ಆವೃತ್ತಿಗಳು
Kannada

"ರೂಪ" ಸುಟ್ಟು ಹೋದರೂ ಛಲ ಬಿಡದ ಹೋರಾಟಗಾರ್ತಿ

ಟೀಮ್​ ವೈ.ಎಸ್​. ಕನ್ನಡ

YourStory Kannada
26th Jan 2016
Add to
Shares
3
Comments
Share This
Add to
Shares
3
Comments
Share

ಆ್ಯಸಿಡ್ ದಾಳಿ ಅಮಾಯಕ ಹೆಣ್ಣು ಮಕ್ಕಳ ಬಾಳನ್ನು ಹಾಳು ಮಾಡಿದೆ. ದಾಳಿಗೊಳಗಾದ ಹುಡುಗಿಯೊಂದೆ ಅಲ್ಲ ಇಡೀ ಕುಟುಂಬವನ್ನು ಸಂಕಷ್ಟಕ್ಕೆ ನೂಕಿದೆ. ಹಿಂದಿನ ವರ್ಷಗಳಿಗೆ ಹೋಲಿಸಿದ್ರೆ ಸುಪ್ರೀಂ ಕೋರ್ಟ್ ಕಠಿಣ ಕಾನೂನಿನಿಂದಾಗಿ ಈ ದಾಳಿಗಳ ಸಂಖ್ಯೆ ಕಡಿಮೆಯಾಗಿವೆ. ಸುಪ್ರೀಂ ಕೋರ್ಟ್ ಆರಂಭಿಕ ಹೆಜ್ಜೆಯಾಗಿ ಆ್ಯಸಿಡ್ ಮಾರಾಟವನ್ನು ನಿಷೇಧಿಸಿದೆ. ಹಾಗಿದ್ದು ಅಲ್ಲಲ್ಲಿ ಆ್ಯಸಿಡ್ ದಾಳಿ ಆಗ್ತಾನೆ ಇದೆ.

ಆ್ಯಸಿಡ್ ದಾಳಿಗೊಳಗಾದ ಯುವತಿಯ ಕಥೆಯನ್ನು ನಿಮ್ಮ ಮುಂದಿಡ್ತಿದ್ದೇವೆ. ಆ್ಯಸಿಡ್ ದಾಳಿಯ ನಂತರ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಅಭಿಲಾಷೆಯೊಂದಿಗೆ ತಮ್ಮ ಕನಸುಗಳಿಗೆ ಆಯಾಮ ನೀಡಲು ನಿರಂತರ ಹೋರಾಟ ಮಾಡುತ್ತಿರುವವರು ರೂಪಾ. ಬೇರೆ ಯಾರೂ ಅಲ್ಲ ಮಲತಾಯಿ ರೂಪಾ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಳು. 2008ರಲ್ಲಿ ರೂಪಾ ಮೇಲೆ ಅವರ ಮಲತಾಯಿ ನಿರ್ದಯವಾಗಿ ಆ್ಯಸಿಡ್ ದಾಳಿ ನಡೆಸಿದ್ದಳು. ಶಾಶ್ವತವಾಗಿ ರೂಪಾರನ್ನು ಈ ಪ್ರಪಂಚದಿಂದ ಕಳುಹಿಸುವುದು ಮಲತಾಯಿಯ ಉದ್ದೇಶವಾಗಿತ್ತು. ಆದರೆ ಮಲತಾಯಿಯ ಯೋಜನೆ ಸಫಲವಾಗಲಿಲ್ಲ. 22 ವರ್ಷದ ರೂಪಾ ಸತತ 7 ವರ್ಷಗಳ ಕಾಲ ಸುಟ್ಟ ನೋವಿನಲ್ಲಿ ಬೆಂದು ಹೋದ್ರು. ಆದ್ರೆ ಈಗಿನ ರೂಪಾ ಪೀಡಿತೆಯಲ್ಲ ಹೋರಾಟಗಾರ್ತಿ..!

image


ರೂಪಾ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ಜನಿಸಿದ್ರು. ಚಿಕ್ಕವರಿರುವಾಗಲೇ ತಾಯಿಯನ್ನು ಕಳೆದುಕೊಂಡ ರೂಪಾರಿಗೆ ಮಲತಾಯಿ ರಾಕ್ಷಸಿಯಾದಲು. ಒಂದು ದಿನ ಮಲತಾಯಿ ರೂಪಾರನ್ನು ಕೊಲೆಗೈಯ್ಯುವ ನಿರ್ಧಾರಕ್ಕೆ ಬಂದರು. ನಿರ್ಧಯವಾಗಿ ರೂಪಾ ಮೇಲೆ ಆಸಿಡ್ ದಾಳಿ ನಡೆಸಿದರು. ಆ್ಯಸಿಡ್ ದಾಳಿ ನಂತರ ರೂಪಾ ಜೀವನ ಸಂಪೂರ್ಣವಾಗಿ ಬದಲಾಯ್ತು. ಅವರು ಚಿಕ್ಕಪ್ಪನ ಮನೆ ಫರಿದಾಬಾದ್ ನಲ್ಲಿ ವಾಸಿಸಲು ಆರಂಭಿಸಿದರು. ಆಡುವ ವಯಸ್ಸಿನಲ್ಲಿ ನೋವು ಅನುಭವಿಸುತ್ತ ಕತ್ತಲೆಯಲ್ಲಿ ಕಳೆದು ಹೋಯ್ತು ಅವರ ಬಾಲ್ಯ. ಈ ಆಘಾತದಿಂದ ಚೇತರಿಸಿಕೊಳ್ಳಲು ಸಾಕಷ್ಟು ಸಮಯ ಬೇಕಾಯ್ತು. ಶಸ್ತ್ರಚಿಕಿತ್ಸೆಗೆ ಒಳಗಾದ ರೂಪಾ ಅವರ ಖರ್ಚನ್ನು ಚಿಕ್ಕಪ್ಪನೆ ನೋಡಿಕೊಂಡರು. ಆ್ಯಸಿಡ್ ದಾಳಿ ಪೀಡಿತರ ಹಾಗೆ ಅವರ ಜೀವನ ಸಾಗುತ್ತಿತ್ತು. ಆದ್ರೆ ಅದೊಂದು ದಿನ ಅವರ ಜೀವನಕ್ಕೊಂದು ತಿರುವು ಸಿಗ್ತು. ರೂಪಾ ಅವರಿಗೆ ಸ್ಟಾಪ್ ಆ್ಯಸಿಡ್ ಅಟ್ಯಾಕ್ ಆಂದೋಲನದ ಬಗ್ಗೆ ತಿಳಿಯಿತು. ಸ್ಟಾಪ್ ಆ್ಯಸಿಡ್ ಅಟ್ಯಾಕ್ ಕ್ಯಾಂಪೇನ್ ನಲ್ಲಿ ಒಂದಾದ ರೂಪಾ ಅವರ ಜೀವನದಲ್ಲಿ ಬದಲಾವಣೆ ಕಾಣಿಸಿಕೊಳ್ಳಲಾರಂಭಿಸಿತು. ಉತ್ಸಾಹ ಕಾಣಿಸಿಕೊಳ್ಳಲಾರಂಭಿಸಿತು. ಅವರ ಕನಸುಗಳಿಗೆ ಮತ್ತೆ ಜೀವ ಬಂತು. ಕ್ಯಾಂಪೇನ್ ನಲ್ಲಿ ರೂಪಾಗೆ ಕೌನ್ಸಲಿಂಗ್ ಮಾಡಲಾಯ್ತು. ಕೆಲ ತರಬೇತಿ ಕಾರ್ಯಕ್ರಮಗಳಲ್ಲಿ ರೂಪಾ ಪಾಲ್ಗೊಂಡ ನಂತರ ಹೊಸ ರೂಪಾರ ಜನ್ಮವಾಯ್ತು. ರೂಪಾ ಈಗ ಪೀಡಿತೆಯಲ್ಲ. ಹೋರಾಟಗಾರ್ತಿ. ಸಮಯ ಸರಿದಂತೆ ರೂಪಾರ ಆತ್ಮವಿಶ್ವಾಸ ಹೆಚ್ಚಾಯ್ತು. ಕ್ಯಾಂಪೇನ್ ನಲ್ಲಿ ರೂಪಾ ಒಳಗಡಗಿದ್ದ ಪ್ರತಿಭೆ ಹೊರ ಬಂತು. ರೂಪಾ ಸ್ವಾವಲಂಭಿಯಾಗುವ ಕನಸು ಕಂಡಿದ್ದರು. ಇದಕ್ಕಾಗಿ ಹಗಲಿರುಳು ಶ್ರಮಿಸಿದರು. ಸ್ವಾವಲಂಭಿಯಾಗಲು ಅವರು ಹೊಲಿಗೆ ತರಬೇತಿ ಪಡೆದರು. ಈ ಮೂಲಕ ಅವರಲ್ಲಡಗಿದ್ದ ಡಿಸೈನ್​ ಹೊರಬಂತು. ಹೊಲಿಗೆ ತರಬೇತಿ ಪಡೆಯುತ್ತಿದ್ದ ವೇಳೆ ಸ್ಟಾಪ್ ಆ್ಯಸಿಡ್ ಅಟ್ಯಾಕ್ ಕ್ಯಾಂಪೇನ್ ನಿಂದ ಡಿಸೈನರ್ ಆಗುವಂತೆ ಪ್ರೋತ್ಸಾಹ ಸಿಕ್ಕಿತು. ತರಬೇತಿ ನಂತರ ತಮ್ಮ ಡಿಸೈನ್ ಗಳನ್ನು ರೂಪಾ ಸಿದ್ಧಪಡಿಸಿದ್ರು. ಅದರ ಫೋಟೋ ಶೂಟ್ ಕೂಡ ನಡೆಯಿತು.ರೂಪಾರ ಹೋರಾಟ ಹೊಸ ಬಣ್ಣ ಪಡೆಯಲಾರಂಭಿಸಿತು. ಅವರ ಮೊದಲ ಡಿಸೈನ್ ಜನರಿಗೆ ಇಷ್ಟವಾಯ್ತು. ತಮ್ಮ ಕಲ್ಪನೆಗೊಂದು ರೂಪಕೊಟ್ಟು ತಮ್ಮದೆ ಫ್ಯಾಷನ್ ಬ್ರ್ಯಾಂಡ್ ಆರಂಭಿಸಿದರು. ರೂಪಾ ಕ್ರಿಯೇಷನ್ ಹೆಸರಿನಲ್ಲಿ ರೂಪಾ ವಿನ್ಯಾಸಗೊಳಿಸಿದ ಬಟ್ಟೆಗಳು ಮಾರುಕಟ್ಟೆಗೆ ಲಗ್ಗೆ ಇಡ್ತಾ ಇವೆ. ರೂಪಾ ತಮ್ಮ ಬಟ್ಟೆಗಳನ್ನು Shiroj Hangout ನಲ್ಲಿ ಮಾರಾಟ ಮಾಡುತ್ತಿದ್ದಾರೆ. Shiroj Hangout ನ್ನು ಆ್ಯಸಿಡ್ ದಾಳಿಗೊಳಗಾದ ಐದು ಮಂದಿ ನಡೆಸುತ್ತಿದ್ದಾರೆ. ರೂಪಾ ಚಿಲ್ಲರೆ ವ್ಯಾಪಾರಿಗಳ ಜೊತೆ ವ್ಯಾಪಾರ ನಡೆಸುತ್ತಿಲ್ಲ. ಇ-ಕಾಮರ್ಸ್ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡಲು ತಯಾರಿ ನಡೆಸುತ್ತಿದ್ದಾರೆ. ಸ್ಟಾಪ್ ಆ್ಯಸಿಡ್ ಅಟ್ಯಾಕ್ ಆನ್​​ಲೈನ್ ವ್ಯಾಪಾರ ಶುರುಮಾಡಲು ಸ್ವಲ್ಪ ಹಣ ಸಂಗ್ರಹಿಸಿದ್ದಾರೆ. Shiroj Hangout ನ ಸಣ್ಣ ಅಂಗಡಿ ಶುರುಮಾಡಿದ್ದಾರೆ. ಇದರ ಮೂಲಕ ಅವರು ತಿಂಗಳಿಗೆ ಸರಿಸುಮಾರು 20 ಸಾವಿರ ರೂಪಾಯಿ ವಹಿವಾಟು ನಡೆಸುತ್ತಾರೆ. ಭವಿಷ್ಯದ ಬಗ್ಗೆ ರೂಪಾ ಹೀಗೆ ಹೇಳ್ತಾರೆ.

`ನನ್ನ ಆನ್​ಲೈನ್ ಪೋರ್ಟಲ್ ಮೂಲಕ ಜನರು ನಾನು ಸಿದ್ದಪಡಿಸಿದ ಬಟ್ಟೆಯನ್ನು ಖರೀದಿಸಲಿ ಹಾಗೂ ನನ್ನ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಲಿ. ದೇಶದ ಜನರೆಲ್ಲ ನನ್ನ ಬ್ರಾಂಡ್ ಬಗ್ಗೆ ತಿಳಿಯಲಿ ಎಂದು ನಾನು ಬಯಸುತ್ತೇನೆ. ‘

ರೂಪಾ ಹೋರಾಟದ ಪಯಣ ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ಅವರ ಗುರಿ ಸಾಕಷ್ಟು ದೂರವಿದೆ. ಈ ಬಗ್ಗೆ ರೂಪಾ ಹೀಗೆ ಹೇಳ್ತಾರೆ.

`ನಾನು ಕೌಶಲ್ಯಾಭಿವೃದ್ಧಿ ಶಾಲೆ ತೆರೆಯಲು ಬಯಸುತ್ತೇನೆ. ಇದರ ಮೂಲಕ ನನ್ನ ಹಾಗೇ ಇರುವ ಹುಡುಗಿಯರು ಸ್ವಾವಲಂಬಿಯಾಗಲು ತರಭೇತಿ ಪಡೆಯಲಿ ಹಾಗೂ ಆರ್ಥಿಕ ಸ್ವಾತಂತ್ರ್ಯದ ಜೊತೆಗೆ ಸಮಾಜದಲ್ಲಿ ಆತ್ಮಾಭಿಮಾನದಿಂದ ಬದುಕಲಿ.’

ರೂಪಾ ತಮ್ಮ ಕೆಟ್ಟ ದಿನಗಳನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ. ಅವರ ಚಿಕ್ಕಪ್ಪ ತಕ್ಷಣ ಚಿಕಿತ್ಸೆ ನೀಡಿ, ಬೆಂಬಲ ನೀಡದಿದ್ದಲ್ಲಿ ಅವರು ಈ ಹಂತಕ್ಕೆ ತಲುಪುತ್ತಿರಲಿಲ್ಲ. ನಿಮ್ಮೊಳಗೆ ಇಚ್ಛಾಶಕ್ತಿ ಇದ್ದು, ಏನನ್ನಾದರೂ ಮಾಡಲು ನಿರ್ಧರಿಸಿದರೆ ಯಾರೂ ನಿಮ್ಮ ಕನಸು ನನಸಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಯಾವುದೇ ಪರಿಸ್ಥಿತಿ ಇರಲಿ, ಕಷ್ಟ ಬರಲಿ, ಧೈರ್ಯ,ಸಂಕಲ್ಪ,ಪ್ರಾಮಾಣಿಕ ಪ್ರಯತ್ನ ಅತ್ಯಗತ್ಯ. ಇದಕ್ಕೆ ರೂಪಾ ಉತ್ತಮ ಉದಾಹರಣೆ.

ಲೇಖಕ: ಆಮಿರ್​ ಅನ್ಸಾರಿ

ಅನುವಾದಕರು: ರೂಪಾ ಹೆಗಡೆ

Add to
Shares
3
Comments
Share This
Add to
Shares
3
Comments
Share
Report an issue
Authors

Related Tags