ಆವೃತ್ತಿಗಳು
Kannada

ಬಿಹಾರದ ಯುವಕನಿಗೆ "ಶರದ್​"ಕಾಲ..!

ಟೀಮ್​ ವೈ.ಎಸ್​. ಕನ್ನಡ

YourStory Kannada
19th Sep 2016
Add to
Shares
4
Comments
Share This
Add to
Shares
4
Comments
Share

ಶರದ್​ಸಾಗರ್.. ಕೇವಲ 24 ವರ್ಷದ ಉದ್ಯಮಿ. ಆದ್ರೆ ಉದ್ಯಮಕ್ಕೆ ವಯಸ್ಸು ಮುಖ್ಯ ಅಲ್ಲ ಅನ್ನೊದನ್ನ ಶರದ್ ಸಾಬೀತು ಮಾಡಿದ್ದಾರೆ. ಬಿಹಾರದ ಈ ಯುವ ಉದ್ಯಮಿಯನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ವೈಟ್​ಹೌಸ್​ನಲ್ಲಿ ನಡೆಯಲಿರುವ ಉದ್ಯಮಿಗಳ ವಿಶೇಷ ಕೂಟಕ್ಕೆ ಆಹ್ವಾನಿಸಿದ್ದಾರೆ. ಡೆಕ್ಸರಿಟಿ ಗ್ಲೋಬಲ್​ನ ಸಿಇಒ ಆಗಿರುವ ಶರದ್, ಫೋರ್ಬ್ಸ್ 30 ಅಂಡರ್ 30ಯಲ್ಲಿ ಸ್ಥಾನ ಕೂಡ ಸಂಪಾದಿಸಿದ್ದಾರೆ. ಬಿಹಾರದ ಇತಿಹಾಸದಲ್ಲೇ ಈ ಸಾಧನೆ ಮಾಡಿದ ಮೊದಲ ಉದ್ಯಮಿ ಅನ್ನೋ ಖ್ಯಾತಿಯನ್ನು ಶರದ್ ತನ್ನದಾಗಿಸಿಕೊಂಡಿದ್ದಾರೆ.

image


ಶರದ್ ಕೆಲವೇ ಕೆಲವು ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ. ಅಮೆರಿಕ ಅಧ್ಯಕ್ಷ ಒಬಮಾ ಆಯೋಜಿಸಿರುವ ಈ ವಿಶೇಷ ಔತಣ ಕೂಟದ ಹೆಸರು “ ಸೌತ್ ಬೈ ಸೌತ್ ಲಾನ್: ಎ ವೈಟ್ ಹೌಸ್ ಫೆಸ್ಟಿವಲ್ ಆಫ್ ಐಡಿಯಾಸ್, ಆರ್ಟ್ ಅಂಡ್ ಆ್ಯಕ್ಷನ್”. ಈ ವಿಶೇಷ ಕೂಟ ಅಕ್ಟೋಬರ್ 3ರಂದು ನಡೆಯಲಿದೆ.

ಇದನ್ನು ಓದಿ: ಸ್ಕೂಲ್ ಬ್ಯಾಗ್ ಭಾರ ಇಳಿಸಲು ಸರಳ ಉಪಾಯ..

ಹೊಸ ಹೊಸ ಪ್ರಯೋಗಗಳನ್ನು ಮಾಡಿದ ಸಾವಿರಾರು ಉದ್ಯಮಿಗಳ ಹೆಸರನ್ನು ವೈಟ್​ಹೌಸ್​ಗೆ ಶಿಫಾರಸು ಮಾಡಲಾಗಿತ್ತು. ಆದ್ರೆ ಆ ಶಿಫಾರಸುಗಳ ಪೈಕಿ ಕೆಲವೇ ಕೆಲವು ಹೆಸರುಗಳನ್ನು ಅಕ್ಟೋಬರ್3ರ ಸಮಾರಂಭಕ್ಕೆ ಅಂತಿಮಗೊಳಿಸಿ, ಆಹ್ವಾನಿಸಲಾಗಿದೆ. ಅಚ್ಚರಿ ಅಂದ್ರೆ ಅಧ್ಯಕ್ಷ ಒಬಮಾ ಆಯ್ಕೆ ಮಾಡಿರುವ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಭಾರತೀಯ ಅನ್ನೋ ಖ್ಯಾತಿಯೂ ಶರದ್ ಪಾಲಾಗಿದೆ.

“ ಈ ವಿಶೇಷ ಔತಣ ಕೂಟ, ವಿಶ್ವದ ಹಲವು ವಿಭಿನ್ನ ವ್ಯಕ್ತಿಗಳನ್ನು ಒಂದೇ ವೇದಿಕೆಯಲ್ಲಿ ಕಾಣುವಂತೆ ಮಾಡಲಿದೆ. ಈ ಕೂಟಕ್ಕೆ ತಮ್ಮ ಉದ್ಯಮದ ಮೂಲಕ ಸಮಾಜ ಸೇವೆ ಮತ್ತು ಉದ್ದಾರವನ್ನು ಮಾಡಿದ ವ್ಯಕ್ತಿಗಳಿಗೆ ಆಹ್ವಾನ ನೀಡಲಾಗಿದೆ. ಉತ್ತಮ ಕೆಲಸ ಮಾಡಿದ ಸಂಭ್ರಮವನ್ನು ಈ ಸಮಾರಂಭದ ಮೂಲಕ ಆಚರಿಸಿಕೊಳ್ಳಲಾಗುತ್ತದೆ”.
- ವೈಟ್​ಹೌಸ್ ಪ್ರಕಟಣೆ

ಈ ವರ್ಷದ ಆರಂಭದಲ್ಲೇ ಶರದ್ ಫೋರ್ಬ್ಸ್30 ಅಂಡರ್ 30ಯಲ್ಲಿ ಸ್ಥಾನ ಪಡೆದ ಮೊತ್ತ ಮೊದಲ ಬಿಹಾರದ ಉದ್ಯಮಿ ಅನ್ನೋ ಗೌರವ ಪಡೆದಿದ್ದರು. ಈ ಪಟ್ಟಿಯಲ್ಲಿ ಫೇಸ್​ಬುಕ್​ನ ಮಾರ್ಕ್ ಝಕರ್ ಬರ್ಗ್, ಮಲಾಲ ಯೂಸಫ್​ಝಾಯಿ ಸೇರಿದಂತೆ ಹಲವು ಖ್ಯಾತನಾಮರು ಸ್ಥಾನ ಸಂಪಾದಿಸಿದ್ದರು. ಶರದ್, 2013ರಲ್ಲಿ ರಾಕ್ ಫೆಲ್ಲರ್ ಫೌಂಡೇಷನ್ ವರದಿ ಮಾಡಿದ್ದ ಮುಂದಿನ ಶತಮಾನದ 100 ಅತ್ಯುತ್ತಮ ಉದ್ಯಮಿಗಳ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದರು. ಅಷ್ಟೇ ಅಲ್ಲ ಈ ವರದಿಯಲ್ಲಿ ಉತ್ತಮ ಸ್ಥಾನ ಪಡೆದ ಭಾರತೀಯ ಅನ್ನೋ ಹೆಗ್ಗಳಿಕೆಗೂ ಪಾತ್ರರಾಗಿದ್ದರು.

2008ರಲ್ಲಿ ಶರದ್ ಡೆಕ್ಸ್​ಟೆರಿಟಿ ಗ್ಲೋಬಲ್ ಅನ್ನೋ ಸಂಸ್ಥೆಯನ್ನು ಆರಂಭಿಸಿದ್ದರು. ಆಗ ಶರದ್ ವಯಸ್ಸು ಕೇವಲ 16 ಆಗಿತ್ತು. ಈಗ ಡೆಕ್ಸ್​ಟೆರಿಟಿ ಭಾರತದಾದ್ಯಂತ ಸುಮಾರು 1.2 ಮಿಲಿಯನ್ ವಿದ್ಯಾರ್ಥಿಗಳ ಓದಿಗೆ ನೆರವಾಗುತ್ತಿದೆ. ಅಚ್ಚರಿ ಅಂದ್ರೆ ಡೆಕ್ಸ್​ಟೆರಿಟಿ ಗ್ಲೋಬಲ್ ಅಮೆರಿಕ ಅಧ್ಯಕ್ಷ ಬರಾಕ್ ಒಬಮಾ ಅಧಿಕಾರಕ್ಕೆ ಬಂದ ವರ್ಷವೇ ಆರಂಭವಾಗಿತ್ತು. ಒಟ್ಟಿನಲ್ಲಿ ಶರದ್ ಸಾಧನೆ ಭಾರತದ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ ಅನ್ನೋದರಲ್ಲಿ ಎರಡು ಮಾತಿಲ್ಲ.

ಇದನ್ನು ಓದಿ:

1. ಕೊಕೊವಾದಿಂದ ಚಾಕಲೇಟ್ ತನಕದ ಕಥೆ..! 

2. ಡಿಜಿಟಲ್ ಇಂಡಿಯಾ ಕಾನ್ಸೆಪ್ಟ್​ಗೆ ಹೊಸ ಸೇರ್ಪಡೆ- ಹಿರಾಚುನಿ ಗ್ರಾಮಸ್ಥರೆಲ್ಲಾ ಫುಲ್ ಟೆಕ್​ಫ್ರೆಂಡ್ಲಿ..!

3. ಒಲಿಂಪಿಯನ್​ಗಳಿಗೆ ತರಬೇತಿ ಕೊಟ್ಟ ಗುರುವಿನ ದಯನೀಯ ಸ್ಥಿತಿ

Add to
Shares
4
Comments
Share This
Add to
Shares
4
Comments
Share
Report an issue
Authors

Related Tags