೆಳವಣಿಗೆ ಸಾಧಿಸುವ ಗುರಿ ಹೊಂದಿದೆ. ಮುಂದಿನ 1 ವರ್ಷದಲ್ಲಿ ಸುಮಾರು 1 ಲಕ್ಷ ಕಂಪನಿಗಳನ್ನು ತನ್ನ ವೇದಿಕೆಯಡಿ ದಾಖಲಿಸಿಕೊಳ್ಳುವ ಉದ್ದೇಶವೂ ಇದೆ. ಪ್ರತಿ ತಿಂಗಳು 10ಸಾವಿರ ಡಾಲರ್ ಒಟ್ಟು ವಾಣಿಜ್ಯ ಪರಿಮಾಣ(GMV- Gross merchandise volume) ಹೊಂದಿದೆ. 2016 ಮಾರ್ಚ್ 31ರೊಳಗೆ 1 ಲಕ್ಷ ಡಾಲರ್‌ಗೆ ಈ ಪರಿಮಾಣ ಏರಿಕೆಯಾಗುವ ಗುರಿ ಹಾಕಿಕೊಳ್ಳಲಾಗಿದೆ ಎಂದಿದ್ದಾರೆ ಸುಧಿ.

ಯುವರ್‌ಸ್ಟೋರಿ ನಿಲುವು

ಭಾರತ ಮತ್ತು ಏಷ್ಯಾದ ಇತರ ಇತರ ದೇಶಗಳಲ್ಲಿ ಸಾಂಪ್ರದಾಯಿಕ ಸಣ್ಣ ಮತ್ತು ಮಧ್ಯಮ ಮಟ್ಟದ ಉದ್ಯಮಗಳು ಸ್ಥಳೀಯ ಮಟ್ಟದಲ್ಲೇ ಕುಸಿತ ಕಂಡುಬರುತ್ತಿದೆ. ಆದರೆ ಬಹಳಷ್ಟು ಜನ ಗ್ರಾಹಕರು ಆನ್‌ಲೈನ್ ವೇದಿಕೆಯ ಮೊರೆ ಹೋಗಿರುವುದರಿಂದ ಕಡಿಮೆ ಹೂಡಿಕೆಯಿಂದ ಹೆಚ್ಚು ಲಾಭಗಳಿಸಲು ಬಿ2ಬಿ ಟ್ರೇಡ್ ಮಾರ್ಕೆಟ್ ಪ್ಲೇಸ್‌ಗಳೂ ಸಹ ಆನ್‌ಲೈನ್ ವೇದಿಕೆಯನ್ನು ಬಳಸಿಕೊಳ್ಳುತ್ತಿವೆ. ಇಲ್ಲಿ ಮಾರಾಟಗಾರರಿಗೂ ಸಹ ಹೆಚ್ಚಿನ ಖರ್ಚು ಬೀಳುತ್ತಿಲ್ಲ. ಮಾರ್ಕೆಟಿಂಗ್‌ಗೆ ಹೆಚ್ಚಿನ ಹಣ ಹೂಡಬೇಕಾದ ಅವಶ್ಯಕತೆ ಇಲ್ಲ. ಹೀಗಾಗಿ ಲಾಭಗಳಿಕೆಗಾಗಿ ಬಹುತೇಕ ಮಾರಾಟಗಾರರು ಆನ್‌ಲೈನ್ ವೇದಿಕೆಯನ್ನು ಬಳಸಿಕೊಳ್ಳುತ್ತಿದ್ದಾರೆ.

ಅನುಭವ ಹೊಂದಿರುವ ಒಂದು ತಂಡಕ್ಕೆ ಉದ್ಯಮವಲಯದಲ್ಲಿ ಈಗಾಗಲೇ ಗುರುತಿಸಿಕೊಂಡು ಯಶಸ್ವಿಯಾಗಿರುವ ಸಲಹೆಗಾರರು ದೊರೆತಿರುವುದರಿಂದ ಬಿ2ಬಿ ಸ್ಪೇರ್ ಸಂಸ್ಥೆ ಗ್ರಾಹಕರು ಮತ್ತು ಮಾರಾಟಗಾರರ ನಡುವೆ ಸಮರ್ಥವಾಗಿ, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಈ ಸಂಸ್ಥೆ ಇತ್ತೀಚೆಗಷ್ಟೇ ತನ್ನ ಮೊಬೈಲ್ ಆ್ಯಪ್‌ ಅನ್ನೂ ಸಹ ಬಿಡುಗಡೆ ಮಾಡಿದೆ.

ಲೇಖಕರು: ಹರ್ಷಿತ್​ ಮಲ್ಯ

ಅನುವಾದಕರು: ವಿಶ್ವಾಸ್​

Add to
Shares
1
Comments
Share This
Add to
Shares
1
Comments
Share
Report an issue
Authors

Related Tags