ಆವೃತ್ತಿಗಳು
Kannada

ಕತ್ತಲಿನಿಂದ ಬೆಳಕಿನೆಡೆಗೆ..!

ಟೀಮ್​​ ವೈ.ಎಸ್​​. ಕನ್ನಡ

22nd Nov 2015
Add to
Shares
2
Comments
Share This
Add to
Shares
2
Comments
Share

ರೈತರು ದೇಶದ ಅನ್ನದಾತರು, ಜೀವದಾತರು. ಇಡೀ ಜಗತ್ತಿಗೆ ಬೆನ್ನೆಲುಬಾಗಿ ನಿಂತಿರುವ ರೈತರು, ಇವತ್ತು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೆ ಇವತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕರ್ನಾಟಕದಲ್ಲಂತೂ ಇತ್ತೀಚಿನ ದಿನಗಳಲ್ಲಿ ಸಾಲು ಸಾಲು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬೆನ್ನಲ್ಲೇ, ಕರ್ನಾಟಕದ ಗದಗ ಜಿಲ್ಲೆಯ ರೈತ ಸಿದ್ದಪ್ಪ ಉಲ್ಲಾಜೋಗಿ ಇಡೀ ದೇಶಕ್ಕೆ ಮಾದರಿಯಾಗಿದ್ದಾನೆ.

ಹೌದು, ಇವತ್ತು ಮಹಾದಾಯಿ ಯೋಜನೆ ಜಾರಿಗೆ ಒತ್ತಾಯಿಸಿ ರೈತ ಸಮೂಹ ಮೂರು ತಿಂಗಳಿಂದ ಧರಣಿ-ಪ್ರತಿಭಟನೆಯಲ್ಲಿ ನಿರತವಾಗಿದೆ. ಆದರೆ, ಬಂಡಾಯದ ಭೂಮಿ ನರಗುಂದದಿಂದ ಬಂದ ರೈತನೊಬ್ಬ ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾನೆ. ಯಾರನ್ನೂ ಅವಲಂಬಿಸದೆ ಸ್ವಾವಲಂಬಿ ಬದುಕನ್ನು ಸಾಗಿಸುತ್ತಿದ್ದಾನೆ.

image


ಗದಗ ಜಿಲ್ಲೆ ನರಗುಂದದಲ್ಲಿ ವಾಸವಾಗಿರುವ ಸಿದ್ದಪ್ಪ ಉಲ್ಲಾಜೋಗಿ ಅನಕ್ಷರಸ್ಥ. ಶಾಲೆಗೆ ಹೋಗದಿದ್ದರೂ, ಎಲ್ಲರಿಗೂ ಮಾದರಿಯಾಗಿದ್ದಾನೆ. ವಿದ್ಯುತ್ ಕೊರತೆ ಎದುರಿಸುತ್ತಿರುವ ಇಂದಿನ ದಿನಗಳಲ್ಲಿ ತಾನೇ ವಿದ್ಯುತ್ ಉತ್ಪಾದನೆ ಮಾಡುತ್ತಾನೆ. ಅನುಪಯುಕ್ತ ವಸ್ತುಗಳಿಂದ ತಾನೇ ಪವನ ಶಕ್ತಿಯನ್ನು ಉತ್ಪಾದನೆ ಮಾಡುತ್ತಾನೆ. ಪವನ ಶಕ್ತಿಯಿಂದ ಉತ್ಪಾದನೆಯಾದ ವಿದ್ಯುತ್ತನ್ನು ಬೋರ್‌ವೆಲ್‌ಗಾಗಿ ಬಳಕೆ ಮಾಡುತ್ತಾನೆ. ಅಲ್ಲದೆ, ತನ್ನ ಸಹೋದರನ ಮನೆಗೂ ವಿದ್ಯುತ್ ಒದಗಿಸುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.

ಈ ವಿದ್ಯುತ್ ಉತ್ಪಾದನೆಯ ಹಿಂದೆ ದೊಡ್ಡ ಕಥೆಯೇ ಇದೆ. ಮನೆಗೆ ವಿದ್ಯುತ್ ಒದಗಿಸಲು ವಿದ್ಯುತ್ ಕಂಪನಿಗಳು ಹಿಂದೇಟು ಹಾಕುತ್ತಿದ್ದಂತೆ, ಅಚಲ ವಿಶ್ವಾಸದೊಂದಿಗೆ ರೈತ ಸಿದ್ದಪ್ಪ ಉಲ್ಲಾಜೋಗಿ ತಾನೇ ವಿದ್ಯುತ್ ಉತ್ಪಾದನೆಗೆ ಕೈ ಹಾಕಿದ್ದಾನೆ. ಖಾಸಗಿ ಕಂಪನಿಗಳು ತನ್ನ ಜಮೀನಿನ ಬಳಿ ನಿರ್ಮಿಸಿದ್ದ ಗಾಳಿಯಂತ್ರಗಳನ್ನು ಬಳಸಿಕೊಂಡು ಸ್ವಂತ ಬುದ್ದಿಶಕ್ತಿಯಿಂದ ವಿದ್ಯುತ್ ಉತ್ಪಾದನೆಯನ್ನು ಮಾಡುವುದರ ಮೂಲಕ ಸಿದ್ದಪ್ಪ, ಇಡೀ ರಾಜ್ಯಕ್ಕೆ ಮಾದರಿಯಾಗಿದ್ದಾನೆ.

ಎಲ್ಲೋ ಕೊಳೆತು ಹೋಗಬೇಕಿದ್ದ ತ್ಯಾಜ್ಯ ವಸ್ತುಗಳನ್ನು ಸಿದ್ದಪ್ಪ ಉಲ್ಲಾಜೋಗಿ ಒಂದೆಡೆ ಗುಡ್ಡೆ ಹಾಕಿ ವಿದ್ಯುತ್ ಉತ್ಪಾದನೆ ಮಾಡಿದ್ದಾನೆ. 60 ವ್ಯಾಟ್ಸ್ವಿದ್ಯುತ್‌ನಲ್ಲಿ 10 ಬಲ್ಭ್ ಗಳು ಉರಿದರೆ, ಮನೆಯಲ್ಲಿನ 2 ಟಿವಿಗಳನ್ನು ಉರಿಸಬಹುದಾಗಿದೆ ಎನ್ನುತ್ತಾರೆ ಸಿದ್ದಪ್ಪ.

ಪವನ ಶಕ್ತಿ ಉತ್ಪಾದನೆಗೆ ತ್ಯಾಜ್ಯ ವಸ್ತುಗಳನ್ನು ಬಳಕೆ ಮಾಡಲಾಗುತ್ತದೆ. ವಿದ್ಯುತ್ ಉತ್ಪಾದನೆಗೆ tin ಶೀಟ್‌ಗಳು, ಮರದ ದಿಣ್ಣೆಗಲು ಹಾಗೂ ತಾಮ್ರದ ತಂತಿಗಳನ್ನು ಬಳಕೆ ಮಾಡುವುದರ ಮೂಲಕ ವಿದ್ಯುತ್ ಉತ್ಪಾದಿಸಲಾಗುತ್ತದೆ. ಉತ್ಪಾದನೆಯಾದ ವಿದ್ಯುತ್ತನ್ನು ಬ್ಯಾಟರಿ ಮೂಲಕ ಶೇಖರಣೆ ಮಾಡಲಾಗುತ್ತದೆ. ಹೀಗೆ ತಯಾರಿಕೆ ಮಾಡಿದ್ದ ವಿದ್ಯುತ್ತನ್ನು ಗೃಹ ಬಳಕೆಗೆ ಉಪಯೋಗಿಸಲಾಗುತ್ತದೆ.

ದೇಶದಲ್ಲಿ ಪವನ ಶಕ್ತಿ ಉತ್ಪಾದನೆ ಇದೇ ಮೊದಲಲ್ಲ. ಸುಮಾರು 1990 ರ ವೇಳೆಗೆ ಭಾರತದಲ್ಲಿ ಪವನ ವಿದ್ಯುತ್ ಅಭಿವೃದ್ಧಿ ಕಂಡಿತು. ಅದಲ್ಲದೇ ಕಳೆದ ಕೆಲವು ವರ್ಷಗಳಿಂದ ಅದರ ಪ್ರಮಾಣವೂ ಏರಿಕೆ ಕಂಡಿದೆ. ಈ ಗಾಳಿ ವಿದ್ಯುತ್ ಉದ್ಯಮಕ್ಕೆ ಡೆನ್ಮಾರ್ಕ್ ಅಥವಾ ಅಮೆರಿಕ ಹೊಸ ಪ್ರವೇಶ ಮಾಡಿದ್ದರೂ ಭಾರತವು ಇಡೀ ವಿಶ್ವದಲ್ಲಿ ಐದನೆಯ ಅತಿ ದೊಡ್ಡ ದೇಶವಾಗಿ, ಈ ಗಾಳಿ ವಿದ್ಯುತ್ ಸ್ಥಾಪನೆಯಲ್ಲಿ ತನ್ನ ಸ್ಥಾನ ಪಡೆದಿದೆ.

ಇತ್ತೀಚಿನ ಅಂದರೆ 31 ಅಕ್ಟೋಬರ್ 2009 ರವರೆಗೆ ಒಟ್ಟು ಸ್ಥಾಪಿತ ಭಾರತದಲ್ಲಿನ ಪವನ ವಿದ್ಯುತ್ ಉತ್ಪಾದನಾ ಸಾಮರ್ಥ್ಯವೆಂದರೆ 11806.69 ಮೆಗಾವ್ಯಾಟ್ ಆಗಿದೆ. ಪ್ರಮುಖವಾಗಿ ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ, ಒಡಿಶಾ, ಪಶ್ಛಿಮ ಬಂಗಾಳದಲ್ಲಿ ಪವನ ಶಕ್ತಿ ಉತ್ಪಾದನೆ ಆಗುತ್ತಿದೆ.

ಮುಂಬರುವ 2012 ರ ಹೊತ್ತಿಗೆ ಭಾರತದಲ್ಲಿ ಸುಮಾರು 6,000 ಮೆಗಾವ್ಯಾಟ್ ಪವನಶಕ್ತಿ ವಿದ್ಯುತ್ ಉತ್ಪಾದನೆಗೆ ಅಂದಾಜಿಸಲಾಗಿದೆ. ಈ ಪವನಶಕ್ತಿ ವಿದ್ಯುತ್ ಒಟ್ಟು 6% ರಷ್ಟು ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಭಾರತದ ವಿದ್ಯುತ್ ಶಕ್ತಿಗೆ 1.6% ರಷ್ಟು ತನ್ನ ಕೊಡುಗೆ ನೀಡುತ್ತದೆ.

ಕರ್ನಾಟಕದಲ್ಲಿ ಸಣ್ಣ ಪ್ರಮಾಣದ ಪವನ ವಿದ್ಯುತ್ ಶಕ್ತಿ ಉತ್ಪಾದನೆಯ ಕೇಂದ್ರಗಳಿದ್ದು ದೇಶದಲ್ಲಿಯೇ ಅದು ಅತಿ ಹೆಚ್ಚು ಸಂಖ್ಯೆಯ ವಿಂಡ್ ಮಿಲ್ ಫಾರ್ಮ್ ಗಳನ್ನು ಹೊಂದಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಚಿತ್ರದುರ್ಗ, ಗದಗ ಜಿಲ್ಲಾ ಪ್ರದೇಶಗಳಲ್ಲಿ ಅಸಂಖ್ಯಾತ ವಿಂಡ್ ಮಿಲ್ ಗಳಿವೆ. ಚಿತ್ರದುರ್ಗವೊಂದರಲ್ಲೇ ಒಟ್ಟು 20000 ಕ್ಕಿಂತ ಅಧಿಕ ಗಾಳಿ ಟರ್ಬೈನ್ ಗಳಿವೆ.

ಅನುವಾದಕರು: ಶ್ರುತಿ


Add to
Shares
2
Comments
Share This
Add to
Shares
2
Comments
Share
Report an issue
Authors

Related Tags