ಆವೃತ್ತಿಗಳು
Kannada

ಮಕ್ಕಳಿಗಾಗಿ ನಗರದಲ್ಲಿ ಮೈಂಡ್ ಗೇಮ್ಸ್ ಅರಮನೆ

ಆರಾಧ್ಯ

4th Mar 2016
Add to
Shares
6
Comments
Share This
Add to
Shares
6
Comments
Share

ವೀಕ್ಎಂಡ್ ನಲ್ಲಿ ಮಕ್ಕಳಿಗೆ ಮನರಂಜನೆ ನೀಡಲು ಮಾಲ್​ಗಳು, ಪಾರ್ಕ್​ಗಳಿಗೆ ಹೋಗಿ ಬೋರ್ ಆಗಿದ್ಯಾ.. ಕಂಪ್ಯೂಟರ್, ಮೊಬೈಲ್ ನಲ್ಲಿ ಗೇಮ್ ಆಡಿದ್ರು, ಮಕ್ಕಳು ಎಂಜಾಯ್ ಮಾಡ್ತಾ ಇಲ್ವಾ.. ಹಾಗಾದ್ರೆ ಇಲ್ಲಿಗೆ ಒಮ್ಮೆ ನಿಮ್ಮ ಮಕ್ಕಳನ್ನ ಕಡೆದುಕೊಂಡು ಹೋಗಿ, ಮಕ್ಕಳು ಎಂಜಾಯ್ ಮಾಡೋದ್ರ ಜೊತೆಗೆ ಹೊಸ ಹೊಸ ವಿಷಯ ಕಲಿಯುತ್ತಾರೆ.. ಆದ್ಯಾವುದಾಪ್ಪ ಜಾಗ ಅಂತೀರಾ ! ಮಕ್ಕಳಿಗೆ ಅಂತನೇ ಸಿಲಿಕಾನ್ ಸಿಟಿಯಲ್ಲಿ ನೂತನವಾಗಿ ಪ್ರಾರಂಭವಾಗಿರೋ ಗಿರಿಯಾಸ್ ಚಿಲ್ಡ್ರನ್ ಎಕ್ಸ್ ಪ್ಲೋರಿಯಂ …

image


ಬೇರೆ ಬೇರೆ ಮಾಲ್ ಗಳಲ್ಲಿ ಇರುವ ಮಕ್ಕಳ ಆಟಗಳಿಗಿಂತ ಈ ಎಕ್ಸ್ ಪೋರಿಯಂ ಬಹಳ ಡಿಫ್ರೆಂಟ್ ಆಗಿದೆ.. ಇಲ್ಲಿ ಮಕ್ಕಳಲ್ಲಿ ಗುಪ್ತಗಾಮಿಯಾಗಿರುವ ಸೃಜನಶೀಲತೆ, ಮೆದುಳಿಗೆ ಕೆಲಸ ಕೊಡುವುದು ಹಾಗೂ ಮೊಗದಲ್ಲಿ ಮಂದಹಾಸ ಹೊರ ಹೊಮ್ಮುವಂತಹ ಮ್ಯಾಜಿಕ್ ಇದೆ. ಗಿರಿಯಾಸ್ ಸಂಸ್ಥೆಯು ದೇಶದಲ್ಲಿಯೇ ಮೊದಲ ಬಾರಿಗೆ ಗಿರಿಯಾಸ್ ಚಿಲ್ಡ್ರನ್ಸ್ ಎಕ್ಸ್​ಪ್ಲೋ ರಿಯಂ ಎಂಬ ಮ್ಯೂಸಿಯಂವೊಂದನ್ನು ಆರಂಭಿಸಿದೆ.

ನಗರ ದೊಮ್ಮಲೂರು ನಲ್ಲಿ ಕಳೆದ ಒಂಬತ್ತು ತಿಂಗಳ ಹಿಂದೆ ಈ ಗಿರಿಯಾಸ್ ಚಿಲ್ಡ್ರನ್ಸ್ ಎಕ್ಸ್ ಪೋರಿಯಂಗೆ ಚಾಲನೆ ಸಿಕ್ಕಿದೆ. ಮಕ್ಕಳು ಆಡುತ್ತಲೇ ಕಲಿಯುವ ಮಾದರಿಯಲ್ಲಿರುವ ಮ್ಯೂಸಿಯಂ, ಮಕ್ಕಳ ಕ್ರಿಯಾಶೀಲತೆಯನ್ನು ವೃದ್ಧಿಸುವಲ್ಲಿ ಸಹಕಾರಿಯಾಗಲಿದೆ. ಎಕ್ಸ್ ಪೋರಿಯಂನಲ್ಲಿ ಫೀನ್ ಸ್ಕ್ರೀನ್, ಮಾರುಕಟ್ಟೆಯ ವ್ಯವಹಾರ ಸೇರಿದಂತೆ ಮಕ್ಕಳ ಬೌದ್ಧಿಕ ಶಕ್ತಿ ಚುರುಕುಗೊಳಿಸುವಂತಹ ಸುಮಾರು 80 ಆಟಗಳು ಇವೆ.

image


ಮ್ಯೂಸಿಯಂನಲ್ಲಿ ಯಾವೆಲ್ಲ ಆಟಗಳಿವೆ..?

ಅಮೆರಿಕದ ಚಿಕಾಗೋದಲ್ಲಿನ ರೆಡ್​ಬಾಕ್ಸ್ ವರ್ಕ್ ಶಾಪ್ ನಿರ್ದೇಶಕ ಸಿಮೊನ್ ಲಾಷ್ಪೋರ್ಡ್ ಅವರು ಈ ಮ್ಯೂಸಿಯಂ ಅನ್ನು ವಿನ್ಯಾಸಗೊಳಿಸಿದ್ದಾರೆ. ಆಟದ ಮೂಲಕ ಮಕ್ಕಳಿಗೆ ಅನ್ವೇಷಣೆ, ಜ್ಞಾನ ಮತ್ತು ಕಲಿಕೆಯ ಹಸಿವು ಹೆಚ್ಚಿಸಿ ಹೊಸ ಅನುಭವ ನೀಡಲಿದೆ. 25 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಆರು ಗ್ಯಾಲರಿಗಳಾಗಿ ವಿಂಗಡಿಸಲಾಗಿದೆ. ಎಕ್ಸ್​ಪ್ಲೋರ್, ಸ್ಲಾಶ್, ಬಿಲ್ಡ್, ಇನ್ವೆಂಟ್, ಲೈವ್ ಮತ್ತು ಕ್ರಿಯೆಟ್ ಹೆಸರಿನಲ್ಲಿ ಗ್ಯಾಲರಿಗಳಿವೆ.

ಶುಲ್ಕ ಹೇಗಿದೆ..?

ವಾರಾಂತ್ಯದಲ್ಲಿ ಮಕ್ಕಳಿಗೆ 750 ರೂ. ಮತ್ತು ಪ್ರೌಢ ವಯಸ್ಕರಿಗೆ 250 ರೂ. ಶುಲ್ಕ ನಿಗದಿ ಮಾಡಲಾಗಿದೆ. ವಾರಾಂತ್ಯ ಹೊರತು ಪಡಿಸಿ ಇನ್ನುಳಿದ ದಿನಗಳಲ್ಲಿ ಮಕ್ಕಳಿಗೆ 600 ರೂ. ಮತ್ತು ಪ್ರೌಢ ವಯಸ್ಕರಿಗೆ 200 ರೂ. ಶುಲ್ಕ ನಿಗದಿಗೊಳಿಸಲಾಗಿದೆ.

image


ಇನ್ನು ಈ ಬಗ್ಗೆ ಮಾತಾಡಿದ ಗಿರಿಯಾಸ್ ಚಿಲ್ಡ್ರನ್ಸ್ ಎಕ್ಸ್ ಪೋರಿಯಂಯಂ ಸ್ಥಾಪಕ ಮನಿಶಾ ಗಿರಿಯಾ ಮಕ್ಕಳಿಗೆ ಹೊಸತು ಏನ್ನಾದ್ರು ನೀಡಬೇಕು ಎಂದು ಯೋಚಿಸಿ.. ಈ ಬಗ್ಗೆ ಆನ್ಲೈನ್ನಲ್ಲಿ ಹುಡುಕಾಟ ನಡೆಸಿದಾಗ.. ಅಮೆರಿಕದಲ್ಲಿ ಮಕ್ಕಳ ಮ್ಯೂಸಿಯಂ ಇರುವ ಮಾಹಿತಿ ದೊರೆಯಿತು. ಒಂದು ಬಾರಿ ನನ್ನ ಮಕ್ಕಳನ್ನು ಅಮೆರಿಕಾದ ಮ್ಯೂಸಿಯಂಗೆ ಕರೆದೊಯ್ದೆ. ಅಲ್ಲಿ ಭೇಟಿ ನೀಡಿದ ಸಂದರ್ಭದಲ್ಲಿ ಮಕ್ಕಳಲ್ಲಿ ಹೊಸ ಚೈತನ್ಯ ಬಂದಂತಾಗಿತ್ತು. ಅವರ ಮುಖದಲ್ಲಿ ಸಂತೋಷ ಹೊಮ್ಮುತ್ತಿತ್ತು. ಮಕ್ಕಳ ಮುಖದಲ್ಲಿ ಕಂಡ ಈ ಹರ್ಷವೇ ನನಗೆ ಚಿಲ್ಡ್ರನ್ಸ್ ಎಕ್ಸ್ ಪೋರಿಯಂ ಆರಂಭಿಸಲು ಪ್ರೇರಣೆಯಾಯಿತು ಎಂದು ಹೇಳುತ್ತಾರೆ..

ಅಮೆರಿಕದಲ್ಲಿ ಮಾತ್ರ ಚಿಲ್ಡ್ರನ್ಸ್ ಎಕ್ಸ್ ಪೋರಿಯಂ ಇದ್ದು, ಅಲ್ಲಿ ಸುಮಾರು 300ಕ್ಕೂ ಹೆಚ್ಚು ಮಕ್ಕಳ ಮ್ಯೂಸಿಯಂ ಇದೆ.. ಅದೆ ಮಾದರಿಯಲ್ಲಿ ಈ ಮ್ಯೂಸಿಯಂ ಅನ್ನು ಪ್ರಾರಂಭಿಸಲಾಗಿದೆ. ಎರಡು ವರ್ಷಗಳ ಶ್ರಮದ ಪ್ರತಿಫಲವಾಗಿ ಗಿರಿಯಾಸ್ ಚಿಲ್ಡ್ರನ್ಸ್ ಎಕ್ಸ್ ಪೋರಿಯಂ ಹುಟ್ಟಿದೆ. ಇಂತಹ ಹೊಸ ಪರಿಕಲ್ಪನೆಯೊಂದಿಗೆ ಆರಂಭಗೊಂಡಿರುವ ದೇಶದ ಮೊಟ್ಟ ಮೊದಲ ಮ್ಯೂಸಿಯಂ ಎಂಬುದು ಹೆಮ್ಮೆಯ ವಿಷಯ.. 

Add to
Shares
6
Comments
Share This
Add to
Shares
6
Comments
Share
Report an issue
Authors

Related Tags