ಆವೃತ್ತಿಗಳು
Kannada

ಡಾಕ್ಯುಮೆಂಟರಿಯಲ್ಲಿ ಕಾಣಿಸಿಕೊಂಡ ಏಳು ಬೆಟ್ಟಗಳ ಒಡೆಯ- ಹೊಸ ಇತಿಹಾಸ ಬರೆದ ನ್ಯಾಷನಲ್ ಜಿಯೋಗ್ರಫಿ..!

ಟೀಮ್​ ವೈ.ಎಸ್​. ಕನ್ನಡ

YourStory Kannada
5th Apr 2017
Add to
Shares
9
Comments
Share This
Add to
Shares
9
Comments
Share

ಹಿಂದೂಗಳ ಪಾಲಿಗೆ ತಿರುಪತಿ ಪವಿತ್ರಸ್ಥಾನ. ತಿರುಪತಿ ತಿಮ್ಮಪ್ಪನ ಬಗ್ಗೆ ಇರುವ ನಂಬಿಕೆಗಳಿಗೆ ಲೆಕ್ಕವೇ ಇಲ್ಲ. ಅದೆಷ್ಟೋ ಕೋಟ್ಯಾಂತರ ಮನೆಗಳಿಗೆ ತಿರುಪತಿ ತಿಮ್ಮಪ್ಪನೇ ಮನೆ ದೇವರು. ಆದ್ರೆ ತಿರುಪತಿ ದೇವಸ್ಥಾನದ ಒಳಗೆ ಇಲ್ಲಿ ತನಕ ಚಿತ್ರೀಕರಣವೇ ನಡೆದಿಲ್ಲ. ಅದಕ್ಕೆ ಅವಕಾಶವೂ ಇರಲಿಲ್ಲ. ಆದ್ರೆ ನ್ಯಾಷನಲ್ ಜಿಯೋಗ್ರಫಿಕ್ ಚಾನೆಲ್ ಹೊಸ ಇತಿಹಾಸ ಸೃಷ್ಟಿಸಿದೆ. “ ಇನ್​ಸೈಡ್ ತಿರುಮಲ ತಿರುಪತಿ ” ಅನ್ನುವ ಎಪಿಸೋಡ್ ಚಿತ್ರಿಸಿ ಮಾರ್ಚ್ 27ರಂದು ಟೆಲಿಕಾಸ್ಟ್ ಮಾಡಿ ಹೊಸ ಭಾಷ್ಯ ಬರೆದಿದೆ.

image


ತಿರುಪತಿಯನ್ನು ಹಿಂದೂಗಳು ಪವಿತ್ರ ಸ್ಥಳವೆಂದು ಪರಿಗಣಿಸಲಾಗಿದೆ. ಅಷ್ಟೇ ಅಲ್ಲ ತಿರುಪತಿಯ ದೇವಸ್ಥಾನಕ್ಕೆ ತನ್ನದೇ ಗೌರವ ಮತ್ತು ಸ್ಥಾನಮಾನ ಇದೆ. ತಿರುಪತಿ ತಿರುಮಲ ದೇವಸ್ಥಾನದ ಒಳಗೆ ಕ್ಯಾಮರಾ ತೆಗೆದುಕೊಂಡು ಹೋಗಲು ಅನುಮತಿ ಇಲ್ಲ. ಆದ್ರೆ ದೆಹಲಿ ಮೂಲದ ಡಾಕ್ಯುಮೆಂಟರಿ ಮೇಕರ್ ರಾಜೇಂದ್ರ ಶ್ರೀವತ್ಸ ಕೊಂಡಪಲ್ಲಿ, ವಿಶೇಷ ಅನುಪತಿ ಪಡೆದು ದೇವಸ್ಥಾನದ ಒಳಗೆ ಚಿತ್ರೀಕರಣ ನಡೆಸಿದ್ದಾರೆ. “ ಇನ್​ಸೈಡ್ ತಿರುಮಲ ತಿರುಪತಿ ” ಡಾಕ್ಯುಮೆಂಟರಿಯಲ್ಲಿ ಶ್ರೀ ವೆಂಕಟೇಶ್ವರ ಸ್ವಾಮಿ ಬಗ್ಗೆ ಭಕ್ತರಿಗೆ ಇರುವ ನಂಬಿಕೆಯನ್ನು ಚಿತ್ರಿಸಲಾಗಿದೆ. ಅಷ್ಟೇ ಅಲ್ಲ ವಿಷ್ಣು ದೇವರ ಬಗ್ಗೆ ತಿಳಿಸಲಾಗಿದೆ.

“ ಹಿಂದೂಗಳ ಪವಿತ್ರ ಸ್ಥಳದಲ್ಲಿ ಪೂಜ್ಯ ದೇವರನ್ನು ಕಾಣಲು ಹಲವು ಗಂಟೆಗಳ ಕಾಲ ಸರತಿ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ. ಆದ್ರೆ ಈ ಡಾಕ್ಯುಮೆಂಟರಿ ಮೂಲಕ ದೇವರನ್ನು ಬೇಗನೆ ಮತ್ತು ಕಣ್ಣಿಗೆ ಹತ್ತಿರದಲ್ಲಿ ಕಾಣಬಹುದು. ವರ್ಷಕೊಮ್ಮೆ ನಡೆಯುವ ಬ್ರಹ್ಮೋತ್ಸವವನ್ನು ಕೂಡ ಈ ಡಾಕ್ಯುಮೆಂಟರಿ ಮೂಲಕ ಕಣ್ಣು ತುಂಬಿಕೊಳ್ಳಬಹುದು. ವಿಶ್ವದಲ್ಲೇ ತಿರುಮಲದಲ್ಲಿರುವ ದೇವಸ್ಥಾನ ಅತೀ ಹೆಚ್ಚು ಪ್ರವಾಸಿಗರ ಬೇಟಿಯನ್ನು ಹೊಂದಿದೆ. ”

ಈ ಡಾಕ್ಯುಮೆಂಟರಿಯಲ್ಲಿ ವೀಕ್ಷಕರು ಹಲವು ವಿಚಾರಗಳನ್ನು ತಿಳಿದುಕೊಳ್ಳಬಹುದು. ಶೇಷಾಚಲಂ ಅಥವಾ ಏಳು ಬೆಟ್ಟಗಳನ್ನು ಹತ್ತಿ ಹೋಗುವ ಭಕ್ತಾಧಿಕಗಳ ಜೊತೆಗೆ ನಡೆದು ಹೋಗಿ ಅವರ ಅಭಿಪ್ರಾಯಗಳನ್ನು ಪಡೆದಕೊಳ್ಳಲಾಗಿದೆ. ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕಾಗಿ ಭಕ್ತಾದಿಗಳು ಹೇಗೆ ಕಾಯುತ್ತಾ ಕುಳಿತಿರುತ್ತಾರೆ ಅನ್ನುವ ಬಗ್ಗೆ ಚಿತ್ರೀಕರಣವನ್ನು ಕೂಡ ಮಾಡಲಾಗಿದೆ.

“ ಇನ್​ಸೈಡ್ ತಿರುಮಲ ತಿರುಪತಿ ” ಡಾಕ್ಯುಮೆಂಟರಿಯಲ್ಲಿ ಜನರನ್ನು, ಭಕ್ತಾಧಿಗಳನ್ನು ಹೇಗೆ ನಿಯಂತ್ರಿಸಲಾಗುತ್ತದೆ ಮತ್ತು ತಿರುಪತಿ ತಿರುಮಲ ದೇವಸ್ವಂ ಭಕ್ತಾಧಿಗಳನ್ನು ನಿಯಂತ್ರಿಸಲು ಮಾಡುವ ಕ್ರಮಗಳೇನು ಅನ್ನುವುದನ್ನು ಕೂಡ ತಿಳಿಸಲಾಗಿದೆ.


ಆಂಧ್ರಪ್ರದೇಶದ ತಿರುಪತಿ ಬೆಟ್ಟದಲ್ಲಿ ವೆಂಕಟೇಶ್ವರ ದೇವಾಲಯವಿದೆ. ವೆಂಕಟೇಶ್ವರನನ್ನು ವಿಷ್ಣುವಿನ ರೂಪ ಎಂದು ನಂಬಲಾಗಿದೆ. ಏಳು ಬೆಟ್ಟಗಳ ಒಡೆಯ ತಿಮ್ಮಪ್ಪನ ದರ್ಶನಕ್ಕೆ ದಿನವೊಂದಕ್ಕೆ ಸರಾಸರಿ 60,000ಕ್ಕಿತಂಲೂ ಹೆಚ್ಚು ಜನ ಬರುತ್ತಾರೆ. ಪ್ರತೀವರ್ಷ ಸುಮಾರು 650 ಕೋಟಿ ಕಾಣಿಕೆ ಈ ದೇವರಿಗೆ ಸಲ್ಲುತ್ತದೆ. ಸುಮಾರು 50,000 ಕೋಟಿಗಿಂತಲೂ ಅಧಿಕ ಸಂಪತ್ತನ್ನು ಟಿಟಿಡಿ ಹೊಂದಿದೆ. ಕೇರಳದ ತಿರುವನಂತಪುರದಲ್ಲಿರುವ ಅನಂತ ಪದ್ಮನಾಭಸ್ವಾಮಿ ದೇವಾಲಯದ ನಂತರ ಅತೀ ಹೆಚ್ಚು ಸಂಪತ್ತು ಹೊಂದಿರುವ ದೇವಾಲಯ ಅನ್ನುವ ಖ್ಯಾತಿ ತಿರುಪತಿಗಿದೆ. 

ಇದನ್ನು ಓದಿ:

1. ನಿಮ್ಮ ಸ್ಟಾರ್ಟ್​ಅಪ್​ ಗೆಲುವಿಗೆ ಇವಿಷ್ಟೇ ಮೂಲ ಕಾರಣ..!

2. ಸಿನಿಮಾರಂಗದಲ್ಲಿ ಮೂವರು ಸಹೋದರರ ಸಾಹಸ- ಇದು ಖಾಸನೀಸ್​ ಕುಟುಂಬದ ಖಾಸ್​ಬಾತ್​​

3. ಪೆಟ್ರೋಲ್ ಬಂಕ್ ಕೆಲಸಗಾರನ ಸಾಮಾಜಿಕ ಕಳಕಳಿ- ಬುಲ್​ಟೆಂಪಲ್ ಬಳಿ ಇರುವ ಆಪತ್ಭಾಂಧವನ ಕಥೆ ಓದಿ

Add to
Shares
9
Comments
Share This
Add to
Shares
9
Comments
Share
Report an issue
Authors

Related Tags