ಮಳೆಯಲಿ ಹೊಸ ಪರಿಚಿತರ ಜೊತೆಯಲ್ಲಿ..!

ಟೀಮ್​ ವೈ.ಎಸ್​. ಕನ್ನಡ
0 CLAPS
0

ಮಳೆ ಅಂದ್ರೆ ಖುಷಿ. ಮಳೆ ಬಂದ್ರೆ ಊರು ಬಿಟ್ಟವರಿಗೆ ಊರು ಊರಿನ ನೆನಪು. ಪ್ರೀತಿ ಮಾಡುವ ಹುಡುಗಿ ಇದ್ದರೆ ಹುಡುಗಿಯ ನೆನಪು. ಮಳೆಗೂ ಪ್ರೀತಿಗೂ ಅದೇನೋ ಸಂಬಂಧ ಇದೆ. ಮಳೆ ಬಂತು ಅಂದ್ರೆ ಹಳೆಯ ಹಾಡುಗಳು ಮತ್ತು ಹಳೆಯ ನೆನಪುಗಳು ತನ್ನಷ್ಟಕ್ಕೇ ತಾನಗಿಯೇ ಮನಸ್ಸಿನ ಮೂಲೆಯಿಂದ ಹೊರಬರುತ್ತದೆ. ಆದ್ರೆ ಈಗ ಕಾಲ ಬದಲಾಗಿದೆ. ಮಳೆಯಲ್ಲಿ ನೆನೆದು, ಮಳೆಗಾಲದಲ್ಲಿ ಸಂಭ್ರಮ ಪಡುವುದೆಲ್ಲಾ ಮರೆತೇ ಹೋಗಿದೆ.


ಮಳೆಗಾಲ ಅಂದ್ರೆ ಯಾವತ್ತಿದ್ರೂ ಅದೊಂದು ಪ್ರಕೃತಿಯಲ್ಲಿನ ಸಂಭ್ರಮ. ಮಳೆ ಬಂದರೆ ಭೂಮಿ ತಾಯಿಯ ಒಡಲು ತಂಪಾಗುತ್ತದೆ. ಹೊಸ ಕನಸುಗಳು ಚಿಗುರೊಡೆಯುತ್ತದೆ. ಆದ್ರೆ ಇವತ್ತು ಮಳೆ ಮತ್ತು ಅದರಲ್ಲಿರುವ ಸಂಭ್ರಮವನ್ನು ಮರೆತು ಬಿಟ್ಟಿದ್ದೇವೆ. ನಾವಾಯಿತು , ನಮ್ಮ ಕೆಲಸವಾಯಿತು ಅನ್ನುವವರ ಮಧ್ಯೆ ಮಳೆಯನ್ನ ನೆನಪಿನಲ್ಲಿಡುವುದಕ್ಕೆ ಇಲ್ಲೋಂದು ತಂಡ ಹೊಸ ಪ್ರಯತ್ನ ಮಾಡಿದೆ. ಅದರ ಹೆಸರು "ರೈನಥಾನ್".

ರೈನಥಾನ್​ ಅಂದ್ರೆ ಏನು..?

ರೈನಥಾನ್ ಎಂದರೆ ಮಳೆಯಲ್ಲಿ ನೆನೆದು ನಡೆಯೋದು. ಮಳೆಗಾಲದಲ್ಲಿ ಸ್ನೇಹಿತರೆಲ್ಲಾ ಸೇರಿ ಸಂಭ್ರಮ ಆಚರಣೆ ಮಾಡುವಂತಹದ್ದು. ಮಳೆಯನ್ನ ಪ್ರೀತಿ ಮಾಡುವ ಸ್ನೇಹಿತರೆಲ್ಲಾ ಒಟ್ಟಿಗೆ ಸೇರಿ ಊರು ಸುತ್ತುವ ಕಾರ್ಯಕ್ರಮ. ವಾರಪೂರ್ತಿ ಬೆಂಗಳೂರಿನಲ್ಲಿ ದುಡಿದು ಸುಸ್ತಾಗಿರುವ ಮನಸ್ಸುಗಳಿಗೆ ಮುದನೀಡುವ ಕೆಲಸ ಅಂದ್ರೆ ತಪ್ಪಿಲ್ಲಾ ನೋಡಿ. ಉದ್ಯಮಿ ಕಿಶೋರ್ ಪಟವರ್ಧನ್ ಕಚೇರಿಯಿಂದ ಮಳೆಯಲ್ಲಿ ನೆನೆದುಕೊಂಡೇ ಮನೆಗೆ ಹೋದಾಗ ಬಂದ ಐಡಿಯಾವನ್ನ ಈಗ "ರೈನಥಾನ್" ಆಗಿ ಬದಲಾಯಿಸಿದ್ದಾರೆ. ಚಾರ್ಮಾಡಿ ಘಾಟ್​​ನಿಂದ ಆರಂಭವಾದ ಪ್ರಯಾಣ ಈಗ ಪ್ರತಿ ಮಳೆಗಾಲದಲ್ಲಿ ಸಹಸ್ರ ಸಂಖ್ಯೆಯಲ್ಲಿ ರೈನಥಾನ್ ನಲ್ಲಿ ಜನರು ಭಾಗಿಯಾಗುವಂತೆ ಮಾಡಿದೆ.


ಆರಂಭದಲ್ಲಿ ಚಾರ್ಮಾಡಿ ಘಾಟ್ ಆದ ಮೇಲೆ ಆಗುಂಬೆ ಘಾಟ್, ಬಿಸಿಲೆ ಘಾಟ್, ಎಳ್ನೀರ್ ಘಾಟ್, ಮೆಣಸಿನ ಹಾಡ್ಯ, ದೇವರಮನೆ, ಗಾಳಿಗುಡ್ಡೆ, ನಂತರ ತಮಿಳುನಾಡಿನ ಊಟಿ, ಕೂನೂರ್​ ಹೀಗೆ ನಾನಾ ಕಡೆಗಳಲ್ಲಿ ತಂಡ "ರೈನಥಾನ್" ಮಾಡಿದೆ. ಸದ್ಯ ಈ ತಂಡ ಜೂನ್ 24ರಂದು ಬಲ್ಲಾಳರಾಯನ ದುರ್ಗಕ್ಕೆ ತೆರಳಲು ಪ್ಲಾನ್ ಮಾಡಿಕೊಂಡಿದೆ. ರೈನಥಾನ್​ಗೆ ಸಿಕ್ಕಿರುವ ಬೆಂಬಲ ಕಿಶೋರ್​ ಅವರಿಗೆ ಹೆಚ್ಚಿನ ವಿಶ್ವಾಸ ನೀಡಿದೆ.

ಇದನ್ನು ಓದಿ: ಆನ್​ಲೈನ್​ನಲ್ಲಿ ಕನ್ನಡ ಅಭಿವೃದ್ಧಿಗಾಗಿ ಪಣ ತೊಟ್ಟ ಟೆಕ್ಕಿಗಳು

ಏನೆಲ್ಲಾ ವಿಶೇಷತೆ ಇದೆ..?

ರೈನಥಾನ್​ಗೆ ಹೋದ್ರೆ ಸಾಕಷ್ಟು ಲಾಭಗಳಿವೆ. ನಿಸರ್ಗ ಅಂದ್ರೆ ಯಾರಿಗಿಷ್ಟ ಇಲ್ಲ ಹೇಳಿ..? ಸಾಕಷ್ಟು ದಿನಗಳಿಂದ ಮಿಸ್ ಮಾಡಿಕೊಂಡಿದ್ದ ನಿಸರ್ಗದ ಜೊತೆ ಒಂದೆರೆಡು ದಿನ ಕಾಲ ಕಳೆಯಬಹುದು. ಸದಾ ಒಂದೇ ಚೇರ್​, ಖುರ್ಚಿ ಅಂತ ಕುತಿದ್ದವರಿಗೆ ಹೊಸ ಜನರ ಬೇಟಿ ಹೊಸ ಪರಿಚಯವನ್ನು ಹುಟ್ಟುಹಾಕುತ್ತದೆ. ಹೊಸ ಜಾಗದ  ಪರಿಚಯವಾಗುತ್ತದೆ. ಮಳೆಯಲ್ಲಿ ನೆನೆಯೋದರಿಂದ ದೇಹಕ್ಕೂ ಒಳ್ಳೆಯದು. ಮನಸ್ಸಿನಲ್ಲಿ ಪಾಸಿಟಿವ್ ಎನರ್ಜಿ ಹೆಚ್ಚಾಗುತ್ತದೆ. ಮನಸ್ಸಿನಲ್ಲಿ ಹೆಚ್ಚು ನೋವಿದ್ದು ಅಳುವುದಕ್ಕೆ ಜನರ ಮುಂದೆ ನಾಚಿಕೆಯಾಗುವವರು ಒಂಟಿಯಾಗಿ ನೆಡೆಯುತ್ತಾ ಅಳುತ್ತಾ ದುಃಖವನ್ನ ದೂರ ಮಾಡಬಹುದು.


ಉತ್ತಮ ವ್ಯವಸ್ಥೆ

"ರೈನಥಾನ್" ತಂಡದ ಜೊತೆ ಹೋಗಬೇಕಿದ್ದರೆ ಒಂದಿಷ್ಟು ರೂಲ್ಸ್ ಫಾಲೋ ಮಾಡಬೇಕು. ಅದೇನಪ್ಪಾ ಅಂದ್ರೆ ಇಲ್ಲಿ ನಾನ್ ವೆಜ್​ಗೆ ಪ್ರವೇಶವಿಲ್ಲ, ಧೂಮಪಾನ,ಮಧ್ಯ ಸೇವನೆಗೆ ಅವಕಾಶವಿಲ್ಲ. ಕೆಟ್ಟ ಮಾತುಗಳನ್ನ ಆಡುವಂತಿಲ್ಲ. ಜಗಳ ಮಾಡುವಂತಿಲ್ಲ. ಕಂಡಕಂಡಲ್ಲಿ ಕಸ ಎಸೆಯುವಂತಿಲ್ಲ. ರಾಜಕೀಯ ಚರ್ಚೆ ಮಾಡುವ ಹಾಗಿಲ್ಲ. ಇನ್ನು ಮಳೆಯಲ್ಲಿ ನೆನೆಯೋದಕ್ಕೆ ಬಂದ ಮೇಲೆ ಅಲ್ಲಿ ರೈನ್ ಕೋಟ್ ಮತ್ತು ಛತ್ರಿಯ ಎಂಟ್ರಿಯ ಮಾತೇ ಇಲ್ಲ.

ಯಾರಿಗೆ ಅವಕಾಶ..?

ರೈನಥಾನ್​ನಲ್ಲಿ ವಯೋಮಿತಿಯ ಕಟ್ಟಳೆಯಿದೆ. ಕಾರಣ, ಇದು ನಡಿಗೆ ಮತ್ತು ಆಟಗಳನ್ನು ಒಳಗೊಂಡ ರೈನಥಾನ್. ಹತ್ತು ವರ್ಷದ ಕೆಳಗಿನ ಮಕ್ಕಳು ಹಾಗೂ ಹಿರಿಯ ನಾಗರಿಕರಿಗೆ ಸತತ ಇಪ್ಪತ್ತು ಕಿಲೋಮೀಟರು ನಡಿಗೆ ಕಷ್ಟ. ಯುವಕರು ಪಾಲ್ಗೊಂಡರೆ ಅನುಕೂಲ. ಹೀಗಾಗಿ ಹಿರಿಯ ನಾಗರಿಕರು ಭಾಗವಹಿಸುವಂತಿಲ್ಲ. ಇಷ್ಟೆಲ್ಲಾ ಕೇಳಿದ ಮೇಲೆ ನೀವು "ರೈನಥಾನ್" ನಲ್ಲಿ ಭಾಗಿಯಾಗಬೇಕು ಅನ್ನೋ ಹಂಬಲ ಬಂದೇ ಬಂದಿರುತ್ತದೆ. ಹಾಗಿದ್ರೆ ಯಾಕೆ ತಡ..? ನೀವು ಒಂದ್ ಟ್ರಿಪ್ ಹೋಗಿ ಬನ್ನಿ.

ಇದನ್ನು ಓದಿ:

1. ಒಂದು ರೂಪಾಯಿನಲ್ಲಿ ಅಡಗಿದೆ ನಿಮ್ಮ ಆರೋಗ್ಯದ ರಹಸ್ಯ- ಸಿಂಪಲ್​ ಆಗಿದೆ ತರಕಾರಿಯಲ್ಲಿ ವಿಷ ಪರೀಕ್ಷೆ ಮಾಡುವ ಯಂತ್ರ 

2. ಡಿಸೈನರ್ "ಬೋಟಿಕ್ " ! ಮಹಿತಾ ಪ್ರಸಾದ್ ಡಿಸೈನ್ಸ್

3. "ಗ್ರೀನ್ ಕಾರ್ಪೆಟ್" ಹಾಸಿತು ಆಧುನಿಕ ಪಾಟ್ ಬ್ಯುಸಿನೆಸ್

Latest

Updates from around the world