ಆವೃತ್ತಿಗಳು
Kannada

ಮಾಸ್ಕೋದಲ್ಲಿ ಮಿಂಚಲಿದೆ ಕೇರಳದ ಕಲರಿಪಟ್ಟು..!

ಅಗಸ್ತ್ಯ

AGASTYA
26th Jan 2016
Add to
Shares
3
Comments
Share This
Add to
Shares
3
Comments
Share
image


ಭಾರತ ಹಲವು ವೈವಿಧ್ಯಗಳನ್ನೊಳಗೊಂಡಿರು ದೇಶ. ಇಲ್ಲಿ ಜನರ ದಿನಚರಿ, ಹಾಡುಗಳು ಸಂಪ್ರದಾಯವಾಗುತ್ತವೆ. ಅದೇ ರೀತಿ ಹಿಂದೆಲ್ಲಾ ಎದುರಾಳಿಗಳನ್ನು ಸೋಲಿಸಲು ಮಾಡುತ್ತಿದ್ದ ಯುದ್ಧ ಇದೀಗ ಸಂಪ್ರದಾಯವಾಗಿ ಮಾರ್ಪಟ್ಟಿದೆ. ಅಂತಹದ್ದೇ ಒಂದು ಭಾರತದ ಯುದ್ಧ ಕಲೆ ರಷ್ಯಾಕ್ಕೆ ತಲುಪುತ್ತಿದೆ. ಅದು ಅಂತಾರಾಷ್ಟ್ರೀಯ ಕಲಾ ಉತ್ಸವದಲ್ಲಿ ಭಾರತದ ಕಲೆಗಳು ಎಷ್ಟು ಶ್ರೀಮಂತ ಎಂಬುದನ್ನು ತೋರಿಸಲು.

image


ಕೈಯಲ್ಲಿ ದೊಣ್ಣೆ, ಕತ್ತಿಯನ್ನು ಹಿಡಿದುಕೊಂಡು ಎದುರಾಳಿಯ ಒಂದೊಂದೇ ಪಟ್ಟಿಗೆ ಪ್ರತಿ ಪಟ್ಟು ಹಾಕುವ ಸಮರ ಕಲೆ ಕಲರಿಪಯಟ್ಟುವಿನ ಮೂಲ ಕೇರಳ. ಒಂದು ಕಾಲದಲ್ಲಿ ಶತ್ರುಗಳನ್ನು ಮಣಿಸಲು ಕಲರಿಪಯಟ್ಟುವಿನ ನಾನಾ ಯುದ್ಧ ಕಲೆಗಳನ್ನು ಕೇರಳದ ರಾಜರು ಬಳಸಿಕೊಳ್ಳುತ್ತಿದ್ದರು. ಕ್ರಮೇಣ ರಾಜರ ಕಾಲ ಅಳಿದ ನಂತರ ಇದೀಗ ಈ ಕಲೆ ಕೇವಲ ಕಲಿಕೆಗಷ್ಟೇ ಸೀಮಿತವಾಗಿದೆ. ಕೇರಳದಲ್ಲಿ ಹುಟ್ಟಿದ್ದರೂ ಭಾರತದಾದ್ಯಂತ ಜನಪ್ರಿಯಗೊಂಡಿರುವ ಈ ಕಲೆಯೀಗ ರಷ್ಯಾಕ್ಕೆ ತಲುಪುತ್ತಿದೆ. ಅದು ರಷ್ಯಾದ ಮಾಸ್ಕೋದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕಲಾ ಉತ್ಸವದಲ್ಲಿ ಕಲರಿಪಯಟ್ಟು ಪ್ರದರ್ಶನಗೊಳ್ಳುತ್ತಿದೆ.

ಕಲರಿ ಗುರುಕುಲಂ:

ಹೀಗೆ ಕಲರಿಪಯಟ್ಟುವನ್ನು ರಷ್ಯಾಕ್ಕೆ ಕೊಂಡೊಯ್ಯುತ್ತಿರುವುದು ಬೆಂಗಳೂರಿನ ಚಿಕ್ಕಗುಬ್ಬಿಯಲ್ಲಿರುವ ಕಲರಿ ಗುರುಕುಲಂ ಸಂಸ್ಥೆ. ಗುರು ರಾಜನ್ ಮುಲ್ಲರಟ್ ನೇತೃತ್ವದ 12 ಮಂದಿಯ ತಂಡ ಈ ಕಲೆಯನ್ನು ರಷ್ಯಾದ ಮಾಸ್ಕೋದಲ್ಲಿ ಪ್ರದರ್ಶಿಸಲಿದ್ದಾರೆ. ಕೆರಳದ ಪಿ.ಕೆ. ಬಾಲನ್ ಗುರುಕಲ್‍ರಿಂದ ಪಟ್ಟುಗಳನ್ನು ಕಲಿತಿರುವ ಗುರು ರಾಜನ್ ಅದನ್ನೇ ಚಾಚೂ ತಪ್ಪದೆ ತಮ್ಮ ಶಿಷ್ಯಂದಿರಿಗೆ ಹೇಳಿಕೊಟ್ಟಿದ್ದಾರೆ. ಇನ್ನು ಕಳೆದ ಹಲವು ವರ್ಷಗಳಿಂದ ಕಲರಿ ಗುರುಕುಲಂ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಾ ಈವರೆಗೆ ನೂರಾರು ಜನರಿಗೆ ಕಲರಿಪಯಟ್ಟು ಹೇಳಿಕೊಟ್ಟಿದ್ದಾರೆ.

image


ನೀವು ಕಲಿಯಬಹುದು ಸಮರ ಕಲೆ:

ಕಲರಿಪಯಟ್ಟು ಕಲಿಯಬೇಕೆಂಬ ಆಸಕ್ತಿ ಇರುವರು ಕಲರಿ ಗುರುಕುಲಂಗೆ ಸೇರಿಕೊಳ್ಳಬಹುದು. ಇಲ್ಲಿ 4 ರೀತಿಯಲ್ಲಿ ಕಲರಿ ಕಲೆಯನ್ನು ಕಲಿಸಲಾಗುತ್ತದೆ. ಮೊದಲಿಗೆ 4 ದಿನಗಳ ಕಾಲ ಸಮರ ಕಲೆಯ ಪರಿಚಯ ತರಗತಿ, ನಂತರದ 7 ದಿನ ಕಲೆಯಲ್ಲಿ ಬಳಸಲಾಗುವ ಯುದ್ಧ ಸಲಕರಣೆಗಳ ಬಗ್ಗೆ, ಮುಂದಿನ ಒಂದು ತಿಂಗಳು ಅಂಗಾಗಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದರ ಬಗ್ಗೆ ಹಾಗೂ 2 ವರ್ಷಗಳ ಕಾಲ ಪೂರ್ತಿ ಕಲರಿಪಯಟ್ಟಿನ ಪಟ್ಟುಗಳು ಇಡಿ ಇಡಿಯಾಗಿ ತಿಳಿಸಿಕೊಡಲಾಗುತ್ತದೆ. ಅಲ್ಲದೆ ಕಲಿಕೆಯಲ್ಲಿ ಆಸಕ್ತಿ ಇದ್ದರೆ ವಸತಿ ವ್ಯವಸ್ಥೆಯನ್ನು ಕಲರಿ ಗುರುಕುಲಂ ಮಾಡಿಕೊಡುತ್ತದೆ. ಅಲ್ಲದೆ ನಿಮಗೆ ಈ ಕಲೆಯ ಬಗ್ಗೆ ಆಸಕ್ತಿ ಇದ್ದರೆ ಅಥವಾ ಅನುಮಾನಗಳಿದ್ದರೆ ಕಲರಿ ಗುರುಕುಲಂನ ಇಮೇಲ್ ವಿಳಾಸ kalarigurukulam@gmail.comಕ್ಕೆ ಮೇಲ್ ಮಾಡುವ ಮೂಲಕ ಸಂಪರ್ಕಿಸಬಹುದು.

image


ಆತ್ಮ ವಿಶ್ವಾಸ ಹೆಚ್ಚಿಸುತ್ತದೆ:

ಕಲರಿ ಗುರುಕುಲಂ ಸಂಸ್ಥೆ ತನ್ನಲ್ಲಿಗೆ ಬರುವ ಅಭ್ಯರ್ಥಿಗಳಿಗೆ ಕೇವಲ ಕಲರಿಪಯಟ್ಟು ಸಮರ ಕಲೆಯನ್ನು ಕಲಿಸಿಕೊಡುವುದರೊಂದಿಗೆ ಆತ್ಮವಿಶ್ವಾಸವನ್ನು ಬೆಳೆಸುವ ಕೆಲಸ ಮಾಡುತ್ತದೆ. ಅದರೊಂದಿಗೆ ಕಲರಿಪಯಟ್ಟು ಕಲೆಯನ್ನು ಪ್ರಚಾರ ಮಾಡುವುದು ಕೂಡ ಕಲರಿ ಗುರುಕುಲಂ ಸಂಸ್ಥೆಯ ಉದ್ದೇಶವಾಗಿದೆ. ಹಾಗೆಯೇ, ಭಾರತ ಸಂಸ್ಕøತಿಯ ರಾಯಭಾರಿಗಳೆಂದೇ ಕರೆಸಿಕೊಳ್ಳುವ ಯೋಗ, ಧ್ಯಾನ, ಆಯುರ್ವೇದ, ಗ್ರಾಮೀಣ ಕಲೆಗಳನ್ನು ಕೂಡ ಪ್ರಚುರ ಪಡಿಸುವ ಕೆಲಸವನ್ನು ಮಾಡುತ್ತಿದೆ. ಅದಕ್ಕಾಗಿ ಕಾಲ ಕಾಲಕ್ಕೆ ವಿಚಾರ ಸಂಕಿರಣ ಸೇರಿದಂತೆ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಇನ್ನು ಕಲರಿಪಯಟ್ಟುವಿನ ಬಗ್ಗೆ ಪುಸ್ತಕ, ಸಾಕ್ಷ್ಯಚಿತ್ರಗಳನ್ನು ಕೂಡ ಪ್ರಕಟಿಸುತ್ತಿದೆ.

ಮೂರು ದಿನಗಳ ಉತ್ಸವ:

ಸದ್ಯ ಕಲರಿ ಗುರುಕುಲಂ ರಷ್ಯಾದಲ್ಲಿ ಪಾಲ್ಗೊಳ್ಳುತ್ತಿರುವ ಅಂತಾರಾಷ್ಟ್ರೀಯ ಕಲಾ ಉತ್ಸವ ಮೂರು ದಿನಗಳ ಕಾಲ ನಡೆಯಲಿದೆ. ಮಾಸ್ಕೋದ ಸೆಂಟ್ರಲ್ ಹೌಸ್ ಫಾರ್ ಆರ್ಟಿಸ್ಟ್ಸ್‍ನಲ್ಲಿ ಫೆಬ್ರವರು 5ರಿಂದ 7ರವರೆಗೆ ಉತ್ಸವ ನಡೆಯಲಿದ್ದು ಅಲ್ಲಿ ಕಲರಿ ಗುರುಕುಲಂ ಪ್ರತಿನಿಧಿಗಳು ಭಾರತದ ಪ್ರಾಚೀನ ಕಲೆ ಪ್ರದರ್ಶಿಸಲಿದ್ದಾರೆ. ಅದರೊಂದಿಗೆ ಭಾರತದ ಸಂಸ್ಕøತಿಯನ್ನು ಪ್ರತಿನಿಧಿಸಿ, ಕಲರಿಪಯಟ್ಟುವನ್ನು ವಿಶ್ವಮಟ್ಟದಲ್ಲಿ ಪ್ರಸಾರ ಮಾಡಲಿದ್ದಾರೆ.

Add to
Shares
3
Comments
Share This
Add to
Shares
3
Comments
Share
Report an issue
Authors

Related Tags