ಆವೃತ್ತಿಗಳು
Kannada

ಸೌಮ್ಯ ನಂಜುಂಡಯ್ಯ ಯಶಸ್ಸಿನ `ಮಂತ್ರ'

ಭಾರತಿ ಭಟ್​​​

10th Nov 2015
Add to
Shares
2
Comments
Share This
Add to
Shares
2
Comments
Share

ಸೌಮ್ಯ ನಂಜುಂಡಯ್ಯ ಮೊದಲಿನಿಂದ್ಲೂ ತಮ್ಮ ಕಾಲ ಮೇಲೆ ತಾವು ನಿಲ್ಲಬೇಕೆಂದು ಬಯಸಿದವರು. ಅವರ ಮನೆಯಲ್ಲೂ ಅಂಥದ್ದೇ ವಾತಾವರಣವಿತ್ತು. ತಂದೆ ಹಾಗೂ ಸಹೋದರ ಇಬ್ಬರೂ ಉದ್ಯಮಿಗಳು ಹಾಗಾಗಿ ಅವರು ನಡೆದ ದಾರಿಯಲ್ಲೇ ಸಾಗಲು ಸೌಮ್ಯ ನಿರ್ಧರಿಸಿದ್ರು. ಅಂದುಕೊಂಡಿದ್ದನ್ನು ಸಾಧಿಸಿರುವ ಸೌಮ್ಯ ನಂಜುಂಡಯ್ಯ ಈಗ `ಇನ್‍ಸೈಟ್'ನ ಸಿಇಓ. ಇನ್‍ಸೈಟ್, ಜಾಗತಿಕ ಮಟ್ಟದ ಗ್ರಾಹಕರಿಗೆ ಪರಿಹಾರ ಒದಗಿಸುತ್ತಿರುವ ಡಿಜಿಟಲ್ ಕನ್ಸಲ್ಟಿಂಗ್ ಏಜೆನ್ಸಿ. ಪ್ರಶಸ್ತಿ ವಿಜೇತ ಸಂಸ್ಥೆ ಇದು. ಕಳೆದ 9 ವರ್ಷಗಳಲ್ಲಿ, ತಂತ್ರಜ್ಞಾನ, ಆರೋಗ್ಯ, ವ್ಯಾಪಾರ ಹಾಗೂ ಉತ್ಪಾದನೆ ವಿಭಾಗದಲ್ಲಿ 150ಕ್ಕೂ ಹೆಚ್ಚು ಗ್ರಾಹಕರಿಗೆ ಇನ್‍ಸೈಟ್ ಕಂಪನಿ, ಡಿಜಿಟಲ್ ಮಾರುಕಟ್ಟೆ ಪರಿಹಾರಗಳನ್ನು ಒದಗಿಸಿದೆ.

image


ಬೆಂಗಳೂರಲ್ಲಿ ಹುಟ್ಟಿ ಬೆಳೆದ ಸೌಮ್ಯ, ಅಮೆರಿಕದ ಮ್ಯಾಸಚೂಸೆಟ್ಸ್ ವಿಶ್ವವಿದ್ಯಾನಿಲಯದಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಮಾರ್ಕೆಟಿಂಗ್ ಹಿನ್ನೆಲೆಯುಳ್ಳ ಅವರು ಬೇರೆ ಬೇರೆ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ. ಅಮೆರಿಕದ ಅತಿ ದೊಡ್ಡ ಲಾಭ ರಹಿತ ಸಂಸ್ಥೆ `ಯುನೈಟೆಡ್ ವೇ ಇನ್ ಮ್ಯಾಸಚೂಸೆಟ್ಸ್'ಗೆ ನಿಧಿ ಸಂಗ್ರಹಕ್ಕೂ ಸೌಮ್ಯ ನೆರವಾಗಿದ್ದಾರೆ. ಭಾರತಕ್ಕೆ ಮರಳಿದ ನಂತರ ಸೌಮ್ಯ ನಿರ್ವಾಣ ಸಂಸ್ಥೆಯನ್ನು ಸೇರಿದ್ರು. ಆ ಸಂದರ್ಭದಲ್ಲಿ ಬಿಪಿಓಗೆ ಅತಿ ಹೆಚ್ಚು ಪ್ರೋತ್ಸಾಹ ನೀಡಿದ ಸಂಸ್ಥೆ ಇದು. ಇಲ್ಲಿ 18 ತಿಂಗಳು ಕರ್ತವ್ಯ ನಿರ್ವಹಿಸಿದ ಸೌಮ್ಯ ಮತ್ತೆ ಅಮೆರಿಕಕ್ಕೆ ಹಾರಿದ್ರು. ನಿರ್ವಾಣದಲ್ಲಿ ಕೆಲಸ ಮಾಡ್ತಿದ್ದ ಸಂದರ್ಭದಲ್ಲಿ ಸೌಮ್ಯ ಉತ್ಪನ್ನ ಅಭಿವೃದ್ಧಿ, ಮಾರಾಟ ವಿಭಾಗ ಸೇರಿದಂತೆ ಎಲ್ಲದರಲ್ಲೂ ಸಕ್ರಿಯರಾಗಿದ್ರು. ನ್ಯೂಯಾರ್ಕ್ ಕಚೇರಿ ಮುಖ್ಯಸ್ಥರಾಗಿ ನೇಮಕಗೊಂಡ ಬಳಿಕ ಉತ್ತರ ಅಮೆರಿಕದಲ್ಲಿ ಅವರು ನಿರ್ವಾಣ ಮಾರುಕಟ್ಟೆಯನ್ನು ವಿಸ್ತರಿಸಿದ್ರು. ಆ ಅನುಭವ ಅದ್ಭುತ ಎನ್ನುತ್ತಾರೆ ಸೌಮ್ಯ. ಐದು ವರ್ಷಗಳ ಕಾಲ ಅಲ್ಲೇ ಕೆಲಸ ಮಾಡಿದ್ದ ಸೌಮ್ಯ, ಬ್ಯುಸಿನೆಸ್ ಜೊತೆಗೆ ನಾನೂ ಬೆಳೆದೆ ಎನ್ನುತ್ತಾರೆ.

ಯಶಸ್ಸಿನ `ಮಂತ್ರ'...

ಸೌಮ್ಯ ಯಶಸ್ಸಿಗೆ ಸರಳ ಸೂತ್ರವನ್ನಿಟ್ಟುಕೊಂಡೇ ಉದ್ಯಮಿಯಾದವರು. ಅದು ಕೂಡ ವಿಶ್ಲೇಷಣಾತ್ಮಕ ಸಂಸ್ಥೆ ಮೂಲಕ. ಸದ್ಯ ಭಾರತ ಹಾಗೂ ದುಬೈ ಎರಡೂ ಕಡೆ ಭವಿಷ್ಯದ ಮಾದರಿಯನ್ನಿಟ್ಟುಕೊಂಡು ಸೌಮ್ಯ ಕೆಲಸ ಮಾಡ್ತಿದ್ದಾರೆ. ಹಣಕಾಸು ಸೇವಾ ವಲಯದ ಮೇಲೆ ಸೌಮ್ಯ ಹೆಚ್ಚಿನ ಗಮನಹರಿಸಿದ್ದಾರೆ. ಯಾವಾಗಲೂ ಸೌಮ್ಯ ಅಂಕಿ-ಸಂಖ್ಯೆಗಳ ಲೆಕ್ಕಾಚಾರದಲ್ಲಿ ಪಕ್ಕಾ. ಕಂಪನಿಯ ಬೆಳವಣಿಗೆ ಬಗ್ಗೆ ಖಚಿತ ಲೆಕ್ಕ ಇಟ್ಟಿದ್ದಾರೆ. ಕಳೆದ 2 ವರ್ಷಗಳಲ್ಲಿ ಸೌಮ್ಯ ಅವರ ಸಂಸ್ಥೆ ಇನ್‍ಸೈಟ್ ಯಶಸ್ಸಿನತ್ತ ಹೆಜ್ಜೆ ಇಟ್ಟಿದೆ. ಆದ್ರೆ ಮಧ್ಯ ಪ್ರಾಚ್ಯ ಮಾರುಕಟ್ಟೆ ಕುಸಿತದ ಸಂದರ್ಭದಲ್ಲಿ ತಮ್ಮ ಸಂಸ್ಥೆ `ಮಂತ್ರ'ವನ್ನು ಸೌಮ್ಯ ಮುಚ್ಚಬೇಕಾಗಿ ಬಂದಿತ್ತು. ಯಶಸ್ಸಿಗಿಂತ ವೈಫಲ್ಯ ನಿಮಗೆ ಪಾಠ ಕಲಿಸುತ್ತೆ ಎನ್ನುತ್ತಾರೆ ಅವರು. ಮಂತ್ರ ಸಂಸ್ಥೆ ಮುಚ್ಚಿ ಹೋಗಿದ್ರಿಂದ ಸೌಮ್ಯ ಅವರಿಗೂ ಅದರ ಅನುಭವವಾಗಿತ್ತು. `ಮಂತ್ರ' ಕಂಪನಿಗೆ ಬಾಗಿಲು ಹಾಕುವ ಅವರ ತೀರ್ಮಾನ ಅತ್ಯಂತ ಕಠಿಣವಾಗಿತ್ತು.

ಸೌಮ್ಯ ವೈನ್ ಕಂಪನಿಯೊಂದನ್ನು ಕೂಡ ಆರಂಭಿಸಿದ್ರು. `ನಾಕಾ ವೈನ್' ಕಂಪನಿಯನ್ನು ಸೌಮ್ಯಾರ ತಂದೆ ನಡೆಸ್ತಾ ಇದ್ರು. ನಾಕಾ ವೈನ್ ಬ್ರ್ಯಾಂಡನ್ನು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ಅಮೆರಿಕಕ್ಕೂ ಪರಿಚಯಿಸಿದ್ರು. 2010ರಲ್ಲಿ ನಾಕಾ ವೈನ್ ಸಂಸ್ಥೆಯಿಂದ ಸೌಮ್ಯ ಹೊರಬಿದ್ರು. ಬಳಿಕ ಇನ್ನೊಂದು ವರ್ಷ ಕಂಪನಿಯನ್ನು ಮುನ್ನಡೆಸಿದ ಅವರ ತಂದೆ, ಬಳಿಕ ಅದನ್ನು ಮಾರಾಟ ಮಾಡಿದ್ರು.

`ಇನ್‍ಸೈಟ್'ನ ಒಳನೋಟ...

2010ರಲ್ಲಿ ಸೌಮ್ಯ ಇನ್‍ಸೈಟ್ ಸಂಸ್ಥೆಯನ್ನು ಸೇರಿದ್ರು. ಆಗ ಇನ್‍ಸೈಟ್ ವಿನ್ಯಾಸ ಕ್ಷೇತ್ರದಲ್ಲಿ ಕಾರ್ಯನಿರತವಾಗಿತ್ತು. ಬಳಿಕ ಡಿಜಿಟಲ್ ಮಾರ್ಕೆಟಿಂಗ್‍ನತ್ತ ಇನ್‍ಸೈಟ್ ಹೆಚ್ಚು ಒತ್ತು ನೀಡಲಾರಂಭಿಸಿತು. ಸೌಮ್ಯ ಹೂಡಿಕೆದಾರರ ಪರಿಸರದಲ್ಲಿರುವ ಅಂತರವನ್ನು ಕಡಿಮೆ ಮಾಡುವತ್ತ ಗಮನಹರಿಸಿದ್ರು. ಬಿಕ್ಕಟ್ಟು ಎದುರಿಸ್ತಾ ಇರುವ ಸಂಸ್ಥೆಗಳಿಗೆ ಸಮಗ್ರ ನೆರವು ನೀಡುವ ಉದ್ದೇಶವನ್ನು ಇನ್‍ಸೈಟ್ ಹೊಂದಿದೆ.

image


ವಿಭಿನ್ನ ಕೆಲಸದ ಸಂಸ್ಕೃತಿ

ಭಾರತ ಹಾಗೂ ಅಮೆರಿಕ ಎರಡೂ ರಾಷ್ಟ್ರಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಸೌಮ್ಯ, ಉಭಯ ರಾಷ್ಟ್ರಗಳ ಕಾರ್ಯವೈಖರಿಯಲ್ಲಿ ವಿಶಿಷ್ಟ ವ್ಯತ್ಯಾಸವಿದೆ ಎನ್ನುತ್ತಾರೆ. ಭಾರತ ವೈಯಕ್ತಿಕ ಸಂಬಂಧಗಳ ಮೇಲೆ, ಸಂಸ್ಥೆಯ ಸಿಬ್ಬಂದಿಯ ಬಾಂಧವ್ಯದ ಮೇಲೆ ಹೆಚ್ಚು ಅವಲಂಬಿತವಾಗಿದೆ. ಆದ್ರೆ ಅಮೆರಿಕದಲ್ಲಿ ನಿರ್ಧಾರಗಳು ಪಾರದರ್ಶಕವಾಗಿರುತ್ತವೆ. ವೈಯಕ್ತಿಕ ಸಂಬಂಧಕ್ಕಿಂತ ಹೆಚ್ಚಾಗಿ ಸಂಸ್ಥೆಯ ಖ್ಯಾತಿ ಹಾಗೂ ಫಲಿತಾಂಶಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. `ನಿರ್ವಾಣ' ಸೌಮ್ಯ ಅವರ ಆತ್ಮವಿಶ್ವಾಸ ಹೆಚ್ಚಿಸಿತ್ತು. ಗುಣಮಟ್ಟದ ಕೆಲಸ ಹಾಗೂ ರಿಸ್ಕ್‍ಗಳನ್ನು ಸಮರ್ಥವಾಗಿ ಎದುರಿಸುವುದನ್ನು ಕಲಿತಿದ್ದು ಅಲ್ಲೇ.

ನೀರಿನಲ್ಲಿ ಮೀನಿನಂತೆ ಈಜು...

ಸೌಮ್ಯ ರಿಶಿ ಅರಬಿಂದೋ ಅವರ ಅನುಯಾಯಿ. ಅವರು ಹೆಚ್ಚಾಗಿ ತತ್ವಶಾಸ್ತ್ರವನ್ನು ಓದುತ್ತಾರೆ. ಸ್ವಿಮ್ಮಿಂಗ್ ಅಂದ್ರೆ ಸೌಮ್ಯಾ ಅವರಿಗೆ ಇಷ್ಟ, ಅದೆಷ್ಟೋ ಈಜು ಸ್ಪರ್ಧೆಗಳಲ್ಲೂ ಅವರು ಪಾಲ್ಗೊಂಡಿದ್ರು. ಆದ್ರೆ ಎತ್ತರ ಹೆಚ್ಚಾಗಿದ್ರಿಂದ 11ನೇ ವರ್ಷಕ್ಕೆ ಸ್ವಿಮ್ಮಿಂಗ್ ಬಿಡಬೇಕಾಯ್ತು. ಮನೋವಿಜ್ಞಾನದ ಬಗೆಗೂ ಆಸಕ್ತಿ ಹೊಂದಿರುವ ಸೌಮ್ಯ ಪ್ರಯಾಣವನ್ನೂ ಇಷ್ಟಪಡ್ತಾರೆ.

ಯುವತಿಯರು ಆಟದಲ್ಲಿ ಉಳಿಯಲಿ...

ವೈಯಕ್ತಿಕ ಕಾರಣಕ್ಕೆ ಸ್ಪರ್ಧೆಯಿಂದ ಹಿಂದೆ ಸರಿಯಬೇಡಿ, ಈ ವಲಯದಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ ಎಂಬ ಅನುಭವವೇ ಖುಷಿ ಕೊಡುತ್ತದೆ ಅನ್ನೋದು ಸೌಮ್ಯ ಅವರ ಅಭಿಪ್ರಾಯ. ಯುವತಿಯರಿಗೆ ಅವರು ಕೊಡುತ್ತಿರುವ ಅಮೂಲ್ಯ ಸಲಹೆ.

Add to
Shares
2
Comments
Share This
Add to
Shares
2
Comments
Share
Report an issue
Authors

Related Tags