ಆವೃತ್ತಿಗಳು
Kannada

ಭಾರತದ ಸಣ್ಣ ಹಾಗೂ ಮಧ್ಯಮ ಉದ್ದಿಮೆದಾರರನ್ನು ತಲುಪಲು ಭಾರ್ತಿ ಏರ್‌ಟೆಲ್‌ನ 60,000 ಕೋಟಿ ಹೂಡಿಕೆ

ಟೀಮ್​​ ವೈ.ಎಸ್​. ಕನ್ನಡ

8th Dec 2015
Add to
Shares
1
Comments
Share This
Add to
Shares
1
Comments
Share

ಮೊಬೈಲ್ ಸೇವೆಗಳನ್ನು ಒದಗಿಸುವ ಭಾರ್ತಿ ಏರ್‌ಟೆಲ್ ಸಂಸ್ಥೆ ಪ್ರೊಜೆಕ್ಟ್ ಲೀಪ್ ಎಂಬ ಹೆಸರಿನಲ್ಲಿ ತನ್ನ ನೆಟ್‌ವರ್ಕ್ ಟ್ರಾನ್ಸ್‌ ಫಾರ್ಮೇಶನ್ ಕಾರ್ಯಕ್ರಮವನ್ನು ಆರಂಭಿಸಿದೆ. ಈ ಮೂಲಕ ನೆಟ್‌ವರ್ಕ್ ಗುಣಮಟ್ಟವನ್ನು ಸುಧಾರಿಸಲು ಮತ್ತು ಗ್ರಾಹಕರಿಗೆ ಉತ್ತಮ ಸೌಲಭ್ಯವನ್ನು ನೀಡಲು ಮುಂದಾಗಿದೆ. ಈ ಯೋಜನೆ ಮುಖಾಂತರ ಸಂಸ್ಥೆಗೆ ಮುಂದಿನ ಮೂರು ವರ್ಷಗಳಲ್ಲಿ 60,000 ಕೋಟಿ ಹೂಡಿಕೆ ಹರಿದುಬರುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.

ಸಕ್ರಿಯ ಮತ್ತು ನಿಷ್ಕ್ರಿಯ ನೆಟ್‌ವರ್ಕ್, ಸ್ಪೆಕ್ಟ್ರಮ್, ಫೈಬರ್, ಸಬ್ ಮರೀನ್ ಕೇಬಲ್‌ ಮತ್ತು ವ್ಯವಸ್ಥೆಗಳನ್ನು ಸಮರ್ಪಕವಾಗಿ ರೂಪಿಸಲು ಏರ್ ಟೆಲ್ ಸಂಸ್ಥೆ ಈಗಾಗಲೇ 1,60,000 ಕೋಟಿಗಳನ್ನು ಹೂಡಿಕೆ ಮಾಡಿದೆ. ಇದು ಭಾರತದ ಖಾಸಗಿ ಉದ್ಯಮವಲಯದಲ್ಲೇ ಅತೀ ಹೆಚ್ಚಿನ ಹೂಡಿಕೆ ಎಂದು ಹೇಳಲಾಗುತ್ತಿದೆ. ಈ ನಿಯೋಜಿತ ಹೂಡಿಕೆಯ ವೆಚ್ಚವು 2015-16ನೇ ಸಾಲಿನಲ್ಲೇ ಹಿಂತಿರುಗಿ ಬರುವ ಸಾಧ್ಯತೆ ಇದೆ ಎಂದಿದ್ದಾರೆ ಭಾರ್ತಿ ಏರ್‌ಟೆಲ್ ಸಂಸ್ಥೆಯ ಭಾರತ ಮತ್ತು ದಕ್ಷಿಣ ಏಷಿಯಾ ಭಾಗದ ಸಿಇಓ ಮತ್ತು ಎಂಡಿ ಗೋಪಾಲ್ ವಿಟ್ಠಲ್ ಹೇಳಿದ್ದಾರೆ.

ಗ್ರಾಮೀಣ, ನಗರ, ಮನೆಗಳು ಮತ್ತು ಉದ್ಯಮಗಳಲ್ಲಿ ಭಾರ್ತಿ ಏರ್‌ಟೆಲ್ ಸಂಸ್ಥೆಗೆ ಗ್ರಾಹಕರಿದ್ದಾರೆ. ಅವರಿಗೆ ಅಸಾಧಾರಣ ಸೇವೆಗಳನ್ನು ನೀಡುವ ಮೂಲಕ ಉದ್ಯಮದಲ್ಲಿ ಯಶಸ್ಸು ಸಾಧಿಸುವುದು ನಮ್ಮ ಗುರಿ. ಹೀಗಾಗಿ ಪ್ರಾಜೆಕ್ಟ್ ಲೀಪ್ ಯೋಜನೆಯನ್ನು ಆರಂಭಿಸಲಾಗಿದೆ. ಇದರಿಂದ ಗ್ರಾಹಕರಿಗೆ ಭಿನ್ನವಾದ ಅನುಭವವೊಂದು ಆಗುತ್ತದೆ ಎಂಬ ವಿಶ್ವಾಸ ನಮಗಿದೆ ಎಂದಿದ್ದಾರೆ ಗೋಪಾಲ್ ವಿಟ್ಠಲ್.

image


ಇಲ್ಲಿ ಏರ್‌ಟೆಲ್ ಸಂಸ್ಥೆಯ ಪ್ರಾಜೆಕ್ಟ್ ಲೀಪ್ ಯೋಜನೆಯ ಕೆಲ ಅಂಶಗಳನ್ನು ವಿವರಿಸಲಾಗಿದೆ.

ಮುಂದಿನ 3 ವರ್ಷಗಳಿಗಾಗಿ 1,60,000 ಬೇಸ್ ಸ್ಟೇಷನ್‌ಗಳನ್ನು ನಿರ್ಮಿಸುವುದು

2015-16ನೇ ಸಾಲಿನ ಆರ್ಥಿಕ ವರ್ಷದಲ್ಲಿ 70,000ಕ್ಕೂ ಹೆಚ್ಚು ಬೇಸ್ ಸ್ಟೇಷನ್‌ಗಳನ್ನು ನಿರ್ಮಿಸುವ ಗುರಿ ಹೊಂದಿದೆ ಏರ್‌ಟೆಲ್. ಮಾರ್ಚ್ 2016ರೊಳಗೆ ಶೇ.60ಕ್ಕೂ ಹೆಚ್ಚು ಮೊಬೈಲ್ ಬ್ರಾಡ್ ಬ್ರ್ಯಾಂಡ್ ನಿರ್ಮಾಣದ ನಿರೀಕ್ಷೆಯಲ್ಲಿದೆ ಸಂಸ್ಥೆ. 3 ವರ್ಷಗಳಲ್ಲಿ 1,60,000 ಬೇಸ್ ಸ್ಟೇಷನ್‌ಗಳನ್ನು ನಿರ್ಮಿಸುವ ಆ ಮೂಲಕ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ಗುರಿ ಹೊಂದಿದೆ ಏರ್‌ಟೆಲ್.

ಭಾರತದಾದ್ಯಂತ ಬ್ರಾಡ್ ಬ್ಯಾಂಡ್ ಸೌಲಭ್ಯ ಮತ್ತು ಪ್ರತಿ ನಗರಗಳಲ್ಲೂ ಉತ್ತಮ ಅನುಭವದ ಭರವಸೆ

ಏರ್ ಟೆಲ್ ಸಂಸ್ಥೆ ತನ್ನ ಮೊಬೈಲ್ ಬ್ರಾಡ್ ಬ್ಯಾಂಡ್ ಸೇವೆಯನ್ನು ಎಲ್ಲಾ ನಗರಗಳಿಗೂ ವಿಸ್ತರಿಸಲಿದೆ ಮತ್ತು 2016 ಮಾರ್ಚ್ ಒಳಗೆ 2,50,000 ಹಳ್ಳಿಗಳಲ್ಲೂ ಈ ಸೇವೆಯನ್ನು ನೀಡುವ ಉದ್ದೇಶವಿದೆ. ಇನ್ನು 3 ವರ್ಷಗಳಲ್ಲಿ ದೇಶದ 5,00,000 ಹಳ್ಳಿಗಳಲ್ಲಿ ಮೊಬೈಲ್ ಬ್ರಾಡ್ ಬ್ಯಾಂಡ್ ಸೇವೆ ಒದಗಿಸುವ ಯೋಜನೆ ಹಾಕಿಕೊಂಡಿದೆ ಏರ್‌ಟೆಲ್. ಸಣ್ಣ ಸೆಲ್‌ಗಳು, ಕ್ಯಾರೀರ್ ಅಗ್ರಿಗೇಶನ್ ಸೊಲ್ಯುಷನ್, ವೈಫೈ ಮತ್ತು ವಿಭಿನ್ನ ಸ್ಪೆಕ್ಟ್ರಮ್ ಬ್ಯಾಂಡ್ಸ್ ಗಳ ಮೂಲಕ ವಿವಿಧ ಟೆಕ್ನಾಲಜಿಗಳ ಬಳಕೆಗೆ ವೇದಿಕೆ ಒದಗಿಸುವುದು ಇದರ ಗುರಿ.

ಈ ಮೂಲಕ ಧ್ವನಿ ಮತ್ತು ಮಾಹಿತಿ ಸೇವೆಗಳನ್ನು ನಗರಗಳಾದ್ಯಂತ ನಿರ್ಮಿಸುವ ಉದ್ದೇಶ ಹೊಂದಿದೆ ಸಂಸ್ಥೆ. ಇನ್ನು 3 ವರ್ಷಗಳಲ್ಲಿ ವೈಫೈ ಹಾಟ್‌ಸ್ಪಾಟ್‌ಗಳು, ಸ್ಮಾಲ್ ಸೆಲ್ಸ್ ಮತ್ತು ಇನ್‌ಡೋರ್ ಸೊಲ್ಯುಷನ್‌ಗಳೂ ಸೇರಿ 1,00,000 ಸೊಲ್ಯುಷನ್‌ಗಳನ್ನು ನಿಯೋಜಿಸಲು ಏರ್‌ಟೆಲ್ ಸಂಸ್ಥೆ ನಿರ್ಧರಿಸಿದೆ.

5,50,000 ಕಿಮೀ ದೇಶೀಯ ಮತ್ತು ಅಂತರಾಷ್ಟ್ರೀಯ ಫೈಬರ್

ಭಾರತದಲ್ಲಿ ಮಾಹಿತಿ ಸೇವೆಗಳ ಬೇಡಿಕೆ ಹೆಚ್ಚುತ್ತಿರುವ ಕಾರಣ ಈ ನಿಟ್ಟಿನಲ್ಲೂ ಕಾರ್ಯನಿರ್ವಹಿಸಲು ಏರ್‌ಟೆಲ್ ಸಂಸ್ಥೆ ಯೋಜನೆ ರೂಪಿಸಿಕೊಂಡಿದೆ. 5,50,000 ಕಿಮೀ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಫೈಬರ್ ನಿಯೋಜಿಸಲಿದೆ. ಅವ್ಯಕ್ತ ಸೇವೆ ಒದಗಿಸಲು, ಏರ್‌ಟೆಲ್ ನೊಂದಿಗೆ ಗ್ರಾಹಕರ ಅನುಭವವನ್ನು ಸುಧಾರಿಸುವ ಮತ್ತು ಹೆಚ್ಚುತ್ತಿರುವ ಮಾಹಿತಿ ಸೇವೆಗಳ ಬೇಡಿಕೆಯನ್ನು ಪೂರೈಸಲು ಇದು ಸಹಕಾರಿಯಾಗಲಿದೆ. ಇಂಟರ್‌ನೆಟ್‌ ಇನ್ ಇಂಡಿಯಾ 2015ರ ಇತ್ತೀಚಿನ ವರದಿಯ ಪ್ರಕಾರ ಐಎಎಂಎಐ ಮತ್ತು ಐಎಂಆರ್‌ಬಿ ಇಂಟರ್‌ನ್ಯಾಷನಲ್ ಸಂಸ್ಥೆ ಡಿಸೆಂಬರ್ 2015ರ ಅಂತ್ಯದೊಳಗೆ ಭಾರತದಲ್ಲಿ 402 ಮಿಲಿಯನ್ ಜನರು ಇಂಟರ್‌ನೆಟ್ ಬಳಸುತ್ತಾರೆ ಎಂದು ಅಂದಾಜಿಸಲಾಗಿದೆ.

ಈಗಿರುವ ನೆಟ್‌ವರ್ಕ್‌ನಲ್ಲಿ ಆಧುನೀಕರಣ

ಏರ್‌ಟೆಲ್ ಸಂಸ್ಥೆ ಮೂರು ವರ್ಷಗಳ ಅವಧಿಯಲ್ಲಿ ತನ್ನ ನೆಟ್ ವರ್ಕ್ ಪರಂಪರೆಯನ್ನು ಸಮರ್ಥ ತಂತ್ರಜ್ಞಾನಗಳ ವಿನಿಮಯ ಮಾಡಿಕೊಂಡು ಗ್ರಾಹಕರ ಅನುಭವ ಸುಧಾರಿಸುವ ಗುರಿ ಹಾಕಿಕೊಂಡಿದೆ. ಎಲ್ಲಾ ಆಧುನಿಕ ಬೇಸ್ ಸ್ಟೇಷನ್‌ಗಳು ವಿವಿಧ ಸ್ಪೆಕ್ಟ್ರಂ ಬ್ಯಾಂಡ್‌ಗಳನ್ನು ನಿರ್ವಹಿಸಲು ಒಂದೇ ರೇಡಿಯೋ ನೆಟ್‌ವರ್ಕ್‌ ಅನ್ನು ಹೊಂದಿದೆ.

2016ರೊಳಗೆ ಮನೆ ಮನೆಯ ಬ್ರಾಡ್ ಬ್ಯಾಂಡ್ ನೆಟ್‌ವರ್ಕ್‌ಗಳಿಗೆ 50 ಎಂಬಿಪಿಎಸ್ ಸ್ಪೀಡ್ ಒದಗಿಸುವುದು

ಪ್ರಸ್ತುತ 16 ಎಂಬಿಪಿಎಸ್ ಸ್ಪೀಡ್ ಹೊಂದಿರುವ ಬ್ರಾಡ್ ಬ್ಯಾಂಡ್ ನೆಟ್‌ವರ್ಕ್ ಸಂಪರ್ಕಗಳನ್ನು ಮಾರ್ಚ್ 2016ರೊಳಗೆ 50 ಎಂಬಿಪಿಎಸ್‌ಗೆ ಏರಿಸುವುದೂ ಸಹ ಯೋಜನೆಯ ಒಂದು ಅಂಶವಾಗಿದೆ. 3 ಮಿಲಿಯನ್‌ಗೂ ಹೆಚ್ಚು ಹೋಮ್‌ ಬ್ರಾಡ್ ಬ್ಯಾಂಡ್ ನೆಟ್‌ವರ್ಕ್‌ಗಳನ್ನು ಅಪ್‌ಗ್ರೇಡ್‌ಗೊಳಿಸುವ ಮೂಲಕ ಆಧುನೀಕರಣಗೊಳಿಸುವ ಮೂಲಕ ತಂತ್ರಜ್ಞಾನವನ್ನು ಸುಧಾರಿಸುವ ನಿಟ್ಟಿನಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಹೆಚ್ಚುವರಿಯಾಗಿ ಮನೆಗಳಿಗೆ ಫೈಬರ್‌ಗಳನ್ನು ನಿಯೋಜಿಸಿ 100 ಎಂಬಿಪಿಎಸ್ ಸ್ಪೀಡ್ ಒದಗಿಸುವ ಯೋಜನೆಯೂ ಇದೆ.

ಭಾರತದ ಎಲ್ಲಾ ಸಣ್ಣ ಹಾಗೂ ಮಧ್ಯಮ ಮಟ್ಟದ ಉದ್ಯಮಗಳನ್ನು ಜೋಡಿಸುವುದು ಮತ್ತು ಉತ್ತಮ ಕಾರ್ಯಚಟುವಟಿಕೆಯ ಕೇಂದ್ರಗಳನ್ನು ಒದಗಿಸುವುದು

ವ್ಯಾಪಕ ದೇಶೀಯ ಮೂಲಸೌಕರ್ಯಗಳನ್ನು ಬಳಸಿಕೊಂಡು ವೈರ್‌ಲೆಸ್ ಇಂಟರ್‌ನೆಟ್‌ ಸೌಕರ್ಯ (ಇಂಟರ್‌ನೆಟ್ ವೈರ್‌ಲೆಸ್ ಆಕ್ಸೆಸ್ ನೆಟ್‌ವರ್ಕ್-ಐಡಬ್ಲ್ಯುಎಎನ್) ನೀಡುವ ಗುರಿ ಏರ್‌ ಟೆಲ್ ಸಂಸ್ಥೆಯ ಮುಂದಿದೆ. ಈ ಯೋಜನೆಯ ಅಂಗವಾಗಿ ಸಂಸ್ಥೆ ಸಣ್ಣ ಮತ್ತು ಮಧ್ಯಮ ಮಟ್ಟದ ಉದ್ಯಮಗಳಿಗೆ ಉತ್ತಮ ಕನೆಕ್ಟಿವಿಟಿ ಒದಗಿಸುವುದು ಯೋಜನೆಯ ಅಂಶವಾಗಿದೆ.

ಆಟೋಮ್ಯಾಟಿಕ್ ನೆಟ್‌ವರ್ಕ್ ಆಪ್ಟಿಮಿಸೇಶನ್‌ಗಾಗಿ ಸೆಲ್ಫ್‌ ಆಪ್ಟಿಮೈಸಿಂಗ್ ನೆಟ್‌ವರ್ಕ್‌ಗಳು, ನೆಟ್‌ವರ್ಕ್ ಪ್ಲಾನಿಂಗ್ ಅನ್ನು ಗುರಿಯಾಗಿಸಿಕೊಂಡು ಜಿಯೋ ಸ್ಪಾಟಿಯಲ್ ನೆಟ್‌ವರ್ಕ್ ಟೂಲ್‌ಗಳು, ತಮ್ಮ ಸಾಮರ್ಥ್ಯ ವರ್ಧನೆ, ಸಿಇಎಂ(ಕಸ್ಟಮರ್ ಎಕ್ಸ್‌ ಪೀರಿಯನ್ಸ್ ಮ್ಯಾನೇಜ್‌ಮೆಂಟ್) ಗ್ರಾಹಕರ ಅನುಭವ ನಿರ್ವಹಣೆ ಹಾಗೂ ಇದಕ್ಕೆ ಸಂಬಂಧಿಸಿದಂತೆ ಗ್ರಾಹಕರ ಇಚ್ಛೆಗಳನ್ನು ಸಂತೃಪ್ತಿಪಡಿಸುವ ಸಾಫ್ಟ್‌ ವೇರ್ ಅಭಿವೃದ್ಧಿಪಡಿಸುವುದು ಇತ್ಯಾದಿ ಸಾಮರ್ಥ್ಯಗಳ ಬಗ್ಗೆ ಅದು ಯೋಚಿಸುತ್ತಿದೆ.

3 ವರ್ಷಗಳಲ್ಲಿ ಶೇ.70ರಷ್ಟು ಕಾರ್ಬನ್ ಶೀಟ್‌ಗಳ ಬಳಕೆ ಕಡಿಮೆ ಮಾಡಲಾಗಿದೆ

ಏರ್‌ಟೆಲ್ ಹಸಿರು ತಂತ್ರಜ್ಞಾನ ಆಧಾರಿತ ಯೋಜನೆಗಳಿಗಾಗಿ ಮುಂದಿನ 3 ವರ್ಷ ಸಾಂಸ್ಥಿಕ ಬಂಡವಾಳ ಹೂಡಲು ಮುಂದಾಗಿದೆ. ಆಧುನಿಕ ಹಾಗೂ ಕಡಿಮೆ ಪವರ್ ಉಪಯೋಗಿಸಿಕೊಂಡು ಕಾರ್ಯನಿರ್ವಹಿಸುವ ರೇಡಿಯೋ ತಾಂತ್ರಿಕತೆ ಹಾಗೂ ಇದರ ಸಂಬಂಧಿತ ಕೇಂದ್ರಗಳು-ಘಟಕಗಳನ್ನು ಹೆಚ್ಚಿಸಲು ಯತ್ನಿಸುತ್ತಿದೆ. ಡೀಸೆಲ್ ಮೇಲೆ ಅವಲಂಬಿತವಾಗಿ ಕಾರ್ಯನಿರ್ವಹಿಸುತ್ತಿದ್ದ ಪವರ್ ಬ್ಯಾಟರಿಗಳನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ, ಹೊಸ ತಂತ್ರಜ್ಞಾನದ ಬ್ಯಾಟರಿಗಳನ್ನು ಅಳವಡಿಸಿ, ಮಲ್ಟಿಪಲ್ ಬ್ಯಾಂಡ್ ಆ್ಯಂಟೆನಾಗಳನ್ನು ಸ್ಥಾಪಿಸಲು ಏರ್‌ಟೆಲ್ ಯೋಜಿಸುತ್ತಿದೆ. ಮುಂದಿನ 3 ವರ್ಷಗಳ ಒಳಗೆ ಶೇ.70ರಷ್ಟು ಕಾರ್ಬನ್ ಶೀಟ್ ಆಧಾರಿತ ದಾಖಲೀಕರಣವನ್ನು ದೂರಮಾಡಬೇಕೆಂದು ಅದು ಚಿಂತಿಸುತ್ತಿದೆ.

ಗೋಪಾಲ್ ಹೇಳುವಂತೆ ಏರ್‌ಟೆಲ್ ಸ್ಮಾರ್ಟ್ ಹಾಗೂ ಡೈನಮಿಕ್ ಜಾಲ ಹೊಂದಿದ್ದು ಈ ಯೋಜನೆಯನ್ನು ಯಶಸ್ವಿಯಾಗಿ ನಿರ್ವಹಿಸುವ ಆತ್ಮವಿಶ್ವಾಸ ಹೊಂದಿದೆ. ಜೊತೆಗೆ ನೆಟ್‌ವರ್ಕ್‌ನಲ್ಲೂ ಮಹತ್ತರ ಅಭಿವೃದ್ಧಿ ಹಾಗೂ ವಾಯ್ಸ್ ಮತ್ತು ಡಾಟಾ ಸೇವೆಗಳಲ್ಲಿ ದೇಶಾದ್ಯಂತ ಗುಣಮಟ್ಟದ ಸೇವೆಯನ್ನು ಒದಗಿಸುತ್ತಿದೆ. ಮುಖ್ಯವಾಗಿ ಲೀಪ್ ಪ್ಲಾನ್ ಯೋಜನೆಯನ್ನು ಗ್ರಾಹಕರು ತಮ್ಮ ಸ್ಥಳದಲ್ಲಿ ಇದ್ದುಕೊಂಡೇ ಗಳಿಸಬಹುದು. ಇದು ನಮ್ಮ ಗ್ರಾಹಕರ ವಿಶ್ವಾಸಾರ್ಹತೆ ಮತ್ತು ಅವರೊಂದಿಗಿನ ವ್ಯವಹಾರದ ಪಾರದರ್ಶಕತೆಯನ್ನು ಕಾಯ್ದುಕೊಳ್ಳುತ್ತದೆ ಎನ್ನುವುದು ಗೋಪಾಲ್ ಅಭಿಮತ.

ಯುವರ್ ಸ್ಟೋರಿ ನಿಲುವು

ಈ ವರ್ಷದ ಪ್ರಾರಂಭದಲ್ಲೇ ಗ್ರಾಹಕರ ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳುವತ್ತ ಹೆಜ್ಜೆ ಇಟ್ಟ ಏರ್‌ಟೆಲ್, ಏರ್‌ಟೆಲ್ ಜೀರೋ ಅನ್ನುವ ಸೇವೆ ಪ್ರಾರಂಭಿಸಿತು. ದಿ ಪ್ರಾಜೆಕ್ಟ್ ಲೀಪ್ ಪ್ರತಿಯೊಬ್ಬರಿಗೂ ಏನಾದರೂ ಅನ್ನುವ ಗುರಿ ಹೊಂದಿದೆ. ವ್ಯಕ್ತಿಗಳಿಂದ ಹಿಡಿದು ಸಾಮಾನ್ಯ ಸಣ್ಣ ಹಾಗೂ ಮಧ್ಯಮ ಪ್ರಮಾಣದ ವ್ಯವಹಾರಸ್ಥರಿಗೂ ಅನುಕೂಲ ಕಲ್ಪಿಸಬೇಕು ಎಂಬುದು ಇದರ ಯೋಜನೆ.

ಏರ್‌ಟೆಲ್ ಸದ್ಯ ಈ ಕ್ಷೇತ್ರದಲ್ಲಿ ರಿಲಯನ್ಸ್ ಜಿಯೋ ಜೊತೆ ತೀವ್ರ ಸ್ಪರ್ಧೆಯಲ್ಲಿದೆ. ಅತ್ಯುತ್ತಮ ಬ್ರಾಡ್ ಬ್ಯಾಂಡ್ ನೆಟ್‌ವರ್ಕ್, ಕೈಗೆಟುಕುವ ದರದಲ್ಲಿ ಸ್ಮಾರ್ಟ್ ಫೋನ್ ಮತ್ತು ಶ್ರೀಮಂತ ಸೌಕರ್ಯ ಹಾಗೂ ಅಪ್ಲಿಕೇಶನ್‌ಗಳು ಏರ್‌ಟೆಲ್‌ನ ಮುಂದಿನ ಯೋಜನೆಗಳು. ರಿಲಯನ್ಸ್ ಜಿಯೋ ಸಹ ಡಿಜಿಟಲ್ ಪೇಮೆಂಟ್ ವ್ಯವಹಾರ, ಡಿಜಿಟಲ್ ಹೆಲ್ತ್ ಕೇರ್, ಡಿಜಿಟಲ್ ಶಿಕ್ಷಣ ಹಾಗೂ ಕ್ಲೌಡ್ ಸೇವೆಗಳನ್ನು ಸಣ್ಣ ಹಾಗೂ ಮಧ್ಯಮ ಸ್ಟಾರ್ಟ್ ಅಪ್‌ಗಳಿಗೆ ಒದಗಿಸುವತ್ತ ಕಾರ್ಯತತ್ಪರವಾಗಿದೆ.

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ 5,50,000 ಕಿಮೀ ವ್ಯಾಪ್ತಿಯನ್ನು ಸುಮಾರು 1,60,000 ಕೇಂದ್ರಗಳ ನಿಯೋಜನೆ ಮೂಲಕ ಕಾರ್ಯಾಚರಣೆ ನಡೆಸುವುದು. ಈ ಮೂಲಕ ಉತ್ತಮ ಗುಣಮಟ್ಟದ ವಾಯ್ಸ್ ಹಾಗೂ ಡಾಟಾ ಸೇವೆಗಳನ್ನು ಒದಗಿಸುವುದು ಅಷ್ಟು ಸುಲಭದ ಸಂಗತಿಯೇನಲ್ಲ. ಏರ್‌ಟೆಲ್ ತನ್ನ ನಿರೀಕ್ಷಿತ ಗುರಿಯನ್ನು ಆದಷ್ಟು ಬೇಗ ತಲುಪತ್ತದೆ ಎಂಬ ವಿಶ್ವಾಸ ಯುವರ್‌ಸ್ಟೋರಿಯದ್ದು.

ಲೇಖಕರು: ಹರ್ಷಿತ್​​ ಮಲ್ಯ

ಅನುವಾದಕರು: ವಿಶ್ವಾಸ್​​​

Add to
Shares
1
Comments
Share This
Add to
Shares
1
Comments
Share
Report an issue
Authors

Related Tags