ಆವೃತ್ತಿಗಳು
Kannada

ಜಾಹೀರಾತು ಕ್ಷೇತ್ರದಲ್ಲಿ ಪಳಗಿ ತಮ್ಮದೇ ವೆಬ್‌ಸೈಟ್ ಆರಂಭಿಸಿದ ವಂದನಾ ಜೈನ್

ಟೀಮ್​​ ವೈ.ಎಸ್​​.ಕನ್ನಡ

YourStory Kannada
27th Nov 2015
Add to
Shares
4
Comments
Share This
Add to
Shares
4
Comments
Share

12 ವರ್ಷಗಳ ಕಾಲ ಜಾಹೀರಾತು ಉದ್ಯಮ ಪ್ರಪಂಚದಲ್ಲಿ ಪಳಗಿದ ನಂತರ ವಂದನಾ, ಆಂತರಿಕವಾಗಿ ತಮ್ಮನ್ನು ತೀವ್ರವಾಗಿ ಕಾಡುತ್ತಿದ್ದ ತಮ್ಮದೇ ಉದ್ಯಮವನ್ನು ಆರಂಭಿಸಿದರು. ಆ ಉದ್ಯಮದ ಹೆಸರೇ ಪ್ರೆಟ್ಟೀ ಪಿಂಕ್ ಪೆಬಲ್ಸ್. ಅಂದ ಹಾಗೆ ಈ ಪ್ರೆಟ್ಟೀ ಪಿಂಕ್ ಪೆಬಲ್ಸ್ ಆರಂಭವಾಗಿದ್ದು ಎರಡು ವರ್ಷಗಳ ಹಿಂದೆ.

ವಂದನಾ ತಮ್ಮನ್ನು ತಾವು ಸಂತೋಷಗಳನ್ನು ಹೆಚ್ಚಿಸಿಕೊಳ್ಳುವಾಕೆ ಎಂದೇ ಹೆಸರಿಸಿಕೊಳ್ಳ ಬಯಸುತ್ತಾರೆ. ಅವರು ತಾವು ಪ್ರಪಂಚಕ್ಕೆ ಬಂದದ್ದೇ ಸಂತೋಷವನ್ನು ಹಂಚಲು ಮತ್ತು ಕಲೆಯನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಲು ಎಂದು ಭಾವಿಸುತ್ತಾರೆ.

image


ಒಂದು ಮನೆಯಲ್ಲಿ ಎಲ್ಲರಿಗೂ ಸಮಾನವಾಗಿ ಜಾಗ ಸಿಗಲು ಸಾಧ್ಯವಿರುವುದಿಲ್ಲ. ಆದರೆ ಎಲ್ಲರೂ ಮನೆಯಲ್ಲಿ ತಮ್ಮದೇ ಆದ ಖಾಸಗಿ ಜಾಗವನ್ನು ಹುಡುಕಿಕೊಳ್ಳಲು ಇಚ್ಛಿಸುತ್ತಾರೆ ಮತ್ತು ಅಲ್ಲಿ ತಮ್ಮಿಷ್ಟದ ಕಲಾಕೃತಿಯನ್ನು ಜೋಡಿಸಲು ಅಥವಾ ತಮಗಿಷ್ಟ ಬಂದಂತೆ ಆ ಜಾಗವನ್ನು ಅಲಂಕರಿಸಲು ಬಯಸುತ್ತಾರೆ. ಕಲಾವಂತಿಕೆ ಜೀವಂತವಾಗಿರುವ ಪೇಂಟಿಂಗ್‌ಗಳು ಕೈಗೆಟುಕುವ ದರದಲ್ಲಿ ದೊರೆತರೆ ಚೆನ್ನಾಗಿರುತ್ತದೆ ಎಂದು ಅಂದುಕೊಳ್ಳುತ್ತಿರುತ್ತಾರೆ ಎನ್ನುತ್ತಾರೆ ವಂದನಾ. ಕಲಾ ಪ್ರಪಂಚದಲ್ಲಿ ವಂದನಾ, ಅನಾ ಜೆ ಎಂದೇ ಖ್ಯಾತರಾಗಿದ್ದಾರೆ. ಅನಾ ಎಂಬುದು ವಂದನಾರ ಹೆಸರಿನ ಕೊನೆಯ ಮೂರು ಅಕ್ಷರದಿಂದ ಬಂದ ಹೆಸರು, ಇನ್ನು ಜೆ ಎಂಬುದು ವಂದನಾರ ಇನ್ಶಿಯಲ್. ಇನ್ನೂ ಆಸಕ್ತಿದಾಯಕ ವಿಚಾರ ಎಂದರೆ ಹೀಬ್ರೂ ಮತ್ತು ಅಮೆರಿಕನ್ ಸಂಪ್ರದಾಯದಂತೆ ಅನಾ ಎಂಬುದರ ಅರ್ಥ ಗ್ರೇಸ್ ಅಥವಾ ಲಾಲಿತ್ಯ ಎಂಬುದಾಗಿದೆ.

ಪ್ರೆಟ್ಟಿ ಪಿಂಕ್ ಪೆಬೆಲ್ಸ್ ಎಂಬುದು ಒಂದು ಬ್ಲಾಗ್ ಆಗಿ ಆರಂಭವಾಗಿತ್ತು. ಇದರ ವೆಬ್‌ ಸೈಟ್ ಆರಂಭವಾಗಿ ಕೆಲವೇ ವಾರಗಳಷ್ಟೇ ಕಳೆದಿದೆ. ಇದರ ಮೂಲಕ ತಮ್ಮ ಕಲಾಕೃತಿಗಳನ್ನು ವಂದನಾ ಮಾರಾಟ ಮಾಡುತ್ತಿದ್ದಾರೆ ಮತ್ತು ಇದಕ್ಕಾಗಿ ಅವರಿಗೆ ಅಭೂತಪೂರ್ವ ಪ್ರತಿಕ್ರಿಯೆಯೂ ಬಂದಿದೆ.

ಕಲಾಕೃತಿಗಳ ಮಾರಾಟಕ್ಕೆ ಆನ್‌ಲೈನ್ ಮಾರುಕಟ್ಟೆ ಉತ್ತಮವಾಗಿದೆ. ಇದರಿಂದ ಕಲಾವಿದರಿಗೆ ತಮ್ಮದೇ ಆದ ಒಂದು ಇಮೇಜ್ ಸೃಷ್ಟಿಸಿಕೊಳ್ಳಲು ಸಾಧ್ಯವಾಗಿದೆ. ಈಗ ಕಲೆಗೆ ಬಿಸಿನೆಸ್‌ ರೂಪವನ್ನೂ ನೀಡಲಾಗುತ್ತಿದೆ. ಇದರಿಂದ ಕಲೆಯ ಸಕಾರಾತ್ಮಕ ಬೆಳವಣಿಗೆ ಸಾಧ್ಯ ಎಂದು ಭಾವಿಸುವುದಾಗಿ ವಂದನಾ ಹೇಳಿಕೊಂಡಿದ್ದಾರೆ.

ವಂದನಾರ ಬಗ್ಗೆ ಮಾಹಿತಿ

ಪ್ರೆಟ್ಟಿ ಪಿಂಕ್ ಪೆಬಲ್ಸ್ ಮೂಲಕ ವಂದನಾ ಒಬ್ಬ ಕಲಾವಿದೆಯಾಗಿ ಮತ್ತು ಲೇಖಕಿಯಾಗಿ ಗುರುತಿಸಿಕೊಂಡಿದ್ದಾರೆ. ಕ್ಯಾನ್‌ವಾಸ್‌ನಲ್ಲಿ ಕಲಾಕೃತಿಗಳನ್ನು ರಚಿಸುವುದಲ್ಲದೇ ಮುದ್ದಾದ ಕೆಟಲ್ಸ್ ಮತ್ತು ಗೋಲಿಗಳಲ್ಲೂ ತಮ್ಮ ಕೈಚಳಕವನ್ನು ತೋರಿಸಿದ್ದಾರೆ ವಂದನಾ. ಇನ್ನೂ ಮುಂದಕ್ಕೆ ವಂದನಾ ಕೈಯಲ್ಲಿ ಮಾಡಲ್ಪಟ್ಟ ಕರವಸ್ತ್ರಗಳು, ಶಿರವಸ್ತ್ರಗಳು ಸೇರಿದಂತೆ ಮುಂತಾದ ಲೈಫ್‌ಸ್ಟೈಲ್ ಉತ್ಪನ್ನಗಳನ್ನು ಅಬ್‌ಸ್ಟ್ರ್ಯಾಕ್ಟ್ ಹಾರ್ಮೋನೀಸ್ ಎಂಬ ಬ್ರಾಂಡ್ ನೇಮ್‌ನಡಿ ಬಿಡುಗಡೆಗೊಳಿಸುವ ಯೋಜನೆ ರೂಪಿಸಿಕೊಂಡಿದ್ದಾರೆ.

image


ವಂದನಾ ದೆಹಲಿ ಯೂನಿವರ್ಸಿಟಿಯಲ್ಲಿ ಪದವಿ ಪಡೆದಿದ್ದಾರೆ ಮತ್ತು ದೆಹಲಿ ಇನ್ಸ್‌ ಟಿಟ್ಯೂಟ್ ಆಫ್‌ ಆರ್ಟ್ಸ್ ಎಂಡ್ ಟೆಕ್ನಿಕಲ್ ಎಜುಕೇಶನ್ ಸಂಸ್ಥೆಯಲ್ಲಿ ಫೈನ್‌ಆರ್ಟ್ಸ್ ವಿಚಾರದಲ್ಲಿ ಡಿಪ್ಲೋಮಾ ಪದವಿಯನ್ನೂ ಪಡೆದಿದ್ದಾರೆ. ನಂತರ ವಂದನಾ ಸೃಜನಶೀಲ ವೃತ್ತಿಪರರಾಗಿ ಕಾರ್ಯನಿರ್ವಹಿಸಿದ್ದಾರೆ. ಅನೇಕ ಅದ್ಭುತ ಕ್ಯಾಂಪೇನ್‌ಗಳಲ್ಲಿ ಕೆಲಸ ಮಾಡಿದ್ದಾರೆ. ಭಾರತದ ಪ್ರಖ್ಯಾತ ಜಾಹೀರಾತು ಏಜೆನ್ಸಿಗಳಾದ ಲೋವ್ ಲಿಂಟಾಸ್, ಗ್ರೇ ವರ್ಲ್ಡ್ ವೈಡ್, ಪಬ್ಲಿಸಿಸ್ ಇಂಡಿಯಾ, ಜೆಡಬ್ಲ್ಯುಟಿ, ಡ್ರಾಫ್ಟ್ ಎಫ್‌ಸಿಬಿ ಉಲ್ಕಾ ಸೇರಿದಂತೆ ಹಲವು ಸಂಸ್ಥೆಗಳಿಗೆ ಟಿವಿ ಕಮರ್ಷಿಯಲ್‌ಗಳನ್ನೂ ಸಹ ನಿರ್ಮಿಸಿಕೊಟ್ಟಿದ್ದಾರೆ. ಭಾರತದ ಪ್ರಖ್ಯಾತ ಬ್ರಾಂಡ್‌ಗಳಾದ ನೆಸ್ಲೆ, ಪೆಪ್ಸಿ, ಸ್ಯಾಮ್‌ಸಂಗ್, ವರ್ಲ್‌ಪೂಲ್, ಮಾರುತಿ ಸುಝುಕಿ, ಡಿಶ್‌ ಟಿವಿ, ಡಾಬರ್ ಮತ್ತು ಹೆಚ್‌ಪಿ ಸಂಸ್ಥೆಗಳ ಟಿವಿ ಕಮರ್ಷಿಯಲ್‌ಗಳಿಗಾಗಿಯೂ ಕೆಲಸ ಮಾಡಿದ್ದಾರೆ.

ಆರಂಭ

ವಂದನಾ ಹೇಳುವಂತೆ ಅವರು ಬ್ಲಾಗ್ ಆರಂಭಿಸಿದ ನಂತರ, ಅಂದರೆ ಕಳೆದ 2 ವರ್ಷಗಳಲ್ಲಿ ಕಲಿಯಲು ದೊರಕಿದ ಸಾಕಷ್ಟು ಅವಕಾಶಗಳನ್ನು ಅವರು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. ಅಂತರ್ಜಾಲದ ಸಹಾಯ ಪಡೆದು ತಾವೇ ಒಂದು ವೆಬ್‌ಸೈಟ್‌ ಅನ್ನೂ ಸಹ ತೆರೆದು ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.

ಬ್ಲಾಗ್ ಮತ್ತು ವೆಬ್‌ಸೈಟ್‌ ಆರಂಭಿಸಿದ್ದರಿಂದ ವಂದನಾರ ಬಿಸಿನೆಸ್‌ ಅನ್ನು ವಿಸ್ತರಿಸಿಕೊಳ್ಳಲು ಬಹಳ ಸಹಾಯವಾಗಿದೆ. ಕೆಲವೊಂದು ಕಡೆ ಪಾಪ್ ಅಪ್ ಶಾಪ್‌ಗಳನ್ನು ತೆರೆಯುವುದರ ಮೂಲಕ ತಮ್ಮ ಉತ್ಪನ್ನಗಳನ್ನು ಬ್ರಾಂಡ್ ಮಾಡುವತ್ತ ಗಮನಹರಿಸಿದ್ದಾರೆ. ಅಲ್ಲದೇ ಪ್ರಿಂಟ್ ಮತ್ತು ಪ್ಯಾಕೇಜಿಂಗ್‌ಗಾಗಿ ಅವರು ಬಹಳಷ್ಟು ಖರ್ಚು ಮಾಡುತ್ತಾರೆ.

ಉದ್ಯಮಿಯಾಗಿ ಮಾತ್ರವಲ್ಲದೇ ಕಲಾವಿದೆಯಾಗಿಯೂ ಬೆಳೆಯುವ ಆಕಾಂಕ್ಷೆ ವಂದನಾರದ್ದು. ಅವರಿಗೆ ಸಮಯ ಸಿಕ್ಕಾಗಲೆಲ್ಲಾ ವಂದನಾ ಬರವಣಿಗೆಯಲ್ಲಿ ತೊಡಗಿಕೊಳ್ಳುತ್ತಾರೆ. ಸದ್ಯದಲ್ಲೇ ಸಣ್ಣಕಥೆಗಳ ಸಂಕಲನವೊಂದನ್ನು ತರಲು ವಂದನಾ ಸಿದ್ಧರಾಗುತ್ತಿದ್ದಾರೆ.

ಪೇಂಟ್ ಮಾಡಲ್ಪಟ್ಟ ವಸ್ತುಗಳನ್ನು ಮಾಡುವ ಆಸಕ್ತಿಯೂ ವಂದನಾರಿಗಿದೆ. ಜೀವನಶೈಲಿ ಮತ್ತು ಫ್ಯಾಷನ್‌ನಲ್ಲಿ ಕಲೆಯಲ್ಲಿ ಅಳವಡಿಸಬೇಕೆಂಬುದು ಅವರ ಇಚ್ಛೆ. ಲೈಫ್‌ಸ್ಟೈಲ್ ಉತ್ಪನ್ನಗಳನ್ನು ಹೊರತರಲು ವಂದನಾ ಈಗಾಗಲೇ ಕೆಲವೊಂದು ಜ್ಯುವೆಲ್ಲರಿ ಬ್ರಾಂಡ್‌ಗಳೊಂದಿಗೆ ಕೈಜೋಡಿಸಿದ್ದಾರೆ.

ಉಳಿತಾಯವನ್ನೆಲ್ಲಾ ತಮ್ಮ ಉದ್ಯಮಕ್ಕೆ ಹಾಕಿ ತಮ್ಮ ಕಲೆಗೆ ಸೂಕ್ತ ಪ್ರಚಾರ ದೊರಕಿಸಿಕೊಡುವತ್ತ ಹೆಜ್ಜೆ ಇಟ್ಟಿದ್ದಾರೆ ವಂದನಾ. ಶೀಘ್ರದಲ್ಲೇ ಅವರು ತಮ್ಮ ಕಲಾ ಸಂಗ್ರಹ ಅಥವಾ ಹ್ಯಾಂಡ್ ಪೇಂಟೆಡ್ ಕಲೆಯ ಪ್ರದರ್ಶನ ಏರ್ಪಡಿಸುವ ಸಾಧ್ಯತೆಯೂ ಇದೆ. ನನ್ನ ಕಲಾಕೃತಿಗಳಲ್ಲಿ ಒಂದು ಪಿಂಕ್‌ ಕಲರ್ ಚುಕ್ಕೆ ಬಿದ್ದರೂ ಅದಕ್ಕೂ ಒಂದು ಕಾರಣವಿದೆ. ಅದಕ್ಕೊಂದು ಅರ್ಥವಿದೆ. ನಾನು ಏನೇ ಮಾಡಿದರೂ ಅದರಲ್ಲಿ ಕಲೆಯ ಒಂದು ತುಣುಕಾದರೂ ಇದ್ದೇ ಇರುತ್ತದೆ ಎನ್ನುವ ವಂದನಾ ಯಾರೂ ಕೀಳರಿಮೆಯಿಂದ ಒದ್ದಾಡಬಾರದು ಎಂದೂ ಹೇಳುತ್ತಾರೆ. ಪ್ರತಿಯೊಂದು ಒಂದು ಅದ್ಭುತ ಎಂಬುದನ್ನು ಅವರು ನಂಬುತ್ತಾರೆ. ದೇವರೊಂದಿಗೆ ಸಂಪರ್ಕ ಹೊಂದಲು ಕಲೆ ಒಂದು ಮಾಧ್ಯಮವಾದರೆ ಕಲಾವಿದ ಮಧ್ಯವರ್ತಿ ಮಾತ್ರ ಎಂಬುದು ವಂದನಾರ ಅಭಿಮತ.

ಬಣ್ಣಗಳೊಂದಿಗಿನ ಆಟದಲ್ಲಿ ತೊಡಗಿರುವ ವಂದನಾರ ಮಗ

ತಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಂಡಿರುವ ಕುಟುಂಬವನ್ನು ಹೊಂದಿರುವುದಕ್ಕಾಗಿ ವಂದನಾರಿಗೆ ಹೆಮ್ಮೆ ಇದೆ. ಅವರ ಏಳೂವರೆ ವರ್ಷದ ಮಗ ಕೂಡ ಬಣ್ಣಗಳೊಂದಿಗೆ ಆಡುತ್ತಾ, ಕಲೆಯ ಕಡೆಗೆ ಒಲಿಯುತ್ತಿದ್ದಾನೆ.

ಅವನು ಶಾಲೆಯಿಂದ ಬಂದ ಕೂಡಲೇ ನನ್ನ ಸ್ಟುಡಿಯೋಗೆ ಬಂದು ನಾನು ಇಡೀ ದಿನ ಯಾವ ಹೊಸ ಕಲೆಯನ್ನು ಸೃಷ್ಟಿಸಿದ್ದೇನೆ, ಯಾವ ಪೇಂಟಿಂಗ್ ಎಂಬುದನ್ನು ನೋಡುತ್ತಾನೆ. ಇದೊಂದು ಅತ್ಯಂತ ಸಂತೋಷ ನೀಡುವ ಅನುಭವ. ಅವನಿಗೆ ಗೊತ್ತು ಅವನ ಅಮ್ಮ ಏನೋ ಮಾಡುತ್ತಿದ್ದಾರೆ. ಅದಕ್ಕಾಗಿ ಅವನು ಸಂತೋಷಪಡುವುದನ್ನು ನೋಡಿದಾಗಲೆಲ್ಲಾ ಹೃದಯ ತುಂಬಿಬರುತ್ತದೆ. ನನ್ನ ಸ್ಟುಡಿಯೋ ಅತ್ಯಂತ ಸಂತೋಷ ನೀಡುವ ಜಾಗ. ನನ್ನ ಸ್ಟುಡಿಯೋದಲ್ಲಿ ಅವನು ಬಂದು ಅನೇಕ ಬಾರಿ ಪೇಂಟಿಂಗ್‌ಗಳನ್ನು ಮಾಡುತ್ತಿರುತ್ತಾನೆ. ಇದರಿಂದ ನನಗೆಷ್ಟು ಸಂತೋಷವಾಗುತ್ತದೆ ಎಂಬುದನ್ನು ನಾನು ವರ್ಣಿಸಲೇ ಸಾಧ್ಯವಿಲ್ಲ ಎನ್ನುತ್ತಾ ಮಾತು ಮುಗಿಸುತ್ತಾರೆ ವಂದನಾ.

ಲೇಖಕರು: ಶಾಸ್ವತಿ ಮುಖರ್ಜಿ

ಅನುವಾದಕರು: ವಿಶ್ವಾಸ್​​​​​​

Add to
Shares
4
Comments
Share This
Add to
Shares
4
Comments
Share
Report an issue
Authors

Related Tags