ಬೆಂಗಳೂರಿನ ಲೈಂಗಿಕ ಕಿರುಕುಳ ಪೀಡಿತ ಪ್ರದೇಶಗಳ ನಕ್ಷೆ ತಯಾರಿಸುತ್ತಿರುವ 21 ರ ಯುವತಿ

ಬೆಂಗಳೂರು ಮೂಲದ ವಿದ್ಯಾರ್ಥಿ ನೂಪುರ್ ಪಾಟ್ನಿ ವಿನ್ಯಾಸಗೊಳಿಸಿದ ಈ ನಕ್ಷೆಯ ಹೆಸರು ‘ಇಟ್ಸ್ ನಾಟ್ ಮೈ ಫಾಲ್ಟ್’, ನಗರದಲ್ಲಿ ಲೈಂಗಿಕ ಕಿರುಕುಳ ವಲಯಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅಪರಾಧಗಳನ್ನು ತಗ್ಗಿಸಲು ಈ ನಕ್ಷೆ ಸಹಾಯ ಮಾಡುತ್ತದೆ.

ಬೆಂಗಳೂರಿನ ಲೈಂಗಿಕ ಕಿರುಕುಳ ಪೀಡಿತ ಪ್ರದೇಶಗಳ ನಕ್ಷೆ ತಯಾರಿಸುತ್ತಿರುವ 21 ರ ಯುವತಿ

Friday December 06, 2019,

2 min Read

ಭಾರತದಲ್ಲಿ ಮಹಿಳೆಯರ ಸುರಕ್ಷತೆಯು ಅಪಾಯದ ಅಂಚಿನಲ್ಲಿದೆ. ಕಳೆದ ವಾರ ಹೈದರಾಬಾದಿನ ಪಶುವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆಯು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ, ಲೈಂಗಿಕ ದೌರ್ಜನ್ಯ ಮತ್ತು ಅಪರಾಧದ ವಿಷಯಗಳ ಕುರಿತು ತಕ್ಷಣದ ಕ್ರಮ ಕೈಗೊಳ್ಳಲು ಎಲ್ಲೆಡೆಯಿಂದಲೂ ನಾಗರಿಕರು ಒತ್ತಾಯಿಸುತ್ತಿದ್ದಾರೆ.


ದುಷ್ಕರ್ಮಿಗಳನ್ನು ಶಿಕ್ಷಿಸಲು ಮತ್ತು ಈ ರೀತಿಯ ಹಿಂಸಾತ್ಮಕ ಘಟನೆಗಳು ಪುನರಪಿಸದಂತೆ ತಡೆಗಟ್ಟಲು ಸರಕಾರ ಯೋಚಿಸುತ್ತಿದ್ದರೆ, ಇನ್ನೊಂದೆಡೆ ಕೆಲವು ವ್ಯಕ್ತಿಗಳು ಬದಲಾವಣೆಯನ್ನು ತರಲು ವಿನೂತನ ಕ್ರಮಗಳನ್ನು ತಾವೇ ರೂಪಿಸುತ್ತಿದ್ದಾರೆ.


ನೂಪುರ್ ಪಾಟ್ನಿ (ಚಿತ್ರ ಕೃಪೆ: ಇಂಡಿಯನ್ ಎಸ್ಪ್ರೆಸ್)



ಬೆಂಗಳೂರಿನ ಸೃಷ್ಟಿ ಇನ್ಸ್ಟಿಟ್ಯೂಟ್ ಆಫ್ ಆರ್ಟ್, ಡಿಸೈನ್ ಮತ್ತು ಟೆಕ್ನಾಲಜಿಯ ವಿದ್ಯಾರ್ಥಿ ಇಪ್ಪತ್ತೊಂದು ವರ್ಷದ ನೂಪುರ್ ಪಾಟ್ನಿ, ನಗರದಲ್ಲಿ ಲೈಂಗಿಕ ಕಿರುಕುಳಕ್ಕೆ ಹೆಚ್ಚು ಒಳಗಾಗುವ ಪ್ರದೇಶಗಳನ್ನು ತೋರಿಸುವ ನಕ್ಷೆಯನ್ನು ರಚಿಸಿದ್ದು, ಇದಕ್ಕೆ ‘ಇಟ್ಸ್ ನಾಟ್ ಮೈ ಫಾಲ್ಟ್' ಎಂದು ಹೆಸರಿಟ್ಟಿದ್ದಾರೆ. ಈ ಪರಿಕಲ್ಪನೆಯು ಈ ರೀತಿಯ ಅಪರಾಧಗಳನ್ನು ನಿಗ್ರಹಿಸಲು ನಾಗರಿಕರು ಮತ್ತು ಪೋಲಿಸರಿಗೆ ಸಹಾಯ ಮಾಡುತ್ತದೆ.


ದಿ ಲಾಜಿಕಲ್ ಇಂಡಿಯನ್ ಜೊತೆಗಿನ ಸಂವಾದದಲ್ಲಿ, ನೂಪುರ್,


“ಮಹಿಳೆಯರನ್ನು ಕೆಟ್ಟದಾಗಿ ಟೀಕಿಸುವುದು, ಗ್ರೋಪಿಂಗ್ ಮತ್ತು ಆಕಸ್ಮಿಕವಾಗಿ ತಳ್ಳುವುದು ಮುಂತಾದ ಕಿರುಕುಳಗಳನ್ನು ವರದಿ ಮಾಡಲು ಮಹಿಳೆಯರು ಹೊರಬರಲು ಸಾಧ್ಯವಿದೆಯೇ ಎಂದು ಪರಿಶೀಲಿಸಲು ಈ ಯೋಜನೆಯನ್ನು ನಾನು ಕೈಗೆತ್ತಿಕೊಂಡಿದ್ದೇನೆ. ಇದು ನನ್ನ ಶೈಕ್ಷಣಿಕ ಪ್ರಾಜೆಕ್ಟ್ ಆಗಿದ್ದು, ಕ್ಯಾಮೆರಾ (ಗೂಗಲ್‌ ಕ್ಯಾಮೆರಾ) ದಲ್ಲಿ ವಿಸ್ತೃತ ಮೊಬೈಲ್ ವೈಶಿಷ್ಟ್ಯವೊಂದನ್ನು ಅಭಿವೃದ್ಧಿ ಪಡಿಸಿದ್ದು ಇದರಿಂದ ಸಂತ್ರಸ್ತರು ಕಿರುಕುಳ ಪೀಡಿತ ಪ್ರದೇಶಗಳನ್ನು ಪೋಲಿಸರಿಗೆ ವರದಿ ಮಾಡಬಹುದು ಮತ್ತು ಮುಂದೆ ಯಾರಿಗೂ ಈ ತರಹದ ಅಪಾಯ ಬರದಂತೆ ಎಚ್ಚರಿಸಬಹುದು.”


ನೂಪುರ್, ಮುಂದಿನ ಹಂತದಲ್ಲಿ ಇದನ್ನು ಇನ್ನು ಸರಿಯಾಗಿ ಅಭಿವೃದ್ಧಿ ಪಡಿಸುವ ಕುರಿತು ಕೆಲಸವನ್ನು ಕೈಗೊಂಡಿದ್ದು ಇದರ ಸಹಾಯದಿಂದ, ಲೈಂಗಿಕ ಕಿರುಕುಳ ಪೀಡಿತ ಪ್ರದೇಶಗಳನ್ನು ಗುರುತಿಸಬಹುದಾಗಿದೆ.


ನಿರ್ದಿಷ್ಟ ಸ್ಥಳಗಳಲ್ಲಿ ತಮ್ಮ ಅನುಭವಗಳ ಬಗ್ಗೆ ಹಂಚಿಕೊಳ್ಳಲು ಈ ಅಪ್ಲಿಕೇಶನ್ ಮಹಿಳೆಯರಿಗೆ ಉತ್ತಮ ವೇದಿಕೆಯಾಗಿದೆಯೆಂದು ಈ ನಕ್ಷೆ ಸೃಷ್ಟಿಕರ್ತೆ ಹೇಳುತ್ತಾರೆ. ನಕ್ಷೆಯನ್ನು ಬೆಳಕಿಗೆ ತರಲು, ನೂಪುರ್ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರನ್ನು ಭೇಟಿಯಾದರು, ಅವರು ಈ ಯೋಜನೆಯಲ್ಲಿ ಆಸಕ್ತಿ ತೋರಿಸಿದರು.


ಆಯುಕ್ತರು ಮಾತನಾಡಿ,


ಇದು ನೂಪುರ್ ಕೈಗೆತ್ತಿಕೊಂಡ ಒಂದು ದೊಡ್ಡ ಯೋಜನೆ, ಇದನ್ನು ನಾವು ಪೋಲಿಸ್ ಆಗಿ ಮಾಡಲು ಸಾಧ್ಯವಾಗುವುದಿಲ್ಲ, ಆದರೆ ಅದು ನಮಗೆ ಅಪಾರವಾದ ಸಹಾಯವನ್ನು ನೀಡುತ್ತದೆ. ಹಾಗಾಗಿ ನೂಪುರ ಮತ್ತು ಅವರ ಸ್ನೇಹಿತರ ತಂಡದ ಸಹಾಯದಿಂದ ಈ ನಕ್ಷೆಯನ್ನು ರಚಿಸಿ ಮಹಿಳೆಯರ ಕಿರುಕುಳ ಹೆಚ್ಚು ನಡೆಯುವ ಬೆಂಗಳೂರಿನ ರೇಖಾಚಿತ್ರವನ್ನು ತಯಾರಿಸಲು ನಮಗೆ ಸಹಾಯ ಮಾಡಲು ಸಿದ್ಧರಿದ್ದಾರೆ. ಖಂಡಿತವಾಗಿಯೂ, ನಮ್ಮ ಬೆಂಗಳೂರು ಸುರಕ್ಷಿತ ನಗರ ಯೋಜನೆಗಾಗಿ ಕಣ್ಗಾವಲು ಕ್ಯಾಮೆರಾಗಳನ್ನು ಸರಿಪಡಿಸಲು ಈ ಇನ್ಪುಟ್ ನಮಗೆ ತುಂಬಾ ಉಪಯುಕ್ತವಾಗಿದೆ” ಎಂದರು, ವರದಿ ಇಂಡಿಯಾ ಟುಡೇ.

ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.