ಆವೃತ್ತಿಗಳು
Kannada

ಲಿಂಗ ತಾರತಮ್ಯದ ಸಿಟ್ಟು..ಉದ್ಯಮಕ್ಕೆ ಸಿಕ್ತು ಗಿಫ್ಟು..!

ಟೀಮ್​ ವೈ.ಎಸ್​​​

10th Oct 2015
Add to
Shares
0
Comments
Share This
Add to
Shares
0
Comments
Share

ಚಿಕ್ಕದೊಂದು ಸಿಟ್ಟೇ ದೊಡ್ಡ ಉದ್ಯಮಿಯಾಗಲು ಪ್ರೇರಣೆಯಾದ ಕಥೆ ಇದು. ಇದರ ನಾಯಕಿ ಮನಿಷಾ ಕತೂರಿಯಾ. ಕೇಯ್ಸ್ ಹಾರ್ಬರ್ ಟೆಕ್ನಲಾಜಿಸ್​​ನ ಸ್ಥಾಪಕಿ. ಐಟಿ ಕನ್ಸಲ್ಟಂಟ್ ಮತ್ತು ಸರ್ವೀಸಸ್ ಸಂಸ್ಥೆಯನ್ನು ಅವರು ನಾಲ್ಕು ವರ್ಷಗಳ ಹಿಂದೆ ಚಂಡೀಗಢದ ಚಿಕ್ಕ ಒಂದೇ ಕೊಠಡಿಯ ಮನೆಯೊಂದರಲ್ಲಿ ಆರಂಭಿಸಿದ್ದರು. ಈಗ ಅವರ ಸಂಸ್ಥೆಯಲ್ಲಿ 50ಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ.

ಈ ನವ್ಯೋದ್ಯಮ ಸ್ಥಾಪಿಸಲು ಮನಿಷಾರನ್ನು ಪ್ರೇರೇಪಿಸಿದ್ದು ಯಾವುದು? ಹೆಲ್ತ್​​ಕೇರ್​​​ ಮತ್ತು ಐಟಿ ವಲಯಗಳಲ್ಲಿ ಅವರಿಗಿದ್ದ ಅನುಭವವೇ ಇದಕ್ಕೆ ಪ್ರೇರಣೆ. ಆದರೆ ಮೂಲ ಕಾರಣ ಬೇರೆಯದ್ದೇ ಇದೆ. ಬಹುತೇಕ ಉತ್ಪನ್ನಗಳ ತಯಾರಕರು, ತಮ್ಮದೇ ಆದ ವ್ಯವಸ್ಥೆಯಲ್ಲಿ ಬಹುತೇಕ ಒಂದನ್ನೊಂದು ಹೋಲುವ ಉತ್ಪನ್ನಗಳನ್ನು ಬಿಡುಗಡೆ ಮಾಡುತ್ತಾರೆ. ಹೀಗಾಗಿ ಬಹುತೇಕ ಮಂದಿ, ಕಸ್ಟಮ್ ಅಪ್ಲಿಕೇಶನ್ ಅಭಿವೃದ್ಧಿಗೆ ಮನಸ್ಸು ಮಾಡುತ್ತಾರೆ. ನಾವು ನಮ್ಮ ಗ್ರಾಹಕರಿಗೆ ನಿರ್ದಿಷ್ಟವಾಗಿ ಏನು ಬೇಕು ಎನ್ನುವುದನ್ನು ಅರಿತುಕೊಂಡು ಅವರನ್ನು ತೃಪ್ತಿಪಡಿಸಲು ಯತ್ನಿಸುತ್ತೇವೆ. ಅವರ ವ್ಯಾಪಾರ ಪ್ರಕ್ರಿಯೆಗೆ ಸಹಕಾರಿಯಾಗುವಂತೆ ಸಾಫ್ಟ್​​ವೇರ್​​ಗಳನ್ನು ಅಭಿವೃದ್ಧಿಪಡಿಸುತ್ತೇವೆ. ಸಾಫ್ಟ್​​ವೇರ್ ಆಧರಿಸಿ, ವ್ಯವಹಾರ ನಡೆಸಬೇಕಾಗಿಲ್ಲ, ಎನ್ನುತ್ತಾರೆ ಮನಿಷಾ.

image


ಮನಿಷಾ ಮತ್ತವರ ತಂಡ ಹೆಲ್ತ್​​ಕೇರ್ ಮೂಲಕ ತಮ್ಮ ಉದ್ಯಮ ಆರಂಭಿಸಿತು. ಅದಾದ ಬಳಿಕ ಡೊಮೈನ್ ಮತ್ತು ತಂತ್ರಜಾನ, ಕೈಗಾರಿಕೆಗಳನ್ನೂ ಆವರಿಸಿಕೊಂಡರು. ಗ್ರಾಹಕ ಆಧರಿತ ಉದ್ಯಮ ಸೊಲ್ಯುಷನ್ಸ್​​ಗಳನ್ನುಅಭಿವೃದ್ಧಿಪಡಿಸುವಲ್ಲಿ ಅವರ ನೈಪುಣ್ಯತೆ ಎದ್ದು ಕಾಣುತ್ತದೆ. ಅನಾಲಿಟಿಕ್ ಸೊಲ್ಯುಷನ್ಸ್, ಮೊಬೈಲ್ ಅಪ್ಲಿಕೇಷನ್​​ಗಳು ಮತ್ತು ಸಾಫ್ಟ್​​ವೇರ್ ಕನ್ಸಲ್ಟಿಂಗ್ ಇವರ ಪ್ರಮುಖ ಸೇವೆಗಳು. ಮನಿಷಾ ಅವರು ಸ್ಟ್ರಾಟಜಿಕ್ ನಿರ್ಣಯ ತೆಗೆದುಕೊಳ್ಳುವುದು ಮತ್ತು ಉದ್ಯಮದ ಬೆಳವಣಿಗೆಗೆ ರೂಪುರೇಷೆ ಸಿದ್ದಪಡಿಸುವುದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಾರೆ. ಮಾನವ ಸಂಪನ್ಮೂಲದಿಂದ ಆರಂಭಿಸಿ, ಮಾರ್ಕೆಟಿಂಗ್, ಸ್ಟ್ರಾಟಜಿ, ಹೆಲ್ತ್​​ಕೇರ್ ಯೋಜನೆಗಳು, ಯಾವುದೂ ಮನಿಷಾರ ಹದ್ದಿನ ಕಣ್ಣುಗಳಿಂದ ತಪ್ಪಿಸಿಕೊಳ್ಳುವುದಿಲ್ಲ.

ಮನಿಷಾ ಅವರ ವೈಯುಕ್ತಿಕ ಬದುಕು ಮತ್ತು ವೃತ್ತಿ ಅನುಭವಗಳೇ ಅವರ ಉದ್ಯಮದ ನೀತಿ, ಸಂಸ್ಕೃತಿ ಮತ್ತು ಉದ್ದೇಶಗಳನ್ನು ತೀರ್ಮಾನಿಸುವಲ್ಲಿ ನೆರವಾಗಿವೆ.

ಬೆಳೆಯುವ ಹಾದಿಯಲ್ಲಿ..

ಮನಿಷಾ ಹುಟ್ಟಿ ಬೆಳೆದಿದ್ದು ಎಲ್ಲವೂ ಫರಿದಾಬಾದ್​​ನಲ್ಲಿ. ಅವರ ಪೋಷಕರು ಸಿದ್ಧಾಂತಗಳು, ಕಠಿಣ ಪರಿಶ್ರಮ ಮತ್ತು ಚಿಂತನೆಗಳಿಗೆ ತೆರೆದುಕೊಳ್ಳುವಿಕೆ, ಹಂಚಿಕೊಳ್ಳುವ ಸ್ವಾತಂತ್ರ್ಯ ಮತ್ತು ಶೈಕ್ಷಣಿಕ ವಿಚಾರಗಳಲ್ಲಿ ಕಟ್ಟುನಿಟ್ಟಾಗಿ ಬೆಳೆಸಿದ್ದರು.

ನನ್ನನ್ನು ಬೆಳೆಸಿದ ರೀತಿಗೆ ನಾನು ಕೃತಜ್ಱಳಾಗಿದ್ದೇನೆ. ಇದು ನನ್ನಲ್ಲಿ ಸ್ವತಂತ್ರ ಯೋಚನೆ, ಪರಿಶ್ರಮ ಮತ್ತು ಉದ್ದೇಶವನ್ನು ಜೊತೆಗಿಟ್ಟುಕೊಂಡೇ ಕಠಿಣ ಹಾದಿಯಲ್ಲೂ ನಡೆಯುವ ಆತ್ಮವಿಶ್ವಾಸವನ್ನು ತುಂಬಿದೆ ಎನ್ನುತ್ತಾರೆ ಮನಿಷಾ.

ಇದು ಯೋಗ್ಯ ಪ್ರಯಾಣ…

ಕೇಯ್ಸ್ ಹಾರ್ಬರ್ ಅನ್ನು ವ್ಯಕ್ತಿ ಮಾಲೀಕತ್ವದ ಸಂಸ್ಥೆ ಎನ್ನುವುದಕ್ಕಿಂತ ಜನರ ಮಾಲೀಕತ್ವದ ಸಂಸ್ಥೆ ಎನ್ನಬಹುದು ಚಿಕ್ಕದಾಗಿ ಆರಂಭಿಸುವುದರಿಂದ ಹಿಡಿದು, ಸರಿಯಾದ ಪ್ರತಿಭೆಗಳನ್ನು ಆರಿಸಿಕೊಳ್ಳುವವರೆಗೆ, ಗ್ರಾಹಕರನ್ನು ಪಡೆಯುವವರೆಗೆ, ಉತ್ಪನ್ನಗಳನ್ನು ಸಕಾಲಕ್ಕೆ ತಲುಪಿಸುವವರೆಗೆ, ಎಲ್ಲವೂ ಮನಿಷಾ ಅವರಿಗೆ ಕಲಿಯುವ ಮತ್ತು ಮರೆಯುವ ಅನುಭವಗಳಾಗಿದ್ದವು.

ನಮ್ಮ ಪ್ರಯಾಣದ ಉದ್ದಕ್ಕೂ ನಾವು ಹೊಸತನ್ನು ಸಂಶೋಧಿಸಿದೆವು. ಉದಾಹರಣೆಗೆ, ಅತ್ಯುತ್ತಮ ಪ್ರತಿಭೆಗಳನ್ನು ನಮ್ಮ ಜೊತೆ ಸೇರಿಸಿಕೊಳ್ಳುವುದು ಅತ್ಯಂತ ಸಂಕೀರ್ಣ ಕೆಲಸವಾಗಿತ್ತು. ಹೀಗಾಗಿ ನಾವು ನಮ್ಮ ಜೊತೆ ಸೇರುವವರನ್ನು ಅತ್ಯಂತ ಜತನದಿಂದ ಅರಿಸಿಕೊಂಡಿದ್ದೆವು.

ಜನರ ಜೊತೆ ಕೆಲಸ ಮಾಡುವ ಅನುಭೂತಿ ಮತ್ತು ಕಾಳಜಿ ಕೇಯ್ಸ್ ಹಾರ್ಬರ್​​ ಸಂಸ್ಕೃತಿಯ ಎರಡು ಪ್ರಮುಖ ಭಾಗಗಳಾಗಿವೆ ಎನ್ನುತ್ತಾರೆ ಮನಿಷಾ. ತಮ್ಮ ಸ್ವಂತ ಅನುಭವದಿಂದ ಕಲಿತ ಎರಡು ಮೂಲಭೂತ ಅಂಶಗಳಿವು. ಮನಿಷಾ ಅವರು ಮಾಹಿತಿ ತಂತ್ರಜಾನದಲ್ಲಿ 2001ರಲ್ಲಿ ಎಂಬಿಎ ಪದವಿ ಪಡೆದಿದ್ದರು. ಹೆಲ್ತ್​​ಕೇರ್ ಐಟಿ ಮತ್ತು ಇಆರ್​​ಪಿ ಸಂಸ್ಥೆಯೊಂದರಲ್ಲಿ ವೃತ್ತಿಜೀವನ ಆರಂಭಿಸಿದ್ದರು. ಬಳಿಕ ಇಂದ್ರಪ್ರಸ್ಥ ಅಪೋಲೋ ಸಂಸ್ಥೆ ಸೇರಿದ್ದರು.

ಲಿಂಗ ತಾರತಮ್ಯತೆ ಮೇಲಿನ ಅಸಮಾಧಾನ

ಲಿಂಗಾನುಪಾತದಲ್ಲಿನ ವೈರುಧ್ಯತೆ ಕೇವಲ ಐಟಿ ಕ್ಷೇತ್ರಕ್ಕಷ್ಟೇ ಸೀಮಿತವಾಗಿಲ್ಲ. ಅದು ದೇಶದಲ್ಲಿನ ಎಲ್ಲಾ ವಲಯಗಳಿಗೂ ವ್ಯಾಪಿಸಿದೆ ಎನ್ನುತ್ತಾರೆ ಮನಿಷಾ. ಅತ್ಯುತ್ತಮ ಪ್ರತಿಭೆಗಳನ್ನು ಪಡೆಯುವುದು ಕಷ್ಟದ ಕೆಲಸವೇನಲ್ಲ. ಆದರೆ, ನಮ್ಮಲ್ಲಿ ಸಾಂಪ್ರದಾಯಿಕ ಮನಸ್ಥಿತಿಯೊಂದಿದೆ. ಅದು ಮಹಿಳೆಯರು ವೃತ್ತಿ ಮಾಡುವುದನ್ನು ಸುಲಭದಲ್ಲಿ ಒಪ್ಪಿಕೊಳ್ಳುವುದಿಲ್ಲ. ಎನ್ನುತ್ತಾ ಅಸಮಾಧಾನ ವ್ಯಕ್ತಪಡಿಸುತ್ತಾರೆ ಮನಿಷಾ.

ಸಂಸ್ಥೆಗಳ ಆಡಳಿತ ಮಂಡಳಿಗಳು ತಮ್ಮಲ್ಲಿ ಪ್ರಗತಿಪರ ನೀತಿಗಳನ್ನು ಅಳವಡಿಸಿಕೊಳ್ಳಬೇಕು. ಮಹಿಳೆಯರ ಪ್ರತಿಭೆಯನ್ನು ಪುರಸ್ಕರಿಸುವುದರ ಜೊತೆಗೆ ಅವರು ಉದ್ಯೋಗದಲ್ಲಿ ದೊಡ್ಡ ದೊಡ್ಡ ಹುದ್ದೆಗಳನ್ನು ನಿರ್ವಹಿಸಲು ಅವಕಾಶ ಕಲ್ಪಿಸಿಕೊಡಬೇಕು ಎನ್ನುತ್ತಾರೆ ಮನಿಷಾ. ಹೀಗಾದಾಗ ಮಾತ್ರ ನಿಜವಾದ ಬದಲಾವಣೆ ಆರಂಭವಾಗುತ್ತದೆ ಎನ್ನುವುದು ಅವರ ಅಭಿಪ್ರಾಯ.

ವೈವಿಧ್ಯಮಯ ಕೆಲಸದ ಪರಿಸರವು ಸಂಸ್ಥೆಯ ಸಂಸ್ಕೃತಿಯತ್ತ ಹೊಸ ಅನುಭೂತಿಯನ್ನು ಸೃಷ್ಟಿಸುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಮಹಿಳೆಯರಿಗೆ ವಿವಿಧ ಕಾಲಘಟ್ಟದಲ್ಲಿ ಪುರುಷರಿಗಿಂತ ವಿಶೇಷ ಸೌಲಭ್ಯಗಳು ಬೇಕಾಗಬಹುದು. ಇಂತಹ ಸಂದರ್ಭಗಳಲ್ಲಿ ನಾವು ವ್ಯಕ್ತಿಗತವಾಗಿ ಮತ್ತು ಸಂಸ್ಥೆಯಾಗಿ ಅವರ ಕಾಳಜಿ ವಹಿಸಬೇಕು ಎನ್ನುತ್ತಾರೆ ಮನಿಷಾ.

ಮನಿಷಾರ ಸಹೋದ್ಯೋಗಿಯೊಬ್ಬರ ಮದುವೆಯಾದ ಬಳಿಕ ದೆಹಲಿಗೆ ವಾಸ್ತವ್ಯ ಬದಲಾಯಿಸಬೇಕಿತ್ತು. ಅವರು ಸಂಸ್ಥೆಯಲ್ಲಿ ಕೆಲಸ ಮುಂದುವರೆಸಲು ಇಚ್ಛಿಸಿದ್ದರು. ಹೀಗಾಗಿ ಸಂಸ್ಥೆಯು ಆಕೆಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕಲ್ಪಿಸಿತು. ಅದಕ್ಕಾಗಿ ಆಕೆಯ ಮನೆಯಲ್ಲೇ ಇಂಟರ್ನೆಟ್ ಮತ್ತಿತರ ಸೌಲಭ್ಯ ಕಲ್ಪಿಸಿ ಪುಟ್ಟ ಕಚೇರಿಯೊಂದನ್ನು ಸ್ಥಾಪಿಸಿತು. ತಂಡದ ಕಾರ್ಯಕ್ರಮಗಳಿದ್ದಾಗ ಆಕೆ ಚಂಡೀಗಢಕ್ಕೆ ಬಂದು ಹೋಗುತ್ತಾರೆ ಎನ್ನುತ್ತಾರೆ ಮನೀಷಾ.

ಬಹುತೇಕ ಉದ್ಯಮಿಗಳಿಗೆ, ಅವರ ವೈಯುಕ್ತಿಕ ಬದುಕು ಮತ್ತು ಕೆಲಸದ ಮಧ್ಯೆ ತೆಳುವಾದ ಅಂತರವಿರುತ್ತದೆ. ತಮಗಾಗಿ ಸಮಯ ಮೀಸಲಿರಿಸುವ ಯಾವುದೇ ಚಿಂತನೆ ಇರುವುದಿಲ್ಲ ಎನ್ನುತ್ತಾ ನಗುತ್ತಾರೆ ಮನಿಷಾ.

ಅವರಿಗೆ ಸಂಸ್ಥೆಯನ್ನು ನಿಭಾಯಿಸುವುದೇ ಅತಿ ಮುಖ್ಯವಾಗಿದೆ. ಆದರೆ, ಅವರ ಕೆಲಸದ ಒತ್ತಡಗಳು, ತಮ್ಮ ಮಗುವಿನ ಜೊತೆ ಕಾಲ ಕಳೆಯುವುದಕ್ಕೆ ಅಡ್ಡಿಯುಂಟಾಗದಂತೆ ನಿಭಾಯಿಸುತ್ತಾರೆ.

ಚಂಡೀಗಢ

ನವ್ಯೋದ್ಯಮ ಮತ್ತು ಚಂಡೀಗಢದ ಬಗ್ಗೆಯೂ ಅವರಿಗೆ ಅವರದ್ದೇ ಅದ ಅಭಿಪ್ರಾಯವಿದೆ. ದೊಡ್ಡ ನಗರಗಳು ಉತ್ತಮ ಸಂಪರ್ಕ, ವಾಯು ಸಂಪರ್ಕ, ಕೌಶಲ್ಯಭರಿತ ಮಾನವ ಸಂಪನ್ಮೂಲ, ತಂತ್ರಜಾನ ಇಚ್ಚಿಸೋ ಗ್ರಾಹಕರು ಎಲ್ಲವೂ ವ್ಯವಸ್ಥಿತವಾಗಿ ಸಿಗುತ್ತವೆ. ಈ ನಿಟ್ಟಿನಲ್ಲಿ ಹೇಳುವುದಾದರೆ, ಚಂಡೀಗಢವೂ ಅತ್ಯಂತ ವೇಗದಲ್ಲಿ ಸಂಪನ್ಮೂಲಗಳನ್ನು ಸೃಷ್ಟಿಸಿಕೊಳ್ಳುತ್ತಿದೆ. ಮುಂದೊಂದು ದಿನ ಉದ್ಯಮ ಸ್ಥಾಪನೆಗೆ ಅತ್ಯುತ್ತಮ ಆಯ್ಕೆಯ ನಗರವಾಗಿ ಬೆಳೆಯಲಿದೆ ಎನ್ನುತ್ತಾರೆ ಮನಿಷಾ.

Add to
Shares
0
Comments
Share This
Add to
Shares
0
Comments
Share
Report an issue
Authors

Related Tags