ಆವೃತ್ತಿಗಳು
Kannada

ವೈಜ್ಞಾನಿಕ ಲೋಕದಲ್ಲಿ ಅಚ್ಚರಿಯ ಸಂಶೋಧನೆ- ಇಂಧನಕ್ಕಾಗಿ ಕಾರ್ಬನ್ ಡೈ ಆಕ್ಸೈಡ್ ಬಳಕೆ..!

ಟೀಮ್​ ವೈ.ಎಸ್​. ಕನ್ನಡ

13th Nov 2016
Add to
Shares
19
Comments
Share This
Add to
Shares
19
Comments
Share

ಪ್ರಕೃತಿ ಎಲ್ಲದಕ್ಕೂ ಮೂಲ. ಪ್ರಕೃತಿಯೇ ದೇವರು. ಅದನ್ನು ಎಷ್ಟು ಸಾಧ್ಯವಾಗುತ್ತೋ ಅಷ್ಟು ಕಾಪಾಡಿಕೊಳ್ಳಬೇಕು. ಪ್ರಕೃತಿ ಮುನಿಸಿಕೊಂಡರೆ ಮನುಕುಲ ನಾಶವಾಗುವುದು ಗ್ಯಾರೆಂಟಿ. ಪ್ರಕೃತಿಯಲ್ಲಿ ಸಿಗುವ ವಸ್ತುಗಳನ್ನು ಎಲ್ಲರೂ ಬಳಸಿಕೊಳ್ಳಬಹುದು. ಆದ್ರೆ ಈಗಾಗಲೇ ನಾವು ಪರಿಸರಕ್ಕೆ ಹಾನಿ ಮಾಡಿಯಾಗಿದೆ. ವಾತಾವರಣದ ಏರು ಪೇರಿಗೆ ಮನುಕುಲವೇ ದೊಡ್ಡ ಕಾರಣವಾಗಿದೆ.

image


ಮನುಕುಲಕ್ಕೆ ಶಾಪವಾಗಿರುವುದು ವಾತಾವರಣದಲ್ಲಿ ಹೆಚ್ಚಿರುವ ಇಂಗಾಲದ ಡೈ ಆಕ್ಸೈಡ್​ನ ಅಂಶ. ಇದು ವಾಯುಮಾಲಿನ್ಯದ ಜೊತೆಗೆ ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಈ ಮಧ್ಯೆ ವಿಜ್ಞಾನಿಗಳು ಪರಿಸರವನ್ನು ಬ್ಯಾಲೆನ್ಸ್ ಮಾಡಿ ಇಟ್ಟುಕೊಳ್ಳಲು ಹೊಸ ಅನ್ವೇಷಣೆ ಮಾಡಿದ್ದಾರೆ.

image


ಅಮೆರಿಕದ ಟೆನ್ನೆಸ್​​ನ "ಓಜ್ ರಿಡ್ಜ್ ನ್ಯಾಷನಲ್ ಲ್ಯಾಬೋರಿಟರಿ"ಯ ವಿಜ್ಞಾನಿಗಳು ಕೆಮಿಕಲ್ ರಿಯಾಕ್ಷನ್ ಮೂಲಕ ಕಾರ್ಬನ್ ಡೈ ಆಕ್ಸೈಡ್​ನ್ನು ಎಥಾನಲ್ ಆಗಿ ಪರಿವರ್ತಿಸುವ ಬಗ್ಗೆ ಅನ್ವೇಷಣೆ ಮಾಡಿದ್ದಾರೆ. ವಿಜ್ಞಾನಿಗಳು ಎಲೆಕ್ಟ್ರೋ ಕೆಮಿಕಲ್ ಪ್ರೊಸೆಸ್ ಮೂಲಕ ಕಾರ್ಬನ್ ಮತ್ತು ಕಾಪರ್ ಕಣಗಳನ್ನು ಪ್ರಯೋಗಕ್ಕೆ ಒಳಪಡಿಸಿ, ಗ್ರೀನ್ ಹೌಸ್ ಗ್ಯಾಸ್​ನ್ನು ಉಪಯುಕ್ತ ಇಂಧನವಾಗಿ ಪರಿವರ್ತಿಸಿದ್ದಾರೆ.

“ ನಾವು ಅನ್ವೇಷಣೆ ವೇಳೆ ಅನಿರೀಕ್ಷಿತವಾಗಿ ಹೊಸ ಫಲಿತಾಂಶವನ್ನು ಪಡೆದುಕೊಂಡಿದ್ದೇವೆ. ನಾವೀಗ ಕಾರ್ಬನ್ ಡೈ ಆಕ್ಸೈಡ್​​ನ್ನು ಇಂಧನವಾಗಿ ಪರಿವರ್ತಿಸುವ ಪ್ರಯತ್ನದಲ್ಲಿ ಮೊದಲ ಹೆಜ್ಜೆಯನ್ನು ಯಶಸ್ವಿಯಾಗಿ ಮುಗಿಸಿದ್ದೇವೆ. ಆದ್ರೆ ಈ ಬಗ್ಗೆ ಇನ್ನಷ್ಟು ಪ್ರಯೋಗಗಳು ನಡೆಯಬೇಕಿದೆ. ಕೆಮಿಕಲ್ ರಿಯಾಕ್ಷನ್ ಮೂಲಕ ನಮ್ಮ ಪರೀಕ್ಷೆ ಯಶಸ್ವಿ ಆದರೆ ನಮ್ಮ ಶ್ರಮಕ್ಕೆ ಉತ್ತಮ ಫಲಿತಾಂಶ ಸಿಕ್ಕಂತೆಯೇ ”
- ಆ್ಯಡಂ ರಾಂಡಿನನ್, ಇನ್ಸ್​ಟ್ಯೂಟ್ ವೆಬ್​ಸೈಟ್ ಮುಖ್ಯಬರಹಗಾರ

ಕೆಮಿಸ್ಟ್ರಿ ಸರ್ಕಲ್ ಅನ್ನುವ ವಿಜ್ಞಾನಕ್ಕೆ ಸಂಬಂಧಿಸಿದ ಜರ್ನಲ್ ಒಂದರಲ್ಲಿ ಹೊಸ ಅನ್ವೇಷಣೆಯ ಬಗ್ಗೆ ಹಲವು ವಿಜ್ಞಾನಿಗಳು ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಹೊಸ ಅನ್ವೇಷಣೆಯ ಖರ್ಚುವೆಚ್ಚದ ಬಗ್ಗೆ ಇನ್ನಷ್ಟೇ ಲೆಕ್ಕಾಚಾರಗಳು ನಡೆಯಬೇಕಿದೆ. ಒಟ್ಟಿನಲ್ಲಿ ವಿಜ್ಞಾನಿಗಳ ಅನ್ವೇಷಣೆ ವೈಜ್ಞಾನಿಕ ಲೋಕದಲ್ಲಿ ಹೊಸ ಆಶಯವನ್ನು ಹುಟ್ಟಿಸಿದೆ.

ಇದನ್ನು ಓದಿ:

1. ಪ್ರತಿನಿತ್ಯ 1000 ಬಡವರ ಹೊಟ್ಟೆ ತುಂಬಿಸುವ ಅನ್ನದಾತ..

2. ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಹೊಸ ಕನಸು- ಬಜೆಟ್​ನಲ್ಲಿ ನಿಮ್ಮ ಐಡಿಯಾಗಳಿಗೂ ಇದೆ ಬೆಲೆ

3. ಕೊನೆಗೂ ಹಸನಾಯ್ತು ಗೋಲ್ಗಪ್ಪಾ ಮಾರುತ್ತಿದ್ದ ಒಲಿಂಪಿಯನ್ ಬದುಕು..!

Add to
Shares
19
Comments
Share This
Add to
Shares
19
Comments
Share
Report an issue
Authors

Related Tags