ಕೊರೊನಾ ಜಯಿಸಿದ 105 ರ ಕೊಪ್ಪಳದ ಅಜ್ಜಿ

ಕೊಪ್ಪಳದ ಕತರ್ಕಿ ಹಳ್ಳಿಯವರಾದ ಕಮಲಮ್ಮ ಲಿಂಗನಗೌಡಾ ಹಿರೆಗೌಡರ್‌ ತಮ್ಮ ಮನೆಯಲ್ಲೆ ಚಿಕಿತ್ಸೆ ಪಡೆದು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ.
0 CLAPS
0

ಕೊರನಾವೈರಸ್‌ ಹಿರಿಯರಿಗೆ ಹೆಚ್ಚಿನ ಅಪಾಯನ್ನುಂಟು ಮಾಡುತ್ತದೆ ಎಂಬ ಸಂಗತಿಯ ನಡುವೆ ಇತ್ತೀಚೆಗೆ ಸೋಂಕಿನಿಂದ ಗುಣಮುಖರಾದ ಹಿರಿಯರ ಪಟ್ಟಿ ಬೆಳೆಯುತ್ತಾ ಹೋಗುತ್ತಿದೆ.

ಕೊಪ್ಪಳದ ಕತರ್ಕಿ ಹಳ್ಳಿಯವರಾದ 105 ವರ್ಷದ ಕಮಲಮ್ಮ ಲಿಂಗನಗೌಡಾ ಹಿರೆಗೌಡರ್‌ ತಮ್ಮ ಮನೆಯಲ್ಲೆ ಚಿಕಿತ್ಸೆ ಪಡೆದು ಕೊರೊನಾ ಸೋಂಕಿನಿಂದ ಗುಣಮುಖರಾಗುವಲ್ಲಿ ಯಶಸ್ವಿಯಾಗಿದ್ದಾರೆ.

ಅಧಿಕೃತ ಮೂಲಗಳ ಪ್ರಕಾರ ಕಳೆದ ವಾರ ಕಮಲಮ್ಮನವರಿಗೆ ಜ್ವರ ಕಾಣಿಸಿಕೊಂಡ ಬೆನ್ನಲ್ಲೆ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು, ಆಗ ಸೋಂಕಿರುವುದು ದೃಢಪಟ್ಟಿದೆ.

ಇವರಿಗೆ ಬೇರೆ ಯಾವುದೇ ಕಾಯಿಲೆಗಳಿರಲಿಲ್ಲ ಹಾಗೂ ಆಸ್ಪತ್ರೆಗೆ ಹೋಗಲು ಅವರು ನಿರಾಕರಿಸಿದ್ದರಿಂದ ಅವರ ಮಗನ ಮನೆಯಲ್ಲೆ ಪ್ರತ್ಯೇಕವಾಗಿದ್ದು ಚಿಕಿತ್ಸೆ ನೀಡಲಾಯಿತು. ಮನೆಯಲ್ಲೆ ವೈದ್ಯರಾಗಿರುವ ತಮ್ಮ ಮೊಮ್ಮಗ ಶ್ರೀನಿವಾಸ ಹ್ಯಾಟಿ ಅವರ ಮೇಲ್ವಿಚಾರಣೆಯಲ್ಲಿ ನಡೆದ ಚಿಕಿತ್ಸೆ ಫಲಕಾರಿಯಾಗಿದ್ದು, ಈಗ ಅವರ ಪರೀಕ್ಷಾ ವರದಿಗಳು ನಕರಾತ್ಮಕವಾಗಿವೆ.

ವರದಿಗಾರರೊಂದಿಗೆ ಮಾತನಾಡಿದ ಕಮಲಮ್ಮನವರ ಮೊಮ್ಮಗ ಅವರ ವಯಸ್ಸನ್ನು ನೋಡಿದರೆ ಅದು ತುಂಬಾ ಸವಾಲಿನ ಸಂದರ್ಭವಾಗಿತ್ತು. ಆದರೆ ಅವರಿಗೆ ಬೇರೆ ಯಾವುದೇ ಆರೋಗ್ಯ ಸಮಸ್ಯೆಗಳಿರಲಿಲ್ಲ ಹಾಗಾಗಿ ಸಾಮಾನ್ಯ ಚಿಕಿತ್ಸೆಯನ್ನು ಅವರಿಗೆ ನೀಡಲಾಯಿತು. ಕೊರೊನಾದಿಂದ ಭಯಪಡುವವರಿಗೆ ನಮ್ಮ ಅಜ್ಜಿ ಪ್ರೇರಣೆಯಾಗಿದ್ದಾಳೆ ಎಂದರು.

ಅವರು ಆಹಾರವನ್ನು ತೆಗೆದುಕೊಳ್ಳಲು ಹಿಂಜರಿಯುತ್ತಿದ್ದರಿಂದ ಗಂಜಿ ಮತ್ತು ನೀರನ್ನು ನೀಡಲಾಯಿತು, ಮತ್ತು ಅವರಿಗೆ ಸೂಚಿಸಲಾದ ಔಷಧವು ಸೀಮಿತವಾಗಿತ್ತು.

ಜನವರಿ 30 ರಂದು ಮೊದಲ ಬಾರಿಗೆ ಕೇರಳದಲ್ಲಿ ಸೋಂಕು ಕಾಣಿಸಿಕೊಂಡಾಗಿನಿಂದ ಸಾಂಕ್ರಾಮಿಕವು ದೇಶದ ತುಂಬೆಲ್ಲಾ ಹರಡಿ 48 ಲಕ್ಷಕ್ಕೂ ಅಧಿಕ ಜನರಿಗೆ ಸೋಂಕು ಭಾದಿಸಿದೆ. ಸೆಪ್ಟೆಂಬರ್‌ 6 ರಂದು ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಬ್ರೇಜಿಲ್‌ ಅನ್ನು ಹಿಂದಿಕ್ಕಿದ ಭಾರತ ಈಗ ವಿಶ್ವದಲ್ಲೆ ಕೋವಿಡ್‌-19 ನಿಂದ ಹೆಚ್ಚು ಭಾದಿತವಾದ ಎರಡನೆ ದೇಶವಾಗಿದೆ.

ಕೊಪ್ಪಳದಲ್ಲಿ 8,800 ಕ್ಕೂ ಅಧಿಕ ಕೋವಿಡ್‌-19 ಪ್ರಕರಣಗಳು ವರದಿಯಾಗಿದ್ದು ಅದರಲ್ಲಿ 186 ಜನರ ಪ್ರಾಣಕಳೆದುಕೊಂಡಿದ್ದರೆ, 6,870 ಜನರು ಗುಣಮುಖರಾಗಿದ್ದಾರೆ.

ಕರ್ನಾಟಕದಲ್ಲಿ ಪ್ರಸ್ತುತವಾಗಿ 98,463 ಸಕ್ರಿಯ ಪ್ರಕರಣಗಳಿದ್ದು, 7,384 ಸಾವುಗಳು ಸಂಭವಿಸಿವೆ ಮತ್ತು 3,61,823 ಜನರು ಗುಣಮುಖರಾಗಿದ್ದಾರೆ.

(ವಿಶೇಷ ಸೂಚನೆ: ಪಿಟಿಐ ಲೇಖನಕ್ಕೆ ಅಗತ್ಯವಾದ ವಿವರಗಳನ್ನು ಸೇರಿಸಲಾಗಿದೆ.)

Latest

Updates from around the world