ಆವೃತ್ತಿಗಳು
Kannada

ಸಿನಿಮಾ ನಿರ್ಮಾಣ ಮಾಡೋದಷ್ಟೆ ನಮ್ಮ ಕೆಲಸ ಅಲ್ಲ...

ಆರಾಭಿ ಭಟ್ಟಾಚಾರ್ಯ

YourStory Kannada
17th Apr 2016
1+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
image


ಡಾ ರಾಜ್ ಕುಮಾರ್.. ಕನ್ನಡ ಚಿತ್ರರಂಗ ಕಂಡ ಮೇರು ನಟ..ಕೇವಲ ಸಿನಿಮಾದಲ್ಲಿ ಅಭಿನಯಿಸೋದು ಮಾತ್ರವಲ್ಲದೆ ತಾವು ಅಭಿನಯಿಸುತ್ತಿದ್ದ ಪಾತ್ರಗಳ ಮೂಲಕ ಸಾಮಾಜಿಕ ಕಳಕಳಿಯನ್ನ ಜನರಿಗೆ ಸಿನಿಮಾ ಮೂಲಕ ತಲುಪಿಸುತ್ತಾ ಬಂದವ್ರು. ಅಣ್ಣವ್ರ ಸಿನಿಮಾಗಳನ್ನ ನೋಡಿ ಅದೆಷ್ಟೋ ಜನರು ತಮ್ಮ ಜೀವನಶೈಲಿಯಲ್ಲೇ ಬದಲಾಯಿಸಿಕೊಂಡಿದ್ದು ಉಂಟು. ಇನ್ನು ಡಾ. ರಾಜ್ ಕುಮಾರ್ ನಮ್ಮನೆಲ್ಲ ಅಗಲಿ ದೂರವಾದ ನಂತ್ರವೂ ಅವರ ಆದರ್ಶಗಳು ಸಮಾಜದ ಮೇಲಿನ ಕಾಳಜಿ, ಅಭಿಮಾನಿಗಳ ಮೇಲಿನ ಪ್ರೀತಿ ಎಲ್ಲವನ್ನೂ ಉಳಿಸಿಕೊಳ್ಳೋದರ ಜೊತೆಗೆ ಬೆಳೆಸಿಕೊಂಡು ಬರ್ತಿದ್ದಾರೆ ದೊಡ್ಡಮನೆ ಮಕ್ಕಳು. ಚಿತ್ರರಂಗದಲ್ಲಿ ದೊಡ್ಡಮನೆ ಅಂತಾನೇ ಹೆಸರುವಾಸಿಯಾಗಗಿರೋ ಅಣ್ಣಾವ್ರ ಮನೆ ಮಕ್ಕಳು ಕೂಡ ಇಂದಿಗೂ ಅಣ್ಣಾವ್ರ ತತ್ವಗಳನ್ನ ಪಾಲಿಸುತ್ತಾ ಬಂದಿದ್ದಾರೆ..

image


ಏಪ್ರಿಲ್ ತಿಂಗಳು ಡಾ ರಾಜ್ ಕುಮಾರ್ ತಿಂಗಳು..! 

ಹಸಿರೇ ಉಸಿರು ಅಂದಿದ್ರು ಡಾ ರಾಜ್..ಏಪ್ರಿಲ್ ತಿಂಗಳು ಬಂತು ಅಂದ್ರೆ ಡಾ ರಾಜ್ ಕುಮಾರ್ ಅವ್ರ ಅಭಿಮಾನಿಗಳಿಗಂತು ಹಬ್ಬ. ಅಪ್ಪಾಜಿ ಅವ್ರ ಹುಟ್ಟುಹಬ್ಬವನ್ನ ಸಾಮಾನ್ಯವಾಗಿ ಆಚರಣೆ ಮಾಡೋದನ್ನ ಬಿಟ್ಟು ಸಮಾಜಕ್ಕೆ ಒಳಿತಾಗುವಂತೆ ಏನಾದ್ರು ಮಾಡಲೇಬೇಕು ಅಂತ ನಿರ್ಧಾರ ಮಾಡಿದ ರಾಜ್ ಕುಟುಂಬಸ್ಥರು ಏಪ್ರಿಲ್ ತಿಂಗಳನ್ನ ಡಾ ರಾಜ್ ಕುಮಾರ್ ತಿಂಗಳು ಅಂತ ಘೋಷಣೆ ಮಾಡಿದ್ದಾರೆ. ಇದೇ ವಿಚಾರವಾಗಿ ರಾಜ್ ಕುಟುಂಬಸ್ಥರು ಕಳೆದ ವರ್ಷದಿಂದ ಅಪ್ಪಾಜಿ ಅವ್ರ ಹೆಸರಿನಲ್ಲಿ ಹೊಸ ರೀತಿಯಲ್ಲಿ ವಿನೂತವಾಗಿ, ಸಮಾಜಕ್ಕೆ ಹಾಗೂ ಜನರಿಗೆ ಉಪಯೋಗವಾಗುವಂತಹ ಕೆಲಸಗಳನ್ನ ಮಾಡುತ್ತಾ ಬಂದಿದ್ದಾರೆ. ಕಳೆದ ವರ್ಷ ಏಪ್ರಿಲ್​ ತಿಂಗಳು ಪೂರ್ತಿ ಡಾ ರಾಜ್ ಕುಟುಂಬಸ್ಥರು ಭಾಗಿಯಾಗುವ ಪ್ರತಿ ಕಾರ್ಯಕ್ರಮದಲ್ಲಿಯೂ ಒಂದು ಸಸಿ ನೆಡೆವುದರ ಮೂಲಕ ಡಾ ರಾಜ್ ತಿಂಗಳನ್ನ ಆಚರಣೆ ಮಾಡಿದ್ರು. ಈ ರೀತಿ ಕಾರ್ಯಕ್ರಮದಿಂದ ಜನರಿಗೆ ಉಪಯೋಗ ಮಾಡೋದ್ರ ಜೊತೆಗೆ ಅಣ್ಣಾವ್ರು ನಮ್ಮ ಜೊತೆಯಲ್ಲೇ ಇದ್ದಾರೆ ಅನ್ನೋ ಮನೋಭಾವ ಅವ್ರ ಕುಟುಂಬಕಷ್ಟೇ ಅಲ್ಲದೆ ಅಭಿಮಾನಿಗಳಿಗೂ ಮೂಡುವಂತಾಯ್ತಯು…

image


ವಿನೂತನ ಪ್ರಯೋಗದ ಜೊತೆಗೆ ಬಂದ್ರು ಅಣ್ಣಾವ್ರ ಮೊಮ್ಮಕ್ಕಳು..!

ಕಳೆದ ಬಾರಿಯಂತೆ ಈ ಬಾರಿಯ ಡಾ ರಾಜ್ ಕುಮಾರ್ ತಿಂಗಳ ವಿಶೇಷವಾಗಿ ರಾಜ್ ಕುಟುಂಬದಿಂದ ವಿನೂತವಾಗ ಪ್ರಯೋಗ ಪ್ರಾರಂಭವಾಗಿದೆ. ಈ ಬಾರಿ ಇದ್ರ ರೂವಾರಿಯಾಗಿರೋದು ರಾಘವೇಂದ್ರ ರಾಜ್ ಕುಮಾರ್ ಅವ್ರ ಕಿರಿಯ ಪುತ್ರ ಗುರು ರಾಘವೇಂದ್ರ ರಾಜ್ ಕುಮಾರ್ ಅಂದ್ರೆ ತಪ್ಪಾಗಲಾರದು. ತಾತನ ಜನ್ಮ ದಿನ ಇರೋ ತಿಂಗಳಲ್ಲಿ ಜನರಿಗೆ ಉಪಯೋಗವಾಗುವಂತಹ ಕೆಲಸವನ್ನ ಮಾಡಬೇಕು,ಸಿನಿಮಾ ಮಾಡೋದಷ್ಟೆ ನಮ್ಮ ಕೆಲಸವಲ್ಲ. ಸಮಾಜದ ಹಾಗೂ ಜನರ ಬಗ್ಗೆ ನಮಗೂ ಪ್ರೀತಿ ಕಾಳಜಿ ಇದೇ ಅನ್ನೋದನ್ನ ತಿಳಿಸೋ ನಿಟ್ಟಿನಲ್ಲಿ ಗೋ ಗ್ರೀನ್ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಈ ತಿಂಗಳ ಪೂರ್ತಿ ಪ್ರತಿ ವಾರ ರಾಘವೇಂದ್ರ ರಾಜ್ ಕುಮಾರ್ ಕುಟುಂಬದವರೆಲ್ಲಾ ಸೇರಿ ನಗರದ ಒಂದು ಬೀದಿಯನ್ನ ಆಯ್ಕೆ ಮಾಡಿಕೊಂಡು ಸ್ವಚ್ಛತಾ ಕಾರ್ಯವನ್ನ ಮಾಡಲಿದ್ದಾರೆ. ಇದಕ್ಕೆ ಇಡೀ ರಾಜ್ ಕುಟುಂಬ ಸಾಥ್ ನೀಡ್ತಿದೆ. ಇನ್ನೂ ವಿಶೇಷ ಅಂದ್ರೆ ತಾನೇ ನಿರ್ಮಾಣ ಮಾಡ್ತಿರೋ ಸಹೋದರ ವಿನಯ್ ರಾಜ್ ಕುಮಾರ್ ಅಭಿನಯದ ರನ್ ಆಂಟನಿ ಚಿತ್ರತಂಡ ಮೊದಲ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದೆ.

image


ಕಳೆದವ ವಾರ ಈ ಸ್ವಚ್ಛತಾ ಅಭಿಯಾನವನ್ನ ಯಶಸ್ವಿಯಾಗಿ ಪೂರೈಸಿರೋ ಈ ಟೀಂ ಕೆಲಸವನ್ನ ಹೀಗೆ ಮುಂದಿನ ದಿನಗಳಲ್ಲೂ ಮುಂದುವರೆಸೋದಕ್ಕೆ ಸಜ್ಜಾಗಿದೆ. ಪ್ರತಿ ವಾರ ಒಂದೊಂದು ನಗರವನ್ನ ಆಯ್ಕೆ ಮಾಡಿಕೊಂಡು ಸ್ವಚ್ಛತೆಯನ್ನ ಮಾಡೋದಕ್ಕೆ ಸಜ್ಜಾಗಿದೆ. ಒಟ್ಟಾರೆ ಅಣ್ಣಾವ್ರು ದೈಹಿಕವಾಗಿ ನಮ್ಮ ಜೊತೆ ಇಲ್ಲದೇ ಇದ್ರೂ ಕೂಡ ಮಾನಸಿಕವಾಗಿ ಮತ್ತು ಅವ್ರ ಆದರ್ಶಗಳು ಮಾತ್ರ ಸದಾ ನಮ್ಮ ಜೊತೆ ಇರುತ್ತೆ ಅನ್ನೋ ಸಂದೇಶ ಸಾರ್ತಿರೋ ಅಣ್ಣಾ ವ್ರ ಮೊಮ್ಮಕ್ಕಳ ಈ ಕೆಲಸವನ್ನ ಮೆಚ್ಚೋದ್ರ ಜೊತೆಗೆ ಅಭಿಮಾನಿ ದೇವರು ಎಂದು ಕರೆದಿರೋ ಮೇರು ನಟನ ಹುಟ್ಟುಹಬ್ಬವನ್ನ ಈ ರೀತಿಯಲ್ಲಿ ಆಚರಣೆ ಮಾಡೋದ್ರಲ್ಲೂ ಸಾಕಷ್ಟು ಸ್ಪೆಷಲ್ ಇದೆ.

ಇದನ್ನು ಓದಿ:

1. ನೀರು, ಆಹಾರವಿಲ್ಲದೆ 65 ವರ್ಷಗಳಿಂದ ಬದುಕಿರುವ ಸನ್ಯಾಸಿ! 

2. ವಾಟ್ಸ್​​ಆ್ಯಪ್ ಗೂಢಲಿಪೀಕರಣ ನಿಮಗೆಷ್ಟು ಗೊತ್ತು..?

3. ಉತ್ತರ ಕರ್ನಾಟಕದ ಸವಿರುಚಿ ಬಯಸುವವರಿಗೆ ಸ್ವರ್ಗ ಹೊಟೇಲ್ ನಳಪಾಕ..

1+ Shares
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags