ಆವೃತ್ತಿಗಳು
Kannada

ಟ್ರಾಫಿಕ್ ಬಗ್ಗೆ ಟೆನ್ಷನ್ ಬಿಟ್ಟುಬಿಡಿ- ಹೊಸ ಸಾರಿಗೆ ವ್ಯವಸ್ಥೆಗೆ ಯೋಜನೆ ರೂಪಿಸಿದೆ ಬಿಬಿಎಂಪಿ

ಟೀಮ್​ ವೈ.ಎಸ್​. ಕನ್ನಡ

16th May 2017
Add to
Shares
7
Comments
Share This
Add to
Shares
7
Comments
Share

ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಬಗ್ಗೆ ಎಲ್ಲರಿಗೂ ಗೊತ್ತಿದೆ. ಒಂದೆರಡು ಕಿಲೋಮೀಟರ್​ಗಳ ಪ್ರಯಾಣವೇ ಕೆಲವೊಮ್ಮೆ ಸಾಕಪ್ಪಾ, ಸಾಕು ಅನ್ನುವಷ್ಟರ ಮಟ್ಟಿಗೆ ಟ್ರಾಫಿಕ್ ಸಮಸ್ಯೆ ಇರುತ್ತದೆ. ಇನ್ನು ಪ್ರತಿನಿತ್ಯ ಕಿಲೋಮೀಟರ್ ಗಟ್ಟಲೆ ಪ್ರಯಾಣ ಮಾಡುವ ಬೆಂಗಳೂರಿಗರ ಪರಿಸ್ಥಿತಿ ಹೇಗಿರಬಹುದು ಅನ್ನೋದನ್ನ ನೀವೇ ಊಹಿಸಿಕೊಳ್ಳಿ. ಬೆಂಗಳೂರಿನ ಟ್ರಾಫಿಕ್ ನಿಯಂತ್ರಣಕ್ಕೆ ಸರಕಾರ ಸಾಕಷ್ಟು ಸರ್ಕಸ್​ಗಳನ್ನು ಮಾಡುತ್ತಿದೆ. ಹೊಸ ಹೊಸ ಯೋಜನೆಗಳನ್ನು ರೂಪಿಸಿದೆ. ಆದ್ರೆ ಫಲಿತಾಂಶದಲ್ಲಿ ಮಾತ್ರ ಏರುಪೇರಾಗಿಲ್ಲ. ಟ್ರಾಫಿಕ್ ಸಮಸ್ಯೆ ಬಗೆಹರಿದಿಲ್ಲ.

image


ಬೆಂಗಳೂರಿಗರ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಈಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ. ಬಿಬಿಎಂಪಿ ಪರ್ಸನಲ್ Rapid ಟ್ರಾನ್ಸಿಟ್ ಸಿಸ್ಟಮ್ ಅಥವಾ Pod Taxis ಪ್ಲಾನಿಂಗ್ ಮಾಡಲು ಚಿಂತನೆ ನಡೆಸಿದೆ. ಈ ಮೂಲಕ ಐಟಿ ಕ್ಯಾಪಿಟಲ್ ನಲ್ಲಿರುವ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಹುಡುಕುವ ಯತ್ನದಲ್ಲಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾಗಲಿರುವ ಪಿಆರ್​ಟಿ ಕೇಬಲ್ ಕಾರು ಸ್ವರೂಪದಲ್ಲಿ ಇರಲಿದೆ. ಈ ವ್ಯವಸ್ಥೆ ಮೂಲಕ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಪ್ರಯಾಣಿಕರನ್ನು ಕೊಂಡೊಯ್ಯಬಹುದು.

“ ಬೆಂಗಳೂರು ನಗರಕ್ಕಾಗಿ ಈ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆ ಅಧಿಕೃತವಾಗಿ ಚಾಲನೆಗೊಂಡ ಆರು ತಿಂಗಳ ಒಳಗೆ ಪ್ರಯಾಣಿಕರ ಪ್ರಯಾಣಕ್ಕೆ ಸಿಗಲಿದೆ. ಕೆಲವು ಆಯ್ದ ಪ್ರದೇಶಗಳಲ್ಲಿ ಮಾತ್ರ ಈ ಸೇವೆ ಆರಂಭವಾಗುವುದರಿಂದ ಹಲವರಿಗೆ ಇದರ ನೆರವು ಸಿಗಲಿದೆ. ಈಗಾಗಲೇ ಹಲವು ಕಂಪನಿಗಳು ಈ ಯೋಜನೆ ಬಗ್ಗೆ ಆಸಕ್ತಿ ವಹಿಸಿವೆ. ಆಟೋ ರಿಕ್ಷಾಕ್ಕಿಂತ ಕಡಿಮೆ ದರದಲ್ಲಿ ಸೇವೆ ಒದಗಿಸುವ ಕನಸಿದೆ. ”
- ಮಂಜುನಾಥ್ ಪ್ರಸಾದ್, ಬಿಬಿಎಂಪಿ ಕಮಿಷನರ್

ನಗರದ ವಿವಿಧ ಭಾಗಗಳಲ್ಲಿ ಈ ವ್ಯವಸ್ಥೆ ಆರಂಭವಾಗಲಿದ್ದು, ಒಟ್ಟು ಆರು ಹಂತಗಳಲ್ಲಿ ಸುಮಾರು 35.5 ಕಿಲೋಮೀಟರ್ ವ್ಯಾಪ್ತಿಯಲ್ಲಿ ಪಿಆರ್​ಟಿ ವ್ಯವಸ್ಥೆ ಇರಲಿದೆ. ಕೇಬಲ್ ಕಾರ್ ರೀತಿಯ ವಾಹನ ಇದಾಗಿದ್ದು, ಸಂಪೂರ್ಣವಾಗಿ ಆಟೋಮೆಟಿಕ್ ವ್ಯವಸ್ಥೆಯನ್ನು ಹೊಂದಿರಲಿದೆ. ಅಷ್ಟೇ ಅಲ್ಲ ಕೆಲವೇ ಕೆಲವು ಪ್ರಯಾಣಿಕರನ್ನು ಮಾತ್ರ ಇದು ಹೊತ್ತೊಯ್ಯಬಲ್ಲದು.

ಎಲ್ಲಿಂದ ಎಲ್ಲಿಗೆ..?

ಮೊದಲ ಹಂತ: ಎಂ.ಜಿ. ರೋಡ್ ಮೆಟ್ರೋ ಸ್ಟೇಷನ್​ನಿಂದ, ಲೀಲಾ ಪ್ಯಾಲೇಸ್ ಜಂಕ್ಷನ್- ಒಟ್ಟು 4 ಕಿಲೋ ಮೀಟರ್ ದೂರ

2ನೇ ಹಂತ: ಲೀಲಾ ಪ್ಯಾಲೇಸ್ ಜಂಕ್ಷನ್​ನಿಂದ ಮಾರತಹಳ್ಳಿ ಜಂಕ್ಷನ್- 6 ಕಿಲೋಮೀಟರ್ ದೂರ

3ನೇ ಹಂತ: ಮಾರತ ಹಳ್ಳಿ ಜಂಕ್ಷನ್​ನಿಂದ ಇಪಿಐಪಿ ವೈಟ್​ಫೀಲ್ಡ್​ , 6.5 ಕಿಲೋಮಿಟರ್ ದೂರ

4ನೇ ಹಂತ: ಎಂ.ಜಿ.ರೋಡ್ ಮೆಟ್ರೋ ಸ್ಟೇಷನ್​ನಿಂದ ಕೋರಮಂಗಲ, ಏಳು ಕಿಲೋಮೀಟರ್ ದೂರ

5ನೇ ಹಂತ: ಜಯನಗರ 4ನೇ ಹಂತದಿಂದ ಜೆ.ಪಿ.ನಗರ 6ನೇ ಹಂತದ ತನಕ- 5.3 ಕಿಲೋಮೀಟರ್ ದೂರ

6ನೇ ಹಂತ: ಸೋನಿ ಜಂಕ್ಷನ್​ನಿಂದ ಇಂದಿರಾನಗರ ಮೆಟ್ರೋ ಸ್ಟೇಷನ್ ತನಕ- 6.7 ಕಿಲೋಮೀಟರ್ ದೂರ

ಈ ಕೇಬಲ್ ಕಾರ್ ವ್ಯವಸ್ಥೆಯೂ ಸಂಪೂರ್ಣವಾಗಿ ಸೊಲಾರ್ ಶಕ್ತಿಯಿಂದ ನಡೆಯಲಿದೆ. ಮೆಟ್ರೋಗಿಂತ ಕಡಿಮೆ ಖರ್ಚು, ಕಡಿಮೆ ಸಮಯ ಹಾಗೂ ಕಡಿಮೆ ಸ್ಥಳಾವಕಾಶದಲ್ಲಿ ಇದನ್ನು ಮಾಡಬಹುದು. ಅಷ್ಟೇ ಅಲ್ಲ ಕೇವಲ ಆರರಿಂದ 8 ತಿಂಗಳ ಒಳಗೆ ಪ್ರಾಜೆಕ್ಟ್ ಸಂಪೂರ್ಣಗೊಳ್ಳಲಿದೆ. ಒಟ್ಟಿನಲ್ಲಿ ಬೆಂಗಳೂರಿನ ಸಂಪರ್ಕ ವ್ಯವಸ್ಥೆಗೆ ಮತ್ತೊಂದು ಸಾರಿಗೆ ವ್ಯವಸ್ಥೆ ಸೇರಿಕೊಳ್ಳಲಿದೆ. 

ಇದನ್ನು ಓದಿ:

1. ಊರಿನ ಜನರೆಲ್ಲಾ ಒಂದಾದ್ರು- ಕಲುಷಿತಗೊಂಡಿದ್ದ ನದಿಯನ್ನು ಶುಚಿಗೊಳಿಸಿದ್ರು..!

2. ಸೊಲಾರ್​ ಉತ್ಪನ್ನಗಳಿಗೆ ಮಾರುಕಟ್ಟೆಯ ಸೃಷ್ಟಿ- ಭವಿಷ್ಯದ ಕನಸು ಕಾಣ್ತಿದೆ "ಸೊಲ್​ಟ್ರಿಕ್ಸ್​​"

3. ಸಿಲಿಕಾನ್​ ಸಿಟಿಯಲ್ಲಿ ಟ್ರಾಂಪೋಲಿನ್​ ಟ್ರೆಂಡ್​- ಬೆಂಗಳೂರಿನಲ್ಲಿದೆ ಅತಿ ದೊಡ್ಡ ಪ್ಲೇ ಸ್ಟೇಷನ್​..! 

Add to
Shares
7
Comments
Share This
Add to
Shares
7
Comments
Share
Report an issue
Authors

Related Tags