ಆವೃತ್ತಿಗಳು
Kannada

ವಿನೂತನ ಯೋಜನೆಗಳಿಗೆ ಹೊಸ ಲೇಬಲ್​ ...ಪ್ರೀ ಸಿರೀಸ್​ ಎ..!

ಟೀಮ್​ ವೈ.ಎಸ್​. ಕನ್ನಡ

24th Dec 2015
Add to
Shares
5
Comments
Share This
Add to
Shares
5
Comments
Share

ಹೊಸ ಆಲೋಚನೆ ಅಂದರೆ ವಿನೂತನ ಯೋಚನೆಗಳು ಹೊಸ ಶಬ್ದ ಭಂಡಾರವನ್ನೇ ಹುಟ್ಟು ಹಾಕಿವೆ. ಪುರಾಣ ಪುರುಷರ ಹೆಸರೂ ಕೂಡ ಚಾಲ್ತಿಗೆ ಬರುತ್ತಿದೆ. ಇಂತಹ ಸಾಲಿಗೆ ಸೇರಿದ ಪದಗಳಲ್ಲಿ ಪ್ರೀ ಸಿರೀಸ್ ಎ ಕೂಡ ಸೇರಿದೆ. ಇದು ಭಾರತದ ವಿನೂತನ ಯೋಜನೆಗಳಿಗೆ ಸಂಬಂಧಿಸಿದಂತೆ ನವೀನ ಪದ. ಅಮೆರಿಕದಲ್ಲಿ 2013ರಲ್ಲಿ ಇದರ ಪದ ಪ್ರಯೋಗ ಮೊದಲಿಗೆ ಬಳಕೆಗೆ ಬಂತು. 2015ರಲ್ಲಿ ಪ್ರೀ ಸಿರೀಸ್ ಎ ಪದ ಭಾರತದಲ್ಲಿ ಕೂಡ ಬಳಕೆಗೆ ಬಂತು.

ಪ್ರೀ ಸಿರೀಸ್​​ ಎ ಪದದ ವಿಶ್ಲೇಷಣೆ ಏನು..? ಇದರ ನಿರ್ವಚನೆ ಏನು ಇದು ತಲೆ ತಿನ್ನುವ ಪ್ರಶ್ನೆ.. ಇದಕ್ಕೆ ಉತ್ತರ ಇಲ್ಲಿದೆ. ಉದ್ಯಮಶೀಲರು ಇದನ್ನು ಸೀಡ್ ಅಂದರೆ ಹೂಡಿಕೆ ಮತ್ತು ಸಿರೀಸ್ ಎ ನಡುವಿನ ಸ್ವರೂಪ ಅಥವಾ ಹಂತ ಎಂದು ಹೇಳುತ್ತಾರೆ. ಯುವರ್ ಸ್ಟೋರಿ ಅನುಸಾರ ಪ್ರಸಕ್ತ ವರ್ಷ 40 ವಿನೂತನ ಯೋಜನೆಗಳು ಇದರಡಿಯಲ್ಲಿ ಹುಟ್ಟು ಪಡೆದುಕೊಂಡಿವೆ. ಇದರಲ್ಲಿ ಶೇಕಡಾ 35ರಷ್ಟು ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ಇಲ್ಲ. ಆರಂಭಿಕ ಹಂತದಲ್ಲಿ ಹೂಡಿಕೆ ಮಾಡುವ ಹೂಡಿಕೆದಾರರ ಮನಸ್ಸನ್ನು ಇದು ಆಕರ್ಷಿಸುತ್ತಿದೆಯೋ ಎಂಬ ಪ್ರಶ್ನೆ ಕೂಡ ಮೂಡಿ ಬರುತ್ತಿದೆ. ವೆಂಚರ್ ಹೂಡಿಕೆದಾರರು ಕೂಡ ಈ ವಿಶ್ಲೇಷಣೆ ಸಂಬಂಧ ತಮ್ಮದೇ ಆದ ಮಾನದಂಡದಲ್ಲಿ ಮೌಲ್ಯಮಾಪನ ನಡೆಸಿದ್ದಾರೆ. ಪ್ರೀ ಸಿರೀಸ್ ಎ ಆರಂಭಿಕ ಹಂತದ ಹೂಡಿಕೆ. ವಿನೂತನ ಯೋಜನೆಗಳಿಗೆ ಹೊಸ ಲೇಬಲ್ ಎಂದು ಸೂಚಿಸಿದ್ದಾರೆ.

image


ಭಾರತಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಪ್ರೀ ಸಿರೀಸ್ ಎ ನಿರ್ಣಾಯಕವಾಗಿದೆ. ಮಾನ ದಂಡಗಳು ಅತ್ಯಂತ ಕಠಿಣವಾಗಿವೆ. ಭಾರತದಲ್ಲಿ ಅದೃಶ ಹೂಡಿಕೆದಾರರು ಅಂದರೆ ಏಂಜೆಲ್ ಫಂಡ್ ತ್ವರಿತಗತಿಯ ಬೆಳವಣಿಗೆ ದಾಖಲಿಸಿದೆ. ಮೂರು ವರ್ಷಗಳಲ್ಲಿ ಪ್ರಗತಿ ಸಾಧಿಸಿದೆ. ಆದರೆ ಸಿರೀಸ್ ಎ ಶ್ರೇಣಿ ನಿರೀಕ್ಷಿತ ಬೆಳವಣಿಗೆ ಸೂಚಿಸಿಲ್ಲ. ಇಂತಹ ಸಂದರ್ಭದಲ್ಲಿ ಸಂಪನ್ಮೂಲ ಸಂಗ್ರಹ ನಿಟ್ಟಿನಲ್ಲಿ ಜಾಲ್ತಿಯಲ್ಲಿರುವ ವ್ಯವಸ್ಥೆಯಡಿಯಲ್ಲಿ ವ್ಯವಸ್ಥೆ ಮಾಡಿಕೊಳ್ಳುತ್ತಿದೆ. ಇವುಗಳನ್ನು ಪ್ರೀ ಸಿರೀಸ್ ಎ ಎಂದು ವಿಶ್ಲೇಷಿಸಬಹುದಾಗಿದೆ. ಇದು ಡೆಕ್ ಆ್ಯಪ್ ಟೆಕ್ನೋಲಜಿಸ್ ಸಂಸ್ಥಾಪಕ ಸುಮಂತ್ ರಾಘವೇಂದ್ರ ಅವರ ಮಾತು.

ಪ್ರೀ ಸಿರೀಸ್ ಸಂಸ್ಥೆ ನೆಗೆಟಿವ್ ಗುಣಗಳ ಬಗ್ಗೆ ಬೆಳಕು ಚೆಲ್ಲುತ್ತದೆ. ಮುಖ್ಯವಾಗಿ ಪ್ರವರ್ತಕರ ಅಭದ್ರತೆ ಭಾವನೆಯನ್ನು ಬಿಂಬಿಸುತ್ತದೆ. ಇದು ರಾಘವೇಂದ್ರ ಅವರ ಅನಿಸಿಕೆ. ದೆಹಲಿ ಮೂಲದ ಆನ್ ಡಿಮಾಂಡ್ ಲಾಂಡ್ರಿ ವಿನೂತನ ಯೋಜನೆ ಕಳೆದ ತಿಂಗಳು ಪ್ರಿ ಸಿರೀಸ್ ಎ ನಲ್ಲಿ ಕಾಣಿಸಿಕೊಂಡಿತ್ತು. ಇದರ ಬಗ್ಗೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುಕನ್ ಶ್ರೀವಾಸ್ತವ ಹೇಳುವುದು ಈ ರೀತಿ...

ಬಂಡವಾಳವನ್ನು ಹಿಂಬಾಲಿಸಬೇಕಾದ ಅನಿವಾರ್ಯತೆ ಇದೆ. ಸಿರೀಸ್ ಎ ಘೋಷಣೆ ಯಾಗುವ ತನಕ ಸಂಪನ್ಮೂಲ ಬೇಕಾಗಿದೆ ಎನ್ನುತ್ತಾರೆ ಶ್ರೀವಾಸ್ತವ. ಇದಕ್ಕೆ ಯಾವ ಪದ ಪ್ರಯೋಗ ಬಳಸಿದರೆ ಸೂಕ್ತ ಎಂದು ನನಗೆ ತಿಳಿಯುತ್ತಿಲ್ಲ. ಆದರೆ ಒಂದು ಮಾತು ಸ್ಪಷ್ಟ. ಈ ಸಂದರ್ಭದಲ್ಲಿ ಕೆಲವು ಮಾಹಿತಿಗಳನ್ನು ಗುಪ್ತವಾಗಿ ಇರಿಸಲಾಗುತ್ತಿದೆ . ಇದು ಶ್ರೀವಾಸ್ತವ ಅವರ ಸ್ಪಷ್ಟ ನುಡಿ.

ಗೋಲ್ಡನ್ ಟ್ಯಾಪ್ ಕೃತಿಯ ಲೇಖಕರಾದ ಕಶ್ಯಪ್ ದಿಯೋರಾ ಮಾತುಗಳನ್ನು ಒಮ್ಮೆ ಕೇಳೋಣ.

ನಿಜವಾಗಿ ಹೇಳಬೇಕೆಂದರೆ ಪ್ರಿ ಸಿರೀಸ್ ಎ ಎಂದು ಹೇಳಿದರೆ ನನಗೆ ಏನು ತಿಳಿದಿಲ್ಲ. ಆದರೆ ಮಾಧ್ಯಮಗಳು ಇದನ್ನು ವಿಜೃಂಭಿಸುತ್ತಿವೆ. ಸೆಲೆಬ್ರೇಟ್ ಮಾಡುತ್ತಿವೆ. ಇದು ದಿಯೋರಾ ಮಾತು.

image


ಏಂಜೆಲ್ ಸುತ್ತಿನ ಹೂಡಿಕೆದಾರರು ಆರಂಭದ ಹಂತದಲ್ಲಿ ಬರುತ್ತಾರೆ. ಹಲವು ಬಾರಿ ಸಂಸ್ಥೆಗಳು ಆರರಿಂದ ಎಂಟು ತಿಂಗಳ ಅವಧಿಯಲ್ಲಿ ಅದು ಕಾರ್ಯ ನಿರ್ವಹಣೆ ಆರಂಭಿಸಿದ ಬಳಿಕ ಈ ಸುತ್ತಿನಿಂದ ಹೊರ ಬರುತ್ತಿವೆ. ಇಂತಹ ಸಂದರ್ಭದಲ್ಲಿ ಹೂಡಿಕೆ ಅತೀ ಅಗತ್ಯವಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಹೊಸತಾದ ಹೂಡಿಕೆ ಚೈತನ್ಯ ನೀಡುತ್ತದೆ.

ಹೂಡಿಕೆ ತಜ್ಞ ಪ್ರವೀಣ್ ಅವರು ಕೂಡ ತಮ್ಮದೇ ಆದ ಅಭಿಪ್ರಾಯ ಹೊಂದಿದ್ದಾರೆ. ಪ್ರೀ ಸಿರೀಸ್ ಎ ಸಾಂಸ್ಥಿಕ ಹೂಡಿಕೆದಾರರಲ್ಲಿ ಆತ್ಮ ವಿಶ್ವಾಸ ಹೆಚ್ಚಿಸುತ್ತದೆ ಎನ್ನುತ್ತಾರೆ ಅವರು.

ದೇಶದ ಖ್ಯಾತ ಉದ್ಯಮಿ ರತನ್ ಟಾಟಾ ಸ್ವಾಭಾವಿಕವಾಗಿ ಸ್ವಲ್ಪ ಪ್ರಮಾಣದ ನಿಧಿಯನ್ನು ವಿನೂತನ ಯೋಜನೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಆದರೆ ಅವರ ಉಪಸ್ಥಿತಿ ಅಂದರೆ ಹೂಡಿಕೆಯಲ್ಲಿ ಪ್ರಾತಿನಿಧ್ಯ ಸಂಸ್ಥೆಯ ಮೌಲ್ಯವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಸಹಜವಾಗಿಯೇ ನಂತರದ ಹಂತಗಳಲ್ಲಿ ನಿಧಿ ಹರಿಯುವಿಕೆ ಹೆಚ್ಚಾಗುತ್ತಿದೆ.

ಲೇಖಕರು : ಜೈವರ್ಧನ್​

ಅನುವಾದಕರು : ಎಸ್​ಡಿ

Add to
Shares
5
Comments
Share This
Add to
Shares
5
Comments
Share
Report an issue
Authors

Related Tags