ಆವೃತ್ತಿಗಳು
Kannada

ಬರಿ ಕಾಲಲ್ಲೇ ಓಡಿ, ಚಿನ್ನ ಗೆದ್ದ ಭಾರತದ ಬಂಗಾರ..!

ಟೀಮ್​ ವೈ.ಎಸ್​. ಕನ್ನಡ

YourStory Kannada
17th Jul 2017
Add to
Shares
4
Comments
Share This
Add to
Shares
4
Comments
Share

ಆಕೆಗೆ ಆಗ ಕೇವಲ 12 ವರ್ಷ ವಯಸ್ಸು. ಶಾಲೆಯ ಫಿಸಿಕಲ್ ಟೀಚರ್ ಆಕೆಯಲ್ಲಿದ್ದ ಅತ್ಯುತ್ತಮ ಅಥ್ಲೀಟ್ ಒಬ್ಬಳನ್ನು ಗುರುತಿಸಿದ್ರು. ಪಿ,ಟಿ. ಮಾಸ್ಟರ್​​ ಆಕೆಗೆ ಆ ಕುಗ್ರಾಮದ ಶಾಲೆಯಲ್ಲಿ ಸಾಧ್ಯವಿರುವ ಎಲ್ಲಾ ತರಬೇತಿಗಳನ್ನು ನೀಡಿದ್ರು. ಆಕೆಗೂ ಬಡತನ ಕಿತ್ತು ತಿನ್ನುತ್ತಿತ್ತು. ಅದೆಷ್ಟರ ಮಟ್ಟಿಗೆ ಬಡತನ ಅಂದರೆ, ಟ್ರ್ಯಾಕ್ ನಲ್ಲಿ ಓಡಲು ಒಂದು ಜೊತೆ ಶೂ ಖರೀದಿಸುವ ತಾಕತ್ತು ಕೂಡ ಇರಲಿಲ್ಲ. ಆದ್ರೆ ಆಕೆ ಹಠವನ್ನು ಬಿಡಲಿಲ್ಲ. ಬರಿಗಾಲಿನಲ್ಲೇ ಟ್ರ್ಯಾಕ್ ಮೇಲೆ ಓಡಿ ಸಾಹಸ ಮಾಡಿದ್ದಳು.

image


ಈ ಅದ್ಭುತ ಸಾಧನೆ ಮಾಡಿದ ಅಥ್ಲೀಟ್ ಹೆಸರು ಪಿ.ಯು.ಚಿತ್ರಾ. ಚಿತ್ರಾ ಈಗ "ಕ್ವೀನ್ ಆಫ್ ಏಷಿಯಾ ಇನ್ ದಿ ಮೈಲ್" ಅನ್ನುವ ಖ್ಯಾತಿ ಪಡೆದುಕೊಂಡಿದ್ದಾರೆ. ಚಿತ್ರಾ ಇತ್ತೀಚೆಗೆ ಭುಬನೇಶ್ವರದಲ್ಲಿ ನಡೆದ 22ನೇ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ 1500 ಮೀಟರ್ ಓಟದಲ್ಲಿ ಚಿನ್ನ ಗೆದ್ದ ಸಾಧನೆ ಮಾಡಿದ್ದರು. ಅಥ್ಲೆಟಿಕ್ ಕೂಟದಲ್ಲಿ 1500 ಮೀಟರ್ ರೇಸ್ ಗೆಲ್ಲುವುದು ಅಂದರೆ, ಅದು ಸುಲಭದ ಮಾತಲ್ಲ. ಅಷ್ಟೇ ಅಲ್ಲ ಅತೀ ಕಠಿಣ ಸ್ಪರ್ಧೆಗಳ ಪೈಕಿ ಇದು ಕೂಡ ಒಂದಾಗಿದೆ.

ಇದನ್ನು ಓದಿ: ಭಾರತದ 6 ಸುಪ್ರಸಿದ್ಧ ಉದ್ಯಮಿಗಳು ಇವರು..!

ಚಿತ್ರಾ ಕೂಟದಲ್ಲಿ ಎಲ್ಲಾ ನಿರೀಕ್ಷೆಗಳನ್ನು ಉಲ್ಟಾ ಮಾಡಿದ್ದರು. ಅಷ್ಟೇ ಅಲ್ಲ ಭಾರತಕ್ಕೆ ಚಿನ್ನ ಗೆದ್ದು ಕೊಟ್ಟ ಸಾಧನೆ ಮಾಡಿದ್ರು. 1500 ಮೀಟರ್ ದೂರವನ್ನು ಕೇವಲ 4.17.92 ನಿಮಿಷಗಳಲ್ಲಿ ಓಡಿ ಮುಗಿಸಿದ ಚಿತ್ರಾ ಬಂಗಾರದ ಸಾಧನೆ ಮಾಡಿದ್ರು. ಅಷ್ಟೇ ಅಲ್ಲ ತನ್ನ ಬೆಸ್ಟ್ ರೆಕಾರ್ಡ್ ಅನ್ನು 7 ಸೆಕೆಂಡ್ಸ್ ನಿಂದ ಉತ್ತಮಗೊಳಿಸಿದ್ರು.

“ನಾನು ಟ್ರ್ಯಾಕ್​ಗೆ ಇಳಿಯುವ ಮುನ್ನ ಕೇವಲ ಪದಕದ ಆಸೆ ಮಾತ್ರ ಇತ್ತು. ಆದ್ರೆ ಫೈನಲ್ ನಲ್ಲಿ 250 ಮೀಟರ್ ದೂರ ಉಳಿದಿರುವಂತೆಯೇ, ನನಗೆ ಗೆಲ್ಲುವ ಉತ್ಸಾಹ ಹೆಚ್ಚಾಯಿತು. ಎಲ್ಲರಿಗಿಂತ ಮುಂದೆ ಓಡಿ, ಬಂಗಾರ ಗೆದ್ದುಕೊಂಡೆ. "ಕ್ವೀನ್ ಆಫ್ ಏಷಿಯಾ ಇನ್ ದಿ ಮೈಲ್" ಅಂತ ಕರೆಸಿಕೊಳ್ಳುತ್ತಿರುವುದಕ್ಕೆ ನನಗೆ ಹೆಮ್ಮೆಯಾಗುತ್ತಿದೆ. ”
- ಚಿತ್ರಾ, ಅಥ್ಲೀಟ್

ಏಷ್ಯನ್ ಸ್ಕೂಲ್ ಚಾಂಪಿಯನ್ ಶಿಪ್ ಗೆದ್ದ ಚಿತ್ರಾಗೆ ಕೇರಳ ಸರಕಾರ 2 ಕಾರುಗಳನ್ನು ಉಡುಗೊರೆಯಾಗಿ ನೀಡಿದೆ. ಆದ್ರೆ ಆಕೆಗೆ ಬೇರೆಯೇ ಕನಸುಗಳಿವೆ. ಹೊಟ್ಟೆ ತುಂಬಿಸಬಲ್ಲ ಉದ್ಯೋಗದ ಅವಶ್ಯಕತೆ ಇದೆ. ಕೃಷಿಯಲ್ಲಿ ನಿರತರಾಗಿರುವ ಪೋಷಕರು, ಸಾಕಷ್ಟು ಕಷ್ಟ ಪಡುತ್ತಿದ್ದಾರೆ. ಅವರಿಗೆ ನೆರವಾಗುವ ಕನಸು ಕೂಡ ಚಿತ್ರಾಗಿದೆ. ಚಿತ್ರಾ ಕೇರಳದ ಪಲಕ್ಕಾಡ್ ಜಿಲ್ಲೆಯ ಮುನ್ರಾಡ್ ಗ್ರಾಮದವರು. 4 ಮಕ್ಕಳ ಪೈಕಿ ಚಿತ್ರಾ ಕೂಡ ಒಬ್ಬರು. ಚಿತ್ರಾ ಪೋಷಕರು ದಿನಗೂಲಿ ನೌಕರರು ಕೂಡ ಆಗಿದ್ದಾರೆ.

ಸಾಮಾನ್ಯವಾಗಿ ಅಥ್ಲೀಟ್ ಗಳು ಈ ರೀತಿಯ ಸಾಧನೆ ಮಾಡಿದ ಬಳಿಕ ಒಂದು ವಾರ ಅಥವಾ 15 ದಿನ ಸುದ್ದಿಯಲ್ಲಿರುತ್ತಾರೆ. ಆದ್ರೆ ನಿಧಾನವಾಗಿ ಭಾರತೀಯರು ಕ್ರಿಕೆಟ್ ಮತ್ತು ಕ್ರಿಕೆಟರ್ ಗಳ ಬಗ್ಗೆ ಹೆಚ್ಚು ಯೋಚನೆ ಮಾಡಿ ಇವರನ್ನು ಮರೆತುಬಿಡುತ್ತಾರೆ. ಎಲ್ಲಿ ತನಕ ಕ್ರಿಕೆಟ್ ಅನ್ನು ಮಾತ್ರ ಕ್ರೀಡೆ ಎಂದು ಪರಿಗಣಿಸಲಾಗುತ್ತದೋ ಅಲ್ಲಿ ತನಕ ಇತರೆ ಕ್ರೀಡೆಗಳಲ್ಲಿ ಇಂತಹ ಕಥೆಗಳು ಕೇಳುವುದು ಸಾಮಾನ್ಯವಾಗಿಬಿಟ್ಟಿದೆ. 

ಇದನ್ನು ಓದಿ:

1. ಶಿಕ್ಷಣಕ್ಕೆ ಸಿಕ್ಕಿದೆ ಹೊಸ ಅವತಾರ- ಪ್ರಾಕ್ಟೀಕಲ್​ನಲ್ಲೇ ಅಡಗಿದೆ ಭವಿಷ್ಯ..!

2. ಆರೋಗ್ಯಕ್ಕೆ ಹಾನಿಕಾರಕವಾಗಿದ್ದರೂ ಡೋಂಟ್ ಕೇರ್, ತಂಬಾಕು ಸೇವನೆಗೆ ಇನ್ನೂ ಸಿಕ್ಕಿಲ್ಲ ಮುಕ್ತಿ..! 

3. ನಿರಾಶ್ರಿತರ ಪಾಲಿಗೆ ಸಂಜೀವಿನಿ- 5 ಲಕ್ಷಕ್ಕೂ ಅಧಿಕ ಜನರ ಹಸಿವು ತಣಿಸಿದ "ಯಂಗೀಸ್ತಾನ್"

Add to
Shares
4
Comments
Share This
Add to
Shares
4
Comments
Share
Report an issue
Authors

Related Tags