ಆವೃತ್ತಿಗಳು
Kannada

ಭಾರತದ ಪರಿಪೂರ್ಣ ಜವಳಿ ಉದ್ಯಮ ತಾಣ ಕರ್ನಾಟಕ

Team YS

30th Jan 2016
Add to
Shares
0
Comments
Share This
Add to
Shares
0
Comments
Share

ರಾಜ್ಯದ ಪ್ರಮುಖ ಜವಳಿ ಕ್ಷೇತ್ರದ ಸಾಧನೆಗಳು

• ಇಡೀ ರಾಷ್ಟ್ರದ ಸಿದ್ಧ ಉಡುಪು ತಯಾರಿಕಾ ಉದ್ಯಮದಲ್ಲೇ ಶೇ.20 ರಷ್ಟು ಉತ್ಪಾದನೆ ಕರ್ನಾಟಕವೇ ಉತ್ಪಾದನೆ ಮಾಡುತ್ತದೆ. ಇದರಲ್ಲಿ ಶೇ.6 ರಷ್ಟು ಹತ್ತಿ, ಶೇ.65 ರಷ್ಟು ಕಚ್ಛಾ ರೇಷ್ಮೆ ಮತ್ತು ಶೇ.12 ರಷ್ಟು ಉಣ್ಣೆಯ ಉತ್ಪಾದನೆ ನಮ್ಮ ರಾಜ್ಯದ್ದು ಎಂಬುದು ನಮ್ಮ ಹೆಮ್ಮೆ.

• ದೇಶದಲ್ಲೇ ಏಕೈಕ ರೇಷ್ಮೆ ಉತ್ಪಾದನೆ ತಂತ್ರಜ್ಞಾನ ಅಭಿವೃದ್ಧಿ ಮತ್ತು ಸಂಶೋಧನೆ ಸಂಸ್ಥೆ ಕರ್ನಾಟಕದ ಸಿಎಸ್‍ಟಿಆರ್‍ಐ. ನಮ್ಮ ರಾಜ್ಯವೊಂದರಲ್ಲಿಯೇ 1162 ರೇಷ್ಮೆ ಉದ್ದಿಮೆ ತರಬೇತಿ ಸಂಸ್ಥೆಗಳಿವೆ. ಈಗಾಗಲೇ1,60,000 ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುವುದು ಈ ಸಂಸ್ಥೆಯ ಹೆಗ್ಗಳಿಕೆ.

image


ಜವಳಿ ಉದ್ದಿಮೆಯಲ್ಲಿ ಕೈಗಾರಿಕೆಯ ಭೂಪಟದಲ್ಲಿ ಕರ್ನಾಟಕ ತನ್ನದೇ ಆದ ಕೊಡುಗೆ ನೀಡಿದೆ. ಉದ್ಯೋಗ ನೀಡುವುದು, ಮತ್ತು ಜವಳಿ ಉತ್ಪನ್ನಗಳನ್ನು ರಫ್ತು ಮಾಡುವುದು ಈ ಸಾಧನೆಗೆ ಮೆಟ್ಟಿಲುಗಳು. ಉದ್ಯೋಗ ಸೃಷ್ಟಿಯಲ್ಲೇ ಕೃಷಿಯ ನಂತರ ಈ ವಲಯವೇ ಪ್ರಮುಖ ಕೊಡುಗೆ ನೀಡಿದೆ. ದೇಶದ ಅಭಿವೃದ್ಧಿ ಸೂಚ್ಯಾಂಕಕ್ಕೆ ಜವಳಿ ಉದ್ಯಮ ಶೇ.0.50 ಕೊಡುಗೆ ನೀಡಿದರೂ, ಒಟ್ಟಾರೆ ಆದಾಯದಲ್ಲಿ ಅಂದಾಜು 1.5 ಮಿಲಿಯನ್ ಅಮೇರಿಕನ್ ಡಾಲರ್ ಕೊಡುಗೆಯನ್ನು ನೀಡಿದೆ. ಇಡೀ ರಾಜ್ಯದಲ್ಲೇ 5 ಲಕ್ಷ ಕುಶಲಕರ್ಮಿಗಳಿಗೆ ಉದ್ಯೋಗ ನೀಡಿರುವ ದೊಡ್ಡ ವಲಯವೇ ಜವಳಿ ಉದ್ಯಮವಾಗಿದೆ.

ಸಿದ್ಧ ಜವಳಿ ರಾಜಧಾನಿ: ಪ್ರಮುಖ ಸಿದ್ಧ ಉಡುಪುಗಳ ಉದ್ದಿಮೆಗಳಿಗೆ ಬಹು ನೆಚ್ಚಿನ ತಾಣವಾಗಿರುವ ಕರ್ನಾಟಕ ಭಾರತದ ಸಿದ್ಧ ಉಡುಪಗಳ ರಾಜಧಾನಿ ಎಂದೇ ಹೆಸರಾಗಿದೆ. ಇದಕ್ಕೆ ಕಾರಣವೂ ಇದೆ, ಇಡೀ ದೇಶದಲ್ಲೇ 70 ಕ್ಕೂ ಬೃಹತ್ ಮತತ್ತು ಮಧ್ಯಮ ಗಾತ್ರದ ಜವಳಿ ಉದ್ದಿಮೆಗಳು ಇರುವುದು ಇಲ್ಲಿಯೇ. ರಾಜ್ಯದಲ್ಲಿಯೇ 50,000 ಜವಳಿ ಘಟಕಗಳು ಸ್ಥಾಪನೆಯಾಗಿದ್ದು, ಗಾರ್ಮೆಂಟ್ ಉದ್ದಿಮೆಯ ರಾಜಧಾನಿ’ ಎಂದೇ ಕರೆಯಲಾಗುತ್ತಿದೆ. ಇದರಲ್ಲಿ ಸಣ್ಣ ಮತ್ತು ಅತಿ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು ಸೇರಿವ. ಎಂಎಸ್‍ಎಂಇ ವಲಯ ರಾಜ್ಯದ ಅತಿದೊಡ್ಡ ಉದ್ದಿಮೆಗಳನ್ನು ಹೊಂದಿರುವ ಭಾಗವಾಗಿದೆ.

ಸಿದ್ಧ ಉಡುಪು ರಫ್ತು: ಇಡೀ ರಾಷ್ಟ್ರದಲ್ಲಿಯೇ ಜವಳಿ ಉದ್ಯಮದಲ್ಲಿ ಅತಿ ಹೆಚ್ಚು ರಫ್ತು ಮಾಡುವ ಉದ್ಯಮವಾಗಿದೆ. ಜವಳಿ ನಂತರ ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ಸಾಪ್ಟ್‍ವೇರ್ ಉದ್ಯಮದಲ್ಲಿಯೂ ಮುನ್ನಡೆಯನ್ನು ಕಾಯ್ದುಕೊಂಡಿದೆ. ಅಮೇರಿಕ, ಇಂಗ್ಲೆಂಡ್, ಇಟಲಿ, ಜರ್ಮನಿ, ಪಶ್ಚಿಮ ಯುರೋಪ್, ಹಾಂಗ್‍ಕಾಂಗ್, ಟರ್ಕಿ, ಕೆನಡಾ, ಮತ್ತು ಆಸ್ಟ್ರೇಲಿಯಾ ಮಾರುಕಟ್ಟೆಗೆ ಕರ್ನಾಟಕದಿಂದಲೇ ಸಿದ್ಧ ಉಡುಪುಗು ರಫ್ತು ಮಾಡುವಲ್ಲಿ ನಾಯಕತ್ವ ಸ್ಥಾನ ಗಳಿಸಿಕೊಂಡಿದೆ. ಬ್ಯುಲ್‍ಟೆಕ್, ಕ್ಲೋತ್‍ಟೆಕ್, ಹೋಮ್‍ಟೆಕ್, ಮೆಡಿಟೆಕ್, ಮತ್ತಿತರ ಕಂಪನಿಗಳು ಈ ಸಾಧನೆಯ ಹೆಮ್ಮೆಯ ಪಾಲುದಾರರಾಗಿವೆ. ಈ ಉದ್ದಿಮೆಯ ಒಂದು ಉಪ-ವಲಯವಾಗಿಯೇ ಬೆಂಗಳೂರು ಹೊರ ಹೊಮ್ಮಿದೆ. ಈ ಉದ್ಯಮ ಬೆಂಗಳೂರು ಮಾತ್ರವಲ್ಲ, ಎರಡನೇ ವಲಯ ನಗರಗಳಾದ ಮೈಸೂರು, ಹಾಸನ, ಮಂಡ್ಯ, ಕೋಲಾರ ಮತ್ತಿತರ ನಗರಗಳಲ್ಲೂ ವಿಸ್ತರಣೆಯಾಗಿದೆ. ಈಗಾಗಲೇ ಬೆಂಗಳೂರು ವಲಯಕ್ಕೆ 1,400 ಕೋಟಿ ಬಂಡವಾಳ ಹರಿದುಬಂದಿರುವುದೇ ಇದನ್ನು ದೃಢಪಡಿಸಿದೆ. ಅಷ್ಟೇ ಅಲ್ಲ ದುಪಟ್ಟು ಬಂಡವಾಳ ಹೂಡಿಕೆಯ ಎಲ್ಲ ಲಕ್ಷಣಗಳು ಇಲ್ಲಿ ಕಾಣುತ್ತಿವೆ.

ಬಹುದೊಡ್ಡ ಶ್ರಮಿಕವರ್ಗ ಮತ್ತು ಸಮೃದ್ಧ ಕಚ್ಛಾವಸ್ತುಗಳನ್ನು ಒದಗಿಸಿರುವುದರಿಂದ ಸ್ಪರ್ಧಾತ್ಮಕ ರೀತಿಯಲ್ಲಿ ಈ ಉದ್ಯಮ ಬೆಳೆಯಲು ಸಹಾಯಕವಾಗಿದೆ. ಹೇರಳವಾಗಿ ಕಚ್ಛಾವಸ್ತುಗಳು ಬೇಕಿವೆ.

• 5.5 ಲಕ್ಷ ಹೆಕ್ಟೇರ್ ಜಮೀನಿನಲ್ಲಿ ಹತ್ತಿಯನ್ನು ಬೆಳೆಯಲಾಗುತ್ತಿದೆ. ಇಡೀ ದೇಶ ಬೆಳೆಯುವ ಹತ್ತಿಯಲ್ಲಿ ಶೇ.6 ರಷ್ಟನ್ನು ರಾಜ್ಯದ ಬಹುಪಾಲೇ ಇದೆ. ರೇಷ್ಮೆ ಕೃಷಿಯಲ್ಲಿ ದೇಶದಲ್ಲಿ ಬೆಳೆಯುವ ಕಚ್ಛಾರೇಷ್ಮೆಯಲ್ಲಿ ಶೇ.65 ರಷ್ಟನ್ನು ರಾಜ್ಯವೇ ಬೆಳೆಯುತ್ತಿದೆ.

• ಇಡೀ ದೇಶದಲ್ಲೇ ಅತಿ ಹೆಚ್ಚು ಉಣ್ಣೆ ಉತ್ಪಾದನೆ ಮಾಡುವ ರಾಜ್ಯ ನಮ್ಮದಾಗಿದೆ. ರಾಷ್ಟ್ರದ ಪಾಲಿನಲ್ಲಿ ಕರ್ನಾಟಕದ್ದು ಶೇ.12 ರಷ್ಟು ಕೊಡುಗೆ ಸೇರಿದೆ.

• ಇದಕ್ಕೆ ಪೂರಕವಾಗಿ ರಾಜ್ಯದಲ್ಲಿ ಅಪ್ರೆಲ್ ಉದ್ದಿಮೆಯ ಪಾರ್ಕುಗಳು ಇಡೀ ರಾಜ್ಯದಲ್ಲಿ ವಿಸ್ತರಣೆಯಾಗಿವೆ.

• ಈ ಅಪ್ರೆಲ್ ಉದ್ದಿಮೆಗಳಿಗೆ ವಿಶೇಷ ಕೈಗಾರಿಕಾ ಪ್ರದೇಶವನ್ನು ಕೆಐಎಡಿಬಿ ಹೊಂದಿದೆ.

ಕರ್ನಾಟಕದ ಅತಿ ದೊಡ್ಡ ಕೌಶಲ್ಯ ಶ್ರಮಿಕವರ್ಗ: ಮೂರನೇ ಅತಿ ದೊಡ್ಡ ಪ್ರಮಾಣದಲ್ಲಿ ಎಂಜನೀಯಯರಿಂಗ್ ಪದವೀಧರರಿದ್ದಾರೆ. ರಾಜ್ಯದಲ್ಲಿ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳಿವೆ. ಸಂಶೋಧನಾ ಸಂಸ್ಥೆಗಳಿವೆ. ಇಲ್ಲಿ ಜವಳಿ ಉದ್ಯಮಕ್ಕೆ ಬೇಕಾದ ಮಾನವ ಸಂಪನ್ಮೂಲ ಪೂರೈಕೆಯಾಗುತ್ತಿದೆ. ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ವಿನ್ಯಾಸ ಕ್ಷೇತ್ರದ ಪ್ರಮುಖ ಶೈಕ್ಷಣಿಕ ಸಂಸ್ಥೆಯಾಗಿದೆ. ನಿರ್ವಹಣೆ ಮತ್ತು ತಂತ್ರಜ್ಞಾನ ಅಳವಡಿಕೆಯಲ್ಲಿ ಈ ಸಂಸ್ಥೆಯನ್ನು 1986 ರಲ್ಲಿ ಜವಳಿ ಇಲಾಖೆ ಆರಂಭಿಸಿತು. ಈ ಸಂಸ್ಥೆ ದೇಶದಲ್ಲಿಯೇ ಡಿಸೈನಿಂಗ್ ಕ್ಷೇತ್ರದ ವ್ಯವಹಾರ ಶಿಕ್ಷಣ ನೀಡುವಲ್ಲಿ ಭರವಸೆಯ ಸಂಸ್ಥೆಯಾಗಿ ಪ್ರಮುಖ ಸ್ಥಾನ ಪಡೆದಿದೆ. ಈ ಸಂಸ್ಥೆ ಶೈಕ್ಷಣಿವಾಗಿ ಉತ್ತಮ ಗುಣಮಟ್ಟ ಮತ್ತು ಬೌದ್ಧಿಕ ನಾಯಕತ್ವ ನೀಡಿ ಕ್ರಿಯಾಶೀಲ ಮತ್ತು ಸ್ಪರ್ಧಾತ್ಮಕ ನೈಪುಣ್ಯದ ವೃತ್ತಿಪರರನ್ನು ಕೊಡುಗೆಯಾಗಿ ನೀಡಿದೆ. ಇಲ್ಲಿ ಫ್ಯಾಷನ್ ಶಿಕ್ಷಣ, ಸಂಶೋಧನೆ ಮತ್ತು ವಿನ್ಯಾಸದಲ್ಲಿ ತರಬೇತಿಯನ್ನು ನೀಡುತ್ತಿದೆ.

ಇತ್ತೀಚೆಗೆ ಕರ್ನಾಟಕ ಸರ್ಕಾರ ಹೊಸ ಜವಳಿ ನೀತಿಯನ್ನು ಘೋಷಣೆ ಮಾಡಿದ್ದು, ಗುರಿ ಸಾಧನೆ ಆಧಾರಿತವಾಗಿದೆ ಅಷ್ಟೇ ಅಲ್ಲ, 10, 000 ಕೋಟಿ ರೂ ಬಂಡವಾಳ ಹೂಡಿಕೆಯ ಗುರಿಯ್ನು ಹೊಂದಿದೆ. ಐದು ವರ್ಷದಲ್ಲಿ 5 ಲಕ್ಷ ಕುಶಲಕರ್ಮಿಗಳಿಗೆ ಉದ್ಯೋಗ ಸೃಷ್ಟಿ ಮಾಡುವುದು ಮತ್ತೊಂದು ಗುರಿ ಹೊಂದಿದೆ.

ಹೊಸ ಜವಳಿ ನೀತಿಯ ಪ್ರಮುಖ ಲಕ್ಷಣಗಳು: ಹೂಡಿಕೆ ಆಧಾರದ ಮೇಲೆ ಪ್ರೋತ್ಸಾಹಗಳನ್ನು ಕೊಡಲಾಗುವುದು. ಹಂತಹಂತವಾಗಿ ಇದನ್ನು ಕೊಡಲು ವ್ಯವಸ್ಥೆ ಮಾಡಲಾಗಿದೆ. ಹಿಂದುಳಿದ ಪ್ರದೇಶಗಳಲ್ಲಿ ಜವಳಿ ಪಾರ್ಕುಗಳನ್ನು ಅಭಿವೃದ್ಧಿ ಪಡಿಸಿ, ಅವುಗಳ ಅಭಿವೃದ್ಧಿಗೆ ಒತ್ತು ನೀಡಲಾಗುವುದು.

ಹೂಡಿಕೆದಾರ ಸ್ನೇಹಿ ಪ್ರೋತ್ಸಾಹಗಳು: ಜವಳಿ ರಾಜ್ಯಕ್ಕೆ ಬೃಹತ್ ಯೋಜನೆಯಾಗಿದೆ. 100 ರಿಂದ ಕೋಟಿ ರೂ ವರೆಗೆ, ಅತಿ ದೊಡ್ಡ ಬೃಹತ್ ಯೋಜನೆಯಾಗಿ 500 ರಿಂದ 1000 ಕೋಟಿ ವರೆಗೆ, ಸೂಪರ್ ಮೆಗಾ ಪ್ರಾಜೆಕ್ಟ್ ಆಗಿ 1000 ಕೋಟಿ ರೂ ಅಧಿಕ ಬಂಡವಾಳದ ಯೋಜನೆಗಳು ಎಂದು ವರ್ಗೀಕರಿಸಿ ಸೌಲಭ್ಯಗಳನ್ನು ನೀಡಲಾಗುತ್ತಿದೆ.

ಹೈದರಾಬಾದ್ ಕರ್ನಾಟಕ ಜಿಲ್ಲೆಗಳನ್ನು ಹೊರತುಪಡಿಸಿ ಕೈಗಾರಿಕ ಅಭಿವೃದ್ಧಿಗೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ. ಮೆಗಾ ಮತ್ತು ಅಲ್ಟ್ರಾ ಮತ್ತು ಸೂಪರ್ ಮೆಗಾ ಪ್ರಾಜೆಕ್ಟ್‍ಗಳೆಂದು ಶೇ.15 ಶೇ. 10 ಶೇ. 5 ರಷ್ಟು ಪ್ರೋತ್ಸಾಹ ಕ್ರಮವಾಗಿ ಸಿಗುತ್ತಿದೆ.

ಹೈದರಬಾದ್ ಕರ್ನಾಟಕ ಜಿಲ್ಲೆಗಳಲ್ಲಿ ಅವೇ ಮಾದರಿ ಯೋಜನೆಗಳಿಗೆ ಶೇ.20 ಶೇ.15 ಮತ್ತು ಶೇ10 ರಷ್ಟು ಪ್ರೋತ್ಸಾಹಕರವಾಗಿ ನೀಡಲಾಗುತ್ತಿದೆ. ಎರಡೂ ವಲಯಗಳಿಗೂ ಶೇ.5 ಮತ್ತು ಶೇ.6 ಬಡ್ಡಿ ಮತ್ತು ಇಟಿಪಿ ರಿಯಾಯಿತಿಯನ್ನು ನೀಡಲಾಗುತ್ತಿದೆ. ಈ ಯೋಜನೆಗಳಿಂದ ರಾಜ್ಯದಲ್ಲಿ ದೊಡ್ಡ ಮಟ್ಟದಲ್ಲಿ ಲಕ್ಷಾಂತರ ಮಂದಿಗೆ ಉದ್ಯೋಗ ಸೃಷ್ಟಿಯಾಗುತ್ತಿದೆ.

ಹೊಸ ಕೈಗಾರಿಕ ನೀತಿಯಲ್ಲಿ ಜವಳಿ ಮತ್ತು ಸಿದ್ಧ ಉಡುಪು ಕ್ಷೇತ್ರದಲ್ಲಿ ಕರ್ನಾಟಕದ ಎಲ್ಲ ಭಾಗದಲ್ಲಿ ಹೂಡಿಕೆಯಾಗುವಂತೆ 8000 ಕೋಟಿ ಬಂಡವಾಳ ಹೂಡಿಕೆ ಮತ್ತು 4 ಲಕ್ಷ ಉದ್ಯೋಗ ಸೃಷ್ಟಿಯ ಗುರಿಯನ್ನು 2018 ರೊಳಗೆ ಸಾಧಿಸಲು ನಿಗದಿ ಮಾಡಲಾಗಿದೆ.

ಬಾಗಲಕೋಟೆ, ಬೆಳಗಾಂ, ಬಿಜಾಪುರ, ಚಿಕ್ಕಬಳ್ಳಾಪುರ, ಮತ್ತಿತರ ಜಿಲ್ಲೆಗಳಲ್ಲಿ ಇದೇ ಮಾದರಿಯಲ್ಲಿ ಜವಳಿ ಪಾರ್ಕುಗಳನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಯೋಜಿಸಿದೆ. ಯಾದಗಿರಿಯಲ್ಲಿ 1000 ಎಕರೆಯ ಜವಳಿ ಪಾರ್ಕು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಕೆಐಎಡಿಬಿ ಭೂಸ್ವಾಧೀನ ಮತ್ತಿತರ ಎಲ್ಲ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಚಾಮರಾಜನಗರದಲ್ಲಿ 1200 ಎಕರೆ, ಮೈಸೂರಿನಲ್ಲಿ 200 ಎಕರೆ, ಕುಡುತಿನಿ ಬಳ್ಳಾರಿಯಲ್ಲಿ 200 ಎಕರೆ ಜಾಗವನ್ನು ಮೀಸಲಿರಿಸಲಾಗಿದೆ.

ಜವಳಿ ಸಚಿವ ಬಾಬುರಾವ್ ಚಿಂಚನಸೂರ್ ಉದ್ದಿಮೆದಾರರಿಗೆ ಮನವಿ ಮಾಡಿ, ಕೈಗಾರಿಕೋದ್ಯಮ ಮತ್ತು ಹೂಡಿಕೆಗೆ ಪೂರಕವಾದ ಸಂಪನ್ಮೂಲ ಮತ್ತು ಕೌಶಲ್ಯದ ಮಾನವ ಸಂಪನ್ಮೂಲ ನೀಡುವ ಭರವಸೆ ನೀಡಿದ್ದಾರೆ.

ಯಶೋಗಾಥೆ:

ಜವಳಿ ಮತ್ತು ಸಿದ್ಧ ಉಡುಪು ಉದ್ಯಮದಲ್ಲಿ ಗೋಕಾಕ್ ಮಿಲ್ಸ್, 1887 ರಿಂದ ಅಸ್ತಿತ್ವದಲ್ಲಿ ಸಾರ್ವಜನಿಕ ಉದ್ದಿಮೆಯಲ್ಲಿ ತನ್ನ ಪಾರಮ್ಯ ಮತ್ತು ಯಶಸ್ಸನ್ನು ಮುಂದುವರೆಸಿದೆ. ಹಿಮತ್‍ಸಿಂಗ್‍ಕ ರಫ್ತು ಉದ್ಯಮದಲ್ಲಿ ಮುಂದುವರೆದು, ವಿದೇಶದಲ್ಲೂ ವಿಸ್ತರಣೆಯಾಗಿದೆ.

““ಙou ಛಿuಣ ಣhe ರಿಚಿಛಿಞeಣ ಣo ಜಿiಣ ಣhe ಠಿeಡಿsoಟಿ”,

ಸಿದ್ಧ ಉಡುಪುಗಳ ಗಾರ್ಮೆಟ್ಸ್ ಬೃಹತ್ ಮಾರುಕಟ್ಟೆಯಲ್ಲಿ ಪ್ರಮುಖ ಸ್ಥಾನ ಗಳಿಸಲು ಸರ್ಕಾರ ಎಲ್ಲ ಪ್ರಯತ್ನ ಮಾಡುತ್ತಿದೆ. ಜವಳಿ ಉದ್ಯಮ ಮತ್ತು ಟೈಲರ್‍ಗಳೊಂದಿಗೆ ನಿರಂತರವಾಗಿ ಮಾತುಕತೆ ನಡೆಸಿದೆ. ಟೈಲರ್ ಮೋಡ್ ಮಾದರಿಯಲ್ಲಿ ಪ್ರಮುಖವಾಗಿ ಕೈಗಾರಿಕಾ ಅಭಿವೃದ್ಧಿಗೆ ಬೇಕಾದ ನೀತಿಗಳನ್ನು ರೂಪಿಸಲಾಗಿದೆ. ಇದರಿಂದ ಕರ್ನಾಟಕ ಉದ್ದಿಮೆಯಲ್ಲಿ ಸುಸ್ಥಿರ ಸ್ಥಾನ ಪಡೆಯಲಿದೆ. “

ಕೆ. ರತ್ನಪ್ರಭ,

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ

“ನನಗೆ ಸಂಪೂರ್ಣವಾಗಿ ನಂಬಿಕೆಯಿದೆ. ಹೊಸ ಜವಳಿ ಕೈಗಾರಿಕಾ ನೀತಿಯಿಂದಾಗಿ ದೊಡ್ಡ ಮಟ್ಟದ ಜವಳಿ ಉದ್ದಿಮೆ ಹೂಡಿಕೆಗಳನ್ನು ಸೆಳೆಯಲಿದೆ. ಇದರಿಂದ ಜವಳಿ ಮತ್ತು ಸಿದ್ಧ ಉಡುಪುಗಳ ಉದ್ಯಮ ದೊಡ್ಡ ದೊಡ್ಡ ಎತ್ತರಗಳಿಗೆ ಅಭಿವೃದ್ಧಿಯಾಗಲಿದೆ.”

ಕೆ. ರತ್ನಪ್ರಭ,

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ

Add to
Shares
0
Comments
Share This
Add to
Shares
0
Comments
Share
Report an issue
Authors

Related Tags