ಆವೃತ್ತಿಗಳು
Kannada

ಭಾರತದ ಏಕೈಕ ಮಹಿಳಾ ಕಮಾಂಡೋ ಟ್ರೈನರ್​- ನಿಜ ಜೀವನದಲ್ಲೂ ಸೀಮಾ ಫೈಟರ್​

ಟೀಮ್​. ವೈ.ಎಸ್​. ಕನ್ನಡ

7th Nov 2016
Add to
Shares
4
Comments
Share This
Add to
Shares
4
Comments
Share

ಮಹಿಳಾ ಮಣಿಗಳು ಇವತ್ತು ವಿಶ್ವದ ಅತೀ ದೊಡ್ಡ ಸಾಧನೆ ಮಾಡಿದವರ ಪಟ್ಟಿಯಲ್ಲಿ ಸೇರಿಕೊಂಡಿದ್ದಾರೆ. ಹಲವು ಉದ್ಯಮಗಳನ್ನು ಸ್ಥಾಪಿಸಿದ್ದಾರೆ. ಕೋಟಿಗಟ್ಟಲೆ ವ್ಯವಹಾರ ನಡೆಸುವ ಉದ್ಯಮವನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿರುವ ಉದಾಹರಣೆಗಳು ಕೂಡ ಇವೆ. ಆದ್ರೆ ಡಾ. ಸೀಮಾರಾವ್ ಸಾಧನೆ ಎಲ್ಲರಿಗಿಂತಲೂ ವಿಭಿನ್ನ. ಸೀಮಾ ರಾವ್​ಗೆ ಈಗ 47 ವರ್ಷ ವಯಸ್ಸು. ದೇಶದ ಏಕೈಕ ಮಹಿಳಾ ಕಮಾಂಡೋ ಟ್ರೈನರ್ ಅನ್ನೋ ಹೆಗ್ಗಳಿಕೆ ಸೀಮಾ ಪಾಲಿನದ್ದು. ಇಲ್ಲಿ ತನಕ 7 ಡಿಗ್ರಿ ಬ್ಲ್ಯಾಕ್ ಬೆಲ್ಟ್​ನ್ನು ಸೀಮಾ ಪಡೆದುಕೊಂಡಿದ್ದಾರೆ. ಏಷ್ಯಾದಲ್ಲಿ ಅತೀ ಹಿರಿಯ ವಯಸ್ಸಿನಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದ ದಾಖಲೆಯೂ ಸೀಮಾ ಹೆಸರಿನಲ್ಲಿದೆ. ಕಳೆದ 20 ವರ್ಷಗಳಿಂದ ಸೀಮಾ ಭಾರತೀಯ ಸೈನ್ಯಕ್ಕೆ ತರಬೇತಿ ಕೂಡ ನೀಡುತ್ತಿದ್ದಾರೆ ಅನ್ನೋದು ಮತ್ತೊಂದು ವಿಶೇಷ.

image


ಸ್ವತಂತ್ರ ಹೋರಾಟಗಾರ ರಮಾಕಾಂತ್ ಸಿನಾರಿ ಸೀಮಾ ಅವರ ತಂದೆ. ಸೀಮಾ ಪತಿ ಆರ್ಮಿ ಆಫೀಸರ್. ಹೀಗಾಗಿ ಸೀಮಾಗೆ ಹೋರಾಟದ ಹಿನ್ನಲೆಯ ಜೊತೆ ಬೆಂಬಲವೂ ಸಿಕ್ಕಿತ್ತು. ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಂಡ ಸೀನಾ ಭಾರತೀಯ ಸೈನ್ಯದ ಜೊತೆ ತರಬೇತಿ ನೀಡುವ ಕೆಲಸ ಮಾಡಿದ್ರು. ಸೀಮಾ ಕಮಾಂಡೋ ಟ್ರೈನಿಂಗ್ ಜೊತೆಗೆ ಶೂಟಿಂಗ್, ಮೌಂಟೇನೇರಿಂಗ್ ಮತ್ತು ಫೈರ್ ಫೈಟಿಂಗ್​ನಲ್ಲೂ ಅನುಭವಿ ತರಬೇತುಗಾರ್ತಿ.

“ ನನ್ನ ತಂದೆ ನನಗೆ ಮಲಗುವ ಸಮಯದಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಥೆಗಳನ್ನು ಹೇಳುತ್ತಿದ್ದರು. ಇದು ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಆ ಕಥೆಗಳು ನನಗೆ ಸ್ಫೂರ್ತಿ ಆದವು. ಅವರಂತೆಯೇ ಬೆಳೆಯಲು ಆರಂಭಿಸಿದೆ ”
- ಡಾ. ಸೀಮಾ, ಕಮಾಂಡೋ ಟ್ರೈನರ್

ಸೀಮಾ, ಬ್ರೂಸ್ ಲೀ ಕಂಡು ಹಿಡಿದ ಮಾರ್ಷಿಯಲ್ ಆರ್ಟ್ "ಜೀಟ್ ಕುನ್ ಡೋ"ದಲ್ಲೂ ಎಕ್ಸ್​ಪರ್ಟ್. ಈ ವಿದ್ಯೆ ಕಲಿತ ವಿಶ್ವದ 10 ಮಹಿಳೆಯರ ಪೈಕಿ ಸೀಮಾ ಕೂಡ ಒಬ್ಬರು. ಸೀಮಾ, ಸಿನಿಮಾದಲ್ಲೂ ತನ್ನ ಚಾತುರ್ಯ ಪ್ರದರ್ಶಿಸಿದ್ದರು. “ಹಥಾಪಾಯಿ” ಸಿನೆಮಾ ನಿರ್ಮಾಣ ಮಾಡಿದ್ದರು. ಈ ಸಿನೆಮಾ ಮಿಕ್ಸೆಡ್ ಮಾರ್ಷಿಯಲ್ ಆರ್ಟ್ ವಿಭಾಗದ ಮೊದಲ ಚಿತ್ರ ಅನ್ನುವ ಹೆಗ್ಗಳಿಕೆ ಪಡೆದಿತ್ತು. ಅಷ್ಟೇ ಅಲ್ಲ 2014ರಲ್ಲಿ ಸೀಮಾ ಪ್ರೊಡ್ಯೂಸ್ ಮಾಡಿದ್ದ “ಹಥಾಪಾಯಿ”ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯ ಗೌರವವೂ ಸಿಕ್ಕಿತ್ತು.

ಸೀಮಾ ಮಹಿಳೆರಿಗೆ ಆತ್ಮ ರಕ್ಷಣೆಯ ಕಲೆಯನ್ನೂ ಕಲಿಸಿಕೊಡುತ್ತಿದ್ದಾರೆ. DARE (Defence Against Rape and Eve Teasing) ಅನ್ನುವ ಈ ಕಲೆ ಮುಂಬೈ ಸೇರಿದಂತೆ ಕಾರ್ಪೋರೇಟ್ ವಲಯದಲ್ಲಿ ದೊಡ್ಡ ಹೆಸರು ಮಾಡುತ್ತಿದೆ. ಒಟ್ಟಿನಲ್ಲಿ ಸೀಮಾ ಭಾರತದ ಮಾದರಿ ಮಹಿಳೆಯರ ಪೈಕಿ ಒಬ್ಬರು ಅನ್ನುವುದರಲ್ಲಿ ಸಂಶಯವೇ ಇಲ್ಲ.

ಇದನ್ನು ಓದಿ:

1. 5 ಮನೆಗಳಿಗೆ ಬೆಳಕು ಕೊಡುವ 'ಸೌರ ವೃಕ್ಷ'

2. ಆನ್​ಲೈನ್​ನಲ್ಲಿ "ಭಕ್ತಿ"ಗೆ ಟಚ್​- ಗ್ರಾಹಕರನ್ನು ಸೆಳೆಯುತ್ತಿದೆ ಸತೀಶ್​ ಸ್ಟೋರ್ಸ್​

3. 160 ಕಿ.ಮೀ.ನದಿಗೆ ಮರುಜೀವ ನೀಡಿದ ಸಂತ - ಹಲವು ಹಳ್ಳಿಗಳ ಪಾಲಿಗೆ ಈತ ಆಧುನಿಕ ಭಗೀರಥ

Add to
Shares
4
Comments
Share This
Add to
Shares
4
Comments
Share
Report an issue
Authors

Related Tags