ಆವೃತ್ತಿಗಳು
Kannada

ರೋಗಿಗಳ ಆಪತ್ಕಾಲದಲ್ಲಿ ನೆರವಾಗುವ ಸಂಜೀವಿನಿ MediSOS..

ಟೀಮ್​ ವೈ.ಎಸ್​. ಕನ್ನಡ

YourStory Kannada
21st Feb 2016
Add to
Shares
2
Comments
Share This
Add to
Shares
2
Comments
Share

ಹಾಲಿವುಡ್ ಸಿನಿಮಾಗಳು ಕೆಲವೊಮ್ಮೆ ನಿಜವಾದ ಬದುಕಿನಲ್ಲೂ ಕೆಲವೊಂದು ಪ್ರಯೋಗಗಳನ್ನ ಮಾಡಲು ಪ್ರಚೋದಿಸುತ್ತವೆ. ಹಾಗೇ 22 ವರ್ಷದ ವಿಶಾಲ್ ಅಗರ್ವಾಲ್ ಎಂಬ ಯುವಕ ಇದೀಗ ಹಾಲಿವುಡ್ ಮೂವಿಯ ದೃಶ್ಯವೊಂದನ್ನ ನೋಡಿ ಅದರಂತೆ ತಾನೂ ಮಾಡಲು ಹೊರಟಿದ್ದಾನೆ. ತುರ್ತು ಪರಿಸ್ಥಿತಿಯಲ್ಲಿ ಜನರಿಗೆ ಬೇಕಾಗುವ ಅಗತ್ಯ ಔಷಧಗಳನ್ನ ಪೂರೈಸುವ ವ್ಯವಸ್ಥೆಯನ್ನ ಸಿನಿಮಾದಲ್ಲಿ ನೋಡಿದ ವಿಶಾಲ್ ಇದೀಗ ರಿಯಲ್ ಲೈಫ್ ನಲ್ಲೂ ಅಳವಡಿಸುವ ಪ್ರಯತ್ನಕ್ಕೆ ಕೈಹಾಕಿದ್ದಾನೆ. ಅಲ್ಲದೆ 2015ರ ಜನವರಿಯಲ್ಲಿ ವಿಶಾಲ್ ಮೆಡಿಎಸ್ಒಎಸ್ ಅನ್ನೋ ಆನ್ ಲೈನ್ ಎಮರ್ಜೆನ್ಸಿ ಮೆಡಿಸಿನ್ಸ್ ಸಪ್ಲೈ ಸರ್ವೀಸನ್ನ ಶುರುಮಾಡಿದ್ದಾನೆ.

image


ಮೆಡಿಎಸ್ಒಎಸ್ ನಲ್ಲಿ ಇರುವ ಟೂಲ್ಸ್ ನಲ್ಲಿ ರೋಗಿಗಳು ತಮಗಿರುವ ಖಾಯಿಲೆ ಹಾಗೂ ಔಷಧಗಳ ಶೆಡ್ಯೂಲನ್ನ ನಿಭಾಯಿಸಬಹುದು. ಅಲ್ಲದೆ ಈ ವೆಬ್ ಸೈಟ್ ಮೂಲಕ ರೋಗಿಗಳು ಸಮೀಪದಲ್ಲಿರುವ ಆಪ್ತರೊಂದಿಗೆ ಸಂಭಾಷಣೆ ನಡೆಸಬಹುದು.. ಅಲ್ಲದೆ ತಮಗೆ ಪೂರಕವಾಗುವ ಒಂದು ವ್ಯವಸ್ಥೆಯನ್ನೂ ಸೃಷ್ಠಿಸಿಕೊಳ್ಳಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ. “ನಮಗೆ ದೇಶಾದ್ಯಂತ ಪ್ರೈವೇಟ್ ನೆಟ್ ವರ್ಕ್ ಗಳನ್ನ ಸೃಷ್ಠಿಸುವ ಲೆಕ್ಕಾಚಾರವಿದೆ. ಇದರಿಂದ ಅವರು ತುರ್ತು ಪರಿಸ್ಥಿತಿಯಲ್ಲಿ ತಮಗೆ ಬೇಕಾದವರಿಗೆ ಸಲಹೆ ಹಾಗೂ ನೆರವನ್ನ ಪಡೆಯ ಬಹುದಾಗಿದೆ ” ಅಂತ ವಿಶಾಲ್ ಅಗರ್ವಾಲ್ ತಮ್ಮ ಭವಿಷ್ಯ ಯೋಜನೆಯನ್ನ ತೆರೆದಿಡುತ್ತಾರೆ.

ಇದನ್ನು ಓದಿ

ಮಂಗಳಮುಖಿಯರ ಮಂದಹಾಸ ಹೆಚ್ಚಿಸಿದ Bro4u.com

ಮೆಕಾನಿಕಲ್ ಎಂಜಿನಿಯರ್ ಆಗಿರುವ ವಿಶಾಲ್ ತಮ್ಮ ಶಿಕ್ಷಣವನ್ನ ಮುಗಿಸಿದ ತಕ್ಷಣ ಮೆಡಿಎಸ್ಒಎಸ್ ನ್ನ ಶುರುಮಾಡಿದ್ರು. ಆರಂಭದಲ್ಲಿ ತಮ್ಮ ಗೆಳೆಯರು ಹಾಗೂ ಮನೆಯವರ ನೆರವಿನಿಂದ $100,000 ಮೊತ್ತವನ್ನ ಮೆಡಿಎಸ್ಒಎಸ್ ಗೆ ವಿನಿಯೋಗಿಸಿದ್ರು. ಆದ್ರೆ ಇದನ್ನ ನಿಭಾಯಿಸುವುದಕ್ಕೆ ಒಬ್ಬ ಸಮರ್ಪಕ ವಿಶ್ಲೇಷಕರು ಹಾಗೂ ಮಾರ್ಗದರ್ಶಕರ ಅನಿವಾರ್ಯತೆ ಕಾಡಿತು. ಹೀಗಾಗಿ ಮಾರುಕಟ್ಟೆಯ ಪರಿಸ್ಥಿತಿಗಳನ್ನ ವಿಶಾಲ್ ಮೊದಲು ಕೂಲಂಕುಶವಾಗಿ ಪರಿಶೀಲನೆ ನಡೆಸಿದ್ರು. ಇದೀಗ ದೆಹಲಿ ಮೂಲದ ಮೆಡಿಎಸ್ಒಎಸ್ 8 ಜನರ ತಂಡದಿಂದ ಕೂಡಿದ್ದು ಭುವನೇಶ್ವರ, ಕೊಲ್ಕತ್ತಾ ಹಾಗೂ ಬೆಂಗಳೂರಿನಲ್ಲಿ ಕಾರ್ಯ ನಿಭಾಯಿಸುತ್ತಿದೆ.

ಮೆಡಿಎಸ್ಒಎಸ್ ನಲ್ಲಿ ಫಸ್ಟ್ ಏಡ್, ಎಸ್ಒಎಸ್, ಹೆಲ್ತ್ ರೆಕಾರ್ಡ್ ಮ್ಯಾನೇಜ್ ಮೆಂಟ್, ಅನಾರೋಗ್ಯದ ಲಕ್ಷಣ ಹಾಗೂ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ, ಇ ಮೆಡಿಕಲ್ ಐಡಿ, ಹೆಲ್ತ್ ಕನೆಕ್ಟ್ ( ಸೋಶಿಯಲ್ ನೆಟ್ ವರ್ಕ್ ಡೊಮೈನ್ ) ಗಳ ಬಗ್ಗೆ ಸಂಪೂರ್ಣ ಮಾಹಿತಿ ಇರುತ್ತದೆ. ಅಲ್ಲದೆ ಡಾಕ್ಟರ್ ಸರ್ವೀಸ್ ಗಳ ಬಗ್ಗೆ ಮಾಹಿತಿ, ಆಸ್ಪತ್ರೆ, ಟೆಸ್ಟ್ ಲ್ಯಾಬ್ಸ್ ಹಾಗೂ ಫಾರ್ಮಸಿಗಳ ಬಗ್ಗೆ ಸೂಕ್ತ ಮಾಹಿತಿಗಳನ್ನ ಮೆಡಿಎಸ್ಒಎಸ್ ಒದಗಿಸುತ್ತದೆ. ಇನ್ನು ತುರ್ತು ಸಂದರ್ಭಗಳಲ್ಲಿ ರೋಗಿಗಳು ತಮ್ಮ ಲೋಕೆಶನ್ ಹಾಗೂ ಲಭ್ಯವಿರುವ ಸೌಲಭ್ಯಗಳ ಬಗ್ಗೆಯೂ ಸೂಕ್ತವಾಗಿ ಮಾಹಿತಿ ಪಡೆಯಲು ಸಾಧ್ಯವಾಗುತ್ತದೆ. ಸಮೀಪದಲ್ಲಿರುವ ಆಸ್ಪತ್ರೆಗಳು, ಸ್ಪೆಷಲಿಸ್ಟ್ ಡಾಕ್ಟರ್ಸ್, ಹೆಲ್ಪ್ ಲೈನ್ ಗಳ ಬಗ್ಗೆಯೂ ಮೆಡಿಎಸ್ಒಎಸ್ ಸ್ಕ್ರೀನ್ ನಲ್ಲಿ ಪಡೆಯಬಹುದಾಗಿದೆ. ಇನ್ನು ಹೆಲ್ತ್ ಟ್ರ್ಯಾಕಿಂಗ್ ಸಿಸ್ಟಮ್ ಬಳಕೆದಾರರು ತಮ್ಮ ವೈಯುಕ್ತಿಕ ಮಾಹಿತಿಗಳನ್ನ ಸುಲಭವಾಗಿ ನಿಭಾಯಿಸಲು ಸಾಧ್ಯವಾಗುವಂತೆ ರೂಪಿತವಾಗಿದೆ.

ಹೆಲ್ತ್ ರೆಕಾರ್ಡ್ ಮ್ಯಾನೇಜ್ ಮೆಂಟ್

ಮೆಡಿಎಸ್ಒಎಸ್ ಗ್ರಾಹಕರ ವೈಯುಕ್ತಿಕ ಡಾಟಾ ನಿರ್ವಹಿಸಲು ಅನುಕೂಲಕರವಾದ ವ್ಯವಸ್ಥೆಗಳನ್ನ ಕಲ್ಪಿಸಿದೆ. ಆರೋಗ್ಯ ವೃದ್ಧಿಗೆ ಸುಲಭವಾದ ಮಾರ್ಗೋಪಾಯಗಳು ಹಾಗೂ ನುರಿತ ವೈದ್ಯರ ಸಲಹೆಗಳು ಇಲ್ಲಿರುತ್ತವೆ. ಮೆಡಿಎಸ್ಒಎಸ್ ನಲ್ಲಿ ವಿವಿಧ ಕಾರ್ಪೋರೆಟ್ಸ್ ರೆಕಾರ್ಡ್ ಗಳನ್ನೂ ಒದಗಿಸುವುದರಲ್ಲೂ ಯಶಸ್ಸು ಕಂಡಿದೆ. ಇಲ್ಲಿರುವ ಟೂಲ್ಸ್ ಗಳು ಬದಲಾವಣೆಗಳನ್ನ ತರಲು ಹಾಗೂ ನೆಟ್ ವರ್ಕ್ ರೆಕಾರ್ಡ್ ಗಳನ್ನ ತಿದ್ದಲು ಸಹಕರಿಸುವಂತಿವೆ. ಇದನ್ನೆಲ್ಲಾ ಇಲ್ಲಿರುವ ನೌಕಕರೇ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಮೆಡಿಎಸ್ಒಎಸ್ ಝೆಂಡ್ ಫ್ರೇಮ್ ವರ್ಕ್, ಪಿಹೆಚ್ ಪಿ, ಎಂವೈಎಸ್ಕ್ಯೂಎಲ್, ಆಂಡ್ರಾಯ್ಡ್ ನೇಟೀವ್ ಗಳ ಸಾಫ್ಟ್ ವೇರ್ ಗಳನ್ನ ಹೊಂದಿದೆ. ಅಲ್ಲದೆ ಈ ವಿನೂತನ ಸ್ಟಾರ್ಟ್ ಅಪ್ ಒರಾಕಲ್ ಹಾಗೂ ಜಾವಾಗಳನ್ನೂ ಪ್ರಯತ್ನಿಸುವ ಲೆಕ್ಕಾಚಾರದಲ್ಲಿದೆ.

“ ಕಾರ್ಪೋರೆಟ್ ವಲಯ ಹಾಗೂ ಆದಾಯ ನಮ್ಮ ಪ್ರಮುಖ ಗುರಿ. ಅಲ್ಲದೆ ದೊಡ್ಡ ಫಾರ್ಮಾ ಕಂಪನಿಗಳೊಂದಿಗೆ ಡಾಟಾ ಹಂಚಿಕೊಂಡು ವಿಮೆಗಳನ್ನ ಒದಗಿಸುವ ಯೋಜನೆಗಳೂ ಇವೆ. ಬ್ಯುಸಿನೆಸ್ ನ ಅಭಿವೃದ್ಧಿಗೆ ಡಿಜಿಟಲ್ ಮಾರ್ಕೆಟಿಂಗ್ ತಂತ್ರಜ್ಞಾನವನ್ನ ಬಳಸಿಕೊಳ್ಳಲಿದ್ದೇವೆ ”ವಿಶಾಲ್ ಅಗರ್ವಾಲ್, ಮೆಡಿಎಸ್ಒಎಸ್ ಸಿಇಒ

ಇದಿಷ್ಟಲ್ಲದೆ ಕಾರ್ಪೊರೇಟ್ ಮಾಡೆಲ್ ಹಾಗೂ ಹತ್ತಿರದ ಚಿಕ್ಕ ಉದ್ಯಮಗಳನ್ನ ಸೆಳೆಯುವ ಲೆಕ್ಕಾಚಾರಗಳೂ ಮೆಡಿಎಸ್ಒಎಸ್ ಗಿದೆ. ಡಾಕ್ಟರ್ ಸರ್ವೀಸ್ ಗಳನ್ನ ಇನ್ನಷ್ಟು ಅಭಿವೃದ್ಧಿ ಪಡಿಸುವತ್ತಲೂ ವಿಶಾಲ್ ಗಮನ ಕೊಟ್ಟಿದ್ದಾರೆ. ಪರಿಸ್ಥಿತಿಗೆ ತಕ್ಕಂತೆ ಮುಂದಿನ ದಿನಗಳಲ್ಲಿ ನೌಕರರ ಸಂಖ್ಯೆಗಳನ್ನ ಹೆಚ್ಚಿಸಿಕೊಳ್ಳಲು ಮೆಡಿಎಸ್ಒಎಸ್ ಯೋಜನೆ ರೂಪಿಸುತ್ತಿದೆ. ಮೆಡಿಎಸ್ಒಎಸ್ ಶುರುವಾದ ಎರಡೇ ತಿಂಗಳಿನಲ್ಲಿ 200 ಮಂದಿ ಆಪ್ ಗಳನ್ನ ಬಳಸಿದ್ರೆ, 300 ಮಂದಿ ಪೊರ್ಟಲ್ ಮೂಲಕ ಇದ್ರ ಲಾಭ ಪಡೆದಿದ್ದಾರೆ. ಐಒಎಸ್ ನಲ್ಲೂ ಸರ್ವೀಸ್ ನೀಡುವ ಲೆಕ್ಕಾಚಾರದಲ್ಲಿರುವ ಮೆಡಿಎಸ್ಒಎಸ್ ಈ ಮೂಲಕ ದೊಡ್ಡ ಆದಾಯದ ಗುರಿಯನ್ನೂ ಹೊಂದಿದೆ.

ಲೇಖಕರು – ಅಪರಾಜಿತಾ ಚೌಧರಿ

ಅನುವಾದ – ಸ್ವಾತಿ, ಉಜಿರೆ

ಇದನ್ನು ಓದಿ

1. ಬಿದಿರಿನ ಆಭರಣಗಳಿಗೆ ಮನ ಸೋಲುತ್ತಿದ್ದಾರೆ ಹೆಂಗೆಳೆಯರು...

2. ಅಂದು ಕಾರ್ಮಿಕ ಇಂದು ಮಾಲೀಕ- ಸಾಮಾನ್ಯನ ಅಸಮಾನ್ಯ ಸಾಧನೆ..!

3. ಒಂದೇ ಶಿಲ್ಪದಲ್ಲಿ ಹಲವು ಕಲೆಗಳ ಗುಟ್ಟು..!

Add to
Shares
2
Comments
Share This
Add to
Shares
2
Comments
Share
Report an issue
Authors

Related Tags