ಆವೃತ್ತಿಗಳು
Kannada

ಸ್ಮಾರ್ಟ್​ ಇದ್ದರಷ್ಟೇ ಸಾಕಾಗೋದಿಲ್ಲ- ದೆಹಲಿ-ಎನ್​ಸಿಆರ್​ನಲ್ಲಿ ಹುಟ್ಟಿದ ಮೊಬೈಲ್​ ಆ್ಯಪ್​ಗಳ ಕಥೆಯನ್ನೂ ಕೇಳಿ..!

ಟೀಮ್​ ವೈ.ಎಸ್​. ಕನ್ನಡ

6th Nov 2016
Add to
Shares
15
Comments
Share This
Add to
Shares
15
Comments
Share

ಮೊಬೈಲ್ ಇಲ್ಲದೆ ಜೀವನ ಮಾಡುವುದಕ್ಕೆ ಆಗದೇ ಇರುವ ಸ್ಥಿತಿಗೆ ಬಂದು ತಲುಪಿದ್ದೇವೆ. ಮೊಬೈಲ್​ನಿಂದಲೇ ಎಲ್ಲವೂ ನಡೆಯುತ್ತಿದೆ. ಭಾರತದಲ್ಲಂತೂ ಸುಮಾರು 230 ಮಿಲಿಯನ್ ಜನರು ಸ್ಮಾರ್ಟ್ ಫೋನ್ ಬಳಕೆ ಮಾಡುತ್ತಿದ್ದಾರೆ. ಭಾರತ ವಿಶ್ವದಲ್ಲೇ 2ನೇ ಅತೀ ಹೆಚ್ಚು ಸ್ಮಾರ್ಟ್​ಫೋನ್ ಬಳಕೆದಾರರನ್ನು ಹೊಂದಿದೆ. ಸ್ಮಾರ್ಟ್ ಫೋನ್ ಬಳಕೆದಾರರ ಸಂಖ್ಯೆಯಲ್ಲಿ ಭಾರತ, ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದುವರೆದಿರುವ ಅಮೆರಿಕಾವನ್ನು ಕಳೆದ ಡಿಸೆಂಬರ್​ನಲ್ಲೇ ಹಿಂದಿಕಿತ್ತು. ಹೀಗಾಗಿ ಭಾರತದಲ್ಲಿ ಮೊಬೈಲ್ ಸ್ಟಾರ್ಟ್ಅಪ್​ಗಳ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ.

ಪೇ-ಟಿಎಂ, ಫ್ರೀ ಚಾರ್ಚ್ ಮತ್ತು ಕ್ಯಾಬ್ ಸೇವೆಯಲ್ಲಿ ಅಗ್ರಸ್ಥಾನ ಪಡೆದಿರುವ OLA ದಂತಹ ಕಂಪನಿಗಳು ಮೊಬೈಲ್​ ಅನ್ನೇ ಹೆಚ್ಚು ನಂಬಿಕೊಂಡಿವೆ. ಕಳೆದ 4 ವರ್ಷಗಳಲ್ಲಿ ಇವುಗಳ ಅಭಿವೃದ್ಧಿ ಅಚ್ಚರಿ ಹುಟ್ಟಿಸುತ್ತಿದೆ. ಈ ಕಂಪನಿಗಳ ಮಿಂಚಿನ ವೇಗದ ಅಭಿವೃದ್ಧಿ ಎಲ್ಲರನ್ನು ಹುಬ್ಬೇರುವಂತೆ ಮಾಡಿದೆ. ಅಷ್ಟೇ ಅಲ್ಲ ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚಾದಂತೆ ಈ ಕಂಪನಿಗಳು ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಯಾಗುವುದು ಖಚಿತ.

ಬೆಂಗಳೂರು ಸ್ಟಾರ್ಟ್ ಅಪ್​​ ಹಬ್ ಅಂತ ಕರೆಸಿಕೊಂಡ್ರೆ, ರಾಷ್ಟ್ರರಾಜಧಾನಿ ದೆಹಲಿ ಮೊಬೈಲ್ ಸ್ಟಾರ್ಟ್​ಅಪ್​ಗಳಾದ ಪೇಟಿಎಂ, ಸ್ನ್ಯಾಪ್ ಡೀಲ್, ಗ್ರೋಫರ್ಸ್ ಮತ್ತು ಅರ್ಬನ್​ಕ್ಲಾಪ್​ನಂತಹ ಕಂಪನಿಗಳಿಗೆ ತವರೂರಾಗಿದೆ. ಎನ್​ಸಿಆರ್​ನಂತಹ ಸ್ಥಳಗಳಲ್ಲಿ ಮೊಬೈಲ್ ಬೇಸ್ಡ್ ಸ್ಟಾರ್ಟ್ಅಪ್​ಗಳು ಹೆಚ್ಚಾಗಿ ಹುಟ್ಟಿಕೊಳ್ಳುತ್ತಿವೆ. ಯುವರ್ ಸ್ಟೋರಿ ಕೂಡ ದೆಹಲಿಯಲ್ಲಿ ಮೊಬೈಲ್ ಸ್ಪಾರ್ಕ್ ಆಯೋಜಿಸಲು ಸಜ್ಜಾಗಿದೆ. ಹೀಗಾಗಿ ದೆಹಲಿಯ ಪ್ರಮುಖ ಮೊಬೈಲ್ ಸ್ಟಾರ್ಟ್ಅಪ್​ಗಳ ಬಗ್ಗೆ ಚಿಕ್ಕ ಪರಿಚಯ ಹೀಗಿದೆ.

image


ಕ್ಯಾಶಿಫೈ (Cashify)

Cashify 2013ರಲ್ಲಿ ಆರಂಭವಾಗಿದೆ. ಮೊಬೈಲ್ ಸ್ಮಾರ್ಟ್ ಫೋನ್ ಅನ್ನು ಮನೆಯಿಂದಲೇ ಪಡೆದು ಅಲ್ಲೇ ಅದಕ್ಕೊಂದು ಬೆಲೆಯನ್ನು ನಿಗದಿ ಮಾಡಿ ಕೊಂಡುಕೊಳ್ಳುತ್ತಿದೆ. ಗುಡ್ಗಾಂವ್ ಮೂಲದ ಈ ಕಂಪನಿ ಒರಿಜಿನಲ್ ಇಕ್ಯುಪ್​ಮೆಂಟ್ ಮ್ಯಾನ್ಯು ಫ್ಯಾಕ್ಚರರರ್ಸ್ ಮತ್ತು ಆಫ್ ಲೈನ್ ರಿಟೈಲರ್​ಗಳಾದ ಕ್ರೋಮಾ ಮತ್ತು ಹೆಚ್.ಪಿ. ಕಂಪನಿಗಳ ಜೊತೆ ಪಾರ್ಟ್​ನರ್​ಶಿಪ್​ ಹೊಂದಿದೆ. ಕಳೆದ ವರ್ಷ ಹೂಡಿಕೆಯನ್ನು ಆಕರ್ಷಿಸುವಲ್ಲಿ ಯಶಸ್ವಿ ಆಗಿತ್ತು.

ರೈಲ್​ಯಾತ್ರಿ

ರೈಲ್​ಯಾತ್ರಿಯನ್ನು ಹುಟ್ಟು ಹಾಕಿದ್ದು ಕಪಿಲ್ ರೈಝಾಡಾ, ಸಚಿನ್ ಸಕ್ಸೆನಾ ಮತ್ತು ಮನೀಷ್ ರಾಥಿ. ಭಾರತದ ರೈಲು ಪ್ರಯಾಣಿಕರ ಎಕೋ ಸಿಸ್ಟಂನ್ನು ಬದಲಿಸಲು ರೈಲ್ ಯಾತ್ರಿ ಹುಟ್ಟಿಕೊಂಡಿದೆ. ರೈಲ್​ಯಾತ್ರಿ ಆ್ಯಪ್ ರೈಲುಗಳ ಬಗ್ಗೆ ಮಾಹಿತಿ, ಪ್ರಯಾಣಿಕರ ಅನುಕೂಲತೆಗಳ ಬಗ್ಗೆ, ಪ್ಲಾಟ್​ಫಾರಂ, ರೈಲಿನ ವೇಗವನ್ನು ಮೊಬೈಲ್ ಆ್ಯಪ್, ವೆಬ್ ಸೈಟ್ ಮತ್ತು ಎಸ್ಎಂಎಸ್​ಗಳ ಮೂಲಕ ಅಲರ್ಟ್ ಕಳುಹಿಸುವ ವ್ಯವಸ್ಥೆಯನ್ನು ಮಾಡಿಕೊಂಡಿದೆ. 3 ವರ್ಷದ ಹಿಂದೆ ಅರಂಭವಾದ ರೈಲ್ ಯಾತ್ರಿಗೆ ನಂದನ್ ನಿಲೇಕಣಿ, ಹೆಲಿನ್ ವೆಂಚರ್ಸ್, ಒಮಿಡ್ಯಾರ್ ಪಾರ್ಟ್​ನರ್ಸ್ ಮತ್ತು ಬ್ಲೂಮ್ ವೆಂಚರ್ಸ್​ನಿಂದ ಫಂಡಿಂಗ್ ಪಡೆದುಕೊಂಡಿದೆ.

ಇದನ್ನು ಓದಿ: "ಸ್ಮಾರ್ಟ್"​ ಆಗೋದಿಕ್ಕೆ ಇನ್ನೇನು ಬೇಕು..?- ಶರ್ಟ್​ನಲ್ಲೇ ಸಿಗುತ್ತೆ ಟೆಕ್ನಾಲಜಿಯ ಕಿಕ್​

ಮೈ ಪೂಲಿನ್

ಮೈ ಪೂಲಿನ್ ವ್ಯಕ್ತಿಯಿಂದ ವ್ಯಕ್ತಿಗೆ ಅಥವಾ ಗ್ರೂಪ್ ಪೇಮೆಂಟ್ ಸೋಶಿಯಲ್ ನೆಟ್​ವರ್ಕ್. ಇದು ಸಾಕಷ್ಟು ವಿಚಾರದಲ್ಲಿ ಹಲವು ರೀತಿಯಲ್ಲಿ ನೆರವು ನೀಡುವ ಮೊಬೈಲ್ ಆ್ಯಪ್. ಮೈ ಪೂಲಿನ್ ಈಗಾಗಲೇ ಶರದ್ ಶರ್ಮಾ, ರಾಜನ್ ಆನಂದ್, ಸುನೀಲ್ ಕಾಲ್ರಾ, ಅಮಿತ್ ರಂಜನ್ರಂತಹವರಿಂದ ಫಂಡಿಂಗ್ ಪಡೆದುಕೊಂಡಿದೆ.

1ಎಂಜಿ (1mg)

1mg ಆರಂಭವಾಗಿದ್ದು ಹೆಲ್ತ್ ಕಾರ್ಟ್ ಪ್ಲಸ್ ಅನ್ನೋ ಹೆಸರಿನಲ್ಲಿ. 2013ರಲ್ಲಿ ಆರಂಭವಾದ 1mg ಈಗ ಹೆಲ್ತ್ ಆ್ಯಪ್​ಗಳ ಪಟ್ಟಿಯಲ್ಲಿ ನಂಬರ್ ವನ್ ಆಗುವ ಹಾದಿಯಲ್ಲಿದೆ. ಗುಡ್ಗಾಂವ್ ಮೂಲದ 1mg 5 ಮಿಲಿಯನ್ ಆ್ಯಪ್ ಡೌನ್​ಲೋಡ್ ಮತ್ತು ಪ್ರತೀ ತಿಂಗಳು 25 ಮಿಲಿಯನ್ ಪೇಜ್​ವೀವ್ಯೂಗಳನ್ನು ಪಡೆದುಕೊಂಡಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಸುಮಾರು 600% ಅಭಿವೃದ್ಧಿ ಕಂಡಿದೆ ಅಂತ 1mg ಹೇಳಿಕೊಳ್ಳುತ್ತಿದೆ. ಕಳೆದ ಏಪ್ರಿಲ್​ನಲ್ಲಿ ಮೆವರಿಕ್ ಕ್ಯಾಪಿಟಲ್ ವೆಂಚರ್ಸ್​ನಿಂದ ಸಿರೀಸ್ ಬಿ ಫಂಡಿಂಗ್ ಅನ್ನು ಪಡೆದುಕೊಂಡಿದೆ.

ಸ್ಕಾಂಟಾ

ಮಾರ್ಕೆಟಿಂಗ್​ಗೆ ರಿಯಾಲಿಟಿ ಬೇಸ್​ನಲ್ಲಿ ಪರಿಹಾರ ಒದಗಿಸುವ ಆ್ಯಪ್ ಇದು. ವಾಸ್ತವ ಮತ್ತು ನೈಜತೆ ನಡುವೆ ಸತ್ಯವನ್ನು ತಿಳಿಯಪಡಿಸುವ ಪ್ರಯತ್ನವನ್ನು ಇದು ಮಾಡುತ್ತಿದೆ. ಮುಂದಿನ ತಿಂಗಳು ಸ್ಕಾಂಟಾ ಲಾಂಚ್ ಆಗುತ್ತಿದ್ದು, ಜನ ಇದನ್ನು ಹೇಗೆ ಸ್ವೀಕರಿಸುತ್ತಾರೆ ಅನ್ನುವ ಬಗ್ಗೆ ಸಾಕಷ್ಟು ಕುತೂಹಲವಿದೆ.

ಬ್ರೊ ಎಕ್ಸ್ (BroEx)

BroEx ಬ್ರೋಕರ್ಗಳನ್ನು ಹುಡುಕೋದಿಕ್ಕೆ ಮತ್ತು ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಉದ್ದೇಶವನ್ನು ಹೊಂದಿದೆ. ದೆಹಲಿ- ಎನ್​ಸಿಆರ್, ಮುಂಬೈ, ಬೆಂಗಳೂರು ಮತ್ತು ಪುಣೆಯಲ್ಲಿ 30,000 ಬ್ರೋಕರ್​ಗಳು ಈ ಆ್ಯಪ್ ಉಪಯೋಗಿಸುತ್ತಿದ್ದಾರೆ. ಕಳೆದ ಜುಲೈನಲ್ಲಿ BroEx 1 ಮಿಲಿಯನ್ ಡಾಲರ್ ಸೀಡ್ ಪಂಡಿಂಗ್​ನ್ನು ಲೈಟ್ ಸ್ಪೀಡ್​ನಿಂದ ಪಡೆದುಕೊಂಡಿದೆ.

ಕ್ಯೂರೋಫೈ (Curofy)

Curofy ಕೇವಲ 20 ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿದೆ. ಡಾಕ್ಟರ್​ಗಳ ನಡುವಿನ ಸಂಪರ್ಕಕ್ಕೆ, ಇನ್ನೊಂದು ವೈದ್ಯರಿಂದ ಸಲಹೆ ಪಡೆಯೋದಿಕ್ಕೆ ಸೇರಿದಂಗೆ ಹಲವು ಮೆಡಿಕಲ್ ಡೆವಲಪ್​ಮೆಂಟ್​ಗಳ ಬಗ್ಗೆ ತಿಳಿದುಕೊಳ್ಳಲು ಇರುವ ಏಕೈಕ ಮೊಬೈಲ್ ಆ್ಯಪ್ ಇದಾಗಿದೆ. ಇದು ಸಾಕಷ್ಟು ಹೂಡಿಕೆಯನ್ನು ಕೂಡ ಪಡೆದುಲೊಂಡಿದೆ.

Lisn

ರಿಯಲ್ ಟೈಮ್​​ನಲ್ಲಿ ಮ್ಯೂಸಿಕ್ ನ್ನು ಸ್ಟ್ರೀಮ್ ಮಾಡುವ ರಿಯಲ್ ಟೈಮ್ ಆ್ಯಪ್ ಇದು. ಹಲವು ವಿಷಯದಲ್ಲಿ ಇದು ಯೂಸರ್​ಗಳಿಗೆ ಇದು ಸಹಕಾರಿ ಆಗಿದೆ.

ಫಿಟ್​ಪಾಸ್

ಫಿಟ್​ಪಾಸ್ ದೆಹಲಿ ಮತ್ತು ಎನ್​ಸಿಆರ್​ನಲ್ಲಿರುವ 1,100 ಜಿಮ್​ಗಳನ್ನು 999 ರೂಪಾಯಿಗಳಲ್ಲಿ ಉಪಯೋಗಿಸಿಕೊಳ್ಳಲು ಇದು ವ್ಯವಸ್ಥೆ ಕಲ್ಪಿಸಿಕೊಟ್ಟಿದೆ. ವೆಬ್, ಐಓಎಸ್ ಮತ್ತು ಆಂಡ್ರಾಯ್ಡ್​ಗಳಲ್ಲಿ ಇದು ಲಭ್ಯವಿದೆ. ಫಿಟ್​ಪಾಸ್​ ಉಳಿದ ಜಿಮ್ ಮೆಂಬರ್​ಶಿಪ್​ನಿಂದ ಕೊಂಚ ಕಡಿಮೆ ವೆಚ್ಚವನ್ನು ಹೊಂದಿದೆ. ಅಕ್ಷಯ್ ವರ್ಮಾ, ಆರುಷಿಯವರ ಕನಸಿನ ಕೂಸು ಇದಾಗಿದೆ.

ಒಟ್ಟಿನಲ್ಲಿ ಈ ಮೊಬೈಲ್ ಸೇವೆಯಾಧರಿತ ಸಂಸ್ಥೆಗಳು ಸಾಕಷ್ಟು ವೇಗದಲ್ಲಿ ಬ್ಯುಸಿನೆಸ್ ನಲ್ಲಿ ಅಭಿವೃದ್ಧಿ ಕಾಣುತ್ತಿವೆ. ಸ್ಮಾರ್ಟ್​ಫೋನ್ ಪವರ್ ಎಲ್ಲರಿಗೂ ಅರಿವಾಗುತ್ತಿದೆ. 

ಇದನ್ನು ಓದಿ:

1. ಕ್ಯಾಬ್​ ಸೇವೆಗಳಲ್ಲಿ ಬಿಗ್​ ಫೈಟ್​-OLAಕ್ಕೆ ಅಗ್ರಪಟ್ಟದ ತವಕ- ಉಬರ್​ಗೆ ಸವಾಲು ಎದುರಿಸುವುದೇ ಕಾಯಕ

2. ಅಂದು ಓದಿಗಾಗಿ ಸಾಲ- ಇಂದು ಓದುವವರಿಗೆ ಸಹಾಯ- ಇದು ಗೌರೀಶ್​ ಸಾಹಸದ ಕಥೆ..!

3. ಆಟ, ನಟನೆ ಎಲ್ಲದಕ್ಕೂ ಸೈ- ನಿವೃತ್ತಿ ನಂತರ ಬ್ಯುಸಿನೆಸ್​ಗೂ ಜೈ..!

Add to
Shares
15
Comments
Share This
Add to
Shares
15
Comments
Share
Report an issue
Authors

Related Tags