ಆವೃತ್ತಿಗಳು
Kannada

ಮೈಸೂರಿನಲ್ಲಿ135 ಅಡಿ ಎತ್ತರದ ಕ್ಲಾಕ್ ಟವರ್..!

ಉಷಾ ಹರೀಶ್​​

YourStory Kannada
28th Feb 2016
2+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಸಾಂಸ್ಕೃತಿಕ ನಗರ ಮೈಸೂರಿನಲ್ಲಿರುವ ದೊಡ್ಡ ಗಡಿಯಾರ, ಚಿಕ್ಕ ಗಡಿಯಾರಗಳು ತಮ್ಮ ಅಂದ ಚೆಂದಗಳಿಂದ ಮೈಸೂರಿನ ಕೀರ್ತಿಯನ್ನು ಹೆಚ್ಚಿಸಿವೆ.ಇಂತಹ ಐತಿಹಾಸಿಕ ಅವಳಿ ಗೋಪುರಗಳು ಮೈಸೂರಿನಲ್ಲಿರುವುದು ಒಂದು ಹೆಮ್ಮೆಯ ಸಂಗತಿ. ಅಷ್ಟೇ ಅಲ್ಲದೇ ಉತ್ತಮ ಲ್ಯಾಂಡ್​ಮಾರ್ಕ್​ ಕೂಡಾ ಆಗಿವೆ. ಇಂತಹದ್ದೇ ಒಂದು ಗಡಿಯಾರ ಗೋಪುರವನ್ನು ಮೈಸೂರು ವಿಶ್ವ ವಿದ್ಯಾಲಯದ ಶತಮಾನೋತ್ಸವ ಸಂಭ್ರಮದ ಸಮಯದಲ್ಲಿ ಮಾನಸಗಂಗೋತ್ರಿಯಲ್ಲೂ ನಿರ್ಮಾಣ ಮಾಡಲಾಗಿತ್ತು. ಇದೀಗ ಐಟಿ ಕ್ಷೇತ್ರದ ದಿಗ್ಗಜ ಇನ್ಫೋಸಿಸ್ ಮೈಸೂರಿನಲ್ಲಿರುವ ತನ್ನ ಕ್ಯಾಂಪಸ್​ನಲ್ಲಿ ವಿಶ್ವದಲ್ಲೇ ಅತಿ ಎತ್ತರದ ಗಡಿಯಾರ ಗೋಪುರವನ್ನು ನಿರ್ಮಿಸಲು ತಯಾರಿ ನಡೆಸಿದೆ.

ಇದನ್ನು ಓದಿ

ತಲೆನೋವು ಕೊಡುವ ಸಮಸ್ಯೆಗಳಿಗೆ ಬೆರಳ ತುದಿಯಲ್ಲೇ ಪರಿಹಾರ - ಈಗೇನಿದ್ರೂ ಲೋಕಲ್ ಓಯ್ ಸಮಾಚಾರ.. !

image


ಮೈಸೂರಿನಲ್ಲಿ ಬೃಹತ್ ಕ್ಯಾಂಪಸ್

ಐಟಿ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಗಳಿಸುವುದಲ್ಲದೇ ದೇಶ ವಿದೇಶಗಳಲ್ಲಿ ಕರ್ನಾಟಕದ ಕೀರ್ತಿಯನ್ನು ಹೆಚ್ಚಿಸಿದ ಇನ್ಫೋಸಿಸ್ ತನ್ನ ಬೃಹತ್ ಕ್ಯಾಂಪಸ್​ನ್ನು ಮೈಸೂರಿನಲ್ಲಿ ಹೊಂದಿದೆ. ಸುಮಾರು 345 ಎಕರೆ ಪ್ರದೇಶಗಳಲ್ಲಿ ಇನ್ಫೋಸಿಸ್​ನ ಗ್ಲೋಬಲ್ ಎಜ್ಯುಕೇಶನ್ ಸೆಂಟರ್ ಇದೆ. ಇನ್ಫೋಸಿಸ್ ಕಂಪನಿಗೆ ಆಯ್ಕೆಯಾಗುವ ಸಾಕಷ್ಟು ಮಂದಿಗೆ ಈ ಕ್ಯಾಂಪಸ್​ನಲ್ಲಿ ತರಬೇತಿ ಕಡ್ಡಾಯವಾಗಿದೆ. ಇದೇ ಪ್ರದೇಶದಲ್ಲಿ ಈಗ ಇನ್ಫಿ 135 ಮೀಟರ್ ಎತ್ತರದ ಗಡಿಯಾರ ಗೋಪುರವನ್ನು ನಿರ್ಮಿಸಲು ಉದ್ದೇಶಿಸಿದೆ.

image


ಲಂಡನ್​ನ ಬಿಗ್ ಬೆನ್ ಟವರ್​ಗಿಂತಲೂ ದೊಡ್ಡದು..!

ಇನ್ಫೋಸಿಸ್ ನಿರ್ಮಾಣ ಮಾಡಬೇಕಿಂದಿರುವ ಈ ಗಡಿಯಾರ ಗೋಪುರ ಲಂಡನ್​ನಲ್ಲಿರುವ ಬಿಗ್ ಬೆನ್ (96 ಮೀಟರ್), ಕ್ಯಾಲಿಫೋರ್ನಿಯಾದ ಹೋವರ್ ಟವರ್​​ಗಿಂತಲೂ (87 ಮೀಟರ್) ಎತ್ತರವಾಗಲಿದೆ. ಗೋಥಿಕ್ ಶೈಲಿಯಲ್ಲಿ ನಿರ್ಮಾಣವಾಗಲಿರುವ ಈ ಗೋಪುರ ನಿರ್ಮಾಣಕ್ಕಾಗಿ ಸುಮಾರು 60 ಕೋಟಿ ರೂ. ವೆಚ್ಚವಾಗಲಿದೆ. ಇದರಲ್ಲಿ 19 ಅಂತಸ್ತುಗಳು ಇರಲಿದ್ದು, ಇದರ ನಿರ್ಮಾಣಕ್ಕೆ ಸುಮಾರು 20 ತಿಂಗಳು ಸಮಯ ಹಿಡಿಯಲಿದೆ ಎಂದು ಅಂದಾಜಿಸಲಾಗಿದೆ. ಈ ಕ್ಲಾಕ್ ಟವರ್ ನಿರ್ಮಾಣದ ಯೋಜನೆಯನ್ನು ಇನ್ಫೋಸಿಸ್ ಸಹ ಸಂಸ್ಥಾಪಕ ಎನ್ಆರ್ ನಾರಾಯಣಮೂರ್ತಿ ಕೂಡಾ ದೃಢಪಡಿಸಿದ್ದಾರೆ.

ಗಡಿಯಾರ ಗೋಪುರ ಇಲ್ಲದೆ ಮೈಸೂರಿನ ಇನ್ಫೋಸಿಸ್ ತರಬೇತಿ ಕೇಂದ್ರ ಪರಿಪೂರ್ಣವಾಗುವುದಿಲ್ಲ. ಕ್ಲಾಕ್ ಟವರ್ ಇರುವುದರಿಂದ ಕ್ಯಾಂಪಸ್​ಗೆ ಅಕಾಡೆಮಿಕ್ ಭವ್ಯತೆಯ ಮೆರುಗು ಸಿಕ್ಕಂತಾಗುತ್ತದೆ. ’’
                        - ನಾರಾಯಣ ಮೂರ್ತಿ

ಮುಂಬೈ ಮೂಲದ ಕಂಟ್ರಾಕ್ಟರ್

ಇನ್ಫೋಸಿಸ್​​ನ ಮೈಸೂರಿನ ಕ್ಯಾಂಪಸ್ ವಿನ್ಯಾಸವನ್ನು ರೂಪಿಸಿದ್ದ ಮುಂಬಯಿ ಮೂಲದ ಹಫೀಜ್ ಕಾಂಟ್ರಾಕ್ಟರ್ ಅವರೇ ಈ ಗೋಪುರದ ವಿನ್ಯಾಸವನ್ನೂ ರಚಿಸಲಿದ್ದಾರೆ. ನಿರ್ಮಾಣ ಮಾತ್ರ ಬೆಂಗಳೂರು ಮೂಲದ ಕೆಇಎಫ್ ಇನ್ಫ್ರಾ ನಿರ್ಮಿಸಲಿದೆ. ಈ ಯೋಜನೆಗೆ ಸಂಬಂಧಿಸಿದ ಬಹುತೇಕ ಅನುಮೋದನೆಗಳನ್ನು ಪಡೆಯಲಾಗಿದೆ ಎಂದು ಕಂಪನಿಯ ಕಾರ್ಯಕಾರಿ ಉಪಾಧ್ಯಕ್ಷ ರಾಮದಾಸ್ ಕಾಮತ್ ತಿಳಿಸಿದ್ದಾರೆ. ಸಾಂಪ್ರದಾಯಿಕತೆ ಮತ್ತು ಆಧುನಿಕ ತಂತ್ರಜ್ಞಾನವನ್ನು ಗಡಿಯಾರ ಗೋಪುರದಲ್ಲಿ ಸಂಯೋಜಿಸಲಗುವುದು. ಗೋಪುರದ ನಾಲ್ಕು ಬದಿಗಳಲ್ಲಿ ದೊಡದ್ಡ ಡಿಜಿಟಲ್ ಸ್ಕ್ರೀನ್​​ಗಳನ್ನು ಅಳವಡಿಸಲಾಗುವುದು. ಪ್ರಮುಖ ವಿದ್ಯಮಾನಗಳ ಸಂದೇಶಗಳನ್ನು ಈ ಸ್ಕ್ರೀನ್​ನಲ್ಲಿ ಬಿತ್ತರಿಸಲಾಗುವುದು ಎಂದು ಕಂಪನಿಯ ಸ್ಥಳೀಯ ಆರ್ಕಿಟೆಕ್ಟ್ ಕೆ.ಪಿ ನಾಗರಾಜ್ ತಿಳಿಸಿದ್ದಾರೆ.ಒಟ್ಟಿನಲ್ಲಿ ದೊಡ್ಡ ಗಡಿಯಾರ, ಚಿಕ್ಕ ಗಡಿಯಾರ, ಯುನಿವರ್ಸಿಟಿಯೊಳಗಿರುವ ಗಡಿಯಾರದ ಜತೆಗೆ ಇನ್ಫೋಸಿಸ್ ಒಳಗಿರುವ ಗಡಿಯಾರುವೂ ಸೇರಿಕೊಂಡರೆ ಮೈಸೂರಿನ ಖ್ಯಾತಿ ಮತ್ತಷ್ಟು ಹೆಚ್ಚುತ್ತದೆ.

ಇದನ್ನು ಓದಿ:

1. ಪಿಡ್ಜಾ ಐಸ್‍ಕ್ರಿಮ್..24 ಕ್ಯಾರೆಟ್ ಗೋಲ್ಡ್ ಐಸ್‍ಕ್ರೀಮ್!!!

2. 'ದೇವರು ಮತ್ತು ಕನಸಿನಲ್ಲಿ ನಂಬಿಕೆಯಿಟ್ರೆ ಜಯ ಶತಸಿದ್ಧ' ಯೆಸ್ ಬ್ಯಾಂಕ್​ನ ರಾಣಾ ಕಪೂರ್ ಯಶಸ್ಸಿನ ಮಂತ್ರ

3. ಕಷ್ಟದ ಜೊತೆ ಗುದ್ದಾಡಿ ಗೆದ್ದ ಛಲಗಾರ – ಸಿಎ ಪಾಸ್ ಮಾಡಿ ಚಾರ್ಟಡ್ ಅಕೌಂಟೆಂಟ್ ಆದ ಚಾಯ್ ವಾಲಾ

2+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags