10 ನೇ ತರಗತಿ ಪರೀಕ್ಷೆ ಬರೆಯಲು ಸಿದ್ಧನಾದ ಮಣಿಪುರದ 12 ವರ್ಷದ ಬಾಲಕ

ಐಕ್ಯೂ ಸ್ಕೋರ್ 141 ಹೊಂದಿರುವ ಮಣಿಪುರದ 12 ವರ್ಷದ ಬಾಲಕ ಐಸಾಕ್ ಪೌಲುಂಗ್‌ಮುವಾನ್ ಅತಿ ಕಿರಿಯವಯಸ್ಸಿನಲ್ಲಿಯೇ ಹತ್ತನೇ ತರಗತಿ ಮಂಡಳಿ ಪರೀಕ್ಷೆ ಬರೆಯಲು ಸಜ್ಜಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

4th Dec 2019
  • +0
Share on
close
  • +0
Share on
close
Share on
close
q

ಸಾಂಕೇತಿಕ ಚಿತ್ರ

ಚುರಾಚಂದಪುರ ಜಿಲ್ಲೆಯ ಮೌಂಟ್ ಆಲಿವ್ ಶಾಲೆಯ ವಿದ್ಯಾರ್ಥಿ ಐಸಾಕ್ ಪೌಲುಂಗ್‌ಮುವಾನ್ 2020 ರಲ್ಲಿ ತನ್ನ ಹೈಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ ಪರೀಕ್ಷೆಗೆ (ಎಚ್ಎಸ್‌ಎಲ್‌ಸಿ) ಕುಳಿತುಕೊಳ್ಳಲಿದ್ದಾರೆ.


ಬೋರ್ಡ್ ಪರೀಕ್ಷೆಯಲ್ಲಿ ಹಾಜರಾಗಲು ಸರ್ಕಾರದ ಅನುಮತಿ ಪಡೆಯಲು ಅವರು ಮನೋವಿಜ್ಞಾನದ ಪರೀಕ್ಷೆಯನ್ನು ಎದುರಿಸಬೇಕಾಯಿತು ಎಂದು ಅಧಿಕಾರಿ ವಿವರಿಸಿದರು.


ಮಣಿಪುರದ ಪ್ರೌಢಶಿಕ್ಷಣ ಮಂಡಳಿಯ ಕಾರ್ಯದರ್ಶಿ ಚಿತುಂಗ್ ಮೇರಿ ಥಾಮಸ್ ಅವರು ನೀಡಿದ ಹೇಳಿಕೆಯ ಪ್ರಕಾರ, ನಿಯಮಗಳ ಪ್ರಕಾರ 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಿದ್ಯಾರ್ಥಿಗಳಿಗೆ 10 ನೇ ತರಗತಿ ಬೋರ್ಡ್ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶವಿಲ್ಲ. ಆದರೆ ಪೌಲುಂಗ್‌ಮುವಾನ್‌ ಪ್ರಕರಣವು ವಿಶೇಷವಾಗಿದೆ.


ಮೌಂಟ್ ಆಲಿವ್ ಶಾಲೆಯ ಸಂಸ್ಥಾಪಕರಲ್ಲಿ ಒಬ್ಬರಾದ ಬಾಲಕನ ತಂದೆ ಗೆನ್ಖೋಲಿಯನ್ ವೈಫೈಯಿ, ಬಾಲಕನ ವಯಸ್ಸನ್ನು 15 ಕ್ಕೆ ಬದಲಾಯಿಸುವಂತೆ ಅಧಿಕಾರಿಗಳು ಮೊದಲಿಗೆ ಸೂಚಿಸಿದ್ದರು ಎಂದು ಹೇಳಿದರು.


"ಆದರೆ ನನ್ನ ಮಗನು ತನ್ನ ನಿಜವಾದ ಜನ್ಮ ದಿನಾಂಕವನ್ನು ಬಳಸಿಕೊಂಡು 2020 ರಲ್ಲಿ ಎಚ್ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡುವಂತೆ ನಾನು ಶಿಕ್ಷಣ ನಿರ್ದೇಶಕರಿಗೆ ಅರ್ಜಿಯನ್ನು ಸಲ್ಲಿಸಿದ್ದೆ. ನಂತರ ಹೆಚ್ಚಿನ ಮಾಹಿತಿಗಾಗಿ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಲುವಾಗಿ ಈ ವಿಷಯವನ್ನು ಶಿಕ್ಷಣ ಆಯುಕ್ತರಿಗೆ ಕಳುಹಿಸಲಾಯಿತು," ಎಂದು ವೈಫೈಯಿ ಹೇಳುತ್ತಾರೆ.


ಈ ಕುರಿತು ಯೋಚಿಸಿದ ಶಿಕ್ಷಣ ಆಯುಕ್ತರು, ತಮ್ಮ ಕಡೆಯಿಂದ ಇಂಫಾಲ್‌ನ ಪ್ರಾದೇಶಿಕ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಬಾಲಕನ ಸೈಕಾಲಾಜಿ ಪರೀಕ್ಷೆ ನಡೆಸುವಂತೆ ಆದೇಶಿಸಿದ್ದರು ಎಂದು ಅವರು ಹೇಳಿದರು.


ಪೌಲುಂಗ್‌ಮುವಾನ್ ಪರೀಕ್ಷೆಯ ನಂತರ ಅವರ ಐಕ್ಯೂ ಮಟ್ಟ 141 ಮತ್ತು ಮಾನಸಿಕ ವಯಸ್ಸು 17 ವರ್ಷ ಮತ್ತು 5 ತಿಂಗಳು ಎಂದು ತಿಳಿದು ಬಂದಿತು, ಅದರ ನಂತರ ಸರ್ಕಾರವು ಅವರ ಪ್ರಕರಣವನ್ನು ಅಂಗೀಕರಿಸಿ, ಪರೀಕ್ಷೆ ಬರೆಯಲು ಅನುಮತಿ ನೀಡಿತು ಎಂದು ವೈಫೈಯಿ ಹೇಳಿದರು.


10 ನೇ ತರಗತಿ ಬೋರ್ಡ್ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಲಾಗಿದೆ ಎಂದು ಸಂತೋಷಗೊಂಡ ಬಾಲಕ, ದೇಶದ ಕಿರಿಯ ಐಎಎಸ್ ಅಧಿಕಾರಿಯಾಗುವ ಮೂಲಕ ಮತ್ತೊಂದು ದಾಖಲೆ ನಿರ್ಮಿಸಲು ಬಯಸುತ್ತೇನೆ ಎಂದು ಪಿಟಿಐಗೆ ಹೇಳಿದ್ದಾರೆ.

"ನನ್ನ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಬೇಕೆಂದು ನಾನು ಭಾವಿಸುತ್ತೇನೆ. ಇಂಗ್ಲೀಷ್ ಮತ್ತು ಸಾಮಾಜಿಕ ವಿಜ್ಞಾನಗಳು ನನಗೆ ತುಂಬಾ ಇಷ್ಟದ ವಿಷಯವಾಗಿದೆ. ದೇಶದ ಕಿರಿಯ ಐಎಎಸ್ ಅಧಿಕಾರಿಯಾಗಲು ನಾನು ಕಾಯುತ್ತಿದ್ದೇನೆ" ಎಂದು ಅವರು ಹೇಳಿದರು.

How has the coronavirus outbreak disrupted your life? And how are you dealing with it? Write to us or send us a video with subject line 'Coronavirus Disruption' to editorial@yourstory.com

  • +0
Share on
close
  • +0
Share on
close
Share on
close

Our Partner Events

Hustle across India