ಆವೃತ್ತಿಗಳು
Kannada

ಉತ್ತಮ ಬ್ಯಾಂಕ್ವೆಟ್ ಹಾಲ್‌ಗಳ ಆಯ್ಕೆಗೆ ಸಹಕಾರಿ ಈ ಅರ್ಬನ್ ರೆಸ್ಟ್ರೋ

ಟೀಮ್​​ ವೈ.ಎಸ್​​.

YourStory Kannada
13th Oct 2015
Add to
Shares
0
Comments
Share This
Add to
Shares
0
Comments
Share

ರಿಸರ್ವೇಶನ್ ಸೇವೆಗಳು ಮತ್ತು ರೆಸ್ಟೋರೆಂಟ್ ಬುಕಿಂಗ್‌ನಂತಹ ಹಲವು ನೂತನ ಉದ್ಯಮಗಳು ತಮ್ಮ ಸೇವಾ ಸೌಲಭ್ಯದ ಕುರಿತು ಅನೇಕ ಹೊಸ ಹೊಸ ಅವಕಾಶಗಳನ್ನು ತೆರೆದಿಡುತ್ತಿವೆ. ಆದರೆ ಆಗಾಗ್ಗೆ ಅಂದರೆ ನಾವು ಯಾವುದಾದರೂ ಕಾರ್ಯಕ್ರಮ ನಡೆಸಬೇಕೆಂದಿದ್ದರೆ ಇಷ್ಟೊಂದು ಅವಕಾಶಗಳನ್ನು ಕಂಡು ಗಲಿಬಿಲಿಗೊಳ್ಳುತ್ತೇವೆ. ಇಂತಹ ವೇಳೆಯಲ್ಲಿ ಆನ್‌ಲೈನ್‌ ಮೂಲಕ ನಮಗೆ ಬೇಕಾದ ಫೋನ್‌ ನಂಬರ್ ಹುಡುಕಿಕೊಂಡು ಪ್ರತಿಯೊಂದು ಔತಣಕೂಟವನ್ನೇರ್ಪಡಿಸುವ ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡಿ ಅವು ಖಾಲಿ ಇದೆಯೋ ಇಲ್ಲವೋ ಎಂದು ತಿಳಿದುಕೊಂಡು ಅಲ್ಲಿನ ಖರ್ಚು ಎಷ್ಟು ಬರಬಹುದೆಂಬ ಕೊಟೇಶನ್ ತೆಗೆದುಕೊಂಡು ನಂತರ ನಮಗೆ ಯಾವುದು ಸುಲಭದರದಲ್ಲಿ ಉತ್ತಮವಾದದ್ದನ್ನು ನೀಡಲು ಸಾಧ್ಯವೋ ಅದನ್ನು ಆಯ್ದುಕೊಳ್ಳುತ್ತೇವೆ.

ಅರ್ಬನ್ ರೆಸ್ಟ್ರೋ ಸಂಸ್ಥೆ ನಿಮಗೊಂದು ಹೊಸ ಅವಕಾಶ ಒದಗಿಸಿಕೊಡುತ್ತಿದೆ. ಮೇಲಿನ ಎಲ್ಲಾ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಬಹುದಾದ ಒಂದು ಹೊಸ ಸೇವೆಯನ್ನು ಪರಿಚಯಿಸಿದೆ. ಹೊರಗಡೆ ತಿನ್ನುವುದಕ್ಕಾಗಿ ಹೊಟೇಲ್‌ಗಳನ್ನು ಬುಕ್ ಮಾಡಿಕೊಡುವುದಷ್ಟೇ ಅಲ್ಲದೇ, ಔತಣಕೂಟವನ್ನೇರ್ಪಡಿಸುವ ಬ್ಯಾಂಕ್ವೆಟ್ ಹಾಲ್‌ಗಳ ಬುಕಿಂಗ್‌ನಲ್ಲೂ ವಿಶೇಷ ಸೇವೆ ನೀಡುತ್ತಿದೆ. ನಗರದಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳ ಪಟ್ಟಿ ಮಾಡಿಕೊಳ್ಳುವುದರ ಮೂಲಕ ತನ್ನ ಗ್ರಾಹಕರಿಗೆ ವಿಶೇಷ ಸೇವೆ ನೀಡುತ್ತಿರುವ ಅರ್ಬನ್ ರೆಸ್ಟ್ರೋ, ಈ ಮೂಲಕ ತನ್ನ ಸ್ಪರ್ಧಿಗಳಿಗೆ ಪ್ರಬಲ ಪ್ರತಿಸ್ಪರ್ಧೆಯನ್ನು ನೀಡುತ್ತಿದೆ.

image


ಅಂದ ಹಾಗೆ ಅರ್ಬನ್ ರೆಸ್ಟ್ರೋದ ಸಂಸ್ಥಾಪಕಿ ಶೃತಿ ಚಾಜೆಡ್. ಕಳೆದ ವರ್ಷವಷ್ಟೇ ಈ ಸಂಸ್ಥೆಯನ್ನು ಸ್ಥಾಪಿಸಿದ ಶೃತಿ ಎಲೆಕ್ಟ್ರಾನಿಕ್ ಇಂಜಿನಿಯರ್. ಇವರು ಟೆಕ್ ಮಹೀಂದ್ರಾ ಸಂಸ್ಥೆಯಲ್ಲೂ ಕೆಲ ಕಾಲ ಕಾರ್ಯನಿರ್ವಹಿಸಿದ್ದರು. ತಾವು ಕಾರ್ಯನಿರ್ವಹಿಸುತ್ತಿದ್ದ ವೇಳೆ ಶೃತಿಯವರಿಗೆ ಕೋಡಿಂಗ್ ಮಾತ್ರವಲ್ಲದೇ ಇತರ ಚಟುವಟಿಕೆಗಳು ಅಂದರೆ ಕಾರ್ಯಕ್ರಮಗಳನ್ನು ಸಂಘಟಿಸುವುದು, ತಂಡ ಕಟ್ಟುವಂತಹ ಪ್ರಕ್ರಿಯೆಗೆ ನೆರವಾಗುವ ಚಟುವಟಿಕೆಗಳಲ್ಲೂ ಆಸಕ್ತಿಯಿತ್ತು. ಎಂಬಿಎ ಮಾಡುವುದು ಹಾಗೂ ವಿಷಯ ಆಧಾರಿತ ರೆಸ್ಟೋರೆಂಟ್ ಒಂದನ್ನು ಆರಂಭಿಸುವ ಸಲುವಾಗಿ ತಮ್ಮ ಟೆಕ್ ಮಹೀಂದ್ರಾದ ಉದ್ಯೋಗಕ್ಕೆ ರಾಜೀನಾಮೆ ನೀಡಿದರು. ತಮ್ಮ ಎಂಬಿಎ ಪೂರ್ಣಗೊಂಡ ಬಳಿಕ ಸುಮಾರು ಎರಡೂವರೆ ವರ್ಷಗಳ ಕಾಲ ಹೆಚ್‌ಸಿಎಲ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದರು. 2012ರಲ್ಲಿ ಅರ್ಬನ್ ರೆಸ್ಟ್ರೋ ಸಂಸ್ಥೆಯನ್ನು ಆರಂಭಿಸಿದರು.

ಮುಂಬೈ, ಅಹಮದಾಬಾದ್, ಪುಣೆ ಸೇರಿದಂತೆ ಹಲವು ನಗರಗಳಲ್ಲಿ 150ಕ್ಕೂ ಹೆಚ್ಚು ಬ್ಯಾಂಕ್ವೆಟ್‌ಗಳನ್ನು, 200 ರೆಸ್ಟೋರೆಂಟ್‌ಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಹೊಂದಿದೆ ಅರ್ಬನ್ ರೆಸ್ಟ್ರೋ. ವಿಭಿನ್ನ ಅಳತೆಕೋಲುಗಳ ಮೂಲಕ ಅಂದರೆ, ಆ ಹಾಲ್‌ನಲ್ಲಿ ಎಷ್ಟು ಜನ ಇರಬಹುದು, ಆಹಾರದ ಆರಂಭಿಕ ಬೆಲೆ, ಪಾರ್ಕಿಂಗ್ ವ್ಯವಸ್ಥೆ, ಸ್ಥಳ ಸೇರಿದಂತೆ ಹಲವು ವಿಚಾರಗಳಲ್ಲಿ ಒಂದು ಬ್ಯಾಂಕ್ವೆಟ್ ಹಾಲ್‌ಅನ್ನು ಬೇರೆ ಬೇರೆ ರೆಸ್ಟೋರೆಂಟ್‌ಗಳ ಜೊತೆ ಹೋಲಿಸಿ ನೊಡಬಹುದಾದ ಅವಕಾಶ ಈ ವೆಬ್ ಸೈಟ್‌ನಲ್ಲಿ ಲಭ್ಯವಿದೆ.

ಎಲ್ಲಾ ಉದ್ಯಮಿಗಳಂತೆ ಶೃತಿ ಸಹ ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಭದ್ರತಾ ವ್ಯವಸ್ಥೆ, ತಿಂಗಳ ಸಂಬಳ ಹಾಗೂ ಮನೆಯವರನ್ನು ಒಪ್ಪಿಸುವುದು ಶೃತಿಗೆ ದೊಡ್ಡ ಸವಾಲಾಗಿತ್ತು. ಆ ಎಲ್ಲಾ ಸವಾಲುಗಳು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡ ಶೃತಿ ದಿಟ್ಟತನದಿಂದ ಮುಂದುವರೆಯುತ್ತಿದ್ದಾರೆ.

image


ಅರ್ಬನ್ ರೆಸ್ಟ್ರೋದಲ್ಲಿ ಸದ್ಯ 13 ಮಂದಿ ಕೆಲಸಗಾರರಿದ್ದಾರೆ. ತಮ್ಮ ನಿತ್ಯದ ಬ್ಲಾಗ್‌ನಲ್ಲಿ 50,000 ಹಿಟ್ಸ್ ದೊರೆಯುತ್ತಿದ್ದು, 700 ಮಂದಿ ಅವರ ಬ್ಲಾಗ್ ಅನ್ನು ಓದುತ್ತಿದ್ದಾರೆ.

ಮೇರಾ ವೆನ್ಯು, ವೆನ್ಯುಪಂಡಿತ್‌ರಂತಹ ಹಲವು ಸಂಸ್ಥೆಗಳು ಅರ್ಬನ್ ರೆಸ್ಟ್ರೋ ಸಂಸ್ಥೆಗೆ ಪ್ರತಿಸ್ಪರ್ಧಿಗಳಾಗಿದ್ದಾರೆ. ಆದರೆ ಯಾರೂ ಅರ್ಬನ್ ರೆಸ್ಟ್ರೋ ನೀಡುತ್ತಿರುವಂತಹ ಸೇವೆಯನ್ನು ನೀಡುತ್ತಿಲ್ಲ.

ತಮ್ಮ ಉದ್ಯಮ ಜೀವನದ ಮುಖ್ಯಪಾಠಗಳನ್ನು ಶೃತಿ ಹಂಚಿಕೊಂಡಿದ್ದಾರೆ.

1. ಕೆಲಸಗಾರರನ್ನು ನೇಮಿಸಿಕೊಳ್ಳುವಾಗ ಅವರ ಹಿನ್ನೆಲೆಯನ್ನು ಸರಿಯಾಗಿ ಪರಿಶೀಲಿಸಬೇಕು ಮತ್ತು ಬಹುಕಾಲ ಕಂಪನಿಯಲ್ಲೇ ಉಳಿಯುತ್ತಾರೋ, ಇಲ್ಲವೋ ಎಂಬುದನ್ನು ಖಾತ್ರಿ ಮಾಡಿಕೊಳ್ಳಬೇಕು.

2. ಕ್ಷಿಪ್ರಗತಿಯ ಪ್ರಗತಿಯಲ್ಲೂ ಸಾಧನೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕು.

3. ಇದೇ ಉದ್ಯಮದಲ್ಲಿದ್ದು, ನಿಮ್ಮ ಕಂಪನಿಯಲ್ಲಿಲ್ಲದ ವ್ಯಕ್ತಿಯಿಂದ ನಿಯಮಿತವಾಗಿ ವರದಿಗಳನ್ನು ತರಿಸಿಕೊಳ್ಳುತ್ತಿರಬೇಕು.

ಇದು ಶೃತಿಯವರ ಬಿಸಿನೆಸ್ ಮಂತ್ರ.

Add to
Shares
0
Comments
Share This
Add to
Shares
0
Comments
Share
Report an issue
Authors

Related Tags