ಆವೃತ್ತಿಗಳು
Kannada

"ವಿರಾಟ್"​ ರೂಪಕ್ಕೆ ಬೆಚ್ಚಿಬಿದ್ದ ಕ್ರಿಕೆಟ್​ಲೋಕ

ಟೀಮ್​ ವೈ.ಎಸ್​. ಕನ್ನಡ

29th May 2016
Add to
Shares
0
Comments
Share This
Add to
Shares
0
Comments
Share

ಐಪಿಎಲ್‌ನಲ್ಲಿ ಈ ಬಾರಿ ಸುದ್ದಿ ಮಾಡಿದ್ದು ಎರಡೇ.. ಒಂದು ವಿರಾಟ್‌ ರನ್‌ಗಳಿಕೆ...ಮತ್ತೊಂದು ವಿರಾಟ್‌ ಶತಕದ ಲೆಕ್ಕಾಚಾರ. ಎಲ್ಲರಿಗೂ ಎಲ್ಲಾ ರೀತಿಯಲ್ಲೂ ಪಾಠವಾಗಿದೆ ವಿರಾಟ್‌ ಬ್ಯಾಟಿಂಗ್‌.. ವಿರಾಟ್‌ ಆಡಿದ ಇನ್ನಿಂಗ್ಸ್‌ಗಳೆಲ್ಲಾ ಒಂದಕ್ಕಿಂತ ಒಂದು ಅದ್ಭುತ. ಬ್ಯಾಟ್‌ ಹಿಡಿದು ಕ್ರೀಸ್‌ಗಿಳಿದ್ರೆ ಸೆಂಚುರಿ ಗ್ಯಾರೆಂಟಿ. ಎಲ್ಲವೂ ಕ್ರಿಕೆಟ್‌ ಪುಸ್ತಕ ಶಾಟ್‌ಗಳೇ. ಅಬ್ಬರವೂ ಇತ್ತು. ಕಲಾತ್ಮಕತೆಯೂ ಇತ್ತು. ಸೀಸನ್‌ ಪೂರ ವಿರಾಟ್‌ ಸ್ಪೆಷಲ್‌ ಇನ್ನಿಂಗ್ಸ್‌ಗಳದ್ದೇ ಮಾತು. ಅಭಿಮಾನಿಗಳಿಗಂತೂ ವಿರಾಟ್‌ ಇನ್ನಿಂಗ್ಸ್‌ ನೋಡೋದೇ ಹಬ್ಬ.

image


ಎಲ್ಲಾ ಕಡೆ ರನ್‌ಮಳೆ..!

ಕ್ರಿಕೆಟ್‌ನ ಹೈಲೈಟ್ಸ್‌ ಪ್ಯಾಕೇಜ್‌ ಬೇಕಾದ್ರೂ ಸ್ವಲ್ಪ ನಿಧಾನವಾಗಿ ಕಾಣಬಹುದು. ಆದ್ರೆ ವಿರಾಟ್‌ ಇನ್ನಿಂಗ್ಸ್‌ ಮಾತ್ರ ಸೂಪರ್‌ ಫಾಸ್ಟ್‌. ಬ್ಯಾಟ್‌ಗೆ ಮುತ್ತಿಕ್ಕಿದ ಚೆಂಡುಗಳು ಪ್ರೇಕ್ಷಕರ ಮಧ್ಯದಲ್ಲಿಬಿದ್ದು ಸಿಕ್ಸರ್‌ಗಳಾಗಿಬಿಡುತ್ತವೆ. ಬೌಂಡರಿ ಗೆರೆ ಕಾಯುವ ಫೀಲ್ಡರ್‌ಗಳು ಓಡಿ ಓಡಿ ಸುಸ್ತಾಗಿ ಬಿಡುತ್ತಾರೆ. ಮೈದಾನ ಯಾವುದಾದ್ರೂ ಆಗಿರಬಹುದು, ಕಂಡೀಷನ್‌ ಹೇಗೆ ಬೇಕಾದ್ರೂ ಇರಬಹುದು, ವಿರಾಟ್‌ ಆಡಿದ್ದೇ ಆಟ. ಅಷ್ಟರ ಮಟ್ಟಿಗೆ ವಿರಾಟ್‌ ಎದುರಾಳಿಗಳನ್ನು ಮುಷ್ಠಿಯಲ್ಲಿಟ್ಟುಕೊಂಡು ಪಾರುಪತ್ಯ ಸಾಧಿಸಿದ್ದಾರೆ.

ಇದನ್ನು ಓದಿ: ಕ್ರೀಡಾಪಟುಗಳ ಫಿಟ್ನೆಸ್ ಗುರು ರಾಜಮಣಿ

ಆರೇ ತಿಂಗಳಲ್ಲಿ 1500 ಟಿ20 ರನ್‌..!, ಬೌಲರ್‌ಗಳ ಬೆವರಿಳಿಸುವ ರನ್‌ ಮೆಷಿನ್‌..!

ಮುಲಾಜೇ ಇಲ್ಲ. ಬೌಲರ್‌ಗಳು ಯಾರು ಅನ್ನೋದನ್ನ ನೋಡೋದೂ ಇಲ್ಲ.. ಯಾಕಂದ್ರೆ ಇದು ವಿರಾಟ್‌ ಕೊಹ್ಲಿ ಸ್ಪೆಷಲ್‌.. ಬ್ಯಾಟ್‌ ಇರೋದು ರನ್‌ಗಳಿಸೋದಿಕ್ಕೆ ಅನ್ನೋ ಲೆಕ್ಕಾಚಾರದಲ್ಲೇ ಆಟ ಆಡೋದು. ತಂಡವನ್ನು ಗೆಲ್ಲಿಸಲೇಬೇಕು ಅಂತ ಪಣ ತೊಟ್ಟು ಕಣಕ್ಕಿಳಿಯೋದು. ವಿರಾಟ್‌ ಸದ್ಯ ಮುಟ್ಟಿದ್ದೆಲ್ಲವೂ ಚಿನ್ನವಾಗ್ತಿದೆ. ಐಪಿಎಲ್‌ಗಿಂತ ಮುನ್ನ ಆಡಿದ 13 ಟಿ20 ಅತರಾಷ್ಟ್ರೀಯ ಪಂದ್ಯಗಳಲ್ಲಿ ಬಾರಿಸಿದ್ದು ಬರೋಬ್ಬರಿ 625 ರನ್‌. ಅದೂ ಕೂಡ 125ರ ಸರಾಸರಿಯಲ್ಲಿ. ಆದ್ರೆ ಆ ಇನ್ನಿಂಗ್ಸ್‌ಗಳಲ್ಲಿ ಶತಕದ ವೈಭವ ಇರಲಿಲ್ಲ. ಐಪಿಎಲ್‌ನಲ್ಲೂ ವಿರಾಟ್‌ ಬೊಂಬಾಟ್‌ ಫಾರ್ಮ್‌ ಪ್ರದರ್ಶನ ಮಾಡಿದ್ರು. ಸಿಕ್ಸರ್‌ಗಳು ಬೌಂಡರಿಗಳು ಲೆಕ್ಕವೇ ಮರೆತು ಹೋಗುವಷ್ಟು ಸಿಡಿದಿವೆ. ಈ ಬಾರಿಯ ಐಪಿಎಲ್‌ನಲ್ಲಿ ಆಟಕ್ಕಿಳಿಯುವ ಮುನ್ನ ವಿರಾಟ್‌ ಟಿ20ಯಲ್ಲಿ ಸೆಂಚುರಿಯನ್ನೇ ಸಿಡಿಸಿರಲಿಲ್ಲ. ಆದ್ರೆ ಐಪಿಎಲ್‌ ಆರಂಭವಾಗಿದ್ದೇ ತಡ ವಿರಾಟ್‌ 4 ಶತಕ ಸಿಡಿಸಿ ಹೊಸ ದಾಖಲೆ ಬರೆದಿದ್ದಾರೆ. ಗುಜರಾತ್‌ ಲಯನ್ಸ್‌ ವಿರುದ್ಧ 2, ಪುಣೆ ಹಾಗೂ ಕಿಂಗ್ಸ್‌ ಇಲವೆನ್‌ ವಿರುದ್ಧ ಸೆಂಚುರಿ ಬಾರಿಸಿ ಐಪಿಎಲ್‌ನ ಎಲ್ಲಾ ದಾಖಲೆಗಳನ್ನು ತಿದ್ದಿ ಬರೆದಿದ್ದಾರೆ.

image


ವಿರಾಟ್‌ ಯಶಸ್ಸಿನ ಗುಟ್ಟು...!

ಒಟ್ಟಿನಲ್ಲಿ ವಿರಾಟ್‌ ಆಟ ನೋಡೋದೇ ಸಂಭ್ರಮ. ಕ್ರೀಸ್‌ಗಳಿದ್ರೆ ಎಲ್ಲರೂ ಫಾಲೋ ಮಾಡುವಂತಹ ಆಟ ಜೊತೆಗೆ ಸ್ಥಿರತೆ.. ವಿರಾಟ್‌ ಆಟವನ್ನು ಯಾರ ಆಟಕ್ಕೂ ಹೋಲಿಕೆ ಮಾಡೋದಿಕ್ಕೆ ಸಾಧ್ಯವಿಲ್ಲ. ಯಾಕಂದ್ರೆ ವಿರಾಟ್‌ ಉಳಿದೆಲ್ಲರಿಗಿಂತಲೂ ಸೂಪರ್‌ ಸ್ಪೆಷಲ್‌. ಯಶಸ್ಸು ಈತನ ಸ್ವತ್ತು.. ಅಂದುಕೊಂಡಿದ್ದನ್ನ ಮಾಡೋ ಜಾಯಮಾನ ಈತನದ್ದು.. ಶ್ರದ್ಧೆ, ಪರಿಶ್ರಮದ ಪರಿಣಾಮ ಇಂದು ಆತನ ಕೀರ್ತಿ ಜಗದಗಲಕ್ಕೆ ಹರಡಿದೆ. ಮುಟ್ಟಿದ್ದೆಲ್ಲವನ್ನೂ ಚಿನ್ನವನ್ನಾಗಿ ಮಾಡಿಕೊಳ್ಳೋದು ತಮಾಷೇ ಮಾತಲ್ಲ. ಸಿಕ್ಕ ಛಾನ್ಸ್‌ ನಲ್ಲೇ ತನ್ನ ಟ್ಯಾಲೆಂಟ್‌ ತೋರಿಸಿ ಯಶಸ್ಸಿನ ಶಿಖರವೇರಿದರು. ಟೀಮ್‌ಇಂಡಿಯಾದಲ್ಲಿ ಬಂದು ಹೋಗುವವರ ನಡುವೆ ನೆಲೆಯೂರಿ ನಿಂತವರು ವಿರಾಟ್‌ ಕೊಹ್ಲಿ. ಯಾವುದೇ ಕ್ರಮಾಂಕವಿರಲಿ ಆತನಿಗೆ ಗೊತ್ತಿರೋದು ನೆಲಕಚ್ಚಿ ಆಡೋದು, ಎದುರಾಳಿ ಬೌಲರ್‌ಗಳನ್ನು ಹುರಿದು ಮುಕ್ಕೋದು. ಕ್ರೀಸ್‌ನಲ್ಲಿ ಇರುವಷ್ಟ ಕಾಲ ಹೋರಾಟ ನಡೆಸಿ ತಂಡದ ಗೆಲುವಿಗೆ ಶ್ರಮಿಸುತ್ತಾರೆ. ಅಲ್ಲದೇ, ಎದುರಾಳಿಗಳಿಗೆ ಕಡೆಯವರೆಗೂ ಕಾಡುತ್ತಾರೆ.

image


ಐಪಿಎಲ್‌ನಲ್ಲಿ ಸ್ಟಾರ್‌ ಆಟಗಾರರ ನಡುವೆ ಚಿಕ್ಕವಯಸ್ಸಿನಲ್ಲೇ ಪ್ರಜ್ವಲಿಸಿದ್ದು ವಿರಾಟ್‌.. ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ ತಂಡದ ಜೆರ್ಸಿ ತೊಟ್ಟ, ಮೆಚ್ಚಿನ ಹುಡುಗ ಮತ್ತೆ ಹಿಂದೆ ತಿರುಗಿ ನೋಡಿದ್ದೇ ಇಲ್ಲ. ಒಂದೊಂದೆ ಮೆಟ್ಟಿಲುಗಳನ್ನ ಹತ್ತುತ್ತ ಬಂದ ಕೊಹ್ಲಿ ಇಂದು ವಿಶ್ವದ ಸೂಪರ್‌ ಸ್ಟಾರ್‌. ಇಷ್ಟಾದ್ರು ಕೊಹ್ಲಿ ಆಟದಲ್ಲಿ ಕೊಂಚವೂ ಬದಲಾವಣೆಯಾಗಿಲ್ಲ.. ಬ್ಯಾಟಿಂಗ್‌ನಲ್ಲಿ ಕಳೆಗುಂದಿಲ್ಲ.. ಬದಲಾಗಿ ದಿನದಿಂದ ದಿನಕ್ಕೆ ಕೊಹ್ಲಿಯ ಆಟ ಆಕರ್ಷಕವಾಗುತ್ತಿದೆ. ಕೊಹ್ಲಿ ಬ್ಯಾಟಿಂಗ್‌ ಬಗ್ಗೆ ಎರಡು ಮಾತಿಲ್ಲ.. ಯಾವುದೇ ಸಂದರ್ಭದಲ್ಲಾದ್ರು ಆಡಬಲ್ಲರು.. ಒತ್ತಡವನ್ನ ಮೆಟ್ಟಿನಿಂತು ಎದುರಾಳಿಗಳನ್ನ ಕಾಡಬಲ್ಲರು.. ಬ್ಯಾಟಿಂಗ್‌ನಲ್ಲಿ ಎಂದಿಗೂ ಫೇಲ್ಯೂರ್‌ ಅನ್ನೋ ಹಣೆಪಟ್ಟಿಯನ್ನ ಕಟ್ಟಿಕಂಡವರಲ್ಲ.. ಸ್ಥಿರ ಪ್ರದರ್ಶನದೊಂದಿಗೆ ತಂಡದಲ್ಲಿ ಸ್ಥಿರವಾಗಿ ನೆಲೆಯೂರಿದ್ದಾರೆ. ಕೊಹ್ಲಿಯ ಬ್ಯಾಟಿಂಗ್‌ ಅಂದ್ರೆ ಎಲ್ಲರಿಗೂ ಅಚ್ಚು ಮೆಚ್ಚು. ಆದ್ರೆ, ಕೊಹ್ಲಿ ಬ್ಯಾಟಿಂಗ್‌ ಗೆ ಬರುವ ಮುನ್ನ ಸಾಕಷ್ಟು ಪ್ಲಾನ್‌ ಗಳನ್ನೇ ಮಾಡಿಕೊಂಡು ಕಣಕ್ಕಿಳಿಯುತ್ತಾರೆ.. ಅದರಲ್ಲೂ ಕೊಹ್ಲಿಯದ್ದು ಡಿಫರೆಂಟ್‌ ಟ್ಯಾಕ್ಟೀಸ್‌.. ಕೊಹ್ಲಿ ಆಟಕ್ಕೆ ಬರುವ ಮುನ್ನ ಸಾಕಷ್ಟು ಸನ್ನದ್ಧವಾಗೆ ಬರುತ್ತಾರೆ.. ಮೈದಾನದಲ್ಲಿ ಅಭ್ಯಾಸ ಮಾಡುವುದಲ್ಲದೇ ತನ್ನದೇಯಾದ ಮೈಂಡ್‌ ಗೇಮ್‌ ಆಟವನ್ನ ಆಡುತ್ತಾರೆ.

image


ಹೌದು, ಮೈದಾನದಲ್ಲಿ ಅಲ್ಲದೇ ಕೊಹ್ಲಿ ಬಸ್‌ನಲ್ಲಿ ಕೂತು ಸಹ ಬ್ಯಾಟಿಂಗ್‌ ಬಗ್ಗೆ ಪ್ಲಾನ್‌ ಮಾಡ್ತಾರೆ. ಏಕದಿನ ಪಂದ್ಯದಲ್ಲಿ ಟೀಮ್‌ ಇಂಡಿಯಾ ಪರ ಫಾಸ್ಟೆಸ್ಟ್‌ ಸೆಂಚೂರಿ ಬಾರಿಸಿದ ವಿರಾಟ್ ಕೊಹ್ಲಿ ನಂಬರ್‌ 1 ಬ್ಯಾಟ್ಸ್‌ಮನ್‌.. ಆದ್ರೆ, ಕೊಹ್ಲಿ ಎಂದಿಗೂ ಹಿಂದಿನ ದಾಖಲೆಗಳನ್ನ ಮೆಲುಕು ಹಾಕುವುದಿಲ್ಲ.. ಹಿಂದಿನ ಆಟ ಹೇಗೆ ಇರಲಿ. ಸಕ್ಸಸ್, ಫೇಲ್ಯೂರ್‌ ಏನೇ ಇದ್ದರು ಅದು ಅಂದಿನ ಆಟಕ್ಕೆ ಮಾತ್ರ ಸಿಮೀತವಾಗಿರುತ್ತದೆ. ಪಂದ್ಯದ ದಿನದ ಪರ್ಫಾಮೆನ್ಸ್‌ ಬಗ್ಗೆಯೂ ಕೊಹ್ಲಿ ಹೆಚ್ಚು ತಲೆಕೆಡಿಸಿಕೊಂಡವರಲ್ಲ.. ಮುಂದೇನು ಯಾವ ಪಂದ್ಯ, ಹೇಗೆ ಆಡಬೇಕೆಂಬುದರ ಬಗ್ಗೆ ಚಿತ್ತ ಹರಿಸುತ್ತಾರೆ. ವಿರಾಟ್ ಕೊಹ್ಲಿ ಸಖತ್‌ ಅಗ್ರೇಸಿವ್‌ ಪ್ಲೇಯರ್‌.. ಕ್ರೀಡಾಂಗಣದಲ್ಲಿ ಆಕ್ರಮಣಕಾರಿ ಆಟವಾಡುತ್ತಾರೆ.. ಆದ್ರೆ, ಅದನ್ನೇಲ್ಲ ಈಗ ಗಂಟು ಮೂಟೆ ಕಟ್ಟಿ ಇಟ್ಟಿದ್ದಾರೆ. ಅದು ಎಂತಹದೇ ಸಂದರ್ಭ ಬಂದರು ತಾಳ್ಮೆಯನ್ನ ಕಳೆದುಕೊಳ್ಳದೇ ಆಟದತ್ತ ಚಿತ್ತ ಹರಿಸುತ್ತಾರೆ.. ಈ ಮೊದಲ ಸಾಕಷ್ಟು ಬಾರಿ ಅಗ್ರೇಸಿವ್‌ ಆಟದಿಂದಲೇ ಕೆಲವರ ಟೀಕೆಗೆ ಗುರಿಯಾಗಿದ್ದರು. ಈಗ ಅವೆಲ್ಲದಕ್ಕೂ ಕೊಹ್ಲಿ ಈಗ ಬ್ರೇಕ್ ಹಾಕಿದ್ದಾರೆ. ಸದ್ಯ ಕೊಹ್ಲಿ ಕೂಲ್ ಬಾಯ್‌ ಆಗಿದ್ದಾರೆ. ಕೊಹ್ಲಿಯ ಯಶಸ್ಸಿನ ಉತ್ತುಂಗಕ್ಕೇರುತ್ತಿದ್ದಾರೆ.. ಆಟದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವ ಕೊಹ್ಲಿ ಇಂದು ಡಾನ್‌ ಬ್ರಾಡ್ಮನ್‌, ಸಚಿನ್‌ ತೆಂಡಲ್ಕರ್‌ ಮತ್ತು ಬ್ರ್ಯಾನ್‌ ಲಾರಾರಂತೆ ಸ್ಪೆಷಲ್‌ ಕ್ರಿಕೆಟರ್‌.

ಇದನ್ನು ಓದಿ

1. ಓದಿದ್ದು ಒಂಭತ್ತನೇ ಕ್ಲಾಸ್..ಆಗಿದ್ದು ಎಂಜಿನಿಯರ್​​ಗಳಿಗೇ ಟೀಚರ್....

2. ಮಹಿಳಾ ಕ್ರಿಕೆಟ್ ನ ಮಿರಾಕಲ್ ಮಿಥಾಲಿ ರಾಜ್

3. ನಾವು ಯಾರಿಗೂ ಕಮ್ಮಿ ಇಲ್ಲಿ – ಚಿಕ್ಕವರೆಲ್ಲಾ ಜಾಣರಲ್ಲ

Add to
Shares
0
Comments
Share This
Add to
Shares
0
Comments
Share
Report an issue
Authors

Related Tags