ಆವೃತ್ತಿಗಳು
Kannada

10,000 ಹೂಡಿಕೆ ಮಾಡಿ 4 ವರ್ಷಗಳೊಳಗೆ 1.5 ಕೋಟಿ ಆದಾಯ ಗಳಿಸಿದ ಬ್ರೋಕನ್ ಕಂಪಾಸ್ ಸಂಸ್ಥೆಯ ಸಾಧನೆ

ಟೀಮ್​​ ವೈ.ಎಸ್​​. ಕನ್ನಡ

11th Dec 2015
Add to
Shares
7
Comments
Share This
Add to
Shares
7
Comments
Share

ಕಳೆದ ಕೆಲ ವರ್ಷಗಳಲ್ಲಿ ಪ್ರವಾಸ ಎಂಬುದು ಒಂದು ಉದ್ಯಮ ಕ್ಷೇತ್ರವಾಗಿ ಸಾಕಷ್ಟು ಬೆಳೆದಿದೆ. ಬಹಳ ಜನ ದುಡ್ಡಿರುವವರು ಪ್ರವಾಸಕ್ಕಾಗಿ ದುಬಾರಿ ಸ್ಥಳಗಳನ್ನು ಆಯ್ದುಕೊಳ್ಳುತ್ತಾರೆ. ಮಾರುಕಟ್ಟೆಯಲ್ಲಿ ಪ್ರವಾಸಿ ಉದ್ಯಮಗಳಿಗೆ ಸಂಬಂಧಿಸಿದಂತೆ ದೊಡ್ಡ ಬೇಡಿಕೆ ಇದೆ. ಆದರೆ ಪ್ಯಾಕೇಜ್ಡ್ ಟೂರ್‌ಗಳನ್ನು ಏರ್ಪಡಿಸುವ ಸಂಸ್ಥೆಗಳು ಮಾತ್ರ ಮಾರುಕಟ್ಟೆಯಲ್ಲಿ ತಮ್ಮ ಅಸ್ತಿತ್ವ ಸಾಧಿಸುತ್ತಿವೆ. ಬೆಳೆಯುತ್ತಿವೆ. ಈ ಸಮಸ್ಯೆಗಳನ್ನು ಪರಿಹರಿಸಲು ಈಗ ಅನೇಕ ಹೊಸ ಉದ್ಯಮಗಳು ಮಾರುಕಟ್ಟೆಗೆ ಕಾಲಿಡುತ್ತಿವೆ.

ಇಂತಹ ಪರಿಸ್ಥಿತಿಯಲ್ಲಿ ಮಂಜರಿ ವರ್ಮಾ ಮತ್ತು ಅವನಿ ಪಟೇಲ್ ಎಂಬ ಸ್ನೇಹಿತರಿಗೆ ತಾವು ಮಾಡುತ್ತಿದ್ದ ಕೆಲಸಕ್ಕೆ ರಾಜೀನಾಮೆ ನೀಡಿ ಪ್ರವಾಸ ಕೈಗೊಳ್ಳಲು ನಿರ್ಧರಿಸಿದರು. ಇದು ನಿರೀಕ್ಷಿತವೇ ಆಗಿತ್ತು. ಪ್ರವಾಸ ಕ್ಷೇತ್ರದಲ್ಲೇ ಉದ್ಯಮ ಆರಂಭಿಸುವವರು ಬೇರೆಯವರಿಗಾಗಿ ತಮ್ಮ ಯೋಜನೆಗಳನ್ನು ಸಮರ್ಪಕವಾಗಿ ರೂಪಿಸಿಕೊಳ್ಳಲು ಪ್ರವಾಸ ಹೋಗಲೇಬೇಕಾಗುತ್ತದೆ. ‘ನಾವಿಬ್ಬರೂ ಚಿಕ್ಕಂದಿನಿಂದಲೂ ಸಾಕಷ್ಟು ಪ್ರವಾಸಗಳನ್ನು ಕೈಗೊಂಡಿದ್ದೇವೆ. ನಮಗೆ ಪ್ರವಾಸದಿಂದ ಸಾಕಷ್ಟು ಅನುಭವ, ಜ್ಞಾನ ಲಭಿಸಿತ್ತು. ಹೀಗಾಗಿ ನಮ್ಮ ಕುಟುಂಬಸ್ಥರು ಮತ್ತು ಸ್ನೇಹಿತರು ಯಾವಾಗಲೂ ಪ್ರವಾಸದ ವಿಚಾರದಲ್ಲಿ ನಮ್ಮ ಸಲಹೆ ಸೂಚನೆಗಳನ್ನು ಪಡೆಯುತ್ತಿದ್ದರು. ಹೀಗಾಗಿ ಆಗಲೇ ನಾವು ಪ್ರವಾಸವನ್ನೇ ಉದ್ಯಮವಾಗಿ ಮಾಡಿಕೊಳ್ಳುವ ಕುರಿತು ಚಿಂತಿಸಿದ್ದೆವು’ ಎನ್ನುತ್ತಾರೆ ಅವನಿ.

image


ಮಂಜರಿಯವರ ಕುಟುಂಬಸ್ಥರು ಸೇನಾ ಸೇವೆಯಲ್ಲಿದ್ದ ಕಾರಣ ಮಂಜರಿ ತಮ್ಮ ಬಾಲ್ಯವನ್ನು ದೇಶದ ವಿವಿಧ ಭಾಗಗಳನ್ನು ಸುತ್ತಿದ್ದರು. ಮುಂಬೈನಲ್ಲಿ ನೆಲೆಯೂರುವುದಕ್ಕೂ ಮೊದಲು ಮಂಜರಿ ಅವರು 8 ಶಾಲೆಗಳನ್ನು ಬದಲಿಸಿದ್ದರು. ನಂತರ ಜಾಹೀರಾತು ವಿಭಾಗದಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿದರು. ಪ್ರವಾಸ ಉದ್ಯಮ ಕ್ಷೇತ್ರಕ್ಕೆ ಕಾಲಿಡುವುದಕ್ಕೂ ಮೊದಲು ಅವರು ಜಾಹೀರಾತು ಉದ್ಯಮದಲ್ಲಿ ಕಾಪಿರೈಟರ್ ಆಗಿ 5 ವರ್ಷಗಳ ಅನುಭವ ಪಡೆದಿದ್ದರು. ನಂತರ ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿ ಪ್ರವಾಸ ಹೊರಟರು. ಇದರಿಂದ ಬಾಲ್ಯದಲ್ಲಿ ಅವರಿಗಿದ್ದ ಪ್ರವಾಸದ ಮೇಲಿನ ಪ್ರೀತಿ ಮರುಕಳಿಸಿತು ಮತ್ತು ಅದನ್ನೇ ಉದ್ಯಮವಾಗಿ ತೆಗೆದುಕೊಳ್ಳಲು ಅವರು ನಿರ್ಧರಿಸಿದರು.

ಮಂಜರಿ ಅವರು ಜಾಹೀರಾತು ಕ್ಷೇತ್ರದ ಉದ್ಯೋಗದಲ್ಲಿದ್ದ ವೇಳೆಯಲ್ಲಿ ಅವನಿ ಅವರು ಲಕ್ಷದ್ವೀಪದಲ್ಲಿ ಮರೀನ್ ಬಯೋಲಜಿ ವಿಚಾರವಾಗಿ ಸಂಶೋಧನೆ ಕೈಗೊಂಡಿದ್ದರು. ಇದೇ ಸಮಯದಲ್ಲಿ ಅವರಿಗೆ ಸಮುದ್ರದ ಮೇಲೆ ಪ್ರೀತಿ ಹುಟ್ಟಿದ್ದು. ಅವನಿ ಕೂಡ ಎರಡು ವರ್ಷಗಳ ಬಳಿಕ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಒಂದು ಸಾಹಸಮಯ ಪ್ರವಾಸಿ ಸಂಸ್ಥೆಯೊಂದಕ್ಕೆ ಟ್ರಾವೆಲ್ ಪ್ಲಾನರ್ ಆಗಿ ಕೆಲಸಕ್ಕೆ ಸೇರಿದರು. ಇಲ್ಲಿ ಟ್ರೇಡ್‌ನ ಕುರಿತಾಗಿ ಕಲಿಯುವ ಅವಕಾಶ ಅವರಿಗೆ ದೊರೆಯಿತು. ಇದರಿಂದ ಹೊಸ ಉದ್ಯಮವೊಂದನ್ನು ಆರಂಭಿಸುವ ಕುರಿತಾದ ಆಸೆ ದಿನೇ ದಿನೇ ಬೆಳೆಯುತ್ತಲೇ ಹೋಯಿತು. ಅವನಿ ಅವರು ಒಂದೂವರೆ ವರ್ಷ ಟ್ರಾವೆಲ್ ಪ್ಲಾನರ್ ಆಗಿ ಕಾರ್ಯನಿರ್ವಹಿಸಿದ ಬಳಿಕ ಅವರು ಕೆಲಸಕ್ಕೆ ರಾಜೀನಾಮೆ ನೀಡಿ ಮಂಜರಿ ಅವರ ಜೊತೆ ಸೇರಿ ಬ್ರೋಕನ್ ಕಂಪಾಸ್ ಎಂಬ ಉದ್ಯಮವನ್ನು ಆರಂಭಿಸಿದರು.

ಪ್ರವಾಸದ ಯೋಜನೆಗಳನ್ನು ರೂಪಿಸುವ ಮತ್ತು ಸಾಂಪ್ರದಾಯಿಕ ಪ್ರವಾಸಿ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಸಂಸ್ಥೆ ಬ್ರೋಕನ್ ಕಂಪಾಸ್. ಇದು ಸಮೂಹಗಳಿಗೆ ಅಥವಾ ಒಬ್ಬೊಬ್ಬರಿಗೆ ಪ್ರವಾಸಿ ಯೋಜನೆಗಳನ್ನು ರೂಪಿಸಿಕೊಡುತ್ತದೆ. ವಿಭಿನ್ನ ಸಂದರ್ಭಗಳಿಗಾಗಿ ವಿಷಯಾಧಾರಿತ ಪ್ರವಾಸಗಳನ್ನು ಆಯೋಜಿಸುವ ಮತ್ತು ಪ್ರವಾಸಿಗರಿಗೆ ಹೊಸ ಸ್ಥಳಗಳನ್ನು ನೋಡುವುದರಿಂದ ಉಂಟಾಗುವ ಹೆಮ್ಮೆ, ಸಂತೋಷಗಳನ್ನು ಉಂಟುಮಾಡುವ ರೀತಿಯಲ್ಲಿ ಕಾರ್ಯನಿರ್ವಹಿಸಲು ಸಂಸ್ಥೆ ಯೋಜನೆ ರೂಪಿಸಿದೆ. ಪ್ರವಾಸಿಗರ ಇಚ್ಛೆಗಳನ್ನು ಈಡೇರಿಸುವ ಸಲುವಾಗಿ ಒಂದು ಪ್ರತ್ಯೇಕ ವಿಭಾಗವನ್ನೇ ಹೊಂದಿದೆ.

ಪ್ರವಾಸಿಗರ ಪ್ರವಾಸದ ಯೋಜನೆ ಮತ್ತು ಉದ್ದೇಶವನ್ನು ತಿಳಿಯುವ ಸಲುವಾಗಿ ಸಂಸ್ಥೆಯ ಒಂದು ಪ್ರಶ್ನಾವಳಿಗಳ ಪಟ್ಟಿಯನ್ನು ಭರ್ತಿ ಮಾಡಿಕೊಡಬೇಕಾಗುತ್ತದೆ. ಇದಾದ ಬಳಿಕ ಪ್ರವಾಸಿಗರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಸಲುವಾಗಿ ಅಂದರೆ ಪ್ರವಾಸಿಗರ ಅಗತ್ಯಗಳು, ಅವರ ಬಜೆಟ್, ಅವರು ಪ್ರವಾಸ ಹೋಗಬೇಕೆಂದಿರುವ ಸ್ಥಳಗಳು, ಅವರು ಉಳಿದುಕೊಳ್ಳಲು ಬಯಸುವ ಸ್ಥಳಗಳನ್ನು ಸಮರ್ಪಕವಾಗಿ ಅರಿತುಕೊಳ್ಳಲು ಒಂದು ಸಂದರ್ಶನವನ್ನೂ ಏರ್ಪಡಿಸಲಾಗುತ್ತದೆ. ನಂತರ ಹೋಟೆಲ್‌ಗಳು, ವಿತರಕರು, ಪ್ರವಾಸಿ ಪಾಲುದಾರರನ್ನು ಸಂಪರ್ಕಿಸಿ ಅಂತಿಮ ಪ್ರವಾಸ ಯೋಜನೆಯನ್ನು ಗ್ರಾಹಕರಿಗೆ ತಲುಪಿಸಲಾಗುತ್ತದೆ. ಈ ಯೋಜನೆಯ ಬಗ್ಗೆ ಗ್ರಾಹಕರ ಅಭಿಪ್ರಾಯ ಪಡೆದ ಬಳಿಕ ಅವರಿಗಾಗಿ ಪ್ರವಾಸವನ್ನು ನಿಗದಿಗೊಳಿಸಲಾಗುತ್ತದೆ.

ಬ್ರೋಕನ್ ಕಂಪಾಸ್‌ನಲ್ಲಿ ಇಷ್ಟವಾಗುವ ಮತ್ತೊಂದು ವಿಚಾರ ಎಂದರೆ ಅವರು ತಮ್ಮಲ್ಲಿ ಪ್ರವಾಸ ಕೈಗೊಳ್ಳುವ ಗ್ರಾಹಕರಿಗೆ 24/7 ಲಭ್ಯರಿರುತ್ತಾರೆ. ಪ್ರವಾಸದಾದ್ಯಂತ ಲಭ್ಯರಿರುತ್ತಾರೆ. ಹೀಗಾಗಿ ಪ್ರವಾಸಿಗರಿಗೆ ಎಲ್ಲಿಯೂ ಗೊಂದಲವುಂಟಾಗುವ ಸಾಧ್ಯತೆಯೇ ಇರುವುದಿಲ್ಲ. ರಜಾದಿನಗಳು ಸಂಸ್ಥೆಯ ಆದಾಯದ ಮುಖ್ಯ ಮೂಲ. ಇಲ್ಲಿ ಎಲ್ಲರಿಗೂ ಒಂದೇ ರೀತಿಯ ಮಾದರಿಯನ್ನು ಅನುಸರಿಸಲಾಗುವುದಿಲ್ಲ. ರಜಾದಿನಗಳ ಪ್ರವಾಸವನ್ನು ಏರ್ಪಡಿಸುವಾಗ ಹೊಸ ಪ್ರವಾಸಿ ಏಜೆಂಟ್‌ಗಳನ್ನು ಪರಿಚಯಿಸಿಕೊಳ್ಳುವುದು, ಹೊಸ ಹೋಟೆಲ್‌ ಮತ್ತು ಪ್ರವಾಸ ಪಾಲುದಾರರನ್ನು ಗುರುತಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಇದಲ್ಲದೇ ಕೆಲವೊಮ್ಮೆ ಗ್ರಾಹಕರು ಕೇವಲ ಬ್ರೋಕನ್ ಕಂಪಾಸ್ ಸಂಸ್ಥೆಯನ್ನು ಸಂಪರ್ಕಿಸುತ್ತಾರೆ, ಆದರೆ ಪೂರ್ತಿ ಪ್ರವಾಸವನ್ನು ಬುಕ್ ಮಾಡದ ಗ್ರಾಹಕರಿಂದ ಸಣ್ಣ ಮಟ್ಟದ ಆದಾಯ ಗಳಿಸುವುದು ಸಾಧ್ಯವಾಗುತ್ತದೆ. ಪ್ರಸ್ತುತ ಪ್ರವಾಸ ಉದ್ಯಮ ಕ್ಷೇತ್ರದಲ್ಲಿ ಅವನಿ ಮತ್ತು ಮಂಜರಿ 5 ವರ್ಷಗಳ ಅನುಭವ ಪಡೆದಿದ್ದಾರೆ.

“ನಿಗದಿಗೊಳಿಸಲಾದ ರಜಾದಿನಗಳ ಮಾರುಕಟ್ಟೆಯ ಗಾತ್ರದ ಕುರಿತು ಯಾವುದೇ ರೀತಿಯ ಸ್ವತಂತ್ರ ಮಾಹಿತಿ ಲಭಿಸುವುದಿಲ್ಲ. ಇದು ಬೆಳೆಯುತ್ತಿರುವ ಉದ್ಯಮ ಕ್ಷೇತ್ರ. ಕಳೆದ ನಾಲ್ಕೈದು ವರ್ಷಗಳಲ್ಲಿ ಈ ಹಿಂದೆ ಸಮೂಹ ಮತ್ತು ಪ್ಯಾಕೇಜ್ಡ್ ಟೂರ್‌ಗಳನ್ನು ಆಯ್ದುಕೊಂಡಿದ್ದ ಅನೇಕ ಕುಟುಂಬಗಳು ಈಗ ನಿಗದಿತ ರಜಾದಿನಗಳ ಪ್ರವಾಸಕ್ಕಾಗಿ ಬ್ರೋಕನ್ ಕಂಪಾಸ್ ಸಂಸ್ಥೆಯ ಮೊರೆಹೋಗುತ್ತಿದ್ದಾರೆ. ಹೀಗಾಗಿ ಮಾರುಕಟ್ಟೆ ಬೆಳವಣಿಗೆ ಕಾಣಬಹುದಾಗಿದೆ. ಗ್ರಾಹಕರು ತಮಗೆ ಹೊಂದುವ ಪ್ರವಾಸಿ ಪ್ಯಾಕೇಜ್‌ಗಳನ್ನು ಹೊಂದಬಹುದಾಗಿರುತ್ತದೆ” ಎಂದಿದ್ದಾರೆ ಅವನಿ.

ಈ ಕ್ಷೇತ್ರದಲ್ಲಿದ್ದ ಸಣ್ಣ ಅನುಭವದಿಂದ ಅವನಿ ಮತ್ತು ಮಂಜರಿ ದೀರ್ಘಕಾಲದ ಉದ್ಯಮಯಾನವನ್ನು ಕೈಗೊಂಡಿದ್ದಾರೆ. ಕಠಿಣ ಪರಿಶ್ರಮದಿಂದಲೇ ಇದು ಸಾಧ್ಯವಾಗಿದೆ. “ಅಧಿಕೃತವಾಗಿ ಆಗಸ್ಟ್ 2010ರಲ್ಲಿ ಬ್ರೋಕನ್ ಕಂಪಾಸ್ ಸಂಸ್ಥೆಯನ್ನು ಆರಂಭಿಸಲಾಯಿತು. ಕೇವಲ 10,000 ಹೂಡಿಕೆಯೊಂದಿಗೆ ಸಂಸ್ಥೆ ಆರಂಭವಾಯಿತು. ಈಗ ಸಂಸ್ಥೆ ಉತ್ತಮವಾಗಿ ಬೆಳೆದಿದೆ. ಆರ್ಥಿಕವಾಗಿ ಮಾತ್ರವಲ್ಲದೇ ಉದ್ಯಮ ಅಭಿವೃದ್ಧಿ, ನಿರ್ವಹಣೆ, ಮಾರ್ಕೆಟಿಂಗ್ ಸೇರಿದಂತೆ ಎಲ್ಲಾ ರೀತಿಯಿಂದಲೂ ಅಭಿವೃದ್ಧಿ ಸಾಧಿಸಿದೆ. 2013-14ನೇ ಸಾಲಿನಲ್ಲಿ ನಮಗೆ 1.5 ಕೋಟಿ ಆದಾಯ ಬಂದಿತ್ತು. ಹೊಸ ಸಮೂಹ ಪ್ರವಾಸವನ್ನು ಆರಂಭಿಸುತ್ತಿರುವುದರಿಂದ ಸಂಸ್ಥೆ ಈ ವರ್ಷಾಂತ್ಯದೊಳಗೆ ಶೇ.10ರಷ್ಟು ಬೆಳವಣಿಗೆ ಸಾಧಿಸುವ ನಿರೀಕ್ಷೆ ಇದೆ” ಎಂದಿದ್ದಾರೆ ಅವನಿ.

ಸದಾ ಬೇರೆಯವರಿಗಾಗಿ ಪ್ರವಾಸವನ್ನು ರೂಪಿಸುವುದು ಮತ್ತು ಸಂಘಟಿಸುವುದು ಬೇಸರದ ಕೆಲಸವಲ್ಲ. ಇದರಲ್ಲಿಯೂ ಆಸಕ್ತಿದಾಯಕ ವಿಷಯಗಳಿರುತ್ತವೆ. ಈ ಬಗ್ಗೆ ಹೇಳುತ್ತಾ ಅವನಿ ತಮ್ಮ ಅನುಭವವೊಂದನ್ನು ಹಂಚಿಕೊಂಡಿದ್ದಾರೆ. ‘ನಮಗೆ ಒಮ್ಮೆ ಅಮೆರಿಕಾ ಪ್ರವಾಸ ಕೈಗೊಳ್ಳಬೇಕೆಂದಿದ್ದ ಪ್ರವಾಸಿ ದಂಪತಿಗಳಿಗೆ ತಮ್ಮ ಐದನೇ ವರ್ಷದ ವಿವಾಹ ವಾರ್ಷಿಕೋತ್ಸವದಂದು ಬ್ಯಾಟ್ ಮ್ಯಾನ್ ಅವರಿಗೆ ಶುಭ ಹಾರೈಸಬೇಕೆಂಬ ಇಚ್ಛೆ ಇತ್ತು. ಅವರ ಆಸೆಯನ್ನು ನಾವು ಪೂರೈಸಿದೆವು. ಇದನ್ನು ಮಾಡುವಾಗ ನಮಗೆ ಇಂತಹ ಅನೇಕ ಚಲನಚಿತ್ರ ಪಾತ್ರಗಳೂ ಸಹ ಲಭಿಸುತ್ತವೆ ಎಂಬುದು ತಿಳಿಯಿತು. ಇದೊಂದು ಮಜವಾದ ಮತ್ತು ವಿಭಿನ್ನವಾದ ಪ್ರವಾಸದ ಯೋಜನೆಯಾಗಿತ್ತು’ ಎನ್ನುತ್ತಾರೆ ಅವನಿ.

ಹೊಸದಾಗಿ ಉದ್ಯಮವನ್ನು ಆರಂಭಿಸಲಿಚ್ಛಿಸುವವರಿಗೆ ಅವನಿ ‘ನಿಮ್ಮ ಗುರಿಯಲ್ಲಿ ಸ್ಥಿರವಾಗಿರಿ ಮತ್ತು ಶ್ರದ್ಧೆಯಿಡಿ. ಕಷ್ಟಪಟ್ಟು ಕೆಲಸ ಮಾಡಿ, ತಪ್ಪುಗಳಿಂದ ಕಲಿಯಿರಿ, ಸೋಲಲು ಎಂದೂ ಹೆದರಬೇಡಿ. ನಿಮ್ಮ ಮಾರುಕಟ್ಟೆಯ ಸಂಶೋಧನೆಯನ್ನು ಸರಿಯಾಗಿ ಮಾಡಿ ಮತ್ತು ನೀವೇನು ಮಾಡಬೇಕೆಂದಿದ್ದಿರೋ ಅದರ ಬಗ್ಗೆ ಸರಿಯಾದ ಯೋಜನೆ ಮಾಡಿ’ ಎಂಬ ಸಲಹೆ ನೀಡುತ್ತಾರೆ.

ಲೇಖಕರು: ಆದಿತ್ಯಾ ಭೂಷಣ್​​ ದ್ವಿವೇದಿ

ಅನುವಾದಕರು: ವಿಶ್ವಾಸ್​​​​​​​​

Add to
Shares
7
Comments
Share This
Add to
Shares
7
Comments
Share
Report an issue
Authors

Related Tags