ತ್ಯಾಜ್ಯ ಮರುಬಳಕೆಯಿಂದ ಉಪಯೋಗಿ ವಸ್ತುಗಳನ್ನು ಮಾಡುವ 13 ವರ್ಷದ ನವೋದ್ಯಮಿ

ವಿಕ್ರಮಜೀತ ಸಿಂಗ್‌ ಕನ್ವಾರ್‌ ಸ್ಥಾಪಿಸಿದ ಮ್ಯಾಕ್ಸ್‌ ಎಕ್ಸ್‌ಚೆಂಜ್‌ ಹಸಿ ಮತ್ತು ಒಣ ಕಸವನ್ನು ಸಂಗ್ರಹಿಸಿ ಮನೆಗೆ ಬೇಕಾದ ಅಲಂಕಾರಿಕ ವಸ್ತುಗಳು, ಕುಷನ್‌, ನೋಟ್‌ಪ್ಯಾಡ್‌, ಗಾಜಿನ ವಸ್ತು, ಕಸದ ಡಬ್ಬಿಗೆ ಬಳಸಬಹುದಾದ ಸುದ್ದಿ ಪತ್ರಿಕೆಗಳ ಕವರ್‌, ಕುಡಿಕೆ ಮತ್ತು ಇನ್ನು ಮುಂತಾದ ವಸ್ತುಗಳನ್ನು ತಯಾರಿಸುತ್ತದೆ.

ತ್ಯಾಜ್ಯ ಮರುಬಳಕೆಯಿಂದ ಉಪಯೋಗಿ ವಸ್ತುಗಳನ್ನು ಮಾಡುವ 13 ವರ್ಷದ ನವೋದ್ಯಮಿ

Friday February 07, 2020,

2 min Read

ನೀವು ಸಂಗ್ರಹಿಸಿ ಕೊಡುವ ತ್ಯಾಜ್ಯಕ್ಕೆ ಚೆಂದನೆಯ ಅಲಂಕಾರಿಕ ವಸ್ತುಗಳನ್ನು ಬದಲಿ ಪಡೆದರೆ ಹೇಗಿರುತ್ತದೆ ಎಂದು ಯೋಚಿಸಿದ್ದೀರಾ?


ದೇಶದಲ್ಲಿನ ತ್ಯಾಜ್ಯ ನಿರ್ವಹಣೆಯ ಸಮಸ್ಯೆಗೆ ಪರಿಹಾರ ನೀಡಬೇಕೆಂದು 13 ವರ್ಷದ ದೆಹಲಿ ಪಬ್ಲಿಕ್‌ ಶಾಲೆಯ ವಿದ್ಯಾರ್ಥಿ ವಿಕ್ರಂಜೀತ್‌ ಸಿಂಗ್‌ ಕನ್ವರ್‌ ಮ್ಯಾಕ್ಸ್‌ ಎಕ್ಸ್‌ಚೆಂಜ್‌ ನವೋದ್ಯಮವನ್ನು 2015 ರಲ್ಲಿ ಸ್ಥಾಪಿಸಿದನು. ಸ್ಟಾರ್ಟಪ್ ಹಸಿ ಮತ್ತು ಒಣ ಕಸವನ್ನು ಸಂಗ್ರಹಿಸಿ ಮನೆಗೆ ಬೇಕಾದ ಅಲಂಕಾರಿಕ ವಸ್ತುಗಳು, ಕುಷನ್‌, ನೋಟ್‌ಪ್ಯಾಡ್‌, ಗಾಜಿನ ವಸ್ತು, ಕಸದ ಡಬ್ಬಿಗೆ ಬಳಸಬಹುದಾದ ಸುದ್ದಿ ಪತ್ರಿಕೆಗಳ ಕವರ್‌, ಕುಡಿಕೆ ಮತ್ತು ಇನ್ನು ಮುಂತಾದ ವಸ್ತುಗಳನ್ನು ತಯಾರಿಸುತ್ತದೆ.

ವಿಕ್ರಂಜೀತ್‌ ಸಿಂಗ್‌ ಕನ್ವರ್‌ (ಚಿತ್ರಕೃಪೆ: ಎಡೆಕ್ಸ್‌ ಲೈವ್)


ಎನ್‌ಡಿಟಿವಿ ಜೊತೆಗೆ ಮಾತನಾಡಿದ ವಿಕ್ರಂಜೀತ್‌,


“ಪತ್ರಿಕೆಯಿಂದ ಹಿಡಿದು, ಕಾರ್ಡ್‌ಬೋರ್ಡ್‌, ಕಂಟೇನರ್‌, ಲೋಹದ - ಗಾಜಿನ ಬಾಟಲಿಗಳು, ಟೈರ್‌ ಮತ್ತು ವಿವಿಧ ಪ್ರಕಾರದ ಪ್ಲಾಸ್ಟಿಕ್‌ ತ್ಯಾಜ್ಯಗಳಾದ ಬಹು ಪದರಗಳ ಪ್ಲಾಸ್ಟಿಕ್‌, ಏಕ-ಬಳಕೆಯ ಪ್ಲಾಸ್ಟಿಕ್, ಪಿಇಟಿ ಬಾಟಲಿಗಳ ವರೆಗೆ ಮರುಬಳಕೆ ಮಾಡಬಹುದಾದ ಎಲ್ಲ ಥರಹದ ವಸ್ತುಗಳನ್ನು ನಾವು ಸಂಗ್ರಹಿಸುತ್ತೇವೆ. ಪ್ರಸ್ತುತ ನಾವು ಗುರುಗ್ರಾಂ, ಫರಿದಾಬಾದ್‌ ಮತ್ತು ದೆಹಲಿಯ ಕೆಲವು ಭಾಗಗಳು ಸೇರಿ 150 ಸ್ಥಳಗಳಿಂದ ತ್ಯಾಜ್ಯವನ್ನು ಸಂಗ್ರಹಿಸುತ್ತೇವೆ. ಪ್ರತಿಯೊಂದು ಮನೆ, ಸಂಸ್ಥೆ ಮತ್ತು ಸಮದಾಯಗಳಲ್ಲಿ ಒಂದು – ಎರಡು ಸಂಪರ್ಕದ ಕೊಂಡಿಗಳಿರುತ್ತವೆ. ಸಂಪರ್ಕ ಕಲ್ಪಿಸುವ ವ್ಯಕ್ತಿಯೆ ತ್ಯಾಜ್ಯದ ಸಂಗ್ರಹಣೆಯನ್ನು ನೋಡಿಕೊಳ್ಳುತ್ತಾರೆ. ನಮ್ಮಲ್ಲಿ ತ್ಯಾಜ್ಯ ಸಂಗ್ರಹಣೆಗೆಂದೆ ನಿಶ್ಚಿತ ಸಮಯಕ್ಕೆ ವಾಹನಗಳಿವೆ,” ಎಂದನು.


ಈ ಬಾಲಕ ಸಂಗ್ರಹಿಸಿದ ತ್ಯಾಜ್ಯವನ್ನು ನಿಯೋಜಿಸಿದ ತಂಡಕ್ಕೆ ನೀಡುತ್ತಾನೆ, ನಂತರ ಅದನ್ನು ಬೇರ್ಪಡಿಸಿ ಮರುಬಳಕೆ ಮಾಡಲಾಗುತ್ತದೆ. ಇನ್ನೊಂದೆಡೆ ನವೋದ್ಯಮ ಕಾಗದವನ್ನು ಗ್ರಾಫೈಟ್‌ ಮೇಲೆ ಉರುಳಿಸಲು ಯಂತ್ರಗಳನ್ನು ಬಳಸುತ್ತದೆ. ತಯಾರಾದ ವಸ್ತುಗಳನ್ನು ರೇಡ್‌ ಕ್ರಾಸ್‌ ಸೊಸೈಟಿಯಂತಹ ಸರ್ಕಾರೇತರ ಸಂಸ್ಥೆಯ ವಿಶೇಷಚೇತನ ಮಕ್ಕಳು ಪ್ಯಾಕ್‌ ಮಾಡುತ್ತಾರೆ ಮತ್ತು ಅದಕ್ಕೆ ತಕ್ಕ ದುಡ್ಡನ್ನು ಆ ಮಕ್ಕಳು ಯೋಜಕರಿಂದ ಪಡೆಯುತ್ತಾರೆ.


ಎಡೆಕ್ಸ್‌ ಲೈವ್ ಪ್ರಕಾರ, ಯುವ ಸಮಾಜ ಮುಖಿ ಚಿಂತನೆಯುಳ್ಳ ಬಾಲಕ ತನ್ನ ಮನೆಯ ಸುತ್ತಮುತ್ತ ಮತ್ತು ಕೆಲವೊಮ್ಮೆ ತನ್ನ ತಾಯಿಯ ಸ್ನೇಹಿತರ ಕಾರ್ಪೋರೇಟ್‌ ಕಛೇರಿಯಿಂದಲೂ ಪೇಪರ್‌ಗಳನ್ನು ಸಂಗ್ರಹಿಸುತ್ತಾ ಬಂದಿದ್ದಾನೆ. ಸಂಗ್ರಹಿಸಿದ ಪೇಪರ್‌ಗಳನ್ನು ಮಾರಿ ಸೌಲಭ್ಯರಹಿತ ಮಕ್ಕಳಿಗಾಗಿ ಸ್ಟೇಶನರಿ ವಸ್ತುಗಳನ್ನು ಖರೀದಿಸುತ್ತಾನೆ ಈ ಬಾಲಕ.


ಚಿತ್ರಕೃಪೆ: ಎನ್‌ಡಿಟಿವಿ




ಒಮ್ಮೆ ತ್ಯಾಜ್ಯ ಸಂಗ್ರಹಿಸಬೇಕಾದರೆ ಮಹಿಳೆಯೊಬ್ಬಳು ಮರುಬಳಕೆ ಮಾಡಬಹುದಾದ ವಸ್ತುಗಳನ್ನು ನೀಡಲು ನಿರಾಕರಿಸಿದಾಗ ವಿಕ್ರಂಜೀತ್‌ ಗೆ ಹೊಸ ವಿಚಾರ ಹೊಳೆಯಿತು,


“ಅವರು ತಾವೇ ಆ ವಸ್ತುಗಳನ್ನು ಮಾರಿ ಹಣ ಪಡೆಯಲು ಕಾಯುತ್ತಿದ್ದರು. ಆ ಸಮಯದಲ್ಲಿ ನನಗೆ ಗೊತ್ತಾಯಿತು. ಎಲ್ಲರೂ ಮರುಬಳಕೆ ಮಾಡಬಲ್ಲಂತಹ ವಸ್ತುಗಳನ್ನು ಹಾಗೆ ಸುಮ್ಮನೆ ಹಣವಿಲ್ಲದೆ ನೀಡಲು ಸಿದ್ಧರಿರುವುದಿಲ್ಲ. ಜನರೆ ಮುಂದೆ ಬಂದು ಈ ಕೆಲಸದಲ್ಲಿ ಭಾಗಿಯಾಗುವಂತೆ ಪ್ರಕ್ರಿಯೆಯನ್ನು ಮಾರ್ಪಾಡಿಸಬೇಕಿತ್ತು,” ಎನ್ನುತ್ತಾನೆ, ವರದಿ, ಎಡೆಕ್ಸ್‌ ಲೈವ್.


ಅಲ್ಲದೆ, ನೀವು ಪಡೆಯುವ ಬದಲಿ ವಸ್ತುಗಳು ನೀವು ಮೊದಲು ನೀಡಿದ ವಸ್ತುಗಳ ಮೇಲೆ ನಿರ್ಧಾರವಾಗುತ್ತದೆ. ಸುದ್ದಿ ಪತ್ರಿಕೆಗಳನ್ನು ನೀವು ನೀಡಿದ್ದರೆ, ನೀವು ಅದಕ್ಕೆ ಬದಲಿಯಾಗಿ ಆ ಪತ್ರಿಕೆಗಳಿಂದಲೇ ಮಾಡಿದ ಕಲಾಕೃತಿಗಳನ್ನು ಪಡೆಯಿತ್ತೀರಿ.


ಈ ಕಾರಣದಿಂದಲೇ ಮ್ಯಾಕ್ಸ್‌ ಎಕ್ಸ್‌ಚೆಂಜ್‌ ಕಳೆದ ಎರಡು ವರ್ಷದಿಂದ ಯಶಸ್ವಿಯಾಗಿ ಕಾರ್ಯಚರಣೆ ಮಾಡುತ್ತಿದೆ. ಈ ಉಪಕ್ರಮವನ್ನು 2020 ರ ಮಧ್ಯದಲ್ಲಿ ದೆಹಲಿಯ ಬೇರೆ ಭಾಗಗಳಿಗೂ ವಿಸ್ತರಿಸುವ ಯೋಚನೆಯಲ್ಲಿದ್ದಾನೆ ವಿಕ್ರಂಜೀತ್‌. ಇದನ್ನು ಸಾಧ್ಯವಾಗಿಸುವಂತೆ ಒಣ ತ್ಯಾಜ್ಯವನ್ನು ಸಂಗ್ರಹಿಸಲು ನವೋದ್ಯಮವು ಗುರುಗ್ರಾಂ, ಫರಿದಾಬಾದ್‌ ಮತ್ತು ದೆಹಲಿಯ ಇತರ ಭಾಗಗಳ ಕಾರ್ಪೊರೇಟ್‌ ಕಚೇರಿ, ವ್ಯಾಪಾರ ಸಂಸ್ಥೆ ಮತ್ತು ನಿವಾಸಿ ಸಂಘಗಳೊಂದಿಗೆ ಕೈಜೋಡಿಸಿದೆ.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.