ಆವೃತ್ತಿಗಳು
Kannada

ಜೋಧ್​ಪುರದ ಉದ್ಯಮಕ್ಕೆ ಫೇಸ್​ಬುಕ್​ ಟಚ್​- ಸಣ್ಣ ಉದ್ಯಮದಲ್ಲಿ ಸಾಮಾಜಿಕ ತಾಣದ ಮ್ಯಾಜಿಕ್​

ಟೀಮ್​ ವೈ.ಎಸ್​. ಕನ್ನಡ

YourStory Kannada
9th Nov 2016
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಸಾಮಾಜಿಕ ಜಾಲತಾಣ ಫೇಸ್​ಬುಕ್ ಬಗ್ಗೆ ಎಲ್ಲರಿಗೂ ಗೊತ್ತಿದೆ. ಫೇಸ್​ಬುಕ್​ಗೆ ಎಂಟ್ರಿ ಆಗದೆ ಕೆಲವರ ದಿನವೇ ಆರಂಭವಾಗುವುದಿಲ್ಲ. ಆದ್ರೆ ಫೇಸ್​ಬುಕ್​ನಿಂದ ಲಾಭ ಏನು ಅಂತ ಕೇಳುವವರಿಗೆ ಉತ್ತರವೊಂದು ಸಿಗಲಿದೆ. ಜೋಧಪುರದ ಕರಕುಶಲ ಉದ್ಯಮಿಗಳಿಗೆ ಸಹಾಯಹಸ್ತ ಚಾಚಿದೆ.

image


ಜೋಧಪುರದ ಕರಕುಶಲಕರ್ಮಿಗಳಿಗೆ ಫೇಸ್​ಬುಕ್ ಟೀಮ್ ಹಲವು ವಿಷಯಗಳಲ್ಲಿ ಸಹಾಯಹಸ್ತ ನೀಡಿಲಿದೆ. ಆಮದು ಮತ್ತು ರಫ್ತು ವಿಷಯಗಳ ಬಗ್ಗೆ ಫೇಸ್​ಬುಕ್ ತಂಡ ತಿಳಿಹೇಳಲಿದೆ. ಅಷ್ಟೇ ಅಲ್ಲ ಫೇಸ್​ಬುಕ್​ ತಂಡ ಜೋಧಪುರದ ಕರಕುಶಲ ಉದ್ಯಮಿಗಳಿಗೆ ಸೆಮಿನಾರ್ ಮೂಲಕ ಉದ್ಯಮಕ್ಕೆ ಬೇಕಾದ ಮತ್ತು ಅದನ್ನು ವಿಸ್ತರಿಸುವ ಬಗ್ಗೆ ವಿವರಣೆಯನ್ನು ನೀಡಲಿದೆ.

ಇದನ್ನು ಓದಿ: ಆಟ, ನಟನೆ ಎಲ್ಲದಕ್ಕೂ ಸೈ- ನಿವೃತ್ತಿ ನಂತರ ಬ್ಯುಸಿನೆಸ್​ಗೂ ಜೈ..!

ಫೇಸ್​ಬುಕ್ ತಂಡ ಈಗಾಗಲೇ ರಾಜಸ್ಥಾನ ಸರ್ಕಾರ ಜೊತೆಗೆ ಈ ಬಗ್ಗೆ ಮಾತುಕತೆಯನ್ನು ಕೂಡ ಯಶಸ್ವಿಯಾಗಿ ನಡೆಸಿದೆ. ಜೋಧಪುರದ ಕರಕುಶಲಕರ್ಮಿಗಳು ತಯಾರಿಸುವ ವಸ್ತುಗಳನ್ನು ಫೇಸ್​ಬುಕ್ ಪೇಜ್ ಮೂಲಕ ಪ್ರೊಮೋಟ್ ಮಾಡಲು ಕೂಡ ಪ್ಲಾನ್ ಮಾಡ್ಕೊಂಡಿದೆ. ಈ ಮೂಲಕ ಅತೀ ಹೆಚ್ಚು ಜನರನ್ನು ಆಕರ್ಷಿಸುವ ಬಗ್ಗೆ ಯೋಜನೆಗಳು ನಡೆಯುತ್ತಿದೆ.

“ ಇಂತಹ ಕರಕುಶಲ ಕರ್ಮಿಗಳು, ರಫ್ತು ಮಾಡುವವ ವರ್ತಕರಿಂದ ಆರ್ಡರ್​ಗಳನ್ನು ಪಡೆಯುತ್ತಾರೆ. ಕಷ್ಟಪಟ್ಟು ಬೆವರು ಸುರಿಸಿ ವಸ್ತುಗಳನ್ನು ತಯಾರಿಸುತ್ತಾರೆ. ಆದ್ರೆ ಲಾಭದ ಹೆಚ್ಚಿನ ಅಂಶ ಮಧ್ಯವರ್ತಿಗಳಿಗೆ ಹೋಗುತ್ತದೆ. ಆರ್ಥಿಕ ಮುಗ್ಗಟ್ಟು ಮತ್ತು ಮಾರುಕಟ್ಟೆ ಬಗ್ಗೆ ಇರುವ ಕಡಿಮೆ ಜ್ಞಾನ ಈ ಕರಕುಶಲಕರ್ಮಿಗಳಿಗೆ ಸಾಕಷ್ಟು ಹಿನ್ನಡೆಯನ್ನು ಉಂಟುಮಾಡಿವೆ.”
- ವೈ.ಎಸ್. ಮಾಥುರ್, ಜಿ.ಎಂ. ಡಿಸ್ಟ್ರಿಕ್ಟ್ ಇಂಡಸ್ಟ್ರೀಸ್ ಸೆಂಟರ್

ರಾಜಸ್ಥಾನದ ಕರಕುಶಲ ವೈವಿಧ್ಯತೆ ಜೈಪುರ, ಜೋಧ್​ಪುರ ಮತ್ತು ಉದಯ್​ಪುರಗಳಲ್ಲಿ ವಸ್ತುಸಂಗ್ರಹಾಲಯದಲ್ಲಿ ಕಣ್ಣಿಗೆ ಕಳೆಕಟ್ಟುತ್ತವೆ. ಸ್ಥಳೀಯ ಕರಕುಶಲ ಕರ್ಮಿಗಳು ರಾಜಸ್ಥಾನದ ಸಂಸ್ಕೃತಿ ಮತ್ತು ರಾಜವೈಭವವನ್ನು ತಮ್ಮ ಕಲೆಗಳ ಮೂಲಕ ಪ್ರಸ್ತುತ ಪಡಿಸುತ್ತಿದ್ದಾರೆ. ಅಷ್ಟೇ ಅಲ್ಲ ಈ ಕಲೆಗಳಲ್ಲಿ ಸಾಮಾಜಿಕ ಮತ್ತು ಆರ್ಥಿಕ ವರ್ಚಸ್ಸುಗಳು ಕೂಡ ಕಾಣಸಿಗುತ್ತದೆ.

ಜೋಧಪುರದ ಕರಕುಶಲ ಉದ್ಯಮ ವಾರ್ಷಿಕವಾಗಿ 1700 ಕೋಟಿ ರೂಪಾಯಿಗಳ ವಹಿವಾಟನ್ನು ಹೊಂದಿದೆ. ಸುಮಾರು 400 ಸಣ್ಣ ಮತ್ತು ಮಧ್ಯಮ ಕೈಗಾಗಾರಿಕೆಗಳು ಮರ, ಟೆಕ್ಸ್​ಟೈಲ್, ಕಲ್ಲು ಮತ್ತು ಮೆಟಲ್​ಗಳಿಂದ ಹಲವು ಉತ್ಪನ್ನಗಳನ್ನು ಮಾರುತ್ತಿವೆ. ಆದ್ರೆ ಇವೆಲ್ಲವೂ ನೇರವಾಗಿ ಕರಕುಶಲ ಕರ್ಮಿಗಳ ಕೈ ಸೇರದೆ ಮಧ್ಯವರ್ತಿಗಳ ಮೂಲಕ ವಹಿವಾಟು ನಡೆಯುತ್ತಿದೆ. ಈಗ ಫೇಸ್​ಬುಕ್ ಎಂಟ್ರಿ ಜೋಧಪುರದ ಸಂಸ್ಕೃತಿಗೆ ಹೊಸ ಟಚ್ ನೀಡಲಿದೆ.

ಇದನ್ನು ಓದಿ:

1. ಬಣ್ಣಗಳ ಅರಿವಿಲ್ಲದಿದ್ದರೂ ಪೈಂಟಿಂಗ್​ ಮಾಡ್ತಾರೆ- ದೃಷ್ಟಿ ವಿಕಲ ಚೇತನರಾಗಿದ್ರೂ ಬದುಕಿನ ಆಸೆ ಬಿಟ್ಟಿಲ್ಲ..!

2. 15,000 ಯುವ ನಿರುದ್ಯೋಗಿಗಳಿಗೆ ಬದುಕು ಕಟ್ಟಿಕೊಟ್ಟ ಉದ್ಯಮಿ..

3. ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಹೊಸ ಕನಸು- ಬಜೆಟ್​ನಲ್ಲಿ ನಿಮ್ಮ ಐಡಿಯಾಗಳಿಗೂ ಇದೆ ಬೆಲೆ

 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags