ಆವೃತ್ತಿಗಳು
Kannada

ನೌಕಾಪಡೆಗೆ ಶಕ್ತಿ ಹೆಚ್ಚಿಸಿದ ಐಎನ್‍ಎಸ್ ಕದಮತ್

ಅಗಸ್ತ್ಯ

YourStory Kannada
28th Feb 2016
Add to
Shares
1
Comments
Share This
Add to
Shares
1
Comments
Share

ಭಾರತೀಯ ನೌಕಾ ಪಡೆಯಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ಐಎನ್‍ಎಸ್ ವಿರಾಟ್ ಯುದ್ಧ ನೌಕೆ ಈ ವರ್ಷದ ಅಂತ್ಯದಲ್ಲಿ ನಿವೃತ್ತಿ ಹೊಂದುತ್ತಿದೆ. ವಿರಾಟ್ ಸ್ಥಾನವನ್ನು ಸಮರ್ಥವಾಗಿ ತುಂಬಲು ಇದೀಗ ಮತ್ತೊಂದು ಯುದ್ಧನೌಕೆ ಸಿದ್ಧವಾಗಿದೆ. ಈಗಾಗಲೇ ನೌಕಾ ಪಡೆಯಲ್ಲಿ ಸೇವೆ ಸಲ್ಲಿಸಲು ಐಎನ್‍ಎಸ್ ಕದಮತ್ ಯುದ್ಧನೌಕೆ ಸೇರ್ಪಡೆಗೊಂಡಿದೆ.

image


ಪ್ರಪಂಚದ ಸೇನಾ ಪಡೆಗಳಲ್ಲಿಯೇ ವಿಶಿಷ್ಟ ಸ್ಥಾನ ಹೊಂದಿರುವ ಭಾರತೀಯ ನೌಕಾಪಡೆ ಇದೀಗ ಮತ್ತಷ್ಟು ಬಲಿಷ್ಠಗೊಂಡಿದೆ. ವಿರಾಟ್ ನಿವೃತ್ತಿ ನಂತರ ಪರ್ಯಾಯವೇನು ಎಂಬ ಪ್ರಶ್ನೆಗೆ ಉತ್ತರ ಹುಡುಕಿರುವ ಭಾರತೀಯ ನೌಕಾಪಡೆ ಐಎನ್‍ಎಸ್ ಕದಮತ್ ತನ್ನ ಸಾಮರ್ಥ್ಯ ತೋರಲು ಸಿದ್ಧತೆ ನಡೆಸಿದೆ.

ಮೇಕ್ ಇನ್ ಇಂಡಿಯಾ..!

ವಿರಾಟ್ ಮಾದರಿಯಲ್ಲಿಯೇ ಹಲವು ವೈಶಿಷ್ಟ್ಯವನ್ನು ಹೊಂದಿರುವ ಐಎನ್‍ಎಸ್ ಕದಮತ್ ಮೇಕ್ ಇನ್ ಇಂಡಿಯಾ ಯೋಜನೆ ಅಡಿ ತಯಾರಾದಂತಹದ್ದಾಗಿದೆ. ಸ್ವದೇಶಿ ನಿರ್ಮಿತ ಈ ಯುದ್ಧನೌಕೆ ಪಿ 28 ದರ್ಜೆಯನ್ನು ಹೊಂದಿದೆ. ನೌಕೆಯ ಹೊರಮೈ ನಿರ್ಮಾಣಕ್ಕೆ ಅತ್ಯುತ್ಕೃಷ್ಟ ದರ್ಜೆಯ ಉಕ್ಕು ಬಳಕೆ ಮಾಡಲಾಗಿದೆ. 109 ಮೀಟರ್ ಉದ್ದ, 13.7 ಮೀಟರ್ ಎತ್ತರದ ಈ ಯುದ್ಧನೌಕೆ 4 ಡೀಸೆಲ್​ ಎಂಜಿನ್‍ಗಳ ಸಾಮರ್ಥ್ಯದಲ್ಲಿ ಗಂಟೆಗೆ 25 ನಾಟಿಕಲ್​ ವೇಗದಲ್ಲಿ ಸಂಚರಿಸುತ್ತದೆ. ಲಕ್ಷದ್ವೀಪದಲ್ಲಿರುವ ಅತಿ ದೊಡ್ಡ ದ್ವೀಪವಾದ ಕದಮತ್‍ನ ಹೆಸರನ್ನು ಈ ಯುದ್ಧನೌಕೆಗೆ ಇಡಲಾಗಿದೆ.

ನೌಕಾ ಪಡೆ ಶಕ್ತಿ ಹೆಚ್ಚಿಸಿದ ಕದಮತ್

ಭಾರತೀಯ ನೌಕಾಪಡೆಗೆ ಐಎಸ್‍ಎಸ್ ಕದಮತ್ ಸೇರ್ಪಡೆಗೊಳ್ಳುವ ಆನೆಬಲ ಬಂದಂತಾಗಿದೆ. ಅಣ್ವಸ್ತ್ರ, ರಾಸಾಯನಿಕ ಮತ್ತು ಜೈವಿಕ ಅಸ್ತ್ರಗಳನ್ನು ಎದುರಿಸುವ ಸಾಮರ್ಥ್ಯ ಈ ಯುದ್ಧ ನೌಕೆಗಿದೆ. ಅದೇ ರೀತಿ ಸಮುದ್ರದ ನೀರಿನಾಳದಲ್ಲಿ ಸಂಚರಿಸುವ ಸಬ್‍ಮರೀನ್‍ಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಕದಮತ್ ಹೊಂದಿದೆ.

image


ಹಿಂದೆಯೇ ನೌಕಾ ಪಡೆಯಲ್ಲಿ ಸೇವೆ ಸಲ್ಲಿಸಿತ್ತು

ಐಎನ್‍ಎಸ್ ಕದಮತ್ ಪಿ 78 ನೌಕೆ 1968ರಿಂದ 1992ರವರೆಗೆ 24 ವರ್ಷಗಳ ಕಾಲ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿತ್ತು. ಆದರೆ ಹಿಂದಿನ ಕದಮತ್ ಹೆಸರಿನ ನೌಕೆ ಅಷ್ಟೇನು ಆಧುನಿಕ ಸೌಲಭ್ಯ ಹೊಂದಿರಲಿಲ್ಲ. ಈಗ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಸಿದ್ಧಪಡಿಸಲಾಗಿರುವ ಕದಮತ್ ಪಿ 28 ನೌಕೆ ಅತ್ಯಂತ ಸುಧಾರಿತ ಮತ್ತು ಆಧುನಿಕ ಸೌಲಭ್ಯಗಳನ್ನು ಹೊಂದಿದೆ. ಶತ್ರುಗಳ ವಿರುದ್ಧ ನೆಲ ಮತ್ತು ವಾಯುದಾಳಿ ನಡೆಸುವ ಸಾಮಥ್ರ್ಯ ಹೊಂದಿದೆ.

ಕದಮತ್ ವಿಶೇಷತೆಗಳು

ಸಂಪೂರ್ಣ ಸ್ವದೇಶಿ ನಿರ್ಮಿತವಾದ ಕದಮತ್ ಹಲವು ವಿಶೇಷತೆಗಳನ್ನು ಹೊಂದಿದೆ. ಸ್ವದೇಶದಲ್ಲಿ ನಿರ್ಮಿಸಲಾದ ಎರಡನೇ ಯುದ್ಧನೌಕೆ ಇದಾಗಿದೆ. ಕೊಲ್ಕತ್ತಾದ ನೇವಲ್ ಡಾಕ್​ಯಾರ್ಡ್​ನಲ್ಲಿ ಕದಮತ್ ನಿರ್ಮಾಣಗೊಂಡಿದೆ. ಹಾಗೆಯೇ ಕದಮತ್ ನೌಕೆ ಹೆಲಿಕಾಪ್ಟರ್ ಉಡಾವಣೆಗೆ ಅನುಕೂಲಕರವಾಗಬಲ್ಲ ಹ್ಯಾಂಗರ್ ಡೋರ್ ಹೊಂದಿದೆ. ಇನ್ನು ಬಿಇಎಲ್ ನಿರ್ಮಿತ ಮಧ್ಯಮ ರೇಂಜ್‍ನ 3ಡಿ ರಾಡಾರ್, 100 ಕಿ.ಮೀ. ದೂರದಲ್ಲಿರುವ ಟಾರ್ಗೆಟ್ ಗುರುತಿಸುವ ಸಾಮರ್ಥ್ಯ , ಕ್ಷಿಪಣಿ ಮತ್ತು ರಾಕೆಟ್‍ಗಳ ಉಡಾವಣೆ ಮತ್ತು ಸಬ್‍ಮರೀನ್ ನಿರೋಧಕ ಕಾಪ್ಟರ್‍ಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ನೂತನ ಆಧುನಿಕ ಯುದ್ಧನೌಕೆಗಿದೆ. ಈ ನೌಕೆಯ ನಿರ್ವಹಣೆ ಮತ್ತು ನಿಯಂತ್ರಣಕ್ಕೆ 13 ಅಧಿಕಾರಿಗಳು, 180 ನೌಕಾ ಪಡೆ ಸೈನಿಕರ ನಿಯೊಜನೆ ಮಾಡಲಾಗಿದೆ.

ವಿರಾಟ್‍ನ ಸ್ಥಾನ ತುಂಬಿದ ಕದಮತ್

ಭಾರತೀಯ ನೌಕಾಪಡೆಯ ಎರಡನೇ ದೊಡ್ಡ ಸೇನಾ ನೌಕೆಯಾಗಿದ್ದ ವಿರಾಟ್ ಈ ವರ್ಷಾಂತ್ಯಕ್ಕೆ ನಿವೃತ್ತಿ ಹೊಂದುತ್ತಿದೆ. ಕಳೆದ ತಿಂಗಳು ವಿಶಾಖಪಟ್ಟಣಂನಲ್ಲಿ ನಡೆದ ಅಂತಾರಾಷ್ಟ್ರೀಯ ಫ್ಲೀಟ್ ರಿವ್ಯೂನಲ್ಲಿ ಪಾಲ್ಗೊಂಡು ತನ್ನ ಗಮ್ಯದತ್ತ ವಾಪಾಸಾಗುತ್ತಿದೆ. ದೇಶದ ಮೊದಲ ವಿಮಾನವಾಹ ಯುದ್ಧನೌಕೆ ಐಎನ್‍ಎಸ್ ವಿಕ್ರಾಂತ್ ನಿವೃತ್ತಿ ನಂತರ ಅದರ ಸ್ಥಾನ ತುಂಬಿದ್ದು ಐಎನ್‍ಎಸ್ ವಿರಾಟ್. ಈಗ ಐಎನ್‍ಎಸ್ ವಿರಾಟ್ ಸ್ಥಾನ ತುಂಬುತ್ತಿರುವುದು ಕದಮತ್.

Add to
Shares
1
Comments
Share This
Add to
Shares
1
Comments
Share
Report an issue
Authors

Related Tags