ಆವೃತ್ತಿಗಳು
Kannada

ಉತ್ಪಾದನಾ ಕ್ಷೇತ್ರದಲ್ಲಿ ಕರ್ನಾಟಕದ ಮಾದರಿ

Team YS

YourStory Kannada
30th Jan 2016
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಕರ್ನಾಟಕದ ಪ್ರಾಮುಖ್ಯತೆ

image


ಭಾರತದಲ್ಲೇ ಕರ್ನಾಟಕ ಉದ್ಯಮಸ್ನೇಹಿ ಮತ್ತು ಅತಿ ಹೆಚ್ಚು ಕೈಗಾರಿಕರಣಗೊಂಡಿರುವ ರಾಜ್ಯವಾಗಿದೆ. ರಾಜ್ಯದಲ್ಲಿ 62 ಮಿಲಿಯನ್ ಜನಸಂಖ್ಯೆಯಿದ್ದು, ಭಾರತದ ಉತ್ಪಾದನಾ ಆರ್ಥಿಕ ಅಭಿವೃದ್ಧಿ ಸೂಚ್ಯಾಂಕದಲ್ಲಿ ಐದನೇ ದೊಡ್ಡ ರಾಜ್ಯವಾಗಿದೆ. ಉತ್ಪಾದನಾ ಕ್ಷೇತ್ರದಲ್ಲಿ ಶೇ.18 ರಷ್ಟು ಕೊಡುಗೆ ಕರ್ನಾಟಕದ್ದೇ ಇದೆ. ಐಟಿ ಕ್ಷೇತ್ರದಲ್ಲಿ ಪ್ರಾಬಲ್ಯ ಪಡೆದು ಮುಂಚೂಣಿಯಲ್ಲಿರುವ ಎಲೆಕ್ಟ್ರಾನಿಕ್ಸ್, ಸಿದ್ಧ ಉಡುಪುಗಳು, ವೈಮಾನಿಕ ಮತ್ತು ರಕ್ಷಣಾ ಉತ್ಪಾದನಾ ಕ್ಷೇತ್ರದ ಉಪಕರಣಗಳು, ಆಟೋಮೊಬೈಲ್, ಜೈವಿಕ ತಂತ್ರಜ್ಞಾನ, ಮತ್ತು ಉಕ್ಕಿನ ಉತ್ಪಾದನಾ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಗಳನ್ನಿರಿಸಿದೆ.

ರಾಜ್ಯದ ಉತ್ಪದನಾ ವಲಯ

ಕರ್ನಾಟಕ 2014- 2019 ರವರೆಗೆ ಅಭಿವೃದ್ಧಿಪರ ಕೈಗಾರಿಕಾ ನೀತಿಯನ್ನು ಜಾರಿಗೊಳಿಸಲಾಗಿದೆ. ಬೆಂಗಳೂರು ಮತ್ತು ರಾಜ್ಯದಲ್ಲಿ ಸಮಾನವಾಗಿ ಸ್ಥಳದ ಆಧಾರದ ಮೇಲೆ ಇಡೀ ರಾಜ್ಯವನ್ನು ಅಭಿವೃದ್ಧಿಯತ್ತ ಹೆಚ್ಚು ಪ್ರೋತ್ಸಾಹದಾಯಕ ಯೋಜನೆಗಳು ಮತ್ತು ವಿನಾಯಿತಿಗಳನ್ನು ಕೊಟ್ಟು ಕೈಗಾರಿಕ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುವುದು.

ಈ ನೀತಿಯ ಅವಧಿಯಲ್ಲಿ ಹೊಂದಿರುವ ಮುಖ್ಯ ಗುರಿ ಎಂದರೆ ಉತ್ಪಾದನಾ ಕ್ಷೇತ್ರದಲ್ಲಿ ರಾಜ್ಯದ ಅಭಿವೃದ್ಧಿ ಸೂಚ್ಯಾಂಕಕ್ಕೆ ಶೇ.18 ರಿಂದ 20 ರವರೆಗೆ ಕೊಡುಗೆ ನೀಡಲು ನಿಗದಿ ಮಾಡಲಾಗಿದೆ.

ಮೂಲಭೂತ ಸೌಕರ್ಯಕ್ಕೆ ಆದ್ಯತೆ

ರಾಜ್ಯ ಚೆನ್ನೈ ಬೆಂಗಳೂರು- ಚಿತ್ರದುರ್ಗ ಹೂಡಿಕೆ ಕಾರಿಡಾರ್,(ಸಿಬಿಸಿಐಸಿ) ಮತ್ತು ಬೆಂಗಳೂರು ಮುಂಬೈ(ಬಿಎಂಇಸಿ) ಅರ್ಥಿಕ ಕಾರಿಡಾರ್ ಎಂಬ ಎರಡು ಆರ್ಥಿಕ ಹೂಡಿಕೆ ವಲಯವನ್ನು ಗುರುತಿಸಿ ಅಭಿವೃದ್ಧಿ ಪಡಿಸಲಾಗಿದೆ. ಇದು ಸುಮಾರು 150 ಕಿ.ಮೀ. ವ್ಯಾಪ್ತಿಯನ್ನು ಹೊಂದಿದೆ. ಈ ಆರ್ಥಿಕ ವಲಯದ ಕಾರಿಡಾರ್ ಎರಡು ಬದಿಯಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಈ ಕಾರಿಡಾರ್‍ನಲ್ಲಿ ಹಲವಾರು ಉದ್ದಿಮೆಗಳು, ಘಟಕಗಳು ಮೈದಳೆಯಲಿವೆ. ಸಿಬಿಸಿಐಸಿ ಮಾರ್ಗದಲ್ಲಿ ತುಮಕೂರಿನ ಎನ್‍ಐಎಂಝಡ್ ಇದರಲ್ಲಿ ಪ್ರಮುಖವಾದ ಘಟಕವಾಗಿದೆ. ಇದೇ ಮಾದರಿಲ್ಲಿ ಧಾರವಾಡ ಕೂಡ ಬಿಎಂಇಸಿ ಕಾರಿಡಾರ್‍ನಲ್ಲಿ ಪ್ರಮುಖ ಕೈಗಾರಿಕಾ ವಲಯವಾಗಿ ಹೊರಹೊಮ್ಮಲಿದೆ. ಈ ಎರಡೂ ವಲಯದಲ್ಲಿ ಕರ್ನಾಟಕ ಸರ್ಕಾರ 52 ಕೈಗಾರಿಕಾ ಪ್ರದೇಶಗಳನ್ನು ವಲಯಗಳನ್ನು ಮತ್ತು 60 ವಿಶೇಷ ಆರ್ಥಿಕ ವಲಯಗಳನ್ನು ನಿರ್ಮಿಸಲಿದೆ.

ಮುಂದಿನ ಕೆಲವು ವರ್ಷದಲ್ಲಿ ಇದೇ ಪ್ರದೇಶದಲ್ಲಿ 15 ಕೈಗಾರಿಕಾ ವಲಯಗಳ ನಿರ್ಮಾಣವೂ ನಡೆಯಲಿದೆ.

ತುಮಕೂರು ಘಟಕ ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯದಲ್ಲಿ ದೇಶದಲ್ಲಿಯೇ ಪ್ರಥಮ ಘಟಕವಾಗಿದೆ. ಈ ವಲಯದಲ್ಲಿ 13,928 ಎಕರೆ ಜಾಗದ ಅವಶ್ಯಕತೆಯಿದ್ದು, ಈಗಾಗಲೇ 4,146 ಎಕರೆ ಜಾಗವನ್ನು ಅಭಿವೃದ್ಧಿಪಡಿಸಲಾಗಿದೆ. ಇಲ್ಲಿ ಯಂತ್ರೋಪಕರಣಗಳ ಸಾಧನ ಘಟಕ ಪಾರ್ಕ್ ಸ್ಥಾಪನೆಗೆ 500 ಎಕರೆ ಮೀಸಲಿಡಲಾಗಿದೆ. ಮತ್ತೊಂದು 500 ಎಕರೆಯಲ್ಲಿ ಜಪಾನ್ ಉದ್ಯಮ ಪಾರ್ಕ್‍ಗೆ ಜಾಗ ನಿಗದಿಗೊಳಿಸಲಾಗಿದೆ. ಕೊರಿಯಾ, ಚೀನಾ, ಜರ್ಮನಿ, ಸೇರಿದಂತೆ ಉಳಿದ ದೇಶಗಳು ಕೈಗಾರಿಕಾ ಆಧಾರಿತ ಪಾರ್ಕುಗಳನ್ನು ಸ್ಥಾಪಿಸಲು ಆಸಕ್ತಿ ತೋರಿವೆ. ಇವು ರಾಜ್ಯದಲ್ಲಿಯೇ ಅತಿ ದೊಡ್ಡ ಕೈಗಾರಿಕ ಪ್ರದೇಶಗಳಾಗಿ ಅಭಿವೃದ್ಧಿಯಾಗಲಿವೆ. ಕೋಲಾರ ಮತ್ತು ಕಲಬುರ್ಗಿಯಲ್ಲಿ ಇದೇ ಮಾದರಿಯ ಕೈಗಾರಿಕ ವಲಯಗಳ ಅಭಿವೃದ್ಧಿಗೆ ಯೋಜಿಸಲಾಗುತ್ತಿದೆ.

ಎನ್‍ಐಎಂಝಡ್ ವಲಯದಲ್ಲಿ ಕೈಗಾರಿಕಾ ಟೌನ್‍ಶಿಪ್‍ಗಳನ್ನು ಅಭಿವೃದ್ಧಿಪಡಿಸಲಾಗುವುದು. ಮತ್ತು ಇಲ್ಲಿ ಸ್ಥಳೀಯ ಆಡಳಿತದ ನೆರವಿನಿಂದ ಇವುಗಳ ನಿರ್ವಹಣೆ ಮಾಡಲು ಸಹ ಉದ್ದೇಶಿಸಲಾಗಿದೆ. ರಾಜ್ಯದ ಎರಡು ಪ್ರಮುಖ ಕೈಗಾರಿಕ ಕಾರಿಡಾರ್‍ಗಳಲ್ಲಿ ಕೈಗಾರಿಕ ಘಟಕಗಳನ್ನು ಸ್ಥಾಪಿಸಲಾಗುವುದು, ಮತ್ತು ಉತ್ಪಾದನಾ ಕ್ಷೇತ್ರದಲ್ಲಿ ಉದ್ದೇಶಿತ ಎಲ್ಲ ಸ್ಥಳಗಳಲ್ಲಿ ಕೈಗಾರಿಕ ಮತ್ತು ಉದ್ದಿಮೆ ಅಭಿವೃದ್ಧಿಪಡಿಸಲಾಗುವುದು.

ಸಣ್ಣ ಮತ್ತು ಮಧ್ಯಮ ಕೈಗಾರಿಕಗಳ ನೆರವು

ಸಣ್ಣ ಮತ್ತು ಮಧ್ಯಮ ಕೈಗಾರಿಕಗಳ ನೆರವು( ಎಸ್‍ಎಂಇ) ಭಾರತದ ಉತ್ಪಾದನಾ ಕ್ಷೇತ್ರದಲ್ಲಿ ಅಪಾಯದ ಸಂಕಷ್ಟದಲ್ಲಿವೆ. ದೇಶದ ಉತ್ಪಾದನಾ ಬಹುಪಾಲು ಹೊಂದಿರುವ ಈ ಉದ್ದಿಮೆಗಳು ವಿದೇಶಗಳಿಗೆ ಶೇ.40 ರಷ್ಟು ರಫ್ತು ನಡೆಸುತ್ತಿವೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಲ್ಲಿ ಜವಳಿ ಉದ್ದಿಮೆ ಬಹುಪಾಲು ಹೊಂದಿದ್ದು, ಆಹಾರ ಮತ್ತು ಪಾನೀಯ ಉದ್ದಿಮೆಗಳು ಮುಂದಿವೆ.2012 -13 ರಲ್ಲಿ ಈ ಕ್ಷೇತ್ರದಲ್ಲಿ 22 ಬಿಲಿಯನ್ ಅಮೇರಿಕನ್ ಡಾಲರ್ ಹೂಡಿಕೆಯಾಗಿತ್ತು, ಬಹುತೇಕ ಕೈಗಾರಿಕೆಗಳು ಬೆಂಗಳೂರಿನಲ್ಲೇ ಇವೆ ಎಂಬುದು ಪ್ರಮು ಅಂಶ.

ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳು ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ರಾಜ್ಯಕ್ಕೆ ಮತ್ತು ದೇಶಕಕೆ ಪ್ರಮುಖ ಪಾಲುಗಾರಿಕೆ ಹೊಂದಿವೆ. ಹೊಸ ಕೈಗಾರಿಕಾ ನೀತಿಯಲ್ಲಿ ಈ ವಲಯದ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಲಾಗಿದೆ.

ಹಿಂದಿನ ಸರ್ಕಾರಗಳಿಗಿಂತ ಕೈಗಾರಿಕಾ ನೀತಿಯಲ್ಲಿ ಪ್ರೋತ್ಸಾಹಗಳನ್ನು ದುಪ್ಪಟ್ಟುಗೊಳಿಸಿದ್ದು, ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಅಗತ್ಯವಿರುವ ಜಾಗಕ್ಕೆ ಈಗಾಗಲೇ ಶೇ.20 ಜಾಗವನ್ನು ಅಭಿವೃದ್ಧಿಗೆ ನೀಡಲಾಗಿದೆ. ಬೃಹತ್ ಕೈಗಾರಿಕೆಗಳಿಗಿಂತ ಶೇ. 15 ರಷ್ಟು ದರದ ವಿನಾಯಿತಿಯನ್ನು ಈ ಉದ್ದಿಮೆಗಳಿಗೆ ಸರ್ಕಾರ ಜಮೀನು ಖರೀದಿಸುವಾಗ ಆದ್ಯತೆ ನೀಡಲಿದೆ.

‘ಮೇಕ್ ಇನ್ ಇಂಡಿಯಾ’ ಕನಸು ನನಸು ಮಾಡಲು ದೇಶದ ಎಲ್ಲ ರಾಜ್ಯಗಳಿಗಿಂತ ಪ್ರಮುಖವಾಗಿ ಕರ್ನಾಟಕ ನಾಯಕನಾಗಿ ಹೊರಹೊಮ್ಮಲು ಈ ಎಲ್ಲ ಕ್ರಮಗಳು ಶಕ್ತಿಯನ್ನು ನೀಡಲಿವೆ.

 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags