‌11 ವರ್ಷದ ಯುವ ಉದ್ಯಮಿ ಎಐ ಪರಿಕಲ್ಪನೆಗಳನ್ನು ಕಲಿಯಲು ಮತ್ತು ಕೋಡರ್ ಬನ್ನಿಜ್ ಜೊತೆ ಕೋಡಿಂಗ್ ಮಾಡಲು ಮಕ್ಕಳಿಗೆ ಸಹಾಯ ಮಾಡುತ್ತಿದ್ದಾಳೆ

11 ವರ್ಷದ ಸಮೈರಾ ಮೆಹ್ತಾ ಕೋಡರ್ ಬನ್ನಿಜ್‌ನ ಸಂಸ್ಥಾಪಕಿ. ಅವಳು ಕೋಡಿಂಗ್, ಕಂಪ್ಯೂಟರ್ ಪ್ರೋಗ್ರಾಮಿಂಗ್ ಮತ್ತು ಎಐ ಕೌಶಲ್ಯಗಳನ್ನು ಸುಲಭವಾಗಿ, ಮೋಜಿನ ರೀತಿಯಲ್ಲಿ ಕಲಿಯಲು ಮಕ್ಕಳಿಗೆ ಸಹಾಯ ಮಾಡುವ ಆಟವನ್ನು ರಚಿಸಿದ್ದಾಳೆ.

‌11 ವರ್ಷದ ಯುವ ಉದ್ಯಮಿ ಎಐ ಪರಿಕಲ್ಪನೆಗಳನ್ನು ಕಲಿಯಲು ಮತ್ತು ಕೋಡರ್ ಬನ್ನಿಜ್ ಜೊತೆ ಕೋಡಿಂಗ್ ಮಾಡಲು ಮಕ್ಕಳಿಗೆ ಸಹಾಯ ಮಾಡುತ್ತಿದ್ದಾಳೆ

Friday October 18, 2019,

5 min Read

‌6 ನೇ ತರಗತಿ ವಿದ್ಯಾರ್ಥಿನಿ ಸಮೈರಾ ಮೆಹ್ತಾ ಈಗಾಗಲೇ ತನ್ನ ಆಟದಲ್ಲಿ ಮುಂದಿದ್ದಾಳೆ. ಭಾರತೀಯ ಮೂಲದ ಮತ್ತು ಕ್ಯಾಲಿಫೋರ್ನಿಯಾ ಮೂಲದ ಈ 11 ವರ್ಷದ ಹುಡುಗಿ ಸಂಶೋಧಕಿಯಾಗಿದ್ದು, ನಾಲ್ಕು ಮತ್ತು 10 ವರ್ಷದೊಳಗಿನ ಮಕ್ಕಳಿಗೆ ಕೋಡಿಂಗ್ ಕಲಿಸಲು ಸ್ಟೆಮ್ ಕೋಡಿಂಗ್ ಬೋರ್ಡ್ ಆಟವಾದ ಕೋಡರ್ ಬನ್ನಿಜ್ ಅನ್ನು ಕಂಡುಹಿಡಿದಿದ್ದಾಳೆ.


ಸಮೈರಾ ಸಿಲಿಕಾನ್ ವ್ಯಾಲಿಯನ್ನು ಬಿರುಗಾಳಿಯಂತೆ ಆವರಿಸಿದ್ದಾಳೆ ಮತ್ತು 50 ಕ್ಕೂ ಹೆಚ್ಚು ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾಳೆ. ಮೌಂಟೇನ್ ವ್ಯೂನಲ್ಲಿನ ಗೂಗಲ್‌ನ ಪ್ರಧಾನ ಕಚೇರಿಯ ಗೂಗಲ್‌ಪ್ಲೆಕ್ಸ್‌ನಲ್ಲಿ 50 ಕ್ಕೂ ಹೆಚ್ಚು “ಗೂಗಲ್ ಮಕ್ಕಳ” ಜೊತೆಗೆ ಕಾರ್ಯಕ್ರಮ ಸೇರಿದಂತೆ ತನ್ನ ಬೋರ್ಡ್ ಆಟದ ಮೇಲೆ ಬೆಳಕು ಚೆಲ್ಲುವ 60 ಕಾರ್ಯಾಗಾರಗಳನ್ನು ಅವಳು ನಡೆಸಿದ್ದಾಳೆ. ಯುವತಿಯು ತನ್ನ ಕೆಲಸಕ್ಕಾಗಿ ಶ್ವೇತಭವನದಿಂದ, ಅಂದಿನ ಪ್ರಥಮ ಮಹಿಳೆ ಮಿಷೆಲ್ ಒಬಾಮರಿಂದ ಪತ್ರವನ್ನು ಸಹ ಪಡೆದಳು.


ಗೂಗಲ್‌ ನ ಪ್ರಧಾನ ಕಚೇರಿಯಲ್ಲಿ ಸಮೈರಾ

ಇತ್ತೀಚೆಗೆ, ಸಮೈರಾ ಗರ್ಲ್ಸ್ ಯು ಕೋಡ್ ಎಂಬ ಮತ್ತೊಂದು ಉಪಕ್ರಮವನ್ನು ಪ್ರಾರಂಭಿಸಿದ್ದಾಳೆ.

ಇದೆಲ್ಲ ಶುರುವಾದದ್ದು ಹೇಗೆ?

“ಸಮೈರಾಳ ಕೋಡಿಂಗ್ ಆಸಕ್ತಿಯು ಅವಳ ತಂದೆ ಮಾಡಿದ ತಮಾಷೆಯೊಂದಿಗೆ ಪ್ರಾರಂಭವಾಯಿತು. ‘ನನ್ನ ತಂದೆ ತನ್ನ ಲ್ಯಾಪ್‌ಟಾಪ್‌ನಲ್ಲಿ ಒಂದು ಗುಂಡಿ ಮತ್ತು ಆಜ್ಞೆಯನ್ನು ಹೊಂದಿದ್ದನ್ನು ನನಗೆ ತೋರಿಸಿದರು : ‘ನೀವು ಸುಂದರವಾಗಿದ್ದರೆ ಇದನ್ನು ಒತ್ತಿರಿ’. ಇದನ್ನು ಪ್ರಯತ್ನಿಸಲು ಅವರು ನನ್ನನ್ನು ಕೇಳಿದರು, ಆದರೆ ನನ್ನ ಮೌಸ್ ಪಾಯಿಂಟರ್ ಗುಂಡಿಯನ್ನು ಮುಟ್ಟಿದಾಗ, ಬಟನ್ ಕಣ್ಮರೆಯಾಯಿತು. ನಾನು, ನೀವು ಅದನ್ನು ಹೇಗೆ ಮಾಡಿದ್ದೀರಿ? ನಾನು ಸುಂದರವಾಗಿಲ್ಲ, ಇಲ್ಲಿ ಏನು ನಡೆಯುತ್ತಿದೆ? ಎಂದೆಲ್ಲ ಕೇಳಿದೆ, ಕೋಡಿಂಗ್ ಮೂಲಕ ಇದನ್ನು ಮಾಡಲಾಗಿದೆ ಎಂದು ಅವರು ಹೇಳಿದರು ಮತ್ತು ನಂತರ ನಾನು ‘ನಾನು ಕೂಡ ಅದನ್ನು ಮಾಡಲು ಬಯಸುತ್ತೇನೆ’ ಮತ್ತು ಅದು ಅಲ್ಲಿಂದ ಎಲ್ಲ ಪ್ರಾರಂಭವಾಯಿತು,” ಎಂದು ಅವಳು ಹೇಳುತ್ತಾಳೆ.


ಇದು ಸಮೈರಾಗೆ ಇಷ್ಟವಿರುವ ಕಂಪ್ಯೂಟರ್‌ ಪ್ರೋಗ್ರಾಮಿಂಗ್‌ ಮತ್ತು ಬೋರ್ಡ್‌ ಆಟಗಳಿಂದ ಕೂಡಿತ್ತು. ಅವಳು ೨೦೧೫ ರಲ್ಲಿ ಕೋಡಿಂಗ್‌ ಕಲಿಯಲು ಶುರುಮಾಡಿ, ತನ್ನ ಮೊದಲ ಗೇಮ್‌ ನ ಮೇಲೆ ಒಂದುವರೆ ವರ್ಷ ಸಮಯ ಕಳೆದಳು.


“ಇದನ್ನು 2017 ರಲ್ಲಿ ಬಿಡುಗಡೆಗೋಳಿಸಲಾಯಿತು ಮತ್ತು ಸ್ವಲ್ಪ ಸಮಯದ ನಂತರ ಇದು ಅಮೆಜಾನ್‌ನಲ್ಲಿ # 1 ಸ್ಥಾನವನ್ನಾಕ್ರಮಿಸಿತು. ಇದು ಮಾರುಕಟ್ಟೆಯಲ್ಲಿ, ಶಾಲೆಗಳಲ್ಲಿ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆಯಿತು,” ಎಂದು ಅವಳು ಹೇಳುತ್ತಾಳೆ.


ಇಲ್ಲಿಯವರೆಗೆ ತನ್ನ ಆಟದ 17,000 ಯುನಿಟ್‌ಗಳನ್ನು ಮಾರಾಟ ಮಾಡಿದ್ದಾಳೆ ಮತ್ತು ಆದಾಯವನ್ನು ಇನ್ನೂ ಕೆಲವು ಆಟಗಳನ್ನು ರಚಿಸಲು ಬಳಸುತ್ತಿದ್ದಾಳೆ. ಮಾರಾಟದ ಒಂದು ಭಾಗವು ಮನೆಯಿಲ್ಲದವರಿಗೆ ಹೋಗುತ್ತದೆ. ಆಟವನ್ನು ಮಕ್ಕಳಿಗೆ ಖರೀದಿಸಬಹುದು ಮತ್ತು ದಾನ ಮಾಡಬಹುದು. “ಹೌದು, ಒನ್ ಬಿಲಿಯನ್ ಕಿಡ್ಸ್ ಕ್ಯಾನ್ ಕೋಡ್” ಎಂಬ ಅಭಿಯಾನದ ಮೂಲಕ ಹೆಚ್ಚಿನ ಮಕ್ಕಳು ಕೋಡಿಂಗ್ ಕಲಿಯಲು ಸಮೈರಾ ಸತತವಾಗಿ ಒತ್ತಾಯಿಸುತ್ತಿದ್ದಾಳೆ.


ಸಮೈರಾ ಮೆಹ್ತಾ ಸಮ್ಮೇಳನವೂಂದರಲ್ಲಿ ಮಾತನಾಡುತ್ತಿರುವುದು.

ಕುಟುಂಬ ಮತ್ತು ಸ್ನೇಹಿತರಿಂದ ಸಣ್ಣ ಸಹಾಯ

ಸಮೈರಾ ಗ್ರಾಫಿಕ್ಸ್ ವಿನ್ಯಾಸಕರು, ಗುತ್ತಿಗೆ ತಯಾರಕರು ಮತ್ತು ಕಾರ್ಯಾಚರಣೆಗಳ ತಂಡವನ್ನು ಹೊಂದಿದ್ದಾಳೆ. ಆಕೆಯ ಪೋಷಕರು, ಮೋನಿಕಾ ಮತ್ತು ರಾಕೇಶ್ ಮೆಹ್ತಾ, ಜಾಹೀರಾತು ಮತ್ತು ಮಾರ್ಕೆಟಿಂಗ್‌ಗೆ ಸಹಾಯ ಮಾಡುತ್ತಾರೆ, ಆದರೆ ಅವರ ಸಹೋದರ ಆದಿತ್ ಆಟಗಳನ್ನು ಪರೀಕ್ಷಿಸಲು ಸಹಾಯ ಮಾಡುತ್ತಾರೆ.


ತನ್ನ ಕನಸನ್ನು ನನಸಾಗಿಸಿದ ಪ್ರಶಂಸೆ ಅಂತರ್ಜಾಲಕ್ಕೆ ಸಲ್ಲಿಸುತ್ತಾಳೆ. “ಇಂಟರ್ನೆಟ್ ಅದ್ಭುತವಾಗಿದೆ. ನೀವು ಪ್ರಪಂಚದಾದ್ಯಂತ ಕ್ಷಣಮಾತ್ರದಲ್ಲಿ ಜನರೊಂದಿಗೆ ಸಂಪರ್ಕ ಸಾಧಿಸಬಹುದು. ಅಯೋವಾ, ಓಹಿಯೋ ಮತ್ತು ನ್ಯೂಜಿಲೆಂಡ್‌ನ ಹಲವಾರು ಅದ್ಭುತ ಗ್ರಾಫಿಕ್ ವಿನ್ಯಾಸಕರು ನನ್ನ ಆಲೋಚನೆಗಳು ಮತ್ತು ಒರಟು ರೇಖಾಚಿತ್ರಗಳಿಗೆ ಜೀವ ತುಂಬಲು ಸಹಾಯ ಮಾಡಿದರು. ನಂತರ ಪ್ರಪಂಚದಾದ್ಯಂತ ತಯಾರಕರು ಉತ್ಪನ್ನವನ್ನು ರಚಿಸಲು ಸಹಾಯ ಮಾಡಿದರು. ತಂತ್ರಜ್ಞಾನ ಇಂದು ಪ್ರಭಲವಾಗಿದೆ ಮತ್ತು ಅದೇ ಸಮಯದಲ್ಲಿ, ಮಕ್ಕಳು ಹೆಚ್ಚು ಮಹತ್ವಾಕಾಂಕ್ಷಿಯಾಗುತ್ತಿದ್ದಾರೆ. ನಮ್ಮ ತಲೆಮಾರುಗಳ ಮತ್ತು ಇಡೀ ಪ್ರಪಂಚದ ಸಮಸ್ಯೆಗಳನ್ನು ಪರಿಹರಿಸಲು ಬದಲಾವಣೆಯನ್ನು ತರಲು ಮತ್ತು ವಿಷಯಗಳನ್ನು ರಚಿಸಲು ನಾವು ಸಹಾಯ ಮಾಡಬಹುದು, ವಿಶ್ವವನ್ನು ಉತ್ತಮ, ಸುರಕ್ಷಿತ ಮತ್ತು ವಿನೋದಮಯ ಸ್ಥಳವಾಗಿಸಲು ನಾವು ಕೈಜೋಡಿಸಬಹುದು” ಎಂದು ಅವಳು ಹೇಳುತ್ತಾಳೆ.


ಸಮೈರಾ ತನ್ನ ಶಿಕ್ಷಕ ಲೋರಿನ್ ವಿಲ್ಸನ್ ಅವರಿಂದ ಸಹ ಬೆಂಬಲಿಸಲ್ಪಟ್ಟಿದ್ದಾಳೆ.

ಕೋಡರ್ ಬನ್ನಿಜ್: ತಂತ್ರಜ್ಞಾನವನ್ನು ಆಟದ ಒಂದು ಭಾಗವಾಗಿ ಮಾಡುವುದು

ಕೋಡರ್ ಬನ್ನಿಜ್ ಒಂದು ಸಮಗ್ರ ಕೋಡಿಂಗ್ ಬೋರ್ಡ್ ಆಟವಾಗಿದ್ದು ಅದು ಕಂಪ್ಯೂಟರ್ ಪ್ರೋಗ್ರಾಮಿಂಗ್ ಪರಿಕಲ್ಪನೆಗಳಾದ ಸ್ಟಾಕ್, ಅಲ್ಗಾರಿದಮ್ ಬರವಣಿಗೆ, ಪಟ್ಟಿ ಮತ್ತು ಕ್ಯೂ ಅನ್ನು ಸರಳಗೊಳಿಸುತ್ತದೆ.


ನನ್ನ ಬೋರ್ಡ್ ಆಟವು ಪ್ರಸ್ತುತ ಯುಗದಲ್ಲಿ ಅತ್ಯಂತ ಶಕ್ತಿಯುತ ತಂತ್ರಜ್ಞಾನವನ್ನು ಸ್ಪರ್ಶಿಸುತ್ತಿದೆ. ಕೋಡಿಂಗ್, ಕಂಪ್ಯೂಟರ್ ಸೈನ್ಸ್ ಮತ್ತು ಎಐ ಕೋಡಿಂಗ್ ಮತ್ತು ಎಐ ನಲ್ಲಿ ಬಳಸುವ ಎಲ್ಲಾ ಪರಿಕಲ್ಪನೆಗಳನ್ನು ಆಟವು ನಿಜವಾಗಿಯೂ ಮೋಜಿನ, ಸಂವಾದಾತ್ಮಕ ಮತ್ತು ಕೈನೆಸ್ಥೆಟಿಕ್ ರೀತಿಯಲ್ಲಿ ಕಲಿಸುತ್ತದೆ.


ಮಕ್ಕಳಿಗೆ ಕೃತಕ ಬುದ್ಧಿಮತ್ತೆ ಪರಿಕಲ್ಪನೆಗಳನ್ನು ಕಲಿಸುವ ತನ್ನ ಇತ್ತೀಚಿನ ಆಟವಾದ ಕೋಡರ್ ಮೈಂಡ್ಜ್ ಅನ್ನು ಸಹ ಪ್ರಾರಂಭವಾಗಿದೆ. ಇದು ಈ ರೀತಿಯ ಮೊದಲ ಆಟ ಎಂದು ಅವಳು ಹೇಳುತ್ತಾಳೆ ಮತ್ತು ಅದರ ಅಧ್ಯಯನದಲ್ಲಿ ಒಂದು ವರ್ಷ ತೊಡಗಿಸಿಸಿಕೊಂಡಿದ್ದಾಳೆ.


ಎಐ, ರೊಬೊಟಿಕ್ಸ್, ಪ್ರೊಗ್ರಾಮಿಂಗ್ ಮತ್ತು ಡಾಟಾ ಸೈನ್ಸ್‌ನಂತಹ ಇತ್ತೀಚಿನ ತಂತ್ರಜ್ಞಾನಗಳನ್ನು ಸಮೈರಾ ಕಲಿಯುತ್ತಿದ್ದಾಳೆ.


“ನಾನು ವೆಬ್‌ನಲ್ಲಿ ಓದುತ್ತೇನೆ (ಗೂಗಲ್ ಅದ್ಭುತವಾಗಿದೆ) ಮತ್ತು ಹೊಸ ತಂತ್ರಜ್ಞಾನದ ಬಗ್ಗೆ ಮಾಹಿತಿಯನ್ನು ಹುಡುಕುವಲ್ಲಿ ನನಗೆ ಮಾರ್ಗದರ್ಶನ ನೀಡುವ ನನ್ನ ತಂದೆಯಿಂದ ಸಲಹೆ ಪಡೆಯುತ್ತೇನೆ” ಆಕೆಯ ತಂದೆ ಎಐ ಸಾಧನಗಳನ್ನು ವಿನ್ಯಾಸಗೊಳಿಸುತ್ತಾರೆ.


ಸಮೈರಾ ಮೆಹ್ತಾ

ದೊಡ್ಡ ಸವಾಲು: ಜಾಗೃತಿ ಮೂಡಿಸುವುದು

ಸಮೈರಾಗೆ ಇದ್ದ ಒಂದು ಪ್ರಮುಖ ಸವಾಲು ಆಟದ ಬಗ್ಗೆ ಜಾಗೃತಿ ಮೂಡಿಸುವುದು. “ಕೋಡಿಂಗ್ ಕಾರ್ಯಾಗಾರಗಳು ವಿನೋದ ಮತ್ತು ರೋಮಾಂಚನಕಾರಿಯಾಗಿವೆ” ಎಂದು ಹೇಗೆ ಜನರಿಗೆ ಮನವರಿಕೆ ಮಾಡುವುದು ದೊಡ್ಡ ಸವಾಲಾಗಿತ್ತು.


ನನ್ನ ಬೋರ್ಡ್ ಆಟವನ್ನು ನಾನು ಮನೆಯಲ್ಲಿ ನನ್ನ ಸಹೋದರ ಮತ್ತು ಇತರ ಸ್ನೇಹಿತರಿಗೆ ಕಲಿಸಿದ್ದೇನೆ ಮತ್ತು ನನ್ನ ತಾಯಿ ‘ನೀನು ಏಕೆ ಕಾರ್ಯಾಗಾರಗಳನ್ನು ಮಾಡಬಾರದು’ ಎಂದು ಹೇಳಿದರು? ನಾನು ಕೆಲವು ಗ್ರಂಥಾಲಯಗಳಿಗೆ ಹೋದೆ; ಶುರು ಮಾಡುವುದು ಸವಾಲಾಗಿತ್ತು. ನಾನು ಹೋದ ಮೊದಲ ಲೈಬ್ರರಿ ನಮ್ಮಲ್ಲಿ ಈಗಾಗಲೇ ಆನ್‌ಲೈನ್ ಕೋಡಿಂಗ್ ಪ್ರೋಗ್ರಾಂ ಇದೆ ಎಂದು ಹೇಳಿದರು. ನಂತರ ನಾನು ಇನ್ನೊಂದಕ್ಕೆ ಹೋದೆ, ಮತ್ತು ಅವರ ಪ್ರತಿಕ್ರಿಯೆ ‘ಬಹುಶಃ, ಮುಂದಿನ ವರ್ಷ ಹಿಂತಿರುಗಿ ಮತ್ತು ನಾವು ಹೆಚ್ಚು ಚರ್ಚಿಸಬಹುದು’ ಎಂದಿತ್ತು. ನನ್ನ ಆಟವು ಸಾಕಷ್ಟು ಉತ್ತಮವಾಗಿಲ್ಲ ಎಂದು ನಾನು ಭಾವಿಸಿದೆ. ಆದರೆ ನಾನು ಎಂದಿಗೂ ಬಿಟ್ಟುಕೊಡಲು ಬಯಸಲಿಲ್ಲ. ನಿರಂತರವಾಗಿ ಪ್ರಯತ್ನಿಸಿದೆ ಮತ್ತು ಈ ಪ್ರದೇಶದ ದೊಡ್ಡದಾದ ಸಾಂತಾ ಕ್ಲಾರಾ ಸೆಂಟ್ರಲ್ ಪಾರ್ಕ್ ಲೈಬ್ರರಿ ನನ್ನ ಪ್ರಸ್ತಾಪವನ್ನು ಕೇಳಿ ತುಂಬಾ ಉತ್ಸುಕವಾಯಿತು. ಗ್ರಂಥಾಲಯಗಳಲ್ಲಿ ನನ್ನ ಕಾರ್ಯಾಗಾರಗಳು ಪ್ರಾರಂಭವಾದದ್ದು ಹೀಗೆ” ಎಂದು ಸಮೈರಾ ನೆನಪಿಸಿಕೊಳ್ಳುತ್ತಾಳೆ.

ಸಮೈರಾ ಗೆ ಸ್ಫೂರ್ತಿ

ವಿದ್ಯಾರ್ಥಿಯು ತನ್ನ ಹೆತ್ತವರಲ್ಲಿ ಹೆಚ್ಚಿನ ಬೆಂಬಲವನ್ನು ಕಂಡುಕೊಂಡಿದ್ದಾಳೆ ಮತ್ತು ಕಣಿವೆ ದೇಶದ ಕೆಲವು ಉತ್ತಮ ಬುದ್ಧಿವಂತರನ್ನು (ಫೇಸ್‌ಬುಕ್ ಮತ್ತು ಗೂಗಲ್‌ನಂತಹ ಕಂಪನಿಗಳಲ್ಲಿ) ಭೇಟಿಯಾಗಿದ್ದಾಳೆ ಮತ್ತು ಅವರಲ್ಲಿ ಅನೇಕರಿಂದ ಸ್ಫೂರ್ತಿ ಪಡೆದಿದ್ದಾಳೆ.


“ಸಾರ್ವಕಾಲಿಕ ಶ್ರೇಷ್ಠ ಪ್ರೋಗ್ರಾಮರ್ ಗಳಲ್ಲಿ ಕೆಲವರು ಮಹಿಳೆಯರಾಗಿದ್ದಾರೆ! ವಿಶ್ವದ ಮೊದಲ ಕಂಪ್ಯೂಟರ್ ಪ್ರೋಗ್ರಾಮರ್ ಅದಾ ಲೊವೆಲೆಸ್; ಜನಗಣತಿ ಮತ್ತು ಸಾಮಾಜಿಕ ಭದ್ರತೆಯನ್ನು ಚಲಾಯಿಸಲು ಮೊದಲ ಕಂಪ್ಯೂಟರ್‌ಗಳನ್ನು ವಿನ್ಯಾಸಗೊಳಿಸಿದ ಇಡಾ ರೋಡ್ಸ್; ಅಪೊಲೊ 11 ಅನ್ನು ಚಂದ್ರನ ಮೇಲೆ ಇರಿಸಿದ ಸಾಫ್ಟ್‌ವೇರ್ ಬರೆದ ಮಾರ್ಗರೆಟ್ ಹ್ಯಾಮಿಲ್ಟನ್… ಮತ್ತು ಅನಿತಾ ಬೋರ್ಗ್ ಮತ್ತು ಗ್ರೇಸ್ ಹಾಪರ್ ಅವರನ್ನು ನಾವು ಮರೆಯಬಾರದು.”


ಅವರು ಹೇಳುವಂತೆ, “ಉದ್ಯಮದಲ್ಲಿ ಇಂದು ಗೂಗಲ್ ಮತ್ತು ಯೂಟ್ಯೂಬ್‌ನಲ್ಲಿ ಅನೇಕ ಶ್ರೇಷ್ಠ ಮಹಿಳೆಯರು ಇದ್ದಾರೆ. ಹೆಸರಿಸಲು ತುಂಬಾ ಜನರಿದ್ದಾರೆ ಆದರೆ ಅವರೆಲ್ಲ ದೊಡ್ಡ ಸ್ಪೂರ್ತಿಯ ಸೆಲೆಯಾಗಿದ್ದಾರೆ!”

ಸಮೈರಾ ಅವರ ಮುಂದಿನ ದಾರಿ

ಸಮೈರಾ ತಂತ್ರಜ್ಞಾನದ ಹೊರತಾಗಿ ಇತರ ಆಸಕ್ತಿಗಳನ್ನು ಸಹ ಹೊಂದಿದ್ದಾಳೆ. ಅವಳು ಸಕ್ರಿಯ ಬ್ಲಾಗ್ ಬರಹಗಾರ್ತಿ, ಗಾಯಕಿ ಮತ್ತು ಸಂಯೋಜಕಿ. ಐದು ವರ್ಷಗಳ ನಂತರ ಅವಳು, ಪ್ರೌಢಶಾಲೆಯಲ್ಲಿ ತನ್ನನ್ನು ತಾನು ಉನ್ನತ ಶಿಕ್ಷಣವನ್ನು ಪಡೆಯಲು ಸರಿಯಾದ ಕಾಲೇಜನ್ನು ಆಯ್ಕೆ ಮಾಡುವಲ್ಲಿ ಕೆಲಸ ಮಾಡುತ್ತಿರುವುದನ್ನು ಕಾಣಬಹುದು.


ಈ ಯುವ ಉದ್ಯಮಿ ಕೋಡರ್ ಬನ್ನಿಜ್ ಮತ್ತು ಕೋಡರ್ ಮೈಂಡ್ಜ್ ಜಾಗತಿಕ ಹೆಸರುಗಳನ್ನಾಗಿ ಮಾಡಲು ಬಯಸುತ್ತಾಳೆ.


ಒನ್ ಬಿಲಿಯನ್ ಕಿಡ್ಸ್ ಕ್ಯಾನ್ ಕೋಡ್’ ಎಲ್ಲಾ ಆರು ಖಂಡಗಳ ಎಲ್ಲಾ ಪ್ರಮುಖ ಪ್ರದೇಶಗಳು ಮತ್ತು ದೇಶಗಳಲ್ಲಿರುತ್ತದೆ. ಬೋರ್ಡ್ ಆಟಗಳು ಮತ್ತು ಸಾಮಾಜಿಕ ಒಳಿತಿಗಾಗಿ ನಾನು ಪ್ರಸ್ತುತ ಕೆಲವು ಹೊಸ ಆಲೋಚನೆಗಳ ಮೇಲೆ ಕೆಲಸ ಮಾಡುತ್ತಿದ್ದೇನೆ. ಮುಂದಿನ ಐದು ವರ್ಷಗಳಲ್ಲಿ ಅವರು ಸಮುದಾಯಕ್ಕೆ ಸಹಾಯ ಮಾಡುತ್ತಾರೆಂದು ನಾನು ಭಾವಿಸುತ್ತೇನೆ” ಎಂದು ಅವರು ಹೇಳುತ್ತಾರೆ.


ಅವಳು ತುಂಬಾ ಚಿಕ್ಕವಳು ಎಂದು ಭಾವಿಸುವ ಎಲ್ಲರಿಗೂ, ಸಮೈರಾ ಒಂದು ಮಾತನ್ನು ಹೇಳ ಬಯಸುತ್ತಾಳೆ,

ವಯಸ್ಸು ಕೇವಲ ಒಂದು ಸಂಖ್ಯೆ ಎಂದು ನಾನು ನಂಬುತ್ತೇನೆ. ನಿಮಗೆ ಒಂದು ಕಲ್ಪನೆ ಇದ್ದರೆ, ನಿಮ್ಮ ವಯಸ್ಸು ಎಷ್ಟೇ ಇರಲಿ, ಜಗತ್ತನ್ನು ಬದಲಾಯಿಸುವ ಶಕ್ತಿ ನಿಮಗೆ ಇದೆ.