ನಗರದ ಪ್ಲಾಸ್ಟಿಕ್ ಮುಕ್ತ ಪ್ರದೇಶ ಎಲೆಕ್ಟ್ರಾನಿಕ್ ಸಿಟಿ..!

ಎನ್​ಎಸ್​ಆರ್​

ನಗರದ ಪ್ಲಾಸ್ಟಿಕ್ ಮುಕ್ತ ಪ್ರದೇಶ ಎಲೆಕ್ಟ್ರಾನಿಕ್ ಸಿಟಿ..!

Monday March 14, 2016,

2 min Read

ಸಿಲಿಕಾನ್ ಸಿಟಿ ಬೆಂಗಳೂರನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ ಕಸ. ಅದಲ್ಲೂ ಪ್ಲಾಸ್ಟಿಕ್ ಎಲ್ಲರ ತಲೆನೋವಿಗೆ ಕಾರಣವಾಗಿದೆ. ಕಸದ ಕಾಟಕ್ಕೆ ಬ್ರೇಕ್ ಹಾಕಲು ಮುಂದಾಗಿದ್ದ ಬಿಬಿಎಂಪಿ ನಾನಾ ಕಸರತ್ತು ನಡೆಸಿದ್ರು ಇ್ನೂ ಯಾವುದರಲ್ಲೂ ಯಶಸ್ಸು ಸಾಧಿಸಿಲ್ಲ. ಆದರೆ ಬಿಬಿಎಂಪಿ ಮಾಡದ ಕೆಲಸವನ್ನು ಒಂದು ಸಂಸ್ಥೆ ಮಾಡಿದೆ. ವಿಪ್ರೋ, ಇನ್ಪೋಸಿಸ್​ನಂತಹ ಪ್ರತಿಷ್ಠಿತ ಸಂಸ್ಥೆಗಳ ತವರಾಗಿರುವ ಎಲೆಕ್ಟ್ರಾನಿಕ್ ಸಿಟಿ ಪ್ಲಾಸ್ಟಿಕ್ ಮುಕ್ತ ಪ್ರದೇಶವನ್ನಾಗಿಸಲು ಎಲ್ಸಿಯಾ ಮುಂದಾಗಿದೆ. ಕೆಲವೇ ದಿನಗಳಲ್ಲಿ ಎಲೆಕ್ಟಾನಿಕ್ ಸಿಟಿ ಉದ್ಯಾನನಗರಿಯ ಮೊದಲ ಪ್ಲಾಸ್ಟಿಕ್ ಮುಕ್ತ ಪ್ರದೇಶವಾಗಲಿದೆ..

ಇದನ್ನು ಓದಿ: ನ್ಯೂ ಲುಕ್‍ನಲ್ಲಿ, ನ್ಯೂ ಆರ್ಯ ಭವನ್ ಸ್ವೀಟ್ಸ್

ಏನೇ ಯಾಗಲಿ ಆದಷ್ಟು ಪ್ಲಾಸ್ಟಿಕ್ ಬಳಕೆ ಕಮ್ಮಿಯಾಗಲಿ ಎಂಬುದು ಎಲೆಕ್ಟ್ರಾನಿಕ್ ಸಿಟಿ ಕೈಗಾರಿಕಾ ಅಸೋಸಿಯೇಷನ್ ಉದ್ದೇಶವಾಗಿದೆ. ಹಾಗಾಗಿ ಈ ನಿಟ್ಟಿನಲ್ಲಿ ಈ ಸಂಸ್ಥೆ ಸಕ್ರೀಯವಾಗಿ ಕಾರ್ಯನಿರ್ವಹಿಸುತ್ತಿದೆ. ಮಹಿಳೆಯರು, ಪುರುಷರು ಮತ್ತು ಮಕ್ಕಳು ಎಲ್ಲರದ್ದೂ ಒಂದೇ ಉದ್ದೇಶ, ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ.. ಬಟ್ಟೆ ಚೀಲ ಬಳಸಿ ಅನ್ನೋದು. ಇಂಥದೊಂದು ಅಭಿಯಾನಕ್ಕೆ ಎಲೆಕ್ಟ್ರಾನಿಕ್ ಸಿಟಿ ಕೈಗಾರಿಕಾ ಅಸೋಸಿಯೇಷನ್ ಮತ್ತು ಕೊನಪ್ಪನ ಅಗ್ರಹಾರ ಗ್ರಾಮ ಪಂಚಾಯತಿ ಮುಂದಾಗಿದೆ. ದೊಡ್ಡತೋಗೂರು, ಶಿಕಾರಿಪಾಳ್ಯ ಸುತ್ತಮುತ್ತ ಪ್ಲಾಸ್ಟಿಕ್ ಬಳಕೆ ನಿಷೇಧಕ್ಕೆ ಮುಂದಾಗಿದ್ದಾರೆ. ಮಾರ್ಚ್ 20ರಿಂದ ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಮಾಡೋ ಉದ್ದೇಶ ಇವರದ್ದಾಗಿದೆ. ಹಾಗಾಗಿ ಈಗಿನಿಂದಲೇ ಎಲ್ಲರಲ್ಲು ಪ್ಲ್ಯಾಸ್ಟಿಕ್ನಿಂದಾಗುವ ದುಷ್ಪಾರಿಣಾಮಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ..

image


"ಎರಡು ವಾರಗಳ ಹಿಂದೆಯೇ ಎಲ್ಲಾ ಅಂಗಡಿಗಳಿಗೆ ಪ್ಲಾಸ್ಟಿಕ್ ಮಾರಾಟ ಮಾಡದಂತೆ ನೋಟಿಸ್ ಜಾರಿ ಮಾಡಲಾಗಿದೆ. ಇದೀಗ ಪಂಚಾಯ್ತಿ ವತಿಯಿಂದ ಸಾರ್ವಜನಿಕರಿಗೆ ಬಟ್ಟೆ ಬ್ಯಾಗ್ ವಿತರಿಸಲು ಮಳಿಗೆ ಕೂಡ ತೆರೆಯಲಾಗ್ತಿದೆ. ಬಟ್ಟೆ ಚೀಲಗಳನ್ನೇ ಬಳಸುವಂತೆ ಗ್ರಾಮ ಪಂಚಾಯ್ತಿ ಮನವಿ ಮಾಡಿಕೊಳ್ತಿದೆ. ಹಾಗಾಗಿ ಎಲ್ಲೂ ಪ್ಲಾಸ್ಟಿಕ್ ಕಾಣಸಿಗದಂತೆ ಎಚ್ಚರ ವಹಿಸಲಾಗುತ್ತಿದೆ" 
             - ಎನ್.ಎಸ್ ರಮಾ, ಎಲೆಕ್ಟ್ರಾನಿಕ್ ಸಿಟಿ ಕೈಗಾರಿಕಾ ಅಸೋಸಿಯೇಷನ್ ಅದ್ಯಕ್ಷೆ

‘ಇಷ್ಟೇ ಅಲ್ಲ ಕೋನಪ್ಪನ ಅಗ್ರಹಾರ ಗ್ರಾಮ ಪಂಚಾಯ್ತಿ ವ್ಯಾಪ್ರಿಯಲ್ಲಿ ಬರುವ ಎಲ್ಲ ಗ್ರಾಮಗಳಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದೆ. 100 ಪ್ರತಿಶತ ಪ್ಲ್ಯಾಸ್ಟಿಕ್ ನಿಷೇಧ ನಮ್ಮ ಗುರಿಯಾಗಿದೆ. ಪ್ಲ್ಯಾಸ್ಟಿಕ್ ಮುಕ್ತ ನಗರವಾಗಿಸಬೇಕೆಂಬುದು ನಮ್ಮ ಗುರಿ’ ಎಂತಾರೆ. ಕೋನಪ್ಪನ ಅಗ್ರಹಾರ ಗ್ರಾಮ ಪಂಚಾಯತಿ ಅಧ್ಯಕ್ಷೆ ರೇಣುಕಾ.

ಎಲ್ಲವೂ ಇವರು ಅಂದುಕೊಂಡಂತೆ, ಇವರ ನಿರೀಕ್ಷೆಯಂತೆ ಆದರೆ ಮಾರ್ಚ್ ತಿಂಗಳಾಂತ್ಯಕ್ಕೆ ಎಲೆಕ್ಟ್ರಾನಿಕ್ ಸಿಟಿ ಪ್ಲ್ಯಾಸ್ಟಿಕ್ ಮುಕ್ತ ಪ್ರದೇಶವಾಗುವುದರ ಜೊತೆಗೆ ಹಲವರ ಪ್ರಶಂಸೆಗೆ ಪಾತ್ರವಾಗಲಿದೆ. ಈ ಮೂಲಕ ಇಡೀ ನಗರಕ್ಕೆ ಮಾದರಿಯಾಗಲಿದೆ.

ಇದನ್ನು ಓದಿ:

1. 10 ಸಾವಿರ ಡ್ರೆಸ್ ಡಿಸೈನ್ ಹೊಂದಿರುವ ಮಹಿಳೆಯರ ಫೆವರೆಟ್ ವೆಬ್​ಸೈಟ್ banglewale

2. ಹೆಣ್ ಮಕ್ಳೇ ಸ್ಟ್ರಾಂಗು ಗುರು -ನಾವೆಲ್ಲಾ ಒಂದೇ...

3. ಜೇಸುದಾಸ್​​ರಿಂದ ಪ್ರಶಂಸೆ ಪಡೆದ ಸಂಗೀತ ನಿರ್ದೇಶಕಿ