ಆವೃತ್ತಿಗಳು
Kannada

ಗಿನ್ನಿಸ್ ದಾಖಲೆಯ ಹೊಸ್ತಿಲಲ್ಲಿ ಬೃಹತ್ ಬ್ಲೌಸ್.!

ಎನ್​ಎಸ್​ಆರ್​

YourStory Kannada
25th Mar 2016
Add to
Shares
4
Comments
Share This
Add to
Shares
4
Comments
Share

ಧೃಡ ಸಂಕಲ್ಪ ಛಲ ಇದ್ದವರು ಸದಾ ಏನಾದ್ರು ಒಂದು ಸಾಧೆ ಮಾಡುತ್ತಾರೆ. ತಾವು ಮಾಡುವ ಕೆಲಸವನ್ನು ಅಚ್ಚುಕಟ್ಟಾಗಿ ಶ್ರದ್ದೆಯಿಂದ ಮಾಡಿದ್ರೆ, ಅದರಲ್ಲೇ ಗಿನ್ನಿಸ್ ದಾಖಲೆ ಮಾಡಬಹುದು ಎಂಬುದಕ್ಕೆ ಅನೇಕ ನಿದರ್ಶನಗಳನ್ನು ನಾವು ಕಾಣುತ್ತೇವೆ. ಅಂತಹವೊಂದು ಸಾಹಸವನ್ನು ಬೆಂಗಳೂರಿನ ಮಹಿಳೆಯೊಬ್ಬರು ಮಾಡಿದ್ದು, ಶೀಘ್ರದಲ್ಲೇ ಗಿನ್ನಿಸ್ ರೆಕಾರ್ಡ್​ಗೆ ಪಾತ್ರರಾಗಲಿದ್ದಾರೆ..

image


ಹೌದು ತಾವು ಮಾಡುವ ವೃತ್ತಿಯಲ್ಲೇ ಏನಾದ್ರು ಸಾಧನೆ ಮಾಡಬೇಕು ಅನ್ನೋದು ಆ ಕುಟುಂಬದ ಸದಸ್ಯರ ಛಲ..ಇದಕ್ಕಾಗಿ ಅವರು ಮೊರೆ ಹೋಗಿದ್ದು ವಸ್ತ್ರ ವಿನ್ಯಾಸದ ಕಡೆ. ಅಷ್ಟಕ್ಕೂ ಅ ಕುಟುಂಬ ಸದಸ್ಯರು ಸಾಧನೆ ಮಾಡಲು ಆಯ್ದುಕೊಂಡ ವಿಧಾನ ಅವರು ಸಾಧಿಸಿದ ಪರಿ ಮನಮೋಹಕ. ಬೃಹತ್ ಆಕಾರದ ರವಿಕೆ ಹೊಲೆಯುವ ಮೂಲಕ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಕದ ತಟ್ಟಿದ್ದಾರೆ.

image


ಇದನ್ನು ಓದಿ: ಅಂದು ಎಂಜಿನಿರಿಂಗ್ ಡ್ರಾಪ್ಔಟ್ ಸ್ಟೂಡೆಂಟ್​.. ಇಂದು ಮರಗಳ ರಕ್ಷಕ..!

ಬೃಹತ್ ಗೌತ್ರದ ಬ್ಲೌಸ್. ನೋಡೊಕೆ ಎರಡು ಕಣ್ಣು ಸಾಲದು. ಅಷ್ಟು ದೊಡ್ಡ ಬ್ಲೌಸ್​​ ಇದಾಗಿದೆ. ಬೆಂಗಳೂರಿನ ನಾಗರಭಾವಿಯಲ್ಲಿ. 30 ಅಡಿ ಎತ್ತರ ಹಾಗೂ 44 ಅಡಿ ಅಗಲ ಇರೋ ಈ ಬೃಹತ್ ಗಾತ್ರದ ಬ್ಲೌಸ್​ನ್ನ ಸಿದ್ದಪಡಿಸಿರೋದು ಅನುರಾಧ ಎಂಬುವರು. ಈಗಾಗಲೇ ಈ ಬ್ಲೌಸ್ ಲಿಮ್ಕಾ ಬುಕ್ ಆಫ್ ರೆಕಾರ್ಡ್ ನಲ್ಲಿ ಸ್ಥಾನ ಪಡೆದಿದೆ. ಇದೀಗ ಗಿನ್ನಿಸ್ ರೆಕಾರ್ಡ್ಗೆ ಸೇರಿಸಲು ಕುಟುಂಬಸ್ಥರು ಮುಂದಾಗಿದ್ದಾರೆ. ಅದಕ್ಕಾಗಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಸಂಸ್ಥೆಯ ಅಧಿಕಾರಿಗಳು ಬಂದು ಬ್ಲೌಸ್​ನ ಅಳತೆ ಕೂಡ ತೆಗೆದುಕೊಂಡು ಹೋಗಿದ್ದು ಶೀಘ್ರವೆ ಇವರ ಹೆಸರು ಗಿನ್ನಿಸ್ ಬುಕ್ ಆಫ್ ರೆಕಾರ್ಡ್​ಗೆ ಸೇರಲಿದೆ..

"ಈ ಬ್ಲೌಸ್ ಸಿದ್ದಪಡಿಸಲು 280 ಮೀಟರ್​​ನಷ್ಟು ಕಾಟನ್ ಬಟ್ಟೆಯನ್ನ ಉಪಯೋಗಿಸಲಾಗಿದೆ. 5 ದಿನದಲ್ಲಿ ಸಿದ್ದಗೊಂಡಿರುವ ಈ ಬೃಹತ್ ಗಾತ್ರದ ಬ್ಲೌಸ್ ಸಿದ್ದಪಡಿಸಲು ಐವರನ್ನು ಸಹಾಯಕರನ್ನಾಗಿ ಬಳಸಿಕೊಳ್ಳಲಾಗಿದೆ. ಎಂತಾರೆ ಅನುರಾಧ. ಏನಾದ್ರು ಮಾಡಲೇ ಬೇಕು ಎಂಬ ಛಲ ಇಂತಹ ಒಂದು ಬ್ಲೌಸ್ ಹೊಲೆಯಲು ಕಾರಣವಾಯ್ತು. ನಾನು ಈ ಬಗ್ಗೆ ನಮ್ಮ ಮನೆಯವರ ಬಳಿ ಹೇಳಿದಾಗ ಅವರಿಂದಲೂ ಸಕರಾತ್ಮಕ ಸಹಾಯ ಸಿಕ್ತು. ನಮ್ಮ ಪತಿ ಈಶ್ವರ್ ಕೂಡ ಇದಕ್ಕೆ ಹೆಚ್ಚು ಪ್ರೋತ್ಸಾಹ ನೀಡಿದ್ರು. ಹಾಗಾಗಿ ಈ ಸಾಧನೆ ಮಾಡಲು ಸಾಧ್ಯವಾಯ್ತು. ನನ್ನ ಈ ಸಾಧನೆಗೆ ನನ್ನ ಇಡೀ ಕುಟುಂಬವೇ ಸಾಥ್ ನೀಡಿದೆ".
              - ಅನುರಾಧ, ಬ್ಲೌಸ್​ ಹೊಲಿದವರು

ಒಟ್ಟಿನಲ್ಲಿ ಏನಾದ್ರೂ ಸಾಧನೆ ಮಾಡಬೇಕು ಅಂತಾ ಮನಸೊಂದು ಇದ್ರೆ ಸಾಕು, ಅದನ್ನ ಸಾಧಿಸಬಹುದು ಅನ್ನೋದಕ್ಕೆ ಅನುರಾಧ ಈಶ್ವರ್ ಉದಾಹರಣೆ. ಹೆಣ್ಣು ಮನಸ್ಸು ಮಾಡಿದ್ರೆ ಏನ್ ಬೇಕಾದ್ರು ಮಾಡಬಹುದು ಎಂಬುದಕ್ಕೆ ಅನುರಾಧ ಅವರ ಸಾಧನೆಯೇ ಸಾಕ್ಷಿ. ಇಷ್ಟೇ ಅಲ್ಲ ಭವಿಷ್ಯದಲ್ಲೂ ಕೂಡ ತಮ್ಮ ವೃತ್ತಿಯಿಂದಲೇ ಹಲವು ರೀತಿಯ ಸಾಧನೆ ಮಾಡುವ ಆಶಯ ಇವರದು. "ಏನೇ ಆಗಲಿ ನಮ್ಮ ಸಾಧನೆ ಕೇವಲ ನಮ್ಮಗಷ್ಟೇ ಸೀಮಿತವಾಗಿರದಬಾರದು ಅದು ಹಲವರಿಗೆ ಸ್ಫೂರ್ತಿಯಾಗಬೇಕು. ಹೆಣ್ಣು ಅಬಲೆಯಲ್ಲ ಸಬಲೆ. ನಾವು ಮಾಡುವ ಯಾವ ಕೆಲಸವು ಚಿಕ್ಕದಲ್ಲ, ಇರುವದರಲ್ಲಿಯೇ ಏನಾದ್ರು ಸಾಧಿಸುವಂತಹ ಸಂಕಲ್ಪ ನಮ್ಮಗಿದ್ದರೆ ಸಾಕು" ಅಂತ ಮಾತು ಮುಗಿಸುತ್ತಾರೆ ಅನುರಾಧ.

ಇದನ್ನು ಓದಿ:

1. ನ್ಯೂ ಇಯರ್ ಪಾರ್ಟಿಯಿಂದ ಡಸ್ಟ್ ಬಿನ್ ಆ್ಯಪ್ ಅಭಿವೃದ್ಧಿ

2. ಕುಂಬಾರನ ಕೈಯಲ್ಲಿ ರೆಡಿಯಾಗುತ್ತಿದೆ ಬಡವರ ಫ್ರಿಡ್ಜ್...

3. ಬರುತ್ತಿದೆ ಹೋಳಿ ಹಬ್ಬದ ಸಂಭ್ರಮ : ಆಚರಣೆಗಿರಲಿ ನೈಸರ್ಗಿಕ ಬಣ್ಣಗಳ ರಂಗು...

Add to
Shares
4
Comments
Share This
Add to
Shares
4
Comments
Share
Report an issue
Authors

Related Tags