ಆವೃತ್ತಿಗಳು
Kannada

ಡೆಡ್ಲಿ ಡೇಂಜರಸ್​ ಗೇಮ್​ನ ಪಂಟ, ಬೆಂಗಳೂರಿನ ಯುವ ಸಂತ..!

ಎನ್​ಎಸ್​ಆರ್​

5th Apr 2016
Add to
Shares
3
Comments
Share This
Add to
Shares
3
Comments
Share

ವಿಶ್ವದ ಅತ್ಯಂತ ಡೆಡ್ಲಿ ಡೇಂಜರಸ್ ಗೇಮ್ ಮಿಕ್ಸೆಡ್ ಮಾರ್ಶಲ್ ಆರ್ಟ್ಸ್. ಸದ್ಯ ವಿಶ್ವಾದ್ಯಂತ ಎಲ್ಲರ ಗಮನಸೆಳೆಯುತ್ತಿರುವ ಆಟ ಇದಾಗಿದೆ. ವಿದೇಶದಲ್ಲಿ ಹೆಚ್ಚು ಪ್ರಸಿದ್ಧವಾಗಿರುವ ಈ ಕ್ರೀಡೆಯಲ್ಲಿ ಕನ್ನಡಿಗನೊರ್ವ ಮಿಂಚುತ್ತಿದ್ದಾನೆ. ಈಗಾಗಲೇ ಅಂತಾರಾಷ್ಟ್ರೀಯಮಟ್ಟದಲ್ಲಿ ಗುರುತಿಸಿಕೊಂಡಿದ್ದು, ವೃತ್ತಿಪರ ಪ್ರೋ ಫೈಟ್​ಗೆ ಎಂಟ್ರಿ ಕೊಡುವ ಸನಿಹದಲ್ಲಿದ್ದಾರೆ..

ನವೀನ್ ರವಿಶಂಕರ್ ಎಂಬ ಬೆಂಗಳೂರು ನಿವಾಸಿ ಕಳೆದ ಐದು ವರ್ಷದಿಂದ ಮಿಕ್ಸೆಡ್ ಮಾರ್ಶಲ್ ಆರ್ಟ್ಸ್​ನ್ನು ಅಭ್ಯಾಸ ಮಾಡುತ್ತಿದ್ದಾರೆ. ಒಂದು ವರ್ಷದಿಂದ ಅಮೆಚೂರ್ ಮಿಕ್ಸೆಡ್ ಮಾರ್ಶಲ್ ಆರ್ಟ್ಸ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿರುವ ಇವರು, ವಿಶ್ವ ಅಮೆಚೂರ್ ಮಿಕ್ಸೆಡ್ ಮಾರ್ಶಲ್ ಆರ್ಟ್ಸ್​​ನಲ್ಲಿ 35ನೇ ಶ್ರೇಯಾಂಕ ಹೊಂದಿದ್ದಾರೆ.

image


ಹೌದು ಮಿಕ್ಸೆಡ್ ಮಾರ್ಶಲ್ ಆರ್ಟ್ಸ್ ಅನ್ನೋದು ಒಂದು ಅದ್ಭುತ ಆಟ. ಮಾರ್ಶಲ್ ಆರ್ಟ್ಸ್, ಕರಾಟೆ, ಟೆಕ್ವಾಂಡೊ ಮತ್ತು ಬಾಕ್ಸಿಂಗ್​ನಂತಹ ಹಲವು ಫೈಟ್​ಗಳ ಮಿಶ್ರಣ. ಇದಕ್ಕಾಗಿ ಸರ್ವರೀತಿಯಲ್ಲೂ ಉಭಯ ಆಟಗಾರರು ಸಜ್ಜಾಗಿರಬೇಕು. ಏಟು ಯಾವ ಮೂಲೆಯಿಂದ ಹೇಗೆ ಬಿಳುತ್ತೋ ಗೊತ್ತಿಲ್ಲ. ಆ ರೀತಿಯಲ್ಲಿ ಈ ಆಟ ನಡೆಯುತ್ತೆ. ಎಷ್ಟು ವೇಗವಾಗಿ ಹೊಡೆಯುತ್ತಾರೆ ಎಂಬುದು ತಿಳಿಯುವುದಿಲ್ಲ. ಹಾಗಾಗಿ ಕಳೆದ ಒಂದು ವರ್ಷದಿಂದ ಈ ಗೇಮ್ ವಿಶ್ವದೆಲ್ಲೆಡೆ ಸಖತ್ ಜನಪ್ರಿಯವಾಗಿದೆ.

ಉಜ್ವಲ ಭವಿಷ್ಯವಿರುವ ಗೇಮ್​ಗಳಲ್ಲಿ ಒಂದು ಮಿಕ್ಸೆಡ್ ಮಾರ್ಶಲ್ ಆರ್ಟ್ಸ್. ಇಲ್ಲಿ ಕಣಕ್ಕಿಳಿಯುವ ಪ್ರೋ ಫೈಟ್ ಆಟಗಾರರು ಗೆಲ್ಲಲಿ ಸೋಲಲಿ ನೂರಾರು ಕೋಟಿ ಹಣ ಸಿಗುತ್ತೆ. ಇತ್ತೀಚೆಗಷ್ಟೇ ಬಾಕ್ಸಿಂಗ್​ಗೆ ವಿದಾಯ ಹೇಳಿದ ಮೇವೆದರ್ ಒಂದು ಫೈಟ್​ಗೆ 150 ಕೋಟಿ ರೂಪಾಯಿ ಪಡೆದ್ರು. ಹಾಗಾಗಿ ವಿಶ್ವದ ಅತ್ಯಂತ ದುಬಾರಿ ಗೇಮ್ ಇದಾಗಿದೆ.

ಇದನ್ನು ಓದಿ: ಜಗತ್ತನ್ನು ನೋಡುವ ದೃಷ್ಟಿ ಬದಲಿಸಲಿರುವ ಲೆನ್ಸ್..!

ಕನ್ನಡಿಗ ನವೀನ್ ಕೂಡ ಸದ್ಯ ದೇಶದಲ್ಲಿರುವ ಅಮೆಚೂರ್ ಮಿಕ್ಸೆಡ್ ಮಾರ್ಶಲ್ ಆರ್ಟ್ಸ್​ನ ಟಾಪ್ ಕ್ರೀಡಾಪಟು. ಅವರ ಕೋಚ್, ಸಹಪಾಠಿಗಳು ಹೇಳುವ ಪ್ರಕಾರ ‘ಅವರ ಅಭ್ಯಾಸ ಕೂಡ ಅದ್ಭುತವಾಗಿದೆ. ಪ್ರತಿ ದಿನವೂ ಒಂದೊಂದು ಬಗೆಯ ಅಭ್ಯಾಸ ನಡೆಸುವ ನವೀನ್, ಕರಾಟೆ, ಟೆಕ್ವಾಂಡೊ, ಬಾಕ್ಸಿಂಗ್​​ ತರಬೇತಿ ಜೊತೆಗೆ ದಿನನಿತ್ಯದ ವ್ಯಾಯಾಮ ಮಾಡ್ತಾರೆ. ಹಾಗಾಗಿ ಅವರು ಆದಷ್ಟೂ ಬೇಗ ಪ್ರೋ ಫೈಟ್​ಗೆ ಪ್ರವೇಶ ಪಡೆಯುವ ಸಾಧ್ಯತೆಯಿದೆ’ ಎಂತಾರೆ ಅಖಿಲಾ ಭಾರತ ಮಿಕ್ಸಡ್ ಮಾರ್ಶಲ್ ಆರ್ಟ್ಸ್ ದಕ್ಷಿಣ ಭಾರತ ಅಧ್ಯಕ್ಷ, ಪ್ರಸಾದ್.

image


"ಸದ್ಯ ಪ್ರೊ ಫೈಟ್​ನಲ್ಲಿ ಭಾಗವಹಿಸುವುದು ನವೀನ್ ಅವರ ಆಶಯವಾಗಿದೆ. ಈ ಮೂಲಕ ಮಿಕ್ಸಡ್ ಮಾರ್ಶಲ್ ಆರ್ಟ್ಸ್​ನಲ್ಲಿ ಭಾಗವಹಿಸಿದ ಮೊದಲ ಭಾರತೀಯನಾಗಬೇಕೆಂಬ ಕನಸು ನವೀನ್ದಾಗಿದ್ದು. ಅದಕ್ಕಾಗಿ ಸಾಕಷ್ಟು ಪರಿಶ್ರಮ ಪಡುತ್ತಿರುವುದಾಗಿ ನವೀನ್ ಹೇಳುತ್ತಾರೆ". ನಾವು ಭಾರತೀಯರು ನಾವು ಬೇರೆ ದೇಶದವರಿಗೆ ಹೋಲಿಸಿದ್ರೆ ಹುಟ್ಟುತ್ತಾ ತುಂಬಾ ಬಲಿಷ್ಠವಾಗಿರುತ್ತೇವೆ. ನಮ್ಮಲ್ಲಿ ವಿದೇಶಿ ಆಟಗಾರರಲ್ಲಿ ಇರುವಂತಹ ಸ್ಕಿಲ್ ಇಲ್ಲದಿರಬಹುದು. ಆದರೆ ಅವರ ಮಟ್ಟಿಗೆ ಫೈಟ್ ನೀಡುವ ಶಕ್ತಿ ನಮ್ಮಗಿದೆ. ನಾವು ಉತ್ತಮ ಕೋಚಿಂಗ್ ಸಿಕ್ಕರೆ ನಾವು ಸಹ ಈ ಫೈಟ್​ನಲ್ಲಿ ಹೆಚ್ಚು ಕ್ಲಿಕ್ ಆಗುತ್ತೇವೆ ಎಂಬುದು ಅವರ ವಿಶ್ವಾಸವಾಗಿದೆ.

ನವೀನ್ ಅವರ ಪ್ರದರ್ಶನದಿಂದ ತಾಯಿ ಕೂಡ ತುಂಬಾ ಖುಷಿಯಾಗಿದ್ದಾರೆ. 

"ಆದರೆ ಮಗ ಇಷ್ಟೆಲ್ಲಾ ಸಾಧನೆ ಮಾಡಿದ್ರು, ಅವನಿಗೆ ಸರ್ಕಾರವಾಗಲಿ ಅಥವಾ ಖಾಸಗಿ ಪ್ರಾಯೋಜಕತ್ವ ಯಾವುದು ಸಿಗುತ್ತಿಲ್ಲ. ಈಗಾಗ್ಲೇ ಲಾಸ್​ವೇಗಾಸ್​​ನಲ್ಲಿ ಫೈಟ್ ಮಾಡಿರುವ ನವೀನ್, ಬೇರೆ ದೇಶಕ್ಕೆ ಬಂದು ಸ್ಫರ್ಧೆಯಲ್ಲಿ ಭಾಗವಹಿಸಲು ಅವಕಾಶ ಸಿಗುತ್ತಿವೆ ಆದರೆ, ಆರ್ಥಿಕ ತೊಂದರೆಯಿಂದಾಗಿ ನವೀನ್​ಗೆ ಹೋಗಲು ಆಗುತ್ತಿಲ್ಲ."
                             - ಭಾಗ್ಯ, ನವೀನ್ ಅಮ್ಮ.

ನವೀನ್ ಪ್ರತಿನಿತ್ಯ ತುಂಬಾ ಕಷ್ಟಪಡ್ತಾರೆ. ಜೊತೆಗೆ ತಾವು ಈ ಕ್ರೀಡೆಯನ್ನು ಹೆಚ್ಚು ಬೆಳೆಸಬೇಕು. ಬೆಂಗಳೂರು ಮಿಕ್ಸಡ್ ಮಾರ್ಷಲ್ ಆರ್ಟ್ಸ್ ಹಬ್ ಆಗಬೇಕು. ಹಲವು ಹೊಸ ಪ್ರತಿಭೆಗಳು ದೇಶಾದ್ಯಂತ ಬರಬೇಕೆಂಬುದು ನವೀನ್ ಆಶಯವಾಗಿದೆ. ಈಗಾಗ್ಲೇ ಹಲವು ಯುವಕರಿಗೆ ಜಾಲಹಳ್ಳಿ ಬಳಿಯಿರುವ ಎಚ್ಎಂಟಿ ಮೈದಾನದಲ್ಲಿ ತರಬೇತಿ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಭಾರತವು ಈ ಗೇಮ್​ನಲ್ಲಿ ಕಾಣಿಸಿಕೊಳ್ಳಬೇಕು. ಭಾರತದಲ್ಲೂ ಇಂತಹ ಆಟಕ್ಕೆ ಹೆಚ್ಚಿನ ಕ್ರೇಜ್ ಬರಬೇಕು. ಇಂತಹ ಒಂದು ಕ್ರೀಡೆಯಿಂದಲೇ ಹಲವು ಆಟಗಾರರ ಬದುಕು ಸಾಗಬೇಕೆಂಬುದು ನವೀನ್ ಆಶಯ.

ನವೀನ್ ಇದೇರೀತಿ ಶ್ರದ್ಧೆಯಿಂದ ಅಭ್ಯಾಸ ನಡೆಸಿದ್ದಲ್ಲಿ ಮುಂದೊಂದು ದಿನ ಮಿಕ್ಸಡ್ ಮಾರ್ಶಲ್ ಆರ್ಟ್ಸ್ ಪ್ರೊ ಫೈಟ್​ನಲ್ಲಿ ಭಾಗವಹಿಸುವುದಂತು ಖಚಿತ. ಆದರೆ ಇದೆ ಶ್ರದ್ಧೆ ನಿಷ್ಠೆ ಮತ್ತು ಬದ್ಧತೆಯಿಂದ ಆಡಬೇಕಷ್ಟೆ.

ಇದನ್ನು ಓದಿ:

1. ರೈತರ ಬಂಧು 'ಅಗ್ರಿ ಮಾರ್ಕೆಟ್' ಆ್ಯಪ್

2. ಹಚ್ಚಿದ್ದು ಬಣ್ಣ ..ಮಾಡುತ್ತಿರೋದು ಸೇವೆ-ಬಣ್ಣಕ್ಕೂ ಬಂತು ಸೇವೆಯ ನಂಟು ..

3. ಸಕಲ ಕಲಾ ವಲ್ಲಭ - ಆಸಕ್ತಿಯೇ ಈಗ ಫುಲ್‍ ಟೈಂ ಜಾಬ್

Add to
Shares
3
Comments
Share This
Add to
Shares
3
Comments
Share
Report an issue
Authors

Related Tags