ಅಂದು ಎಂಜಿನಿರಿಂಗ್ ಡ್ರಾಪ್ಔಟ್ ಸ್ಟೂಡೆಂಟ್​.. ಇಂದು ಮರಗಳ ರಕ್ಷಕ..!

ಎನ್​ಎಸ್​ಆರ್​

ಅಂದು ಎಂಜಿನಿರಿಂಗ್ ಡ್ರಾಪ್ಔಟ್ ಸ್ಟೂಡೆಂಟ್​.. ಇಂದು ಮರಗಳ ರಕ್ಷಕ..!

Thursday March 24, 2016,

2 min Read

ಸಮಾಜದಲ್ಲಿ ಎಲ್ಲವನ್ನು ನಕರಾತ್ಮಕವಾಗಿ ನೋಡುವವರೇ ಜಾಸ್ತಿ. ಸಣ್ಣ-ಸಣ್ಣ ವಿಷಯದಲ್ಲೂ ಖುಷಿ ಪಡುವಂತವರು ತುಂಬಾ ಕಮ್ಮಿ. ಆದರೆ ಇಲ್ಲೊಬ್ಬ ವ್ಯಕ್ತಿಯಿದ್ದಾರೆ. ಅವರು ಮಾಡುತ್ತಿರುವ ಕೆಲಸ ಅವರು ಬೆಳೆದ ಪರಿ ಎಲ್ಲವೂ ಬೆರಗುಗೊಳಿಸುವಂತಹದು. ಜೀವನದಲ್ಲಿ ಏನಾದ್ರು ಸಾಧಿಸಬೇಕೆಂದು ಹೊರಟವರು. ತಮ್ಮ ಬೆಳೆವಣಿಗೆಗೆ ಸಹಾಯ ಮಾಡಿದ ಎಲ್ಲರಿಗೂ ಒಂದು ಒಳ್ಳೆಯ ಬದುಕು ಕೊಡಬೇಕೆಂದು ಹೊರಟ ಈ ಯುವಕ ಸದ್ಯ ಬೆಂಗಳೂರಿನಲ್ಲಿರುವ 2000 ಸಾವಿರಕ್ಕಿಂತ ಹೆಚ್ಚು ಮರಗಳನ್ನು ರಕ್ಷಿಸಿದ್ದಾರೆ. ಇದೇ ಕೆಲಸವನ್ನು ಉಸಿರಾಗಿಸಿಕೊಂಡಿದ್ದಾರೆ.

image


ವಿಜಯ್ ಬೆಳೆದಿದ್ದು ಬೆಂಗಳೂರಿನಲ್ಲಿ. ಪಾರ್ಟ್ ಟೈಮ್ ಕೆಲಸ ಮಾಡುತ್ತಲೆ, ಎಂಜಿನಿಯರಿಂಗ್ ವ್ಯಾಸಾಂಗ ಮಾಡಲು ಆರಂಭಿಸಿದ್ರು. ಆದರೆ ಬೆಂಗಳೂರಿನಲ್ಲಿ ಬದುಕುವುದು ಕಷ್ಟವಾಗಿತ್ತು. ಲಕ್ಷಾಂತರ ರೂಪಾಯಿ ಫೀಸ್ ಕೊಟ್ಟು ಓದುವುದು ವಿಜಯ್ ಕಡೆಯಿಂದ ಸಾಧ್ಯವಿರಲಿಲ್ಲ. ಆಗ ಕಂಡುಕೊಂಡ ಮಾರ್ಗವೇ ಮರಗಳನ್ನು ರಕ್ಷಿಸುವಂತಹ ಕೆಲಸ ಮಾಡುವುದು. ಇಂಜಿನಿಯರ್ ಡ್ರಾಪ್ ಔಟ್ ಆದ ವಿಜಯ್. ಬಿಬಿಎಂಪಿ, ಮತ್ತು ಎಟ್ರಿಯಾ ಎನಜಿಯೋಗಳಲ್ಲಿ ಮರ ಉಳಿಸುವಂತಹ ಕೆಲಸ ಮಾಡಲು ಮುಂದಾದ್ರು..

image


ಮೊದಲಿನಿಂದಲೂ ಮರಗಳನ್ನು ರಕ್ಷಿಸಿ, ಗಿಡ ನೆಡಿ ಎಂಬ ಮಾತನ್ನು ಕೇಳುತ್ತಿದ್ದ ವಿಜಯ್ಗೆ ಬೆಂಗಳೂರು ಎಂದರೆ ಅದೇನೋ ಎಲ್ಲಿಲ್ಲದ ಪ್ರೀತಿ. ಗ್ರೀನ್ ಸಿಟಿ, ಉದ್ಯಾನನಗರಿ ಎಂದು ಕರೆಯಿಸಿಕೊಳ್ಳುವ ಬೆಂಗಳೂರು, ಹೆಸರಿಗೆ ತಕ್ಕಂತೆ ಮಾತ್ರವಿಲ್ಲ. ಲಕ್ಷಾಂತರ ಮರಗಳು ಬೆಂಗಳೂರಿನಲ್ಲಿವೆ. ಆದರೆ ರಿಯಲ್ ಎಸ್ಟೇಟ್ ಮತ್ತು ನಗರ ಅಭಿವೃದ್ಧಿ ಹೆಸರಲ್ಲಿ ಮರಗಳನ್ನು ಕಡಿಯುತ್ತಿರುವುದನ್ನು ನಿಲ್ಲಿಸುವ ಸಲುವಾಗಿ ಏನಾದ್ರು ಮಾಡಬೇಕೆಂದು. ತಮ್ಮ ಮೂವರು ಗೆಳೆಯರ ಜೊತೆಗೂಡಿ ನಾಲ್ಕು ವರ್ಷಗಳ ಹಿಂದೆ ವಿಜಯ್, ವೃಕ್ಷ.ಕಾಮ್ ಎಂಬ ವೆಬ್​ಸೈಟ್​​ ಆರಂಭಿಸಿದ್ದಾರೆ.

"ಮರಗಳನ್ನು ರಕ್ಷಸಿಸುವುದು ಮತ್ತು ಅವುಗಳಿಗೆ ಖಾಯಿಲೆ ಬಂದರೆ ಚಿಕಿತ್ಸೆ ಮಾಡುವುದು ನನ್ನ ಕೆಲಸ. ಮರಗಳಿಗೆ ಜಾಹಿರಾತುಗಳನ್ನು ಅಂಟಿಸುವುದನ್ನು ನಿಲ್ಲಿಸಿದ್ದೇನೆ. ಎಷ್ಟೋ ಅಂಗಡಿಯವರು, ಮನೆಯವರು, ಮಾಲ್​ನವರು ಮನೆಮುಂದೆ ಮರವಿದೆ. ಅದರಿಂದ ಕಸ ಬೀಳುತ್ತದೆ. ತಮ್ಮ ಮಳಿಗೆ ಕಾಣಸಿವುದಿಲ್ಲವೆಂದು ಅದಕ್ಕೆ ವಿಷ ಹಾಕಿ, ಮರಗಳನ್ನು ಸಾಯುವಂತೆ ಮಾಡುವ ಜನರಿದ್ದಾರೆ. ಎಷ್ಟೋ ಮರಗಳು ಹೀಗೆ ಸಾಯುತ್ತವೆ. ಆದರೆ ಆದು ವಿಷ ಹಾಕಿದ್ದು ಎಂದು ತಿಳಿಯುವುದಿಲ್ಲ. ಅಂತಹ 10ಕ್ಕಿಂತ ಹೆಚ್ಚು ಮರಗಳನ್ನು ರಕ್ಷಿಸಿದ್ದೇನೆ. ಇದಕ್ಕೆ ಯಾರ ಕಡೆಯಿಂದಲೂ ಸಹಾಯ ಪಡೆದಿಲ್ಲ. ಸ್ವಂತ ಖರ್ಚಿನಿಂದ ನಾನು ಈ ಮರಗಳನ್ನು ರಕ್ಷಿಸಿದ್ದೇನೆ. ಬೆಂಗಳೂರಿನ ನಾಲ್ಕು ವಾರ್ಡ್​ನಲ್ಲಿ ಮರಗಳ ಗಣತಿ ಮಾಡಿದ್ದು, ಡಿಜಿಟೈಲೈಸೇಶನ್ ಮಾಡಿದ್ದು, ಪ್ರತಿ ಮರದ ಮೇಲೆ ಹದ್ದಿನ ಕಣ್ಣು ಇಟ್ಟಿದೆ ವೃಕ್ಷ.ಕಾಮ್ ವೆಬ್ಸೈಟ್. ಪ್ರತಿ ದಿನ ಮರಗಳ ಲೆಕ್ಕ ಹಾಕುವುದು ಅವುಗಳು ಹೇಗೆ ಬೆಳೆಯುತ್ತಿವೆಯೆಂದು ಗಮನಿಸುವುದು ಇವರ ಕೆಲಸವಾಗಿದೆ."
- ವಿಜಯ್​​

ಇವರು ಈಗಾಗ್ಲೇ ಎರಡು ಸಾವಿರಕ್ಕಿಂತ ಹೆಚ್ಚು ಮರಗಳನ್ನು ಕಡಿಯುವುದನ್ನು ನಿಲ್ಲಿಸಿದ್ದಾರೆ. ಜಯಮಹಲ್ ಒಂದೇ ಕಡೆ 800 ಮರಗಳಿವೆ ಎಂದೇಳಿ ಮರಗಳನ್ನು ಕಡಿಯಲು ಸರ್ಕಾರ ಮುಂದಾಗಿತ್ತು. ಮರಗಳ ಸರ್ವೇ ಮಾಡಿದ ವಿಜಯ್, ಅಲ್ಲಿ 1220 ಮರಗಳಿರುವುದಾಗಿ ವರದಿ ನೀಡಿದ್ರು. ಎಲ್ಲವೂ ತುಂಬಾ ಹಳೆಯ ಮರಗಳು ಹಾಗಾಗಿ ಅವುಗಳ ರಕ್ಷಣೆ ಅವಶ್ಯಕ ಎಂದು ವರದಿ ಸಲ್ಲಿಸುವ ಮೂಲಕ, ಮರಗಳನ್ನು ಕಡಿಯುವುದನ್ನು ನಿಲ್ಲಿಸಿದ್ರು. ಅನೇಕ ಕಡೆ ಹೀಗೆ 30-40 ಮರಗಳನ್ನು ಕಡಿಯುವುದನ್ನು ವಿಜಯ್ ನಿಲ್ಲಿಸಿದ್ದಾರೆ. ಹಾಗಾಗಿ ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಸಿಕ್ಕಿದೆ. ವಿಜಯ್ ಕೆಲಸ ನೋಡಿ, ಅನೇಕ ವಿದೇಶಿಗರು ಇವರ ಬಳಿ, ಈ ಕೆಲಸ ಕಲಿಯಲು ಬಂದಿದ್ದಾರೆ. ಬೆಂಗಳೂರಿಗರು ಸಹ ಇವರ ಕೆಲಸವನ್ನು ಕಲಿಯುವ ಆಸಕ್ತಿ ತೋರಿದ್ದಾರೆ.

"ದೇಶಾದ್ಯಂತ ಮರಗಳನ್ನು ರಕ್ಷಿಸುವ ಕೆಲಸವಾಗಬೇಕು. ಅದಕ್ಕಾಗಿ ಆಸಕ್ತಿಯುಳ್ಳವರಿಗೆ ಉತ್ತಮ ತರಬೇತಿ ನೀಡುಬೇಕೆಂಬುದು ನನ್ನ ಮಹಾತ್ವಕಾಂಕ್ಷೆ. ಜಗತ್ತಿನಾದ್ಯಂತ ಮರಗಳನ್ನು ರಕ್ಷಿಸಬೇಕು. ಉತ್ತಮ ಆರೋಗ್ಯವನ್ನು ಜನರು ಹೊಂದಬೇಕು. ನೆಮ್ಮದಿಯಿಂದ ಬದುಕಬೇಕು. ಕಾಡಿದ್ದರೆ ನಾಡು, ನಾಡಿನಲ್ಲಿ ಮರಗಳಿದ್ದರೆ ಬದುಕು ಬಂಗಾರವಾಗುವುದು, ಹಸಿರೇ ನಮ್ಮ ಉಸಿರು ಎಂತಾರೆ ವಿಜಯ್"..