ಆವೃತ್ತಿಗಳು
Kannada

ಕಾಲೇಜ್​​ನಲ್ಲಿ ಮಾರ್ಕ್ಸ್​​ ಕಡಿಮೆ ಬಂತು- ಹೊಸ ದಾರಿ ಹುಡುಕಲು ಸ್ಫೂರ್ತಿಯಾಯಿತು..!

ಟೀಮ್​​ ವೈ.ಎಸ್​​.

10th Nov 2015
Add to
Shares
3
Comments
Share This
Add to
Shares
3
Comments
Share

ಡಿಸೆಂಬರ್ 2014ರಲ್ಲಿ ಆದರ್ಶ ಚೌಧರಿ ಹಾಗೂ ಹರ್ಷ ಕಂಡೋಯಿ ತಮ್ಮ ಕ್ಯಾಟ್ ಪರೀಕ್ಷೆಯ ಫಲಿತಾಂಶ ಪಡೆದುಕೊಂಡ ದಿನವೇ ಸಂತಾ ಡೆಲಿವರ್ಸ್ ಸಂಸ್ಥೆಯ ಕಾರ್ಯಯೋಜನೆಯೂ ರೂಪುಗೊಂಡಿತ್ತು. ಆದರ್ಶ ತಮ್ಮ ನಿರೀಕ್ಷೆಯ ಫಲಿತಾಂಶ ಗಳಿಸಿಕೊಳ್ಳದ ಕಾರಣ ಬೇಸರಗೊಂಡಿದ್ದರು. ಆದರೂ ಇದರ ಜೊತೆಯಲ್ಲಿಯೇ ಸಂತಾ ಡೆಲಿವರ್ಸ್ ಸಂಸ್ಥೆಯ ಪ್ರಗತಿ ಹಾಗೂ ಅಭಿವೃದ್ಧಿಗೆ ಹೆಚ್ಚಿನ ಗಮನಹರಿಸುವ ತೀರ್ಮಾನ ಕೈಗೊಂಡಿದ್ದರು.

ಸಂತಾ ಡೆಲಿವರ್ಸ್​ನ ಸಹ ಸಂಸ್ಥಾಪಕರು ಆದರ್ಶ ಚೌಧರಿ ಹಾಗೂ ಹರ್ಷ ಕೊಂಡಾಯಿ

ಅದೇ ದಿನ ಸಂಜೆ 4 ಗಂಟೆಗೆ ಆದರ್ಶ ಹಾಗೂ ಹರ್ಷ ವಾರ್ತಾ ಪತ್ರಿಕೆ ಕಚೇರಿಗೆ ತೆರಳಿ ತಮ್ಮ ಸಂತಾ ಡೆಲಿವರ್ಸ್​ನ ಕರಪತ್ರವನ್ನು ಪ್ರತೀ ಪತ್ರಿಕೆಗಳಿಗೆ ಸೇರಿಸಿದ್ದರು. ಮಾರನೆಯ ಮುಂಜಾನೆ 7 ಗಂಟೆಯವರೆಗೆ ಆ ಜೋಡಿ ಪತ್ರಿಕಾ ಕಚೇರಿಯಲ್ಲಿ ಕುಳಿತು ತಮ್ಮ ಕರಪತ್ರಗಳನ್ನು ಪತ್ರಿಕೆಗಳೊಂದಿಗೆ ಸೇರಿಸಿ ಹಂಚಲು ಅನುವಾಗಿದ್ದರು. ಹೀಗೆ ಶ್ರಮವಹಿಸಿ ತಮ್ಮ ಸಂಸ್ಥೆಯ ಜಾಹಿರಾತಿಗೆ ಮುಂದಾದ ಈ ಜೋಡಿಯ ಶ್ರದ್ಧೆಗೆ ಯೋಗ್ಯ ಫಲಿತಾಂಶವೇ ದೊರಕಿತ್ತು. ಅದಾದ ಮೂರು ದಿನಗಳಲ್ಲೇ ಸಂತಾ ಡೆಲಿವರ್ಸ್ 20 ಆರ್ಡರ್​​ಗಳನ್ನು ನಿರ್ವಹಿಸಿ ಸುಮಾರು 10 ಸಾವಿರ ರೂಪಾಯಿ ಗಳಿಸಿಕೊಂಡಿತ್ತು.

image


ಸಂತಾ ಡೆಲಿವರ್ಸ್ ಅನ್ನುವ ಹೆಸರೇ ಏಕೆ?

ತಡರಾತ್ರಿಯಲ್ಲಿ ಆಹಾರದ ಪೊಟ್ಟಣಗಳನ್ನು ನೀಡಬರುವ ಸಂತಾಕ್ಲಾಸ್ ಇವರ ಸಂಸ್ಥೆಗೆ ಪ್ರೇರಣೆ. ಕೋಲ್ಕತ್ತಾ ಮೂಲದ ಈ ಫುಡ್​​ಟೆಕ್ ಪ್ರಾರಂಭಿಕ ಸಂಸ್ಥೆ ತಡರಾತ್ರಿಯಲ್ಲಿ ಆಹಾರದ ಉತ್ಪನ್ನಗಳನ್ನು ಡೆಲಿವರಿ ನೀಡುವ ಕಾರ್ಯಾಚರಣೆ ಆರಂಭಿಸಿತು. ಸಂಜೆ 5 ಗಂಟೆಯಿಂದ ನಡುರಾತ್ರಿ 3 ಗಂಟೆಯವರೆಗಿನ ಅವಧಿಯಲ್ಲಿ ಇದು ಆಹಾರದ ಉತ್ಪನ್ನಗಳನ್ನು ಡೆಲಿವರಿ ನೀಡುತ್ತದೆ.

ಸಂಟಾಡೆಲಿವರ್ಸ್.ಕೋ.ಇನ್ ಅನ್ನುವ ಈ ಸಂಸ್ಥೆಯ ಪೋರ್ಟಲ್​​ನಲ್ಲಿ ಅಥವಾ ಆಂಡ್ರಾಯ್ಡ್ ಆ್ಯಪ್​​ನಲ್ಲಿ ಯಾವುದೇ ಗ್ರಾಹಕರು ತಮ್ಮ ಬೇಡಿಕೆಯನ್ನು ಆರ್ಡರ್ ಮಾಡಿದರೇ, ತಡರಾತ್ರಿಯಲ್ಲಿಯೇ ಆಹಾರದ ಉತ್ಪನ್ನಗಳು ಮನೆ ಬಾಗಿಲ ಬಳಿ ಕಾದಿರುತ್ತವೆ. ಈ ಸಂಸ್ಥೆ ಆರಂಭವಾಗಿದ್ದು ಆದರ್ಶ ಹಾಗೂ ಹರ್ಷಾರ ಪೋಷಕರು ಹೂಡಿದ 1 ಲಕ್ಷ ರೂಪಾಯಿ ಮೂಲ ಬಂಡವಾಳದ ಸಹಾಯದಿಂದ. ಸದ್ಯ ಈ ಸಂಸ್ಥೆಯಲ್ಲಿ ಒಟ್ಟು 14 ಸದಸ್ಯರಿದ್ದು, ಮೂವರು ಸಹಭಾಗಿಗಳು, ಐವರು ಡೆವರಿ ಹುಡುಗರು, ಇಬ್ಬರು ಆಹಾರದ ಉತ್ಪನ್ನಗಳನ್ನು ಸಿದ್ಧಪಡಿಸುವ ಬಾಣಸಿಗರು ಹಾಗೂ ಇಬ್ಬರು ಸಹಾಯಕರು ಇವರ ತಂಡದಲ್ಲಿದ್ದಾರೆ.

ತಾವು ಯಾವುದೇ ಹೊರಗುತ್ತಿಗೆಯನ್ನೂ ನೀಡದೇ, ಯಾವ ರೆಸ್ಟೋರೆಂಟ್​​ಗಳ ಜೊತೆಗೂ ಟೈ ಅಪ್ ಆಗದೇ ಮನೆಯಲ್ಲಿಯೇ ತಯಾರಿಸುವ ಆಹಾರದ ತಿನಿಸುಗಳನ್ನು ಡೆಲಿವರಿ ಮಾಡುತ್ತೇವೆ ಅಂತಾರೆ ಆದರ್ಶ.

ಪೂರೈಕೆ ಮಾಡುವ ಆಹಾರದ ಸಾಮಗ್ರಿಗಳ ಆಧಾರದಲ್ಲಿ ಸಂತಾ ಡೆಲಿವರಿ ಸಂಸ್ಥೆಯ ಆದಾಯ ನಿರ್ಧಾರಿತವಾಗುತ್ತಿದೆ. ಪ್ರತಿ ದಿನವೂ 40ರಿಂದ 45 ಆರ್ಡರ್​​ಗಳನ್ನು ಸರಾಸರಿ ಆರ್ಡರ್ ಒಂದಕ್ಕೆ 450 ರೂಪಾಯಿಯಂತೆ ಇದು ಕಾರ್ಯಾಚರಣೆ ನಡೆಸುತ್ತಿದೆ. ತಿಂಗಳಿಗೆ ಸುಮಾರು 1300 ಬೇಡಿಕೆಗಳನ್ನು ಇದು ಹೊಂದುತ್ತಿದೆ. ಪ್ರತೀ ತಿಂಗಳು ಶೇ.20ರಷ್ಟು ಪ್ರಗತಿ ಕಾಣುತ್ತಿರುವ ಸಂಸ್ಥೆ ಸಸ್ಯಾಹಾರ ಹಾಗೂ ಮಾಂಸಾಹಾರದ ಆಹಾರ ಪದಾರ್ಥಗಳನ್ನು ತಯಾರಿಸುವ ಪ್ರತ್ಯೇಕ ಅಡುಗೆ ಮನೆಯನ್ನು ಹೊಂದಿದೆ.

ಸಂಸ್ಥೆಯ ಪ್ರಗತಿ

ಆರಂಭದ ದಿನಗಳಲ್ಲಿ ಸಂತಾ ಡೆಲಿವರ್ಸ್ ಕೇವಲ 5 ಡೆಲಿವರಿಗಳನ್ನು ಮಾತ್ರ ನಿರ್ವಹಿಸುತ್ತಿತ್ತು. ಆಗಿನ ದಿನಗಳಲ್ಲಿ ಡೆಲಿವರಿ ಹುಡುಗರ ಕೊರತೆಯಿಂದಾಗಿ ಆದರ್ಶ ಹಾಗೂ ಹರ್ಷ ಮನೆ ಮನೆಗೆ ತೆರಳಿ ಡೆಲಿವರಿ ನೀಡುತ್ತಿದ್ದರು.

ಹರ್ಷಾ ನಿರಂತರವಾಗಿ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಶ್ರಮವಹಿಸಿದ್ದರ ಫಲವಾಗಿ ಅವರ ಸಂಸ್ಥೆಯ ಬೇಡಿಕೆಯ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿತು. ಮುಖ್ಯವಾಗಿ ಕಾಲೇಜು ವಿದ್ಯಾರ್ಥಿಗಳು ಹಾಗೂ ಆಫೀಸರ್​​ಗಳು ಅವರ ಸಂಸ್ಥೆಯ ಹೊಸ ಗ್ರಾಹಕರಾದರು. ನಿಧಾನವಾಗಿ ಅವರ ಸಂಸ್ಥೆಯ ಸೇವೆಯ ಬೇಡಿಕೆ ಹೆಚ್ಚತೊಡಗಿತು.

ಆರಂಭಿಕ ಹಂತದಿಂದ ಸಂಸ್ಥೆ ಅಭಿವೃದ್ಧಿಗೊಳ್ಳುತ್ತಿದ್ದಂತೆ ಹರ್ಷಾ ಹಾಗೂ ಆದರ್ಶ ತಮ್ಮ ಜೀವನದ ಇನ್ನೊಂದು ಮುಖ್ಯ ನಿರ್ಧಾರ ಕೈಗೊಂಡರು. ಅವರು ನರ್ಸೀ ಮಾಂಜೀ ಇನ್ಸಿಟಿಟ್ಯೂಟ್ ಆಫ್ ಮ್ಯಾನೇಜ್​​ಮೆಂಟ್ ಸ್ಟಡೀಸ್​​ನಲ್ಲಿ ಎಂಬಿಎ ಮುಗಿಸುವ ಕಠಿಣ ನಿರ್ಧಾರ ಕೈಗೊಂಡರು. ಇದೇ ವೇಳೆ ಸಂತಾ ಡೆಲಿವರ್ಸ್​ನ ಮಾಪನ ಮಾಡುವ ಪ್ರಮುಖ ಕೆಲಸವನ್ನೂ ನಿರ್ವಹಿಸಿದರು. ಆದರೆ ಪೋಷಕರ ಸಹಕಾರದಿಂದ ತಮ್ಮ ಉನ್ನತ ವ್ಯಾಸಂಗ ಮಾಡುತ್ತಲೇ ಅವರು ಸಂಸ್ಥೆಯ ಬೆಳವಣಿಗೆಯತ್ತಲೂ ಗಮನ ಹರಿಸಿದರು. ಅವರು ಎಂಬಿಎ ಕಲಿತಿದ್ದರಿಂದಲೇ ಅವರ ಸಂಸ್ಥೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಾಧ್ಯವಾಯಿತು.

ಸಂತಾ ಡೆಲವರಿ ಸಂಸ್ಥೆಗೆ ಹೊಸದಾಗಿ ಪುಲ್ಕಿತ್ ಕೇಜ್ರೀವಾಲ್ ಅನ್ನುವ ಹೊಸ ಪಾರ್ಟನರ್ ಸೇರಿಕೊಂಡರು. ಇದರಿಂದ ಸಂಸ್ಥೆಗೆ ಹೊಸ ರೂಪ ಸಿಕ್ಕಂತಾಯಿತು. ಪುಲ್ಕಿತ್ ಸಂತಾ ಡೆಲಿವರ್ಸ್​ನ ಮಾರ್ಕೆಟಿಂಗ್ ಹಾಗೂ ಕಾರ್ಯಾಚರಣೆಯನ್ನು ನೋಡಿಕೊಳ್ಳುವ ಜವಬ್ದಾರಿ ವಹಿಸಿಕೊಂಡರು.

ಎಂಬಿಎ ಕಲಿಯುತ್ತಿದ್ದಾಗಲೂ ಸಹ ಡಿಜಿಟಲ್ ಮಾರ್ಕೆಟಿಂಗ್ ಹಾಗೂ ಸಾರ್ವಜನಿಕ ಸಂಪರ್ಕದಂತಹ ಪ್ರಮುಖ ಕಾರ್ಯಗಳನ್ನು ಇವರು ನಿರ್ವಹಿಸಿದರು.

ತಮ್ಮ ಉದ್ಯಮಶೀಲತೆಯ ಯಾನದಲ್ಲಿ ಆದರ್ಶ ಹಾಗೂ ಹರ್ಷ ಸಾಕಷ್ಟು ಅತ್ಯುತ್ತಮ ಅನುಭವಗಳನ್ನು ಗಳಿಸಿಕೊಂಡರು. 6 ತಿಂಗಳಲ್ಲಿ ಮೊದಲ 3 ತಿಂಗಳ ಕಾಲ ಅವರು ತಾಳ್ಮೆಯಿಂದ ಗ್ರಾಹಕರ ಕರೆಗಳಿಗಾಗಿ ನಿರೀಕ್ಷಿಸುತ್ತಿದ್ದರು. ಜೊತೆಗೆ ಗ್ರಾಹಕರ ಮನೆ ಬಾಗಿಲಿಗೆ ತೆರಳಿ ಡೆಲಿವರಿ ನೀಡುವ ಕೆಲಸ ಮಾಡಿದರು. ಇದರಿಂದ ಯಾವುದೇ ಕೆಲಸವೂ ಸಣ್ಣದಲ್ಲ ಹಾಗೂ ಕ್ಷುಲ್ಲಕವಲ್ಲ ಅನ್ನುವ ಸಂಗತಿ ಅವರಿಗೆ ಮನವರಿಕೆಯಾಯಿತು.

ಆದರ್ಶ ತಮ್ಮ ಸಂಸ್ಥೆಗೆ ತಾಂತ್ರಿಕ ಸಂಗತಿಗಳನ್ನು ಮಾರ್ಗದರ್ಶನ ಮಾಡಿದ ಆದಿತ್ಯ ಅಗರ್ವಾಲ್, ಪ್ರತೀಕ್ ಚೌಧರಿ, ಗೌರವ್ ಜುಂಜನ್​ವಾಲ ಹಾಗೂ ಹಿತೇಶ್ ಅಗರ್ವಾಲ್​ರ ಸಹಕಾರವನ್ನು ನೆನೆಯುತ್ತಾರೆ.

ಮುಂದಿನ ಕಾರ್ಯಯೋಜನೆ

ಸದ್ಯ ಸಂತಾ ಡೆಲಿವರ್ಸ್, ಕೋಲ್ಕತ್ತಾದ ಮುಖ್ಯ ಭಾಗಗಳಾದ ಸಾಲ್ಟ್ ಲೇಕ್, ನ್ಯೂಟೌನ್, ಸಿಲ್ವರ್ ಸ್ಪ್ರಿಂಗ್, ಫೂಲ್​ಬಾಗನ್ ಹಾಗೂ ಲೇಕ್​ಟೌನ್ ಮುಂತಾದ ಕಡೆ ಆಹಾರದ ಉತ್ಪನ್ನಗಳನ್ನು ಪೂರೈಸುತ್ತಿದೆ.

ಮುಂದಿನ ಮೂರು ವರ್ಷಗಳಲ್ಲಿ ಸಂತಾ ಡೆಲಿವರ್ಸ್ ತನ್ನ ಸೇವೆಯನ್ನು ಕೋಲ್ಕತ್ತದಾದ್ಯಂತ ಮಾತ್ರವಲ್ಲದೇ ಭಾರತದ ಪ್ರಮುಖ ಪಟ್ಟಣಗಳಲ್ಲಿ ವಿಸ್ತರಿಸುವ ಯೋಜನೆ ಹೊಂದಿದೆ.

ಮುಂದಿನ ದಿನಗಳಲ್ಲಿ ತಿಂಗಳಿಗೆ 3 ಸಾವಿರ ಆರ್ಡರ್ಗಳನ್ನು ತೆಗೆದುಕೊಂಡು ತಿಂಗಳಿಗೆ 13 ಲಕ್ಷ ಆದಾಯ ಗಳಿಸುವ ಯೋಜನೆ ನಮ್ಮ ಮುಂದಿದೆ ಅಂತ ಪುಲ್ಕಿತ್ ಮಹತ್ವಾಕಾಂಕ್ಷೆಯಿಂದ ಹೇಳಿಕೊಳ್ಳುತ್ತಾರೆ.

Add to
Shares
3
Comments
Share This
Add to
Shares
3
Comments
Share
Report an issue
Authors

Related Tags