ಆವೃತ್ತಿಗಳು
Kannada

ಸಾಧನೆಯ ಹಾದಿಯಲ್ಲಿದೆ ಕ್ಯಾಪ್ರಿಕೋಸ್ಟ್​​.ಕಾಮ್​​..!

ಟೀಮ್​ ವೈ.ಎಸ್​. ಕನ್ನಡ

YourStory Kannada
24th Dec 2015
4+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಬೆಂಗಳೂರು ಮೂಲದ ಪೀಠೋಪಕರಣ ಸಂಸ್ಥೆ ಕ್ಯಾಪ್ರಿಕೋಸ್ಟ್. ಕಾಮ್ ಜನಮೆಚ್ಚುಗೆಯ ಹಾದಿಯಲ್ಲಿದೆ. ಅತ್ಯಾಧುನಿಕ ಪೀಠೋಪಕರಣ ಹಾಗೂ ಅಲಂಕಾರ ವಸ್ತುಗಳ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ capricoast.com ನಿಧಿ ಸಂಗ್ರಹದಲ್ಲಿಯೂ ಹಿಂದೆ ಉಳಿದಿಲ್ಲ. ಸಂಸ್ಥೆಗೆ ಉತ್ತಮ ಆರ್ಥಿಕ ಬೆಂಬಲ ದೊರೆತಿದ್ದು, ಇತ್ತೀಚೆಗೆ ಮಾರುಕಟ್ಟೆಯಲ್ಲಿ 3.5 ಮಿಲಿಯನ್ ಡಾಲರ್ ಹುಟ್ಟುವಳಿ ಸಂಗ್ರಹ ಮಾಡಿದೆ. ಪ್ರಸಕ್ತ ಇರುವ ಹೂಡಿಕೆದಾರ ಸಂಸ್ಥೆ ಎಸೆಲ್ ಪಾರ್ಟನಸ್ಸ್ ಇಂಡಿಯಾ ಮತ್ತು ಆರ್ ಬಿ ಇನ್ ವೆಸ್ಟ್ ಮೆಂಟ್ ಮಾರ್ಗದರ್ಶನದಲ್ಲಿ ಈ ಸಾಧನೆ ಮಾಡಲಾಗಿದೆ.

ಸಂಸ್ಥೆಯ ಬಗ್ಗೆ ಒಂದಿಷ್ಟು ಮಾಹಿತಿ.

capricoast.co ಇದರ ಸಂಸ್ಥಾಪಕ ಜಾವೇದ್ ಅಯಾಜ್. ಇದು 55 ಕ್ರಿಯಾಶೀಲ ಸದಸ್ಯರನ್ನು ಒಳಗೊಂಡಿದೆ. ಡಿಸೈನ್ ವಿನ್ಯಾಸಕಾರರು , ತಂತ್ರಜ್ಞರು ಹೀಗೆ ಎಲ್ಲ ಅಗತ್ಯ ಸಿಬ್ಬಂದಿ ಇದರ ಭಾಗವಾಗಿದ್ದಾರೆ. 2015ರಲ್ಲಿ ಎಸೆಲ್ ಇಂಡಿಯಾ ನೇತೃತ್ವದಲ್ಲಿ 1.25 ಮಿಲಿಯನ್ ಡಾಲರ್ ನಿಧಿ ಸಂಗ್ರಹಿಸಲಾಯಿತು.

ವಿನೋದ್ ಚಂದ್ರನ್ ಜೊತೆ ಕೈ ಜೋಡಿಸಿದ ಜಾವೇದ್ zansaar.com ಎಂಬ ಸಂಸ್ಥೆಯನ್ನು ಕೂಡ ಸ್ಥಾಪಿಸಿದರು. ಮನೆಯ ಅಲಂಕಾರಕ್ಕಾಗಿನ ಉತ್ಪನ್ನಗಳನ್ನು ಈ ಕಾಮರ್ಸ್ ಮೂಲಕ ಪೂರೈಸಲಾಗುತ್ತಿದೆ. 2012ರಲ್ಲಿ ಎಸೆಲ್ ಪಾರ್ಟ್​​ನಸ್ಸ್ ಮತ್ತು ಟೈಗರ್ ಗ್ಲೋಬಲ್ ಬ್ಯಾಕ್ ಮುಖಾಂತರ 6 ಮಿಲಿಯನ್ ಡಾಲರ್ ನಿಧಿಯನ್ನು ಸಂಗ್ರಹಿಸಲಾಯಿತು. ಕ್ಯಾಪ್ರಿಕೋಸ್ಟ್ ಸಂಸ್ಥೆಯಲ್ಲಿ ಮಾರುಕಟ್ಟೆ ಉಸ್ತುವಾರಿ ಹೊತ್ತಿರುವ ಜಿದೇಶ್ ಹರಿದಾಸ್ ಈ ಕುರಿತು ಮಾತನಾಡಿದ್ದಾರೆ. ಹಲವು ಬಾರಿ ಕ್ಯಾಪ್ರಿಕೋಸ್ಟ್ ಮತ್ತು zansaar.com , ಪರಸ್ಪರ ಲಾಭಕ್ಕಾಗಿ ವ್ಯತಿರಿಕ್ತ ಮಾರುಕಟ್ಟೆಯ ಮೊರೆ ಹೋದ ನಿದರ್ಶನಗಳು ಕೂಡ ಇವೆ ಎನ್ನುತ್ತಾರೆ. ಎರಡೂ ಸಂಸ್ಥೆಯ ಉತ್ಪನ್ನಗಳ ನಡುವೆ ಅಂತರ್ಗತ ಭಾವವಿದೆ. ಜಂಝೀರ್ ಮನೆಗೆ ಸಂಬಂಧಿಸಿದ ಉತ್ಪನ್ನಗಳ ಕುರಿತಾದರೆ, ಕ್ಯಾಪ್ರಿಕೋಸ್ಟ್ ಮನೆಯ ಅಗತ್ಯಗಳನ್ನು ಪೂರೈಸುತ್ತದೆ. ಹೀಗೆ ಒಂದು ವೇದಿಕೆ ಶಿಫಾರಸು ಮಾಡಿದರೆ ಸಹಜವಾಗಿಯೇ ಇನ್ನೊಂದು ಅದರ ಮಾರುಕಟ್ಟೆಯ ಅಗತ್ಯವನ್ನು ಈಡೇರಿಸುತ್ತದೆ ಎನ್ನುತ್ತಾರೆ ಹರಿದಾಸ್.

image


ಆರ್ ಬಿ ಇನ್​​​ವೆಸ್ಟ್ ಮೆಂಟ್ ಸಿಂಗಾಪುರ ಮೂಲದ ವೆಂಚರ್ ಕ್ಯಾಪಿಟಲ್ ಆಗಿದೆ. ಈ ಹಿಂದೆ ಆರ್ ಬಿ ಮುಖ್ಯವಾಗಿ ಸ್ಪಲ್ ಸೇರಿದಂತೆ ಹಲವು ಸಂಸ್ಥೆಗಳಲ್ಲಿ ಹೂಡಿಕೆ ಮಾಡಿತ್ತು. ಮುಖ್ಯವಾಗಿ ಆಗ್ನೇಯ ಏಷ್ಯಾ ರಾಷ್ಟ್ರಗಳು ಮತ್ತು ಭಾರತದಲ್ಲಿ ಮುಖ್ಯವಾಗಿ ಕಾರ್ಯ ನಿರ್ವಹಣೆ ಮಾಡಲಾಗುತ್ತಿದೆ. ಇದು ಆರ್ ಬಿ ಸಂಸ್ಥೆ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಬೋಥ್ರಾ ಅವರ ಮಾತು.

ಕ್ಯಾಪ್ರಿಕೋಸ್ಟ್ ಈ ಹಿಂದೆ ಅತ್ಯಾಧುನಿಕ ಪೀಠೋಪಕರಣ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಸ್ಲೀಕ್ ಇಂಟರ್ ನ್ಯಾಶನಲ್ ಜೊತೆ ಕೈ ಜೋಡಿಸಿತ್ತು. ಆನ್ ಲೈನ್ ಮತ್ತು ಆಫ್​​ ಲೈನ್ ವ್ಯವಹಾರದ ಮೂಲಕ ನವೀನ ಪೀಠೋಪಕರಣಗಳನ್ನು ಪೂರೈಕೆ ಮಾಡುತ್ತಿತ್ತು. ಈ ರೀತಿಯ ವ್ಯವಸ್ಥೆ ಈ ಕ್ಷೇತ್ರದಲ್ಲೇ ಇದೇ ಮೊದಲಾಗಿತ್ತು ಎಂದು ಸಂಸ್ಥೆ ಹಕ್ಕು ಮಂಡಿಸಿದೆ. ಯಾವುದೇ ಅಡೆ ತಡೆಗಳಿಲ್ಲದೆ ಬಳಕೆದಾರರಿಗೆ ಅತ್ಯಂತ ತ್ವರಿತಗತಿಯಲ್ಲಿ ಉತ್ಪನ್ನಗಳನ್ನು ಪೂರೈಸುವುದೇ ಸಂಸ್ಥೆಯ ಧ್ಯೇಯವಾಗಿತ್ತು ಎನ್ನುತ್ತಾರೆ ಜಾವೇದ್.

ಪೀಠೋಪಕರಣಗಳನ್ನು ಖರೀದಿಸುವ ಸಂದರ್ಭದಲ್ಲಿ ಇದ್ದ ಪಾರದರ್ಶಕತೆಯ ಕೊರತೆ, ವಿಳಂಬವಾಗಿ ಪೂರೈಕೆ ಮಾಡುವುದು, ಸೀಮಿತ ಅವಕಾಶ ಹೀಗೆ ಹತ್ತು ಹಲವು ಅಡೆ ತಡೆಗಳನ್ನು ನಿವಾರಿಸಿ ಬಳಕೆದಾರರ ಮನ ಗೆದ್ದಿದ್ದೇವೆ ಎನ್ನುತ್ತಾರೆ ಜಾವೇದ್.

ಇದೀಗ ದೇಶಾದ್ಯಂತ 50 ಶೋ ರೋಮ್​​​ಗಳನ್ನು ಕ್ಯಾಪ್ರಿಕೋಸ್ಟ್ ಹೊಂದಿದೆ. ದೇಶದ ಪ್ರಮುಖ ಆರು ಮೆಟ್ರೋ ನಗರಗಳಲ್ಲಿ ಸಂಸ್ಥೆ ಉತ್ತಮ ವ್ಯವಹಾರ ನಡೆಸುತ್ತಿದೆ. ಇದೇ ವೇಳೆ ಕೊಯಂಬತ್ತೂರು, ಮಧುರೈ, ಮಂಗಳೂರು, ಮೈಸೂರು ಸೇರಿದಂತೆ ಹಲವು ನಗರಗಳಲ್ಲಿ ಉತ್ತಮ ವ್ಯವಹಾರ ನಡೆಯುತ್ತಿದೆ ಎನ್ನುತ್ತಾರೆ ಜಾವೇದ್. ನಮ್ಮ ಹಿಂದಿನ ಬಳಕೆದಾರರು ಸಾಮಾನ್ಯವಾಗಿ ಹೊಸ ಗ್ರಾಹಕರಿಗೆ ನಮ್ಮ ಸಂಸ್ಥೆಯ ಹೆಸರನ್ನೇ ಪ್ರಸ್ತಾಪ ಮಾಡುತ್ತಾರೆ. ಇದು ವ್ಯಾಪಾರಕ್ಕೆ ಅನುಕೂಲವಾಗಿದೆ ಎನ್ನುತ್ತಾರೆ ಜಾವೇದ್.

ಕ್ಯಾಪ್ರಿಕೋಸ್ಟ್ , ಮಧ್ಯ ಪ್ರಾಚ್ಯ ಗ್ರಾಹಕರ ಹಿತಾಸಕ್ತಿ ಮತ್ತು ಅಭಿರುಚಿಯನ್ನು ಗಮನದಲ್ಲಿರಿಸಿ ಪ್ರತ್ಯೇಕ ವಿಭಾಗವೊಂದನ್ನು ತೆರೆದಿದೆ. ಅಲ್ಲಿನ ಸಮಯಕ್ಕೆ ಅನುಗುಣನಾಗಿ ಕೆಲಸ ನಿರ್ವಹಿಸುಲಾಗುತ್ತಿದೆ , ವ್ಯವಹಾರಕ್ಕೆ ಸಂಬಂಧಿಸಿ ಹೇಳುವುದಾದರೆ ಉತ್ತಮ ಆದಾಯ ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಹರಿದು ಬರುತ್ತಿದೆ ಎನ್ನುತ್ತಾರೆ ಜಾವೇದ್.

ಈ ಮೊದಲೇ ಮಾಡಿಕೊಳ್ಳಲಾದ ರಚನೆಯ ಆಧಾರದಲ್ಲಿ ಬ್ರಾಂಡೆಡ್ ಉತ್ಪನ್ನಗಳನ್ನು ಸಿದ್ಧಪಡಿಸಲಾಗುತ್ತಿದೆ. ಮತ್ತು ಪ್ರತಿ ವ್ಯವಹಾರದಲ್ಲಿ ಕಮಿಷನ್ ಪಡೆದುಕೊಳ್ಳಲಾಗುತ್ತಿದೆ ಎನ್ನುತ್ತಾರೆ ಜಾವೇದ್.

ಎಸೆಲ್ ಇಂಡಿಯಾ ಪಾರ್ಟನ್ಸ್ ನ ಪಾಲುದಾರರಾಗಿರುವ ಪ್ರಶಾಂತ್ ಪ್ರಕಾಶ್ ಕೂಡ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಕ್ಯಾಪ್ರಿಕೋಸ್ಟ್ ಇಂಡಿಯಾ ಉತ್ತಮ ಸಾಧನೆ ಮಾಡಿದೆ. ಅದರ ಬಿಸೆನೆಸ್ ಮಾದರಿ ನಮ್ಮನ್ನು ಪ್ರಭಾವಿತಗೊಳಿಸಿದೆ. ಗ್ರಾಹಕರ ಬೇಡಿಕೆ ಮತ್ತು ಪೂರೈಕೆ ಈ ಎರಡೂ ಕ್ಷೇತ್ರಗಳಿಂದ ಸಂತೃಪ್ತಿ ಭಾವ ಅನುಭವವಾಗುತ್ತಿದೆ ಎನ್ನುತ್ತಾರೆ ಪ್ರಕಾಶ್.

ಭಾರತದ ನಾಗರಿಕರ ಖರೀದಿ ಶಕ್ತಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವುದರಿಂದ ಸ್ವಾಭಾವಿಕವಾಗಿಯೇ ಅತ್ಯುನ್ನತ ದರ್ಜೆಯ ಪಿಠೋಪಕರಣ ಮತ್ತು ಗೃಹ ಅಲಂಕಾರದಲ್ಲಿ ಕೂಡ ಭಾರತೀಯ ಹಿಂದುಳಿದಿಲ್ಲ. ಆತನ ಅಭಿರುಚಿ ಕೂಡ ಬದಲಾಗಿದೆ. ಅದೇ ರೀತಿ ಅತ್ಯಾಧುನಿಕ ಪೀಠೋಪಕರಣಗಳು, ಗೃಹಾಂಲಕಾರ ವಸ್ತುಗಳು ಆತನ ಮೆಚ್ಚುಗೆ ಪಡೆಯುತ್ತಿವೆ.

ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಹಲವು ಸಂಸ್ಥೆಗಳ ಕಾರ್ಯ ನಿರ್ವಹಣೆ ಇದಕ್ಕೆ ಕನ್ನಡಿ ಹಿಡಿಯುತ್ತಿವೆ. ಆಗಸ್ಟ್ ತಿಂಗಳಲ್ಲಿ ಲೈವ್ ಸ್ಪೇಸ್ ಎಂಬ ಸಂಸ್ಥೆ ಪ್ರಸಕ್ತ ಇರುವ ಹೆಲಿಯೋನ್ ಸಂಸ್ಥೆ ಮೂಲಕ 8 ಮಿಲಿಯನ್ ಡಾಲರ್ ನಿಧಿ ಸಂಗ್ರಹ ಮಾಡಿತ್ತು. ಇದೇ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಹೋಮ್ ಲೇನ್, ಅರ್ಬನ್ ಲೇಡರ್, ಪೇಬ್ ಪರ್ನಿಶ್ ಮೊದಲಾದ ಹೆಸರಾಂತ ಸಂಸ್ಥೆಗಳು ಗ್ರಾಹಕ ಕೇಂದ್ರೀತ ಉತ್ಪನ್ನಗಳತ್ತ ಗಮನ ನೆಟ್ಟಿವೆ.

ನಿಧಿ ಸಂಗ್ರಹದಲ್ಲಿ ದಾಖಲೆ ಮಾಡಿರುವ ಕ್ಯಾಪ್ರಿಕೋಸ್ಚ್ ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಇನ್ನಷ್ಟು ವಿಸ್ತರಣೆ ಸಾಧ್ಯತೆಯತ್ತ ಕಣ್ಣು ಹರಿಸಿದೆ. ಉತ್ಪನ್ನ ಅಭಿವೃದ್ದಿ ಮತ್ತು ಮಾರುಕಟ್ಟೆ ಬೆಳವಣಿಗೆಯೇ ಮುಖ್ಯ ಗುರಿ ಎಂದು ಹೇಳಿದೆ. ಆನ್ ಲೈನ್ ಮತ್ತು ಆಫ್​​ ಲೈನ್ ನಲ್ಲಿ ಕೂಡ ಗಮನ ಹರಿಸಿದೆ.

ರೆಫರಲ್ ಸಿಸ್ಟ್ಂನ್ನು ಇನ್ನಷ್ಟು ಸರಳೀಕರಣಗೊಳಿಸುವುದರ ಜೊತೆ ಜೊತೆಗೆ ಮೊಬೈಲ್ ಅಪ್ಲಿಕೇಷನ್ ವ್ಯವಸ್ಥೆ ಬಲಪಡಿಸಲು ಚಿಂತನೆ ನಡೆಸಲಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ಮೊಬೈಲ್ ಆಪ್ ಬಿಡುಗಡೆಯಾಗಲಿದೆ.

ದೇಶದಲ್ಲಿ ಪ್ರಸಕ್ತ ಬಡ್ಡಿದರ ಕಡಿತ ಮಾಡಲಾಗಿದ್ದು, ಇದು ಬಂಡವಾಳ ಹೂಡಿಕೆಗೆ ಉತ್ತೇಜನಕಾರಿಯಾಗಲಿದೆ. ಹೀಗಂತ ಜಾಗತಿಕ ಮೌಲ್ಯಮಾಪನ ಸಂಸ್ಥೆ ಫಿಚ್ ಹೇಳಿದೆ. ಇದರಿಂದ ಸಹಜವಾಗಿಯೇ ಆರ್ಥಿಕ ಚಟುವಟಿಕೆಗಳು ಗರಿಗೆದರಲಿವೆ. ಪೀಠೋಪಕರಣಗಳ ವಹಿವಾಟು 20 ಮಿಲಿಯನ್ ಡಾಲರ್ ಗಳಾಗಲಿವೆ ಎಂದು ಅಂದಾಜಿಸಲಾಗಿದೆ. ಈ ಕ್ಷೇತ್ರದಲ್ಲಿ ಹಲವು ಪೈಪೋಟಿ ದಾರರಿದ್ದರೂ ಬೆಳವಣಿಗೆಗೆ ವಿಪುಲ ಅವಕಾಶಗಳಿವೆ. ಅನಿವಾಸಿ ಭಾರತೀಯರನ್ನು ಪ್ರಮುಖ ಗುರಿಯಾಗಿ ಆಯ್ಕೆ ಮಾಡಿರುವ ಕ್ಯಾಪ್ರಿಕೋಸ್ಟ್, ಉಜ್ವಲ ಭವಿಷ್ಯಕ್ಕೆ ಮುನ್ನುಡಿ ಬರೆಯುವ ಅವಕಾಶ ತನ್ನದಾಗಿಸಿಕೊಂಡಿದೆ. ಹೂಡಿಕೆದಾರರ ಬೆಂಬಲ ಮತ್ತು ವಿನೂತನ ಮಾರುಕಟ್ಟೆ ತಂತ್ರ ಇದರ ಬೆನ್ನೆಲುಬು ಆಗಿದ್ದು, ಸಾಧನೆಯ ಹಾದಿಯಲ್ಲಿ ಪಯಣಿಸುತ್ತಿದೆ.

ಲೇಖಕರು: ಹರ್ಷಿತ್​ ಮಲ್ಯ

ಅನುವಾದಕರು: ಎಸ್​ಡಿ

4+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags