ಪಾರ್ಟಿ ಗೆ ಬೇಕಾಗುವ ವಸ್ತುಗಳನ್ನು ಒದಗಿಸುತ್ತಿರುವ ಇಬ್ಬರು ಉದ್ಯಮಿಗಳ ಪರಿಚಯ

ಟೀಮ್​​ ವೈ.ಸ್​​

ಪಾರ್ಟಿ ಗೆ ಬೇಕಾಗುವ ವಸ್ತುಗಳನ್ನು ಒದಗಿಸುತ್ತಿರುವ ಇಬ್ಬರು ಉದ್ಯಮಿಗಳ ಪರಿಚಯ

Thursday July 23, 2015,

2 min Read

ಭಾರತದಲ್ಲಿ ಜನಸಂಖ್ಯಾ ಹೆಚ್ಚಾಗುತ್ತಿದೆ ಮತ್ತು ಮನುಷ್ಯನ ಜೀವನಶೈಲಿ ಕೂಡ ಬದಲಾಗುತ್ತಿದೆ. ಎಲ್ಲರೂ ಐಷಾರಾಮಿ ಜೀವನ ನಡೆಸಲು ಇಷ್ಟಪಡುತ್ತಾರೆ. ಪಾರ್ಟಿಗಳು ಜೀವನದ ಒಂದು ಭಾಗವಾಗಿದೆ. ಅದರಲ್ಲೂ ಯುವ ಜನತೆಯಲ್ಲಿ ,ಹೆಚ್ಚು ಆದಾಯದ ವ್ಯಕ್ತಿಗಳಲ್ಲಿ, ಪಾರ್ಟಿ ಸಂಸ್ಕೃತಿ ಹೆಚ್ಚಾಗಿ ಕಂಡುಬರುತ್ತಿದೆ. ಎಲ್ಲ ಪಾರ್ಟಿಗಳಿಗೂ ಪಾರ್ಟಿ ಬಟ್ಟೆಗಳು, ಉತ್ತಮ ಪಾರ್ಟಿ ಪ್ರಾಪ್ಸ್, ಪಾರ್ಟಿ ಅಲಂಕಾರಗಳು, ಆಮಂತ್ರಣ ಪತ್ರಿಕೆ( ಇನ್ವಿಟೇಶನ್ ಕಾರ್ಡ್) ಮತ್ತು ಇನ್ನಿತರ ವಸ್ತುಗಳು ಅಗತ್ಯವಾಗಿ ಬೇಕು. ಪಾರ್ಟಿ ಗೆ ಸಂಬಂಧಿತ ವಸ್ತುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ ಇದರ ಪರಿಣಾಮ ಪಾರ್ಟಿಗಳ ವಸ್ತುಗಳ ಪೂರೈಕೆಗಾಗಿ ಹೊಸ ಉದ್ಯಮಗಳು ಹುಟ್ಟಿಕೊಂಡಿತು.

ಪಾರ್ಟಿ ಎಂಟ್ರೆಪ್ರೇನೆರ್ ಒಂದು ಚಾಲನೆಯಲ್ಲಿರುವ ಒಂದು ಹೊಸ ಪದ ಮತ್ತು ಪುರುಷರು ಮತ್ತು ಮಹಿಳೆಯರು ಈ ವರ್ಗದಲ್ಲಿ ಭಾಗವಹಿಸುತ್ತಿದ್ದಾರೆ. ಈ ಉದ್ಯಮಿಗಳು ಹುಟ್ಟುಹಬ್ಬದ ಪಾರ್ಟಿಗೆ, ಮದುವೆ ಪಾರ್ಟಿಗೆ, ಆಫೀಸ್ ಪಾರ್ಟಿಗಳಿಗೆ ಇನ್ನೂ ಮುಂತಾದ ಪಾರ್ಟಿಗಳಿಗೆ ಬೇಕಾದ ಎಲ್ಲ ಅಗತ್ಯ ವಸ್ತುಗಳನ್ನು ಸರಬರಾಜು ಮಾಡುತ್ತಾರೆ. ಪ್ರಾಂಶು, ಮಹೇಶ್ವರಿ’ಸ್ ಇನ್ನೇರಿವೇರ್ ಒಂದು ಉದ್ಯಮ ಇದು ಆಮಂತ್ರಣ ಪತ್ರಿಕೆಗಳನ್ನು ಡಿಸೈನ್ ಮಾಡುತ್ತಾರೆ.

ಇದೆಲ್ಲ ಆರಂಭವಾಗಿದ್ದು 2009 ರಲ್ಲಿ ,ಪ್ರಾಂಶು ಜಾಹೀರಾತು ಕಂಪನಿಯಲ್ಲಿ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದರು ಅವರು ಫ್ರೆಂಡ್ ಕಾಕ್‌ಟೇಲ್ ಪಾರ್ಟಿಗೆ ಒಂದು ಆಮಂತ್ರಣ ಪತ್ರಿಕೆಯನ್ನು( ಕಾರ್ಡ್) ಡಿಸೈನ್ ಮಾಡಿದ್ದರು. ಪತ್ರಿಕೆಯ ಥೀಮ್ ಮತ್ತು ಡಿಸೈನ್ ಅಲ್ಲಿ ಬಂದಿದ್ದ ಅತಿಥಿಗಳ ಮೆಚ್ಚುಗೆಗೆ ಪಾತ್ರವಾಯಿತು. ಅವನಿಗೆ ಆ ಕ್ಷಣ ಒಂದು ಆವಿಸ್ಕಾರ ಕ್ಷಣವಾಗಿತ್ತು. ಈ ವಿಭಾಗದಲ್ಲಿ ಉದ್ಯಮಶೀಲತಾ ಅವಕಾಶ ಇದೆ ಎಂದು ಅವನಿಗೆ ಅರಿವಾಯಿತು. 2010 ರಲ್ಲಿ ಇನ್ನೇರಿವೇರ್ ಯನ್ನು ಆರಂಭಿಸಿದರು.

image


ಬೇರೆ ಡಿಸೈನ್ ಉದ್ಯಮಿಗಳು ಇನ್ನೂ ಕೇವಲ ನಿಮ್ಮ ಹೆಸರನ್ನು ಮುದ್ರಿಸಲು ಕೆಲವು ಬಣ್ಣ ಮತ್ತು ಪೇಪರ್ ಗ್ರಾಹಕೀಕರಣದ ಕಡೆ ಗಮನ ಹರಿಸುತ್ತಿದ್ದಾರೆ. ಆದರೆ ಅದರಲ್ಲಿ ಯಾವುದೇ ಜಾಣ್ಮೆ ಇಲ್ಲ ಎಂಬುದು ದುಃಖದ ಸಂಗತಿ. ಆದರೆ ನಾವು ಇನ್ನೇರಿವೇರ್ ಆಮಂತ್ರಣ ಪತ್ರಿಕೆಯಲ್ಲಿ ಕೇವಲ ಮಾಹಿತಿ ಕೊಡಲು ಅಷ್ಟೇ ಸೀಮಿತವಾಗಿಲ್ಲ ಬದಲಾಗಿ ಇದು ಒಂದು ಸಂವಹನ ತುಣುಕು ಕೂಡ ಇರುತ್ತದೆ ಎಂದು ಇನ್ನೇರಿವೇರ್ ಸಂಸ್ಥಾಪಕ ಪ್ರಾಂಶು ಹೇಳುತ್ತಾರೆ.

2014 ಮತ್ತು 2015 ಸಾಲಿನಲ್ಲಿ ಇನ್ನೇರಿವೇರ್ ವಾರ್ಷಿಕ ವಹಿವಾಟು ಸುಮಾರು ಮೂರು ಕೋಟಿ ತಲುಪಿದೆ. ನಾವು ವಿಶೇಷ ಅತ್ಯಾಧುನಿಕ ಆಫರಿಂಗ್ ನಿರ್ಮಿಸುವ ಕಡೆ ಗಮನ ಹರಿಸುತ್ತಿದ್ದೇವೆ ಮತ್ತು ಮತ್ತೊಂದು ಕಡೆ ರೀಟೇಲ್ ಕಡೆ ಕೂಡ ಗಮನ ಹರಿಸುತ್ತಿದ್ದೇವೆ. 2016 ರಲ್ಲಿ ನಮ್ಮ ವಾರ್ಷಿಕ ವಹಿವಾಟು 10 ಕೋಟಿ ತಲುಪಿಸುವ ಯೋಜನೆ ಇದೆ ಎಂದು ಪ್ರಾಂಶು ಹೇಳುತ್ತಾರೆ.

ಫನ್ಕಾರ್ಟ್ . ಇನ್ ಒಂದು ಪಾರ್ಟಿಗೆ ಅಗತ್ಯ ವಸ್ತುಗಳ ಸರಬರಾಜು ಮಾಡುವ ಆನ್‌ಲೈನ್ ಸ್ಟೋರ್ ಇದು ಈ ವಿಭಾಗದ ಮತ್ತೊಂದು ಹೊಸ ಉದ್ಯಮ. ರೀತಿಕ ನಂಗಿಯ ಇದರ ಸಂಸ್ಥಪಕಿ ಈ ವೆಬ್‌ಸೈಟ್ ಮಕ್ಕಳ ಪಾರ್ಟಿಗಳಿಗೆ , ಬ್ಯಾಚಲರ್ ಪಾರ್ಟಿಗಳಿಗೆ, ಥೀಮ್ ಪಾರ್ಟಿ ಮುಂತಾದವುಗಳಿಗೆ ಅಗತ್ಯ ವಸ್ತುಗಳನ್ನು ಮಾರಾಟ ಮಾಡುತ್ತಿದೆ. ಪಾರ್ಟಿ ಉತ್ಪನಗಳಲ್ಲಿ ಈ ವೆಬ್‌ಸೈಟ್ 2000 ಆಯ್ಕೆಗಳನ್ನು ಒಳಗೊಂಡಿದೆ. ರೀತಿಕ ಗೆ ಈ ಒಂದು ಕಲ್ಪನೆ ಅವರ ಭಾವನ ಮಕ್ಕಳ ಬರ್ತ್‌ಡೇ ಪಾರ್ಟಿ ವ್ಯವಸ್ಥೆ ಮಾಡುವಾಗ ಬಂದಿತು.

image


ಮಕ್ಕಳಿಗೆ ಇಷ್ಟವಾಗುವ ಮತ್ತು ಕಡಿಮೆ ಬೆಲೆಯ ಉತ್ತಮ ಹುಟ್ಟುಹಬ್ಬದ ವಸ್ತುಗಳನ್ನು ಹತ್ತಿರದ ಅಂಗಡಿಗಳಲ್ಲಿ ತರುವುದು ಕಷ್ಟವಾಗಿತ್ತು ಎಲ್ಲವೂ ಒಂದು ಕಡೆ ದೊರಕುವುದಿಲ್ಲ ಮತ್ತು ಬೆಲೆಗಳಲ್ಲಿ ತುಂಬಾ ವ್ಯತ್ಯಾಸ ಇರುತಿತ್ತು. ನಂತರ ಅಂತಹ ವಸ್ತುಗಳನ್ನು ಕೊಳ್ಳಲು ಒಂದು ಸ್ಟೋರ್ ನ ಅಗತ್ಯವಿದೆ ಎಂದು ರೀತಿಕ ಅರಿವಿಗೆ ಬಂತು .

ಮಾರ್ಚ್ 2015 ರಲ್ಲಿ ರೀತಿಕ 30 ಲಕ್ಷ ಬಂಡವಾಳದಲ್ಲಿ ಸಾಹಸೋದ್ಯಮವನ್ನು ಆರಂಭಿಸಿದರು. ಈ ಒಂದು ವಿಭಾಗದಲ್ಲಿ ತುಂಬಾ ಸ್ಪರ್ಧೆ ಇದೆ ತುಂಬಾ ವೇಗವಾಗಿ ಬೆಳೆಯುತ್ತೇವೆ ಎಂದು ಅವರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಫನ್ಕಾರ್ಟ್ . ಇನ್ ಪಾರ್ಟಿಗೆ ಅಗತ್ಯವಿರುವ ವಸ್ತುಗಳನ್ನುಕಡಿಮೆ ಬೆಲೆಯಲ್ಲಿ ಒದಗಿಸಿ ಪಾರ್ಟಿ ಆಚರಣೆಗಳನ್ನು ನೆನಪಿನಲ್ಲಿ ಉಳಿಯುವಂತೆ ಮಾಡುತ್ತದೆ.