ಆವೃತ್ತಿಗಳು
Kannada

ಮಣ್ಣಿನ ಗುಣಮಟ್ಟ ಕಾಪಾಡಲು ಬೇಕು ಸಾವಯವ ಕೃಷಿ - ಸಿರಿಧಾನ್ಯಗಳಲ್ಲಿದೆ ಉತ್ತಮ ಆರೋಗ್ಯದ ಸೀಕ್ರೆಟ್

ಟೀಮ್​ ವೈ.ಎಸ್​. ಕನ್ನಡ

30th Apr 2017
Add to
Shares
12
Comments
Share This
Add to
Shares
12
Comments
Share

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ದೇಶದ ಮೊಟ್ಟ ಮೊದಲ ಸಿರಿಧಾನ್ಯ ಮೇಳಕ್ಕೆ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದೆ. ಕೃಷಿಕರು, ಗ್ರಾಹಕರು ಮತ್ತು ರಾಜಕೀಯ ವ್ಯಕ್ತಿಗಳು ಕೂಡ ಸಿರಿ ಧಾನ್ಯಮೇಳದಿಂದ ಖುಷಿಗೊಂಡಿದ್ದಾರೆ. ಆರೋಗ್ಯ ಮತ್ತು ಅದನ್ನು ಉಳಿಸಿಕೊಳ್ಳುವ ಬಗ್ಗೆ ಜಾಗೃತಿ ಮೂಡುತ್ತಿದೆ.

ಕೃಷಿ ದೇಶದ ಆರ್ಥಿಕತೆಯ ಬೆನ್ನೆಲೆಬು. ಆದ್ರೆ ಕೃಷಿಕರು ಮತ್ತು ಗ್ರಾಹಕರ ನಡುವಿನ ಸಂಪರ್ಕಕ್ಕೆ ಅವಕಾಶವಿರಲಿಲ್ಲ. ಆದ್ರೆ ಈ ಸಿರಿಧಾನ್ಯ ಮೇಳ ಗ್ರಾಹಕರು ಮತ್ತು ಕೃಷಿಕರ ನಡುವಿನ ಅಂತರವನ್ನು ಕಡಿಮೆ ಮಾಡಿದೆ. ಇಲ್ಲಿ ತನಕ ಬೇಡಿಕೆ ಇದ್ದಷ್ಟು ಕೃಷಿಕರು ಪೂರೈಕೆ ಮಾಡುತ್ತಿದ್ದರು. ಅದ್ರೆ ಈಗ ಗ್ರಾಹಕರ ಜೊತೆಯೇ ಕೃಷಿಕರು ಸಂಪರ್ಕವನ್ನು ಹೊಂದಬಹುದು.

image


ಹಿಂದೆಲ್ಲಾ ಆಹಾರ ಮೇಳ, ವಸ್ತು ಪ್ರದರ್ಶನ ಅಂದರೆ ಅದು ಕೇವಲ ಪ್ರಖ್ಯಾತ ಕಂಪನಿಗಳಿಗೆ ತನ್ನ ಬ್ರಾಂಡ್ ಅನ್ನು ಜನಪ್ರಿಯಗೊಳಿಸಲು ಇದ್ಧ ಸ್ಥಳವಾಗಿತ್ತು. ಆದ್ರೆ ಈಗ ಸ್ಟಾರ್ಟ್ ಅಪ್ ಯುಗ. ಇಲ್ಲಿ ವಿಭಿನ್ನತೆಗಳಿಗೆ ಅವಕಾಶವಿದೆ. ಸಿರಿಧಾನ್ಯ, ಸಾವಯವ ಚಹಾದಿಂದ ಹಿಡಿದು ಬಾಳೆ ಹಣ್ಣಿನಿಂದ ತಯಾರಾದ ಫೈಬರ್ ಬ್ಯಾಗ್ ತನಕ ಎಲ್ಲವೂ ನಿಮಗೆ ಸಿಗುತ್ತದೆ.

ಇದನ್ನು ಓದಿ: ಮರೆತುಹೋಗಿದ್ದ ಆರೋಗ್ಯಕರ ಆಹಾರ : ಸಿರಿಧಾನ್ಯಗಳ ಬಗ್ಗೆ ಜಾಗೃತಿ ಮೂಡಿಸುತ್ತಿದೆ ಕರ್ನಾಟಕ ಸರ್ಕಾರ 

ದೇಶದಲ್ಲಿ ಈಗ ಕೃಷಿ ಬಗ್ಗೆಯೂ ಸಂಶೋಧನೆಗಳು ನಡೆಯುತ್ತಿವೆ. ಪಬ್ಲಿಕ್ ಮತ್ತು ಪ್ರೈವೇಟ್ ಸೆಕ್ಟರ್​ಗಳಲ್ಲೂ ಇದು ನಡೆಯುತ್ತಿದೆ. ಜಂಕ್ ಫುಡ್ ಸೇವನೆಯಿಂದ ಆರೋಗ್ಯದ ಮೇಲಾಗುವ ದುಪ್ಪರಿಣಾಮವನ್ನು ತಿಳಿಸಿಕೊಡಲಾಗುತ್ತಿದೆ. ಅಷ್ಟೇ ಅಲ್ಲ ಸಾವಯವ ಕೃಷಿಯ ಉಪಯುಕ್ತತೆಯ ಬಗ್ಗೆಯೂ ಹೇಳಲಾಗುತ್ತಿದೆ.

image


ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯಗಳು ಆಕರ್ಷಣೆಯ ಕೇಂದ್ರಬಿಂದು. ಈ ಹಿಂದೆ ರಾಗಿ, ಜೋಳದಂತಹ ಧಾನ್ಯಗಳನ್ನು ಕೇವಲ ಬಡವರ ಆಹಾರ ಎಂದು ಪರಿಗಣಿಸಲಾಗಿತ್ತು. ಆದ್ರೆ ಇವತ್ತು ಆರೋಗ್ಯದ ದೃಷ್ಟಿಯಿಂದ ಸಿರಿಧಾನ್ಯ ಎಲ್ಲರಿಗೂ ಬೇಕೇ ಬೇಕು. ಕರ್ನಾಟಕ ಸರಕಾರದ ಮಾನ್ಯ ಕೃಷಿ ಸಚಿವರಾದ ಕೃಷ್ಣ ಬೈರೇಗೌಡರು, ಕೇವಲ ಸಿರಿಧಾನ್ಯಗಳಿಂದ ತಯಾರಿಸಿದ ಆಹಾರ ಕೇಂದ್ರವನ್ನು ಸಿರಿಧಾನ್ಯ ಮೇಳದಲ್ಲಿ ಉದ್ಘಾಟಿಸಿ ಹೊಸ ಶಕೆಗೆ ಮುನ್ನುಡಿ ಬರೆದಿದ್ದಾರೆ.

“ ಸಿರಿಧಾನ್ಯಗಳನ್ನು ಉತ್ಪತ್ತಿ ಮಾಡುವಲ್ಲಿ ಕರ್ನಾಟಕ ಉತ್ತಮ ಸಂಸ್ಕೃತಿಯನ್ನು ಹೊಂದಿದೆ. ಕಳೆದ ಕೆಲ ವರ್ಷಗಳಿಂದ ಆಧುನಿಕತೆಯ ಹೆಸರಿನಲ್ಲಿ ಆರೋಗ್ಯಯುತ ಸಿರಿಧಾನ್ಯಗಳನ್ನು ಸೇವನೆ ಮಾಡುವುದನ್ನು ಕೈಬಿಟ್ಟಿದ್ದೇವೆ. ಆದ್ರೆ ಈಗ ಮತ್ತೆ ಸಾವಯವ ಸಿರಿಧಾನ್ಯಗಳ ಬಗ್ಗೆ ಆಸಕ್ತು ಹೆಚ್ಚುತ್ತಿದೆ. ಆರೋಗ್ಯಕ್ಕಾಗಿ ಇಂತಹ ಆಹಾರಗಳು ಅಗತ್ಯವಾಗಿದೆ. ”
ಕೃಷ್ಣಬೈರೇ ಗೌಡ, ಕೃಷಿ ಸಚಿವರು ಕರ್ನಾಟಕ ಸರಕಾರ

ಕರ್ನಾಟಕದಲ್ಲಿ ಕೇವಲ 4 ವರ್ಷಗಳ ಹಿಂದೆ ಸಾವಯವ ಕೃಷಿಯನ್ನು ಕೇವಲ 4000 ಹೆಕ್ಟೇರ್ ಪ್ರದೇಶಗಳಲ್ಲಿ ಮಾತ್ರ ಮಾಡಲಾಗುತ್ತಿತ್ತು. ಆದ್ರೆ ಇವತ್ತು ಸುಮಾರು 94000 ಹೆಕ್ಟೇರ್ ಪ್ರದೇಶದಲ್ಲಿ ಸಾವಯವ ಕೃಷಿ ಮಾಡಲಾಗುತ್ತಿದೆ. 14 ಫಾರ್ಮರ್ಸ್ ಫೆಡರೇಷನ್​ಗಳಿವೆ. ಪ್ರತಿಯೊಂದು ಫಾರ್ಮರ್ಸ್ ಫೆಡರೇಷನ್​ಗಳಲ್ಲಿ 60,000ದಿಂದ 70,000 ತನಕ ಕೃಷಿಕರಿದ್ದಾರೆ. ಈ ಫೆಡರೇಷನ್​ಗಳು ಕೃಷಿಕರ ಮತ್ತು ಗ್ರಾಹಕರ ನಡುವಿನ ಮಧ್ಯವರ್ತಿಗಳನ್ನು ದೂರವಿಡುವಲ್ಲಿ ಸಹಾಯ ಮಾಡಿವೆ. ಕೃಷಿಕರಿಗೆ ಉತ್ತಮ ಬೆಲೆ ನೀಡಲು ಈ ಚೈನ್ ಸಿಸ್ಟಮ್ ಸಹಾಕವಾಗಿದೆ. ಕೃಷಿಕರು, ಗ್ರಾಹಕರು ಮತ್ತು ಮಾರಾಟಗಾರರಿಗೂ ಇದರಿಂದ ಸಾಕಷ್ಟು ನೆರವು ಸಿಕ್ಕಿದೆ.

image


ಸರಕಾರ ರೈತರಿಂದ ನೇರವಾಗಿ ಗ್ರಾಹಕರ ಕೈಗೆ ಧಾನ್ಯಗಳು ಸಿಗುವಂತೆ ಮಾಡಲು ಯೋಜನೆ ರೂಪಿಸಿದೆ. ಇದರ ಮೊದಲ ಹಂತವಾಗಿ ಆನ್ಲೈನ್ ಗ್ರಾಸರಿ ಪ್ಲಾಟ್ ಫಾರ್ಮ್ ಬಿಗ್​ಬಾಸ್ಕೆಟ್ ಜೊತೆ ಒಪ್ಪಂದವನ್ನು ಮಾಡಿಕೊಂಡಿದೆ. ಕಳೆದ ಕೆಲವು ವರ್ಷಗಳಿಂದ ರೈತರ ಹಾಗೂ ಗ್ರಾಹಕರ ನಡುವೆ ಇದ್ದ ಅಂತರವನ್ನು ಕಡಿಮೆ ಮಾಡಲು ಸರಕಾರ ಮುಂದಾಗಿದೆ. ಗ್ರೇಡ್, ವಿಂಗಡಣೆ ಮತ್ತು ಕ್ವಾಲಿಟಿ ಚೆಕ್ ಆಗಿರುವ ಉತ್ಪನ್ನಗಳನ್ನು ಪ್ಯಾಕೇಜ್ ಮಾಡಿ ಗ್ರಾಹಕರಿಗೆ ತಲುಪಿಸುವ ದಾರಿಗಳಿಗೆ ನೀಡಲಾಗುತ್ತದೆ. ಸಿರಿಧಾನ್ಯ ಮೇಳಗಳ ಉದ್ಘಾಟನಾ ವೇಳೆಯಲ್ಲಿ ಸಾವಯವ ಕೃಷಿ ನೀತಿ 2017ನ್ನು ಕೂಡ ಬಿಡುಗಡೆ ಮಾಡಲಾಗಿತ್ತು. ಈ ಮೂಲಕ ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡುವ ಕೆಲಸ ಮಾಡಲಾಗುತ್ತಿದೆ.

ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಕರ್ನಾಟಕ ಸರಕಾರದ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾವಯವ ಕೃಷಿಕರಿಗೆ ಉತ್ತೇಜನದ ಜೊತೆಗೆ ಲಾಭವೂ ಬೇಕಾಗಿದೆ ಅನ್ನುವುದನ್ನು ಸಚಿವರು ಹೇಳಿದ್ರು. ಕಡಿಮೆ ನೀರಿನ ಮೂಲಕ ಈ ಬೆಳೆಗಳನ್ನು ಬೆಳೆಯಲು ಸಾಧ್ಯವಿರುವ ಕಾರಣ ಬರ ಪ್ರದೇಶದಲ್ಲೂ ಈ ಕೃಷಿಯನ್ನು ಮಾಡಬಹುದಾಗಿದೆ. ಉದಾಹರಣೆಗೆ 1 ಕೆ.ಜಿ. ಭತ್ತ ಬೆಳೆಯಲು 400 ಲೀಟರ್ ನೀರು ಬೇಕಾಗುತ್ತದೆ. ಆದ್ರೆ ಸಾವಯವ ಕೃಷಿಯಿಂದ ನೀರು ಉಳಿಯುವುದಲ್ಲದೆ ವಾತಾವರಣದಲ್ಲಿ ಬದಲಾವಣೆ ಆದ್ರೂ ಕೃಷಿಕರಿಗೆ ಹೆಚ್ಚು ಕಷ್ಟ ಎದುರಾಗುವುದಿಲ್ಲ. 2020ರ ವೇಳೆಗೆ ದೇಶದ ಎಲ್ಲಾ ಜನರು ಕೂಡ ಸಾವಯವ ಕೃಷಿ ಕಡೆಗೆ ಹೆಚ್ಚು ಗಮನ ನೀಡುವಂತೆ ಮಾಡುವ ಉದ್ದೇಶ ಹೊಂದಲಾಗಿದೆ.

image


ಕೇಂದ್ರ ರಾಜ್ಯಖಾತೆ ಕೃಷಿ ಸಚಿವರಾದ ಸೋಮಪಾಲ್ ಶಾಸ್ತ್ರಿ ಮಾತನಾಡಿ, ಅತಿಯಾದ ರಸಗೊಬ್ಬರಗಳ ಬಳಕೆ ಮಣ್ಣಿನ ಫಲವತ್ತತೆಯನ್ನು ಹಾಳು ಮಾಡುತ್ತಿದೆ. ಇದು ದೇಶದ ಜಿಡಿಪಿ ಮೇಲೆ ಪರಿಣಾಮ ಬೀರುತ್ತಿದೆ ಅನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ರು.

ಕೇಂದ್ರ ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಅನಂತ್ ಕುಮಾರ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಸಾವಯವ ಕೃಷಿಕರಿಗೆ ಸಬ್ಸಿಡಿ ನೀಡುವ ಯೋಜನೆಯನ್ನು ಜಾರಿಗೊಳಿಸುವ ಯೋಚನೆ ಮಾಡುತ್ತಿದ್ದಾರೆ. ದೇಶದಲ್ಲೇ ಇದು ಮೊತ್ತ ಮೊದಲ ಬಾರಿಗೆ ಈ ಯೋಜನೆ ಜಾರಿಗೆ ಬರಲಿದೆ ಅನ್ನುವ ಭರವಸೆ ನೀಡಿದ್ರು.

ಕೇಂದ್ರ ಸರಕಾರ ಸಿರಿಧಾನ್ಯಗಳಿಗೂ, ರಾಗಿ, ಜೋಳದಂತೆ ಬೆಂಬಲ ಬೆಲೆ ನೀಡುವ ಬಗ್ಗೆ ಯೋಚನೆ ಮಾಡುತ್ತಿದೆ ಎಂದರು. ಈ ಮಧ್ಯೆ ಅನಂತ್ ಕುಮಾರ್ ತನ್ನನ್ನು ರಸಗೊಬ್ಬರ, ರಾಸಾಯನಿಕ ಖಾತೆ ಸಚಿವ ಅಂತ ಬಿಂಬಿಸುವುದಕ್ಕೆ ಬೇಸರ ವ್ಯಕ್ತಪಡಿಸಿದ್ರು. ಯೂರಿಯಾದಿಂದ ಭೂಮಿಯ ಫಲವತ್ತತೆ ಹಾಳಾಗುತ್ತಿರುವುದು ನಿಜ. ಆದ್ರೆ ಅದನ್ನು ಒಮ್ಮಿಂದೊಮ್ಮೆಲೆ ಯೂರಿಯಾವನ್ನು ನಿಷೇಧ ಮಾಡಲು ಆಗುವುದಿಲ್ಲ. ನಿಧಾನವಾಗಿ ಯೂರಿಯಾ ಕಣ್ಮರೆ ಆಗಲಿದೆ ಅನ್ನುವ ಭರವಸೆಯನ್ನು ಅನಂತ್ ಕುಮಾರ್ ನೀಡಿದ್ರು. ಇತ್ತೀಚೆಗೆ ಇಂಡಿಯನ್ ಕೌನ್ಸಿಲ್ ಫಾರ್ ಅಗ್ರಿಕಲ್ಚರ್, ಯೂರಿಯದಿಂದ ಉಂಟಾಗುತ್ತಿದ್ದ ಅಡ್ಡಪರಿಣಾಮಗಳನ್ನು ತಡೆಯಲು ಕಹಿ ಬೇವಿನ ಅಂಶಗಳನ್ನು ಸೇರಿಸಲಾಗುತ್ತಿದೆ. ಇದು ಭೂಮಿಗೆ ಹೆಚ್ಚು ಸತ್ವವನ್ನು ನೀಡುತ್ತಿದೆ. ಆದ್ರೆ ರೈತರು ಸಾವಯವ ಕೃಷಿ ಕಡೆಗೆ ಗಮನ ಕೊಟ್ಟರೆ, ನಿಧಾನವಾಗಿ ಯೂರಿಯಾ ಬಳಕೆ ದೂರವಾಗುವುದು ಅಂತ ಅನಂತ್ ಕುಮಾರ್ ಭರವಸೆ ವ್ಯಕ್ತಪಡಿಸಿದ್ರು.

ಒಟ್ಟಿನಲ್ಲಿ ಸಿರಿಧಾನ್ಯ ಮೇಳ ವಿವಿಧ ರೀತಿಯಲ್ಲಿ ರೈತರಿಗೆ, ಗ್ರಾಹಕರಿಗೆ ಮತ್ತು ಮಾರಾಟಗಾರರಿಗೆ ಸಹಾಯ ನೀಡುವುದು ಪಕ್ಕಾ. 

ಇದನ್ನು ಓದಿ:

1. ರಾಗಿ ಮುದ್ದೆಯಿಂದ ಬಿಗ್​ಬಾಸ್ಕೆಟ್ ತನಕ- ಗ್ರಾಹಕ, ರೈತರಿಗೆ ಲಾಭದ ಮಾರ್ಗ

2. ನಮ್ಮ ಬೆಂಗಳೂರಿನಲ್ಲಿ ಆರೋಗ್ಯದ ಬಗ್ಗೆ ಯಾಕಿಷ್ಟು ಕಾಳಜಿ ಅನ್ನೋದಿಕೆ ಇಲ್ಲಿದೆ ಕಾರಣಗಳು

3. ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಿರಿಧಾನ್ಯಗಳ ಕಲರವ...

Add to
Shares
12
Comments
Share This
Add to
Shares
12
Comments
Share
Report an issue
Authors

Related Tags